Breaking News

ದೇವರ ನಾಡಿನಲ್ಲಿ ಅಲೆಪ್ಪಿಯೇ ಸ್ವರ್ಗ.!

Spread the love

ಅಲೆಪ್ಪಿಗೆ ಒಮ್ಮೆ ಭೇಟಿ ನೀಡಿದವರು ಅಲ್ಲಿನ ಸಹಜ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಒಂದು ಕಡೆ ಕಡಲು, ಮತ್ತೊಂದೆಡೆ ಕಡಲಿನಾಳದ ಹವಳಗಳು ತೇಲಿ ಬಂದು ಸೃಷ್ಟಿಸಿದ ಹವಳದ ದಂಡೆಗಳು, ಪಾಮ್ ಮರದ ದಟ್ಟ ಕಾಡು, ಹಿನ್ನೀರು..ಈ ಎಲ್ಲ ಸೊಬಗನ್ನು ಒಂದೆಡೆ ಸೇರಿಸಬೇಕಾದರೆ ನೀವು ಕೇರಳದ ಅಲೆಪ್ಪಿಗೆ ಭೇಟಿ ನೀಡಲೇ ಬೇಕು.

ಇಲ್ಲಿನ ದೋಣಿ ವಿಹಾರ ಅವಿಸ್ಮರಣೀಯ. ಹಿನ್ನೀರಿನ ಪ್ರವಾಸ, ದೋಣಿ ಮನೆಯಲ್ಲಿ ತಂಗುವಿಕೆ, ಪ್ರಶಾಂತ ವಾತಾವರಣ ಎಂಥವರನ್ನೂ ಸೆಳೆಯುವಂತಿದೆ. ದೋಣಿ ವಿಹಾರ, ಚಾರಣ, ಸ್ಥಳ ವೀಕ್ಷಣೆಯೊಂದಿಗೆ ಇಲ್ಲಿ ಹಲವು ಆಧ್ಯಾತ್ಮಿಕ ತಾಣಗಳೂ ಇವೆ. ಅಂಬಲಾಪುಳದ ಶ್ರೀಕೃಷ್ಣ ದೇವಸ್ಥಾನ, ಮುಲ್ಲಕ್ಕಲ್ಲಿನ ರಾಜೇಶ್ವರಿ ದೇವಸ್ಥಾನ, ಚೆಟ್ಟಿಕುಲಂಗರ ಭಗವತಿ ದೇವಾಲಯ, ಎಡತುವಾ ಚರ್ಚ್ ಇಲ್ಲಿನ ಪ್ರಮುಖ ಆಕರ್ಷಣೆ.

ಇಲ್ಲಿನ ಪಥಿರ್ಮನಾಲ್ ದ್ವೀಪ ಸರಣಿಯಂತೂ ಮನಮೋಹಕ.

ಎಲ್ಲಿಂದಲೋ ವಲಸೆ ಬಂದ ಹಕ್ಕಿಗಳು ಇಲ್ಲಿನ ವೈವಿಧ್ಯತೆಯನ್ನು ಹೆಚ್ಚಿಸಿವೆ. ಇದು ಅಪರೂಪದ ಪಕ್ಷಿಗಳ ವಾಸಸ್ಥಾನವಾಗಿದೆ. ಪ್ರವಾಸಿಗರನ್ನು ಜಲಮಾರ್ಗದಲ್ಲಿ ಕೊಂಡೊಯ್ಯುವ ಕಟ್ಟುವಲ್ಲಮ್ ಹೆಸರಿನ ಮನೆ ದೋಣಿಗಳು ಬಾಡಿಗೆಗೂ ಲಭ್ಯವಿದೆ.


Spread the love

About Laxminews 24x7

Check Also

ಮಂಡ್ಯದಲ್ಲಿ ಮೂರು ದಿನಗಳವರೆಗೆ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯ

Spread the loveಮಂಡ್ಯ : ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ