ಗೋಕಾಕ :ತಾಯಿ ಮತ್ತು ಮಕ್ಕಳ ಆಸ್ಪತ್ರೆ ಗೋಕಾಕದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಚಿಕ್ಕ ಮಕ್ಕಳ ವೈದ್ಯರಾದ ಡಾ ಗೋಪಾಲ ಹೊಂಗಲ ಮತ್ತು ಡಾ ಸಂಜೀವಿನಿ ಉಮರಾಣಿ ಯವರು ತಾಯಂದಿರಿಗೆ ಎದೆಹಾಲಿನ ಮಹತ್ವ ಬಗ್ಗೆ ಹೇಳಿದರು.
ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ಹುಟ್ಟಿದ ಪ್ರತಿ ಮಗುವೂ ಬದುಕಬೇಕು, ತಾಯಿಯೂ ಆರೋಗ್ಯವಾಗಿ ಇರಬೇಕು ಎಂಬುದು ಎಲ್ಲರ ಆಸೆ. ಅದಕ್ಕೆ ಪೂರಕವಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಸ್ತನ್ಯಪಾನದಂತಹ ಸಪ್ತಾಹಗಳನ್ನು ಮಾಡುತ್ತಾ, ಮಕ್ಕಳು ಮತ್ತು ತಾಯಿಯ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಲಾಗುತ್ತಿದೆ. ಈಗ ಸಪ್ತಾಹದ ಹಿನ್ನೆಲೆಯಲ್ಲಿ ಹುಟ್ಟಿದ ಮಗುವನ್ನು ಹೇಗೆ ಕಾಳಜಿ ಮಾಡಬೇಕು, ಹೇಗೆ ಹಾಲುಣಿಸಬೇಕು ಎಂಬುದನ್ನು ನೋಡೋಣ.
ಬನ್ನಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರೊಂದಿಗೆ, ಮಕ್ಕಳ ವೈದ್ಯಕೀಯ ಸಂಘದವರೊಂದಿಗೆ ಕೈ ಜೋಡಿಸಿ. ತಾಯಿ ಮಗುವಿಗೆ ಎದೆ ಹಾಲುಣಿಸುವುದನ್ನು ಕಲಿಸೋಣ, ಮಗುವನ್ನು ಸದೃಢ, ಆರೋಗ್ಯವಂತ, ಬುದ್ಧಿವಂತರನ್ನಾಗಿ ಮಾಡಿ ದೇಶಕ್ಕೆ ನೀಡೋಣ.
ಪ್ರಾಥಮಿಕ ಮಾಹಿತಿ
ಶಿಶು ಜನಿಸಿದ ಒಂದು ಗಂಟೆಯ ಒಳಗೆ ಸ್ತನ್ಯಪಾನ ಆರಂಭಿಸಬೇಕು.
• ಶಿಶು ಜನಿಸಿದ ನಂತರ, 6 ತಿಂಗಳವರೆಗೆ (180 ದಿನಗಳ) ಕೇವಲ ಸ್ತನ್ಯಪಾನ (ಎದೆಹಾಲು) ಮಾತ್ರ ನೀಡಬೇಕು. ನೀರನ್ನೂ ನೀಡಬಾರದು.
• 180 ದಿನಗಳ ನಂತರ ಪೂರಕ ಆಹಾರ ಪ್ರಾರಂಭಿಸುವುದು. ಇದರ ಜೊತೆಗೆ ಸ್ತನ್ಯಪಾನವನ್ನು ಎರಡು ವರ್ಷಗಳವರೆಗೆ ಮುಂದುವರಿಸುವುದು ಸೂಕ್ತ.
– ಸ್ತನ್ಯಪಾನದಿಂದ ಮಗುವಿನ ಅಪೌಷ್ಟಿಕತೆ, ಸ್ಕೂಲಕಾಯ, ಆಹಾರಕ್ಕೆ ಸಂಬಂಧಪಟ್ಟ ಅಸಾಂಕ್ರಾಮಿಕ ರೋಗ, ಅತಿಸಾರ ಬೇಧಿ, ನ್ಯುಮೋನಿಯ ಕಾಯಿಲೆಯಿಂದ ರಕ್ಷಿಸಬಹುದು.
ಸ್ತನ್ಯಪಾನ ವ್ಯತ್ಯಯಕ್ಕೆ ಕಾರಣಗಳು
• ಸಿಸೇರಿಯನ್ ಜನನಗಳಲ್ಲಿ ತಾಯಂದಿರಿಂದ ಹುಟ್ಟಿದ ಮಗುವನ್ನು ದೂರ ಮಾಡುವುದು. ಸಮರ್ಪಕವಾಗಿ ತರಬೇತಿ ಪಡೆದ ಆರೋಗ್ಯ ಸಿಬ್ಬಂದಿ ಕೊರತೆ. ಅಜ್ಞಾನ, ಆಲಸಿತನ.
• ಪೌಡರ್ ಡಬ್ಬಿಗಳ ವಾಣಿಜ್ಯ ಪ್ರಚಾರ, ಕುಟುಂಬಸ್ಥರ ಮೇಲೆ ವ್ಯತಿರಿಕ್ತ ಪರಿಣಾಮ.
• ಕೆಲಸ ಮಾಡುವ ಸ್ಥಳಗಳಲ್ಲಿ ಸ್ತನ್ಯಪಾನಕ್ಕೆ ಬೇಕಾಗಿರುವ ಬೆಂಬಲದ ಕೊರತೆ.
ಸ್ತನ್ಯಪಾನ ಸಪ್ತಾಹದ ಉದ್ದೇಶ
• ಆರೋಗ್ಯ ಕಾರ್ಯಕರ್ತರು, ಆಹಾರ ಸಮಾಲೋಚಕರು, ಶುಕ್ರೂಷಕರು, ಆಶಾ, ಕಿ.ಮ.ಆ.ಸ, ವೈದ್ಯರು ತಾಯಿಗೆ ಎದೆ ಹಾಲುಣಿಸುವ ಬೆಂಬಲ ನೀಡಲು, ಆಪ್ತ ಸಮಾಲೋಚನೆ ಮಾಡಲು ಜ್ಞಾನ ಮತ್ತು ಕೌಶಲದ ತರಬೇತಿ ನೀಡುವುದು. • ಮಾಧ್ಯಮಗಳು, ಪ್ರಸಿದ್ದರ ಮೂಲಕ ವಿವಿಧ ಕಂಪನಿಗಳು
ಎದೆಹಾಲಿನ ಬದಲಿಗೆ ಪೌಡರು ಹಾಲು ನೀಡಲು ಪೋಷಕರ ಮನಸ್ಸನ್ನು ಬದಲಿಸುತ್ತಿವೆ. ಇದನ್ನು ತಡೆಗಟ್ಟುವುದು. • ಶಿಶುವಿನ ಆಹಾರ ಪದ್ದತಿಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡುವುದು,
• ಪ್ರತಿ ಗರ್ಭಿಣಿ ಸ್ತ್ರೀ ಮತ್ತು ಕುಟುಂಬದವರಿಗೆ ಸ್ತನ್ಯಪಾನ ಉಣಿಸುವಿಕೆ ಬಗ್ಗೆ ಅದರ ಅನುಕೂಲಗಳ ಬಗ್ಗೆ ಅರಿವು ಮೂಡಿಸಿ, ಗರ್ಭಿಣಿಯನ್ನು ಸ್ತನ್ಯಪಾನ ನೀಡಲು ಸಜ್ಜುಗೊಳಿಸುವುದು.
• ಹೆರಿಗೆ ಆದ ಕೂಡಲೆ ತಾಯಿ ಮತ್ತು ನವಜಾತ ಶಿಶುವನ್ನು ಬೇರ್ಪಡಿಸದೆ, ಚರ್ಮಕ್ಕೆ ತಾಗಿಸುವ ವಿಧಾನ (ಕಾಂಗರೂ ಮದರ್ ಕೇರ್) ಅನುಸರಿಸಬೇಕು ಹಾಗೂ ಕೂಡಲೇ ಸ್ತನ್ಯಪಾನ ನೀಡಲು ಪ್ರಾರಂಭಿಸಬೇಕು.
• ತಾಯಿಗೆ ಮಗುವಿನ ಕೈ ಬಾಯಿಗೆ ತೆಗೆದುಕೊಳ್ಳುವುದು,
ಚೀಪುವುದು, ಕೈ ಬೆರಳು ಚೀಪುವುದು, ತಾಯಿ ಎದೆ ಹುಡುಕುವುದು ಇವುಗಳನ್ನು ಗಮನಿಸಿ ಹಾಲುಣಿಸಲು ಬೆಂಬಲ ನೀಡುವುದು.
• ತಾಯಿಗೆ ಫೀಡಿಂಗ್ ಬಾಟಲ್ ಬಳಸುವುದರಿಂದ ಮಗುವಿಗೆ ಆಗುವ ತೊಂದರೆಗಳ ಬಗ್ಗೆ ತಿಳಿಸುವುದು.
• ತಾಯಿ, ಮಗುವನ್ನು ಆಸ್ಪತ್ರೆಯಿಂದ ಡಿಸ್ಟಾರ್ಟ್ ಮಾಡುವ ಮುನ್ನ ಅವರಿಗೆ ನವಜಾತ ಶಿಶುವಿನ ಆರೈಕೆ ಹಾಗೂ ಮುಂದೆಯೂ ಎದೆ ಹಾಲು ಉಣಿಸುವಿಕೆಗೆ ಬೆಂಬಲ ನೀಡುವುದರ ಬಗ್ಗೆ ತಿಳಿಸುವುದು.
ಈ ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ ರವೀಂದ್ರ ಅಂಟಿನ, ತಾಲೂಕಾ ಆರೋಗ್ಯ ಅಧಿಕಾರಿ ಡಾ ಮುತ್ತಣ್ಣ ಕೊಪ್ಪದ, ಡಾ ಗೋಪಾಲ ಹೊಂಗಲ, ಡಾ ಸಂಜೀವಿನಿ ಉಮರಾಣಿ, ಡಾ ದೀಪಾ ತುಂಬಾಕಿ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಪಾಲಗೊಂಡಿದರು.