ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣಕ್ಕಾಗಿ ತೆರವು ಮಾಡಿದ್ದ ಗುಡ್ಡದಿಂದ ಬೃಹತ್ ಕಲ್ಲುಬಂಡೆಯೊಂದು ರಸ್ತೆ ಮೇಲೆ ಉರುಳಿಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ.
ಗಿರೀಶ್ ಬುಧವಂತ ನಾಯ್ಕ ಬಚಾವ್ ಆದ ಸವಾರ. ಬೃಹತ್ ಬಂಡೆ ರಸ್ತೆ ಮೇಲೆ ಉರುಳಿ ಬಂದ ಪರಿಣಾಮ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಗಿರೀಶ್ ಬೈಕ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾರ್ಯವನ್ನ ಐಆರ್‌ಬಿ ಕಂಪನಿ ಮಾಡಿದ್ದು, ಕಳೆದ ಮಳೆಗಾಲದಲ್ಲೂ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅವಘಡಗಳು ಹೆದ್ದಾರಿಯಲ್ಲಿ ಸಂಭವಿಸಿತ್ತು. ಈ ಬಾರಿ ಸಹ ಮಳೆಗಾಲ ಪ್ರಾರಂಭದಲ್ಲಿಯೇ ಅವಘಡ ಸಂಭವಿಸಿದ್ದು, ಮಳೆಯಿಂದ ಗುಡ್ಡಗಳು ಕುಸಿಯತೊಡಗಿವೆ. ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.