Breaking News

ರಾಷ್ಟ್ರೀಯ

ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು ಶುರುವಾಗಿದೆ

ಭವಿಷ್ಯದ ಮುಂದಿನ ಮುಖ್ಯಮಂತ್ರಿ `ಸತೀಶ್ ಜಾರಕಿಹೊಳಿ’ : ಬೆಳಗಾವಿಯಲ್ಲಿ ರಾರಾಜಿಸಿದ ಬ್ಯಾನರ್! ಬೆಳಗಾವಿ : ಮುಡಾ ಸಂಕಷ್ಟದ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಪ್ರವಾಸ ಕೈಗೊಂಡಿದ್ದು, ಬೆಳಗಾವಿ ಪ್ರವಾಸದ ಹೊತ್ತಲ್ಲೇ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಕೂಗು ಶುರುವಾಗಿದೆ. ಹೌದು, ಇಂದು ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ಜಿಲ್ಲೆ ಪ್ರವಾಸ ಕೈಗೊಂಡಿದ್ದು, ಈ ಬೆನ್ನಲ್ಲೇ ಬೆಳಗಾವಿಯ ಚೆನ್ನಮ್ಮ ಸರ್ಕಲ್ ನಲ್ಲಿ ಸತೀಶ್ ಜಾರಕಿಹೊಳಿ ಭವಿಷ್ಯದ ಮುಖ್ಯಮಂತ್ರಿ ಎಂಬ …

Read More »

6ರಿಂದ ಬೆಳಗಾವಿ-ಮನಗೂರು ರೈಲು ಸಂಚಾರ : ಈರಣ್ಣ ಕಡಾಡಿ

ಮೂಡಲಗಿ: ‘ಬೆಳಗಾವಿ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ-ಮನಗೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಅಕ್ಟೋಬರ್‌ 16ರಿಂದ ಪ್ರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದ್ದಾರೆ.   ಹಬ್ಬದಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಿಸುವ ಉದ್ದೇಶದಿಂದ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಸಂಚಾರಕ್ಕೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಬೆಳಗಾವಿ-ಮನಗೂರು (07335) ಎಕ್ಸ್‌ಪ್ರೆಸ್‌ ಅ.16ರಿಂದ 2025ರ ಮಾರ್ಚ್‌ 30ರವರೆಗೆ ವಾರದಲ್ಲಿ ನಾಲ್ಕು ಬಾರಿ (ಭಾನುವಾರ, …

Read More »

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಈ ಬಾರಿ ಸಂಭ್ರಮದಿಂದ ನಡೆದ ದಸರಾ ಉತ್ಸವ ಶನಿವಾರ ಸಂಪನ್ನಗೊಂಡಿತು. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕಳೆದ ವರ್ಷ ದಸರೆ ಕಳೆಗುಂದಿತ್ತು. ಈ ವರ್ಷ ಉತ್ತಮ ಮಳೆ-ಬೆಳೆ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು. ಶುಕ್ರವಾರ ಆಯುಧ ಪೂಜೆ ಮತ್ತು ಶನಿವಾರ ವಿಜಯದಶಮಿ ಕಾರ್ಯಕ್ರಮ ನೆರವೇರಿದವು. ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಸ್ಥಾನಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಮಕ್ಕಳು, ಯುವಜನರು, ಮಹಿಳೆಯರು ಸೇರಿ ಎಲ್ಲ ಭಕ್ತರು ಬೆಳಿಗ್ಗೆಯಿಂದಲೇ ದೇಗುಲಗಳತ್ತ ಹೆಜ್ಜೆಹಾಕಿ, …

Read More »

ಮುಹೂರ್ತ ಮೀರಿ ಪುಷ್ಪಾರ್ಚನೆ: ಸರ್ಕಾರ-ರಾಜಮನೆತನದ ನಡುವೆ ತಿಕ್ಕಾಟ

ಮೈಸೂರು: ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿಗೆ ಪುಷ್ಪಾರ್ಚನೆಯು ಮುಹೂರ್ತ ಮೀರಿದ ಬಳಿಕ ಅಂದರೆ ಅರ್ಧ ತಾಸು ತಡವಾಗಿ ನಡೆದಿದ್ದಕ್ಕೆ ಅಂಬಾರಿಯನ್ನು ಸಿದ್ಧಪಡಿಸುವಲ್ಲಿ ಆದ ವಿಳಂಬವೇ ಕಾರಣ ಎಂದು ಹೇಳಲಾಗುತ್ತಿದೆ. ಮುಹೂರ್ತದ ಪ್ರಕಾರ, 4ರಿಂದ 4.30ರೊಳಗೆ ವಿಜಯದಶಮಿ ಮೆರವಣಿಗೆಯನ್ನು ಮುಖ್ಯಮಂತ್ರಿ ಉದ್ಘಾಟಿಸಬೇಕಿತ್ತು. ಆದರೆ, ಅದು ನಡೆದಾಗ 5 ಗಂಟೆ 2 ನಿಮಿಷ ಆಗಿತ್ತು. ಇದಕ್ಕೆ, ರಾಜವಂಶಸ್ಥರಿಂದ ಅಂಬಾರಿಯು ವಿಳಂಬವಾಗಿ ದೊರೆತಿದ್ದು ಕಾರಣ ಎಂದು ಹೇಳಲಾಗುತ್ತಿದೆ. ಅಂಬಾರಿಯು ರಾಜವಂಶಸ್ಥರ ಸುಪರ್ದಿಯಲ್ಲಿರುತ್ತದೆ. ಅದನ್ನು ಸಾಮಾನ್ಯವಾಗಿ ವಿಜಯದಶಮಿ ಮೆರವಣಿಗೆಯ …

Read More »

ಕೇಸ್‌ಗೆ ಹೆದರಲ್ಲ, ಕೋರ್ಟ್‌ನಲ್ಲೇ ಉತ್ತರ ಕೊಡ್ತೀನಿ: ಕುಮಾರಣ್ಣ

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕುಮಾರಸ್ವಾಮಿ, ಆ ದೂರಿಗೆ ನಾನು ಕಾನೂನು ಪ್ರಕಾರವೇ ಉತ್ತರಿಸುತ್ತೇನೆ ಎಂದಿದ್ದಾರೆ.   ನಾನು ಅವರಿಗೆ ಬೆದರಿಕೆ ಹಾಕಿದ್ದೇನೆ ಎಂದು ದೂರು ನೀಡಿರುವ ಎಡಿಜಿಪಿಯವರು ನನಗೆ ಹೆದರಬೇಕಾದ ಅಗತ್ಯವಿಲ್ಲ. ನಾನು ಅವರಿಗೆ ಬೆದರಿಕೆ ಎಲ್ಲಿ ಹಾಕಿದ್ದೇನೆ? ಎಂದು ಪ್ರಶ್ನಿಸಿದ ಅವರು, ಎಡಿಜಿಪಿ ಅವರಿಗೆ ಸಂಬಂಧಿಸಿ …

Read More »

ವಿಶ್ವ ವಿಖ್ಯಾತ ಮೈಸೂರು ದಸರಾ `ಜಂಬೂಸವಾರಿ’ ಮೆರವಣಿಗೆಗೆ ಕ್ಷಣಗಣನೆ: ಇಲ್ಲಿದೆ ಇಂದಿನ ಕಾರ್ಯಕ್ರಮಗಳ ವಿವರ

ಮೈಸೂರು: ಇಂದು ನಡೆಯುವ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭಗೊಂಡಿದೆ. ಹಾಗಾದ್ರೇ ಇಂದಿನ ಕಾರ್ಯಕ್ರಮಗಳು ಏನು? ಯಾವ ಸಂದರ್ಭದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಆರಂಭಗೊಳ್ಳಲಿದೆ ಎನ್ನುವ ಸಂಪೂರ್ಣ ವಿವರ ಮುಂದಿದೆ ಓದಿ. ಹೀಗಿದೆ ಇಂದಿನ ಮೈಸೂರು ದಸರಾ ಜಂಬೂ ಸವಾರಿಯ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಂದು ಮಧ್ಯಾಹ್ನ 1.41ರಿಂದ 2.10ರ ನಡುವೆ ಶುಭ ಮಕರ‌ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4 ಗಂಟೆಯಿಂದ 4.30ರ …

Read More »

43 ಕ್ರಿಮಿನಲ್ ಕೇಸ್‌ ವಾಪಸ್ ಗೆ ಸಚಿವ ಸಂಪುಟ ಸಭೆ ನಿರ್ಧಾರ: ಎಚ್‌.ಕೆ. ಪಾಟೀಲ

ಬೆಂಗಳೂರು: ರಾಜ್ಯದ ವಿವಿಧ ಠಾಣೆಗಳಲ್ಲಿ ರೈತ ಮುಖಂಡರು, ಕನ್ನಡಪರ ಹೋರಾಟಗಾರರು, ಕೆಲವು ಸ್ಥಳೀಯ ರಾಜಕೀಯ ಮುಖಂಡರ ವಿರುದ್ಧ ದಾಖಲಾಗಿರುವ 43 ಕ್ರಿಮಿನಲ್‌ ಪ್ರಕರಣಗಳನ್ನು ಸರಕಾರ ಹಿಂಪಡೆದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟಾರೆ 60 ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಕೂಲಂಕಷವಾಗಿ ಚರ್ಚಿಸಿ 43 ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ …

Read More »

ಕುಂದಾಪುರದಿಂದ ತಿರುಪತಿಗೆ ರೈಲು: ವಿಜಯ ದಶಮಿಯಂದು ಚಾಲನೆ

ಕುಂದಾಪುರ: ವಿಜಯದಶಮಿಯ ದಿನದಂದು ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಆರಂಭವಾಗಲಿದ್ದು, ಆ ಮೂಲಕ ಕರಾವಳಿಗರ ದೀರ್ಘ‌ ಕಾಲದ ಬೇಡಿಕೆ ಈಡೇರಿದಂತಾಗಲಿದೆ. ವಿಸ್ತರಣೆಗೊಂಡ ಕಾಚಿಗುಡ ರೇಣಿಗುಂಟ ತಿರುಪತಿ ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರ ಆರಂಭಗೊಳ್ಳಲಿದೆ. ಈ ರೈಲು ಕೊಯಮತ್ತೂರು ಮೂಲಕವೂ ಓಡಲಿರುವುದರಿಂದ ಸದ್ಗುರು ಜಗ್ಗಿ ವಾಸುದೇವರ ಈಶ ಯೋಗ ಕೇಂದ್ರ ಮತ್ತು ಆದಿ ಯೋಗಿ ದರ್ಶನಕ್ಕೂ ಸಹಾಯವಾಗಲಿದೆ. ವೇಳಾಪಟ್ಟಿ ಮುರುಡೇಶ್ವರದಿಂದ ಬುಧವಾರ, ಶನಿವಾರ, ತಿರುಪತಿಯಿಂದ ಮಂಗಳವಾರ, ಶುಕ್ರವಾರ ಎಂದು ವಾರಕ್ಕೆರಡು ದಿನ …

Read More »

ತಾಯಿ ಚಾಮುಂಡೇಶ್ವರಿ ಕೃಪೆ ನನ್ನ ಮೇಲಿದೆ, ಅದಕ್ಕೆ ದೀರ್ಘಕಾಲದಿಂದ ರಾಜಕೀಯದಲ್ಲಿದ್ದೇನೆ:ಸಿಎಂ

ಮೈಸೂರು : ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಸೌಭಾಗ್ಯವನ್ನು ರಾಜ್ಯದ ಜನ ಹಲವು ಬಾರಿ ಒದಗಿಸಿಕೊಟ್ಟಿದ್ದಾರೆ. ತಾಯಿಯ ಆಶೀರ್ವಾದ ನನ್ನ ಮೇಲೆ ಸದಾ ಇರುವ ಕಾರಣದಿಂದಲೇ ದೀರ್ಘಕಾಲದಿಂದ ರಾಜಕೀಯದಲ್ಲಿ ಇರಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ಅವರು ಇಂದು ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಾಜ್ಯದ ಜನತೆಗೆ ದಸರೆಯ ಶುಭ ಕೋರಿದ ಮುಖ್ಯಮಂತ್ರಿಗಳು, ನಾಳೆ ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ಸೇರಿದಂತೆ ಹಲವು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.ರಾಜಕೀಯದಲ್ಲಿ …

Read More »

ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ

ಕುಂದಾಪುರ: ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿ ಹಾಗೂ ಹೈದರಾಬಾದ್‌ಗೆ ಕಾರವಾರದಿಂದ ಕುಂದಾಪುರ -ಉಡುಪಿ- ಮಂಗಳೂರು ಮೂಲಕ ರೈಲು ಸಂಪರ್ಕ ಆರಂಭಿಸಬೇಕು ಎನ್ನುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಿದ್ದಾರೆ.   ಕಳೆದೊಂದು ದಶಕದಿಂದ ತಿರುಪತಿಗೆ ರೈಲು ಸಂಪರ್ಕ ಬೇಕೆನ್ನುವ ಬೇಡಿಕೆಯನ್ನು ಕರಾವಳಿಯ ಎಲ್ಲ ಊರುಗಳ ಜನರು ಇಡುತ್ತಿದ್ದು, ಈ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ …

Read More »