Breaking News

ರಾಷ್ಟ್ರೀಯ

ಬಿಜೆಪಿ ಅಧೋಗತಿಗೆ ತಳ್ಳಿದ್ದ ಸಾರಿಗೆ ನಿಗಮಗಳಿಗೆ ‘ಶಕ್ತಿ ಯೋಜನೆ’ ಶಕ್ತಿ ತುಂಬಿದೆ

ಬೆಂಗಳೂರು, ನವೆಂಬರ್ 02: ಶಕ್ತಿ ಯೋಜನೆ ಮರು ಪರಿಶೀಲಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಂತೆ ರಾಜ್ಯಾದ್ಯಂತೆ ಶಕ್ತಿ ಯೋಜನೆ ಕಿಡಿ ಹೊತ್ತಿಕೊಂಡಿದೆ. ಆರೋಪ, ಪ್ರತ್ಯಾರೋಪಗಳ ಮಧ್ಯೆ ಸವಾಲೆಸೆಯುವುದು, ಬಹಿರಂಗ ಚರ್ಚೆಗೆ ಆಹ್ವಾನ ನಡೆದಿದೆ. ಈ ಮಧ್ಯೆ ಶಕ್ತಿ ಯೋಜನೆಗಳ ಬಗ್ಗೆ ಮಾತನಾಡಿದ್ದ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರಿಗೆ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. ಟ್ವೀಟ್ ಮೂಲಕ ಕಿರಿ ಕಾರಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, ಆರ್.ಅಶೋಕ್ ಅವರೆ …

Read More »

Waqf Board ಆಸ್ತಿ ವಿಚಾರ ಸದ್ಯ ಮುಗಿದು ಹೋದ ಅಧ್ಯಾಯ: ಗೃಹಸಚಿವ

ಬೆಂಗಳೂರು: ವಕ್ಫ್​ ಮಂಡಳಿ (Waqf Board) ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ನೋಟಿಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೊಟ್ಟಿರುವ ನೋಟಿಸ್​​ ವಾಪಸ್ ಪಡೆಯಲು ಸೂಚಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ (DR. G. Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹಸಚಿವ ಪರಮೇಶ್ವರ (DR. G. Parameshwar), ವಕ್ಫ್​ ಮಂಡಳಿ (waqf Board) ಆಸ್ತಿ ವಿಚಾರ ಸದ್ಯ ಮುಗಿದು ಹೋದ …

Read More »

ನವೆಂಬರ್ 1ರಿಂದ ಹೊಸ ರೂಲ್ಸ್ ; ಇನ್ಮುಂದೆ ‘ಫೋನ್ ನಂಬರ್’ಗೆ ‘OTP’ ಬರೋದಿಲ್ಲ

ನವದೆಹಲಿ : OTP (ಒನ್ ಟೈಮ್ ಪಾಸ್‌ವರ್ಡ್) ಪರಿಶೀಲನೆ ಪ್ರಕ್ರಿಯೆಯು ಇಂದಿನ ಡಿಜಿಟಲ್ ಜಗತ್ತಿನಲ್ಲಿ ಬಹಳ ಮಹತ್ವದ್ದಾಗಿದೆ. ಎಲ್ಲಾ ರೀತಿಯ ಸೇವೆಗಳು ಆನ್‌ಲೈನ್‌’ನಲ್ಲಿ ಲಭ್ಯವಿದ್ದರೂ, ಬಳಕೆದಾರರನ್ನು OTP ಯೊಂದಿಗೆ ಗುರುತಿಸಲಾಗುತ್ತದೆ. ಭಾರತದಲ್ಲಿ ಹೆಚ್ಚಿನ ಆನ್‌ಲೈನ್ ವಹಿವಾಟುಗಳು ಭದ್ರತೆಗಾಗಿ OTP ಪರಿಶೀಲನೆಯನ್ನ ಅವಲಂಬಿಸಿವೆ. ಆದಾಗ್ಯೂ, ಡಿಜಿಟಲ್ ಭದ್ರತೆ ಮತ್ತು ವಂಚನೆಯನ್ನ ತಡೆಯುವ ಉದ್ದೇಶದಿಂದ ಟೆಲಿಕಾಂ ಕಂಪನಿಗಳು ನವೆಂಬರ್ 1 ರಿಂದ ಹೊಸ ನಿಯಮಗಳನ್ನ ಜಾರಿಗೆ ತರಲು ಸಿದ್ಧವಾಗಿವೆ. ಈ ಕಾರಣದಿಂದಾಗಿ, OTP …

Read More »

ಪಿಜಿಯಲ್ಲಿ ಯುವತಿಯನ್ನು ತಬ್ಬಿ ಮುತ್ತಿಕ್ಕಿ ಅಸಭ್ಯ ವರ್ತನೆ

ಬೆಂಗಳೂರು : ಬೆಂಗಳೂರು: ಪಿಜಿಯಲ್ಲಿ ಯುವತಿಯನ್ನು ತಬ್ಬಿ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪೀಣ್ಯ ಠಾಣೆ ಪೊಲೀಸರು ಸೆಕ್ಯುರಿಟಿ ಗಾರ್ಡ್ ನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಪೀಣ್ಯದಲ್ಲಿರುವ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ.ಯುವತಿಯೋರ್ವಳ ಹೆಸರಿಗೆ ಕೊರಿಯರ್ ಬಂದಿದ್ದು, ಅದನ್ನು ತೆಗೆದುಕೊಳ್ಳಲು ಹೊರಗಡೆ ಬಂದ ಯುವತಿ ಜೊತೆ ಸೆಕ್ಯೂರಿಟಿ ಗಾರ್ಡ್ ಅಸಭ್ಯವಾಗಿ ವರ್ತಿಸಿದ್ದು, ಘಟನೆ ಸಂಬಂಧ ಸೆಕ್ಯೂರಿಟಿ ಗಾರ್ಡ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪಶ್ಚಿಮ ಬಂಗಾಳ ಮೂಲದ ಯುವತಿ ಪೀಣ್ಯ ಸಮೀಪದ …

Read More »

ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ: ಸಚಿವ ಬೈರತಿಗೆ ಶೋಭಾ ಸವಾಲು

ಬೆಳಗಾವಿ: ‘ತಾಕತ್ತಿದ್ದರೆ ನನ್ನ ಅಕ್ರಮದ ದಾಖಲೆ ಬಿಡುಗಡೆಗೊಳಿಸಿ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ಸಚಿವ ಬೈರತಿ ಸುರೇಶ್ ಅವರಿಗೆ ಸವಾಲು ಹಾಕಿದರು. ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೈರತಿ ಸುರೇಶ ‌ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಸಾವಿರಾರು ಕಡತಗಳನ್ನು ತಂದು, ಸುಟ್ಟು ಹಾಕಿದ್ದಾರೆ. ಅದರ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ನನ್ನ ವಿರುದ್ಧ ಬೇರೆ ಬೇರೆ ಆರೋಪ …

Read More »

ವಿಧಾನ ಪರಿಷತ್‌ ಉಪ ಚುನಾವಣೆ. ಮತ ಎಣಿಕೆ ಪ್ರಕ್ರಿಯೆ ಆರಂಭ

ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಕ್ಷೇತ್ರದಿಂದ ನಡೆದ ವಿಧಾನ ಪರಿಷತ್‌ ಉಪ ಚುನಾವಣೆಯ ಮತ ಎಣಿಕೆ ಗುರುವಾರ (ಅ.24)ರಂದು ಮಂಗಳೂರಿನ ಸಂತ ಅಲೋಶಿಯಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದೆ. ಅ.21ರಂದು ನಡೆದ ಚುನಾವಣೆಯಲ್ಲಿ ಒಟ್ಟು 392 ಮತಗಟ್ಟೆಗಳಲ್ಲಿ 5,906 ಮತದಾರರು ಮತ ಚಲಾಯಿಸಿದ್ದರು.   ಈಗಾಗಲೇ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು ಮೊದಲ ಹಂತದಲ್ಲಿ ಒಟ್ಟು ಮತಗಳ ಎಣಿಕೆ ಮತ್ತು ಮಿಶ್ರಣ ಕಾರ್ಯ ನಡೆಯಲಿದೆ, ಎರಡನೇ …

Read More »

ದರ್ಶನ್ ಗೆ ಆಪರೇಷನ್ ಮಾಡಿಸಬೇಕು, ಜಾಮೀನು ಕೊಡಿ ಎಂದರೆ ನ್ಯಾಯಾಧೀಶರು ಹೇಳಿದ್ದೇನು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಆಪರೇಷನ್ ಮಾಡಿಸಬೇಕು, ಜಾಮೀನು ಕೊಡಿ ಎಂದು ಅವರ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ನ್ಯಾಯಾಧೀಶರ ಪ್ರತಿಕ್ರಿಯೆ ಏನಿತ್ತು ಇಲ್ಲಿದೆ ವಿವರ. ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಈಗ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರಿಗೆ ಬೆನ್ನು ನೋವು ತೀವ್ರವಾಗಿದ್ದು ದೈನಂದಿನ ಕೆಲಸ ಮಾಡಲೂ ಸಮಸ್ಯೆಯಾಗುತ್ತಿದೆ. ಈ ನಡುವೆ ಅವರಿಗೆ ಜೈಲಿನಲ್ಲೇ ವೈದ್ಯರ …

Read More »

ಕಬ್ಬಿನ ದರ ನಿಗದಿಯಲ್ಲಿ ಅನ್ಯಾಯ: ಆರೋಪ

ಮುಂಡರಗಿ: ಕಬ್ಬಿನ ದರ ನಿಗದಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುವ ಉದ್ದೇಶದಿಂದ ತಾಲ್ಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ಸೋಮವಾರ ಪಟ್ಟಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಸಭೆಯ ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಈ ಕುರಿತು ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯನಗರ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ಕಡಿಮೆ ಬೆಲೆಗೆ ರೈತರಿಂದ ಕಬ್ಬು ಖರೀದಿಸುತ್ತಿದ್ದು, ದರ ನಿಗದಿಯಲ್ಲಿ …

Read More »

ಲಿಂಗತ್ವ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಿ’

ಬಳ್ಳಾರಿ: ಲಿಂಗತ್ವ ಅಲ್ಪ ಸಂಖ್ಯಾತರಿಗೆ ವಸತಿ ಸೌಲಭ್ಯ ನೀಡಬೇಕು, ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಅ.24 ರಂದು ಸ್ವಾಭಿಮಾನಿ ನಡಿಗೆ ಹೆಸರಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದಾಗಿ ‘ಸಂಗಮ’ ಸಂಘಟನೆಯ ಬಳ್ಳಾರಿ, ವಿಜಯನಗರ ಸಂಯೋಜಕಿ ಚಾಂದಿನಿ ತಿಳಿಸಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗತ್ವ ಅಲ್ಪ ಸಂಖ್ಯಾತರು ಸಮಾಜದ ಒಂದು ಭಾಗ. ಸ್ವಾಭಿಮಾನಿಗಳಾದ ನಮಗೂ ಹಕ್ಕುಗಳು ಸಿಗಬೇಕು. ಸಮಾಜದಲ್ಲಿ ನಮ್ಮನ್ನು ಹೀನವಾಗಿ …

Read More »

ಸಿಎಂ ಯೋಗಿ ಸರ್ಕಾರದ ಬುಲ್ಡೋಜರ್‌ ಕ್ರಮಕ್ಕೆ ಸುಪ್ರೀಂ ತಡೆ, ನಾಳೆ ವಿಚಾರಣೆ

ನವದೆಹಲಿ: ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿಗಳ ಮನೆಗಳನ್ನು ಜೆಸಿಬಿ ಮೂಲಕ(Bulldozer Action) ಧ್ವಂಸಗೊಳಿಸುವ ನಿರ್ಧಾರದ ಕುರಿತಂತೆ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌(Supreme court) ಮಂಗಳವಾರ (ಅ.22) ಪರೋಕ್ಷ ಎಚ್ಚರಿಕೆಯ ಸಂದೇಶ ನೀಡಿದೆ.   ಆರೋಪಿಯ ಮನೆಯನ್ನು ಒಡೆಯುವ ನೋಟಿಸ್‌ ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಇದು ರಾಜ್ಯ ಸರ್ಕಾರದ ಆಯ್ಕೆಗೆ ಬಿಟ್ಟ ವಿಚಾರವಾಗಿದೆ. ಒಂದು ವೇಳೆ ನ್ಯಾಯಾಲಯದ ನಿರ್ದೇಶನವನ್ನು ಉಲ್ಲಂಘಿಸಲು ಬಯಸುವುದಾದರೆ ಆಯ್ಕೆ …

Read More »