Breaking News

ನೋಟುಗಳಂತೆ ಕಾಣುವ ಬಂಡಲ್ ತಯಾರಿಕೆ: ನಾಲ್ವರು ಆರೋಪಿಗಳ ಬಂಧನ

Spread the love

ಬೆಳಗಾವಿ: ಖೋಟಾ ನೋಟಿನ ಬಂಡಲ್‌ಗಳನ್ನು ಸಿದ್ಧಪಡಿಸಿದ್ದ ಹಾಗೂ ಜನರಿಗೆ ಮೋಸ ಮಾಡಲು ಯೋಜಿಸಿದ್ದ ಆರೋಪದ ಮೇಲೆ ನಾಲ್ವರನ್ನು ಜಿಲ್ಲೆಯ ಘಟಪ್ರಭಾ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಗೋಕಾಕ ತಾಲ್ಲೂಕು ದೂಪದಾಳದ ಮಹಮದಇಸಾಕ ದೇಸಾಯಿ, ಮುನಾಫ ರಫೀಕ, ರಾಯಬಾಗ ತಾಲ್ಲೂಕು ಸಿದ್ದಾಪೂರದ ಗುಂಡು ಸದಾಶಿವ ಪಾಟೀಲ ಮತ್ತು ಗೋಕಾಕದ ಆದಿಜಾಂಬವ ನಗರದ ಮಲ್ಲಿಕಾರ್ಜುನ ಕನ್ಮಡ್ಡಿ ಬಂಧಿತರು. ಅವರಿಂದ ಪೇಪಲ್‌ ಬಂಡಲ್‌ಗಳು, ತಲಾ 2 ಕಾರ್‌ ಹಾಗೂ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಇವರು ಎರಡೂ ಬದಿಯಲ್ಲಿ ₹ 500 ಮುಖಬೆಲೆಯ ಅಸಲಿ ನೋಟುಗಳನ್ನು ಹಾಕಿ ಒಳಗಡೆ ಕಾಗದದ ಪೇಪರ್‌ಗಳನ್ನಿಟ್ಟು ನೋಟಿನ ಬಂಡಲ್‌ಗಳಂತೆ ಕಾಣುವಂತೆ ತಯಾರಿಸಿದ್ದರು.

ಅವು ಖೋಟಾ ನೋಟುಗಳೆಂದು ಹೇಳಿ ₹ 1 ಲಕ್ಷ ಅಸಲಿ ನೋಟುಗಳನ್ನು ಪಡೆದುಕೊಂಡು ತಮ್ಮ ಬಳಿ ಇರುವ ಬಂಡಲ್‌ಗಳನ್ನು ಯಾರಿಗೋ ಕೊಡಲು ಯೋಜಿಸಿದ್ದರು. ದೂಪದಾಳದ ಮಹಮದಇಸಾಕ ಅವರ ಮನೆಯಲ್ಲಿ ಬಂಡಲ್‌ಗಳನ್ನು ತಯಾರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪಿಎಸ್‌ಐ ಎಚ್‌.ವೈ. ಬಾಲದಂಡಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.


Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ