Breaking News

ರಾಷ್ಟ್ರೀಯ

ಬೆಳಗಾವಿ ಚುನಾವಣೆ | ಹೈಕಮಾಂಡ್ ನಿರ್ಧಾರಕ್ಕೆ ಬದ್ಧ : ಸತೀಶ್ ಜಾರಕಿಹೊಳಿ

  ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬಿಜೆಪಿ ಕಾಂಗ್ರೆಸ್ ನಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಲೆಕ್ಕಾಚಾರ ಎರಡೂ ಪಕ್ಷಗಳಲ್ಲಿ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ನಿಂದ ಈ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇದೀಗ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿ ಲೋಕಸಭೆ ಉಪಚುನಾವಣೆ ಘೋಷಣೆಯಾಗಿದೆ. ನಾಲ್ಕು ದಿನದ ನಂತರ ಸಭೆ …

Read More »

ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!

ಬಿಗ್​-ಬಿ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕಳೆದ ವರ್ಷವಷ್ಟೇ ಪದವಿ ಶಿಕ್ಷಣ ಮುಗಿಸಿರುವ ಅವರು ತಮ್ಮದೇ ಹಾದಿನಲ್ಲಿ ಸಾಗುತ್ತಿದ್ದಾರೆ. ಮಹಿಳೆಯ ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಉತ್ತರಾಖಂಡ್​ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಅದು ಕೂಡ ಹರಿದ ಜೀನ್ಸ್​ ಪ್ಯಾಂಟ್​ ಕಾರಣಕ್ಕೆ!     ಅರೆರೆ.. ಮುಖ್ಯಮಂತ್ರಿಗೂ, ಬಚ್ಚನ್​ ಮೊಮ್ಮಗಳಿಗೂ, ಹರಿದ ಜೀನ್ಸ್​ ಪ್ಯಾಂಟ್​ಗೂ ಏನು …

Read More »

ಕೇಂದ್ರ ಸರ್ಕಾರದಿಂದ ನೌಕರರಿಗೆ ಸಿಹಿಸುದ್ದಿ : ನಿವೃತ್ತಿಯ ದಿನವೇ ಸಿಗಲಿವೆ ಎಲ್ಲ `ಪಿಂಚಣಿ ಸೌಲಭ್ಯʼಗಳು

ನವದೆಹಲಿ :‌ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಕ್ಕಿದ್ದು, ನಿವೃತ್ತಿಯ ನಂತರ ಎಲ್ಲಾ ಪಿಂಚಣಿ ಸೌಲಭ್ಯಗಳನ್ನ ವಿಳಂಬ ಮಾಡದೆ ಸಕಾಲದಲ್ಲಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೌದು, ನಿವೃತ್ತಿಯ ದಿನವೇ ಪಿಂಚಣಿ ಸೌಲಭ್ಯ ನೀಡುವಂತೆ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಸಚಿವಾಲಯದ ಡಿಪಾರ್ಟ್ಮೆಂಟ್ ಆಫ್ ಪೆನ್ಶನ್ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಎಲ್ಲ ಸಚಿವಾಲಯಗಳಿಗೆ ಪತ್ರ ಬರೆದಿದೆ. ಅಂದ್ಹಾಗೆ, ಈ ಮಾಹಿತಿಯನ್ನ ಅಧಿಕೃತ ಮೂಲಗಳೇ ನೀಡಿವೆ. ಹಲವು ತಿಂಗಳು ಕಳೆದರೂ …

Read More »

3 ಕೋಟಿ ಪಡಿತರ ಚೀಟಿ ರದ್ದು; ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಸೂಚನೆ

ನವದೆಹಲಿ, ಮಾರ್ಚ್ 17: ಆಧಾರ್ ಸಂಖ್ಯೆ ಜೋಡಣೆಯಾಗದ ಕಾರಣ ಸುಮಾರು ಮೂರು ಕೋಟಿ ಪಡಿತರ ಚೀಟಿಗಳನ್ನು ಕೇಂದ್ರ ರದ್ದುಗೊಳಿಸಿರುವುದು “ಅತಿ ಗಂಭೀರ ವಿಷಯ” ಎಂದು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಕೇಂದ್ರ ಹಾಗೂ ಎಲ್ಲಾ ರಾಜ್ಯಗಳಿಂದ ಪ್ರತಿಕ್ರಿಯೆ ಕೇಳಿದೆ. ಎಸ್‌.ಎ.ಬೊಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠ ಈ ಸಂಬಂಧ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದು, “ಈ ವಿಷಯವನ್ನು ದುರದೃಷ್ಟ ಎಂದು ಹೇಳಿ ಸುಮ್ಮನಾಗುವಂತಿಲ್ಲ. ಪಡಿತರ ಚೀಟಿ …

Read More »

ಬೈಕ್ ಸ್ಟಂಟ್ ರಾಣಿಯರಿಗೆ ಬಿತ್ತು ಭಾರೀ ದಂಡ

ಲಕ್ನೋ: ಹುಡುಗಿಯರಿಬ್ಬರು ಬೈಕ್‍ನಲ್ಲಿ ಸ್ಟಂಟ್ ಮಾಡಿ ಅದನ್ನು ಚಿತ್ರೀಕರಣ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿರುವ ಪೊಲೀಸರು ಬೈಕ್ ರೈಡ್ ಮಾಡಿದ ಹುಡುಗಿಯ ಮೇಲೆ 28 ಸಾವಿರ ರೂಪಾಯಿ ದಂಡ ಪ್ರಯೋಗ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಶಿವಾಂಗಿ ದಬಾಸ್ ತನ್ನ ಸ್ನೇಹಿತೆ ಕುಸ್ತಿಪಟು ಸ್ನೇಹಾ ರಘವಂಶಿಯ ಹೆಗಲ ಮೇಲೆ ಕೂತು ಬುಲೆಟ್ ಬೈಕ್‍ನಲ್ಲಿ ಗಾಜಿಯಾಬಾದ್‍ನಲ್ಲಿ ರೌಂಡ್ಸ್ ಹೊಡೆದಿದ್ದಾಳೆ. ರೌಂಡ್ಸ್ ಹೊಡೆಯುತ್ತಿರುವುದನ್ನು ಚಿತ್ರೀಕರಿಸಿ …

Read More »

ಗೋಕಾಕ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನುರುಲ್ಲಾ ಕೋತ್ವಾಲಗೌಡ..

  ಗೋಕಾಕ: ನಗರದಲ್ಲಿ “ನಗರ ಸಭೆ ಉಪಚುನಾವಣೆ ಹಿನ್ನಲೆಯಲ್ಲಿ ಇಂದು ನುರುಲ್ಲಾ ಕೋತ್ವಾಲಗೌಡ ಅವರು ನಗರಸಭೆ ಕಾರ್ಯಲಯದ ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿ 26 ನೇ ವಾರ್ಡ ನಂಬರನಿಂದ ಸ್ಪರ್ಧಿಸುತ್ತಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಅವರು ವಾರ್ಡ್ ನಂಬರ 26ನೇ ವಾರ್ಡಿನಿಂದ ನಾನು ಸ್ಪರ್ಧಿಸುತ್ತಿದ್ದು, ಮೊದಲು ನಮ್ಮ ಸಹೋದರ ಸ್ಪರ್ಧಿಸುತ್ತಿದ್ದು ಅವರು ಅಗಲಿದ ಬಳಿಕ ಅವರ ಸ್ಥಾನದಲ್ಲಿ ನಾನು ಸ್ಪರ್ಧಿಸುತ್ತಿದೆನೆ. ಇದರ ಬಗ್ಗೆಯು ಜಾರಕಿಹೊಳಿ ಮೂರು ಸಹೋದರರ …

Read More »

ಕನ್ನಡ ದ್ರೋಹಿ MES ನಿಷೇಧಿಸಿ: ಶುಭಂ ಸೆಳಕೆ ಗಡಿಪಾರು ಮಾಡಿ ಎಂದು ಕನ್ನಡ ಸಂಘಟನೆ ಆಗ್ರಹ..

ಘಟಪ್ರಭಾ: ಬೆಳಗಾವಿಯಲ್ಲಿ ಇರುವ ಕನ್ನಡ ನಾಡ ದ್ರೋಹಿ ಶುಭಂ ಸೆಳಕೆ ಇತನು ಕನ್ನಡದ ಶಾಲು ಹಾಕಿಕೊಂಡು ಅಲೆದಾಡುವವರ ವಿರುದ್ಧ ಅಟ್ಟಿಸಿಕೊಂಡು ಹೊಡೆಯುವ ಕನ್ನಡಿಗರಿಗೆ ಬೆದರಿಕೆ ಹಾಕಿದ್ದಾನೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶಿಸಿ ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಮೃತ್ಯುಂಜಯ ಸರ್ಕಲನಲ್ಲಿ ಪ್ರತಿಭಟನೆ ಮಾಡಲಾಯಿತು. ಶ್ರೀಶೈಲ ಬ್ಯಾಕೂಡ ನಿರೀಕ್ಷಕರು, ಘಟಪ್ರಭಾ ಪೋಲಿಸ್ ಠಾಣೆ ಇವರ ಮುಖಾಂತರ ಲಕ್ಷ್ಮಣ ಣ ನಿಂಬರಗಿ ಪೋಲಿಸ್ ಅಧಿಕ್ಷಕರು ಬೆಳಗಾವಿ ಅವರಿಗೆ ಮನವಿ …

Read More »

ನೇಕಾರರು ಕಾಯಿಪಲ್ಲೆ ಮಾರುತ್ತಿದ್ದಾರೆ, ನೆರವಿಗೆ ಬನ್ನಿ – ವಿಧಾನಸಭೆಯಲ್ಲಿ ಅಭಯ ಪಾಟೀಲ

ಬೆಂಗಳೂರು – ರಾಜ್ಯದಲ್ಲಿ ಕೊರೋನಾದಿಂದ ತತ್ತರಿಸಿರುವ ನೇಕಾರರು ಕಾಯಿಪಲ್ಲೆ ಮಾರುತ್ತಿದ್ದಾರೆ. ಕೆಲವರು ಗುಳೆ ಹೋಗಿದ್ದರೆ ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರ ತಕ್ಷಣ ಅವರ ನೆರವಿಗೆ ಬರಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು ನೇಕಾರ ಸಮ್ಮಾನ್ ನಿಧಿಯನ್ನು 2 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ವಿದ್ಯುತ್ ಮಗ್ಗ ನೆಕಾರರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಜವಳಿ ಸಚಿವರು ನಮ್ಮ …

Read More »

ಹುಬ್ಬಳ್ಳಿಗೆ ಬರುತ್ತಿದ್ದ ಇಬ್ಬರು ಕ್ರೀಡಾಪಟುಗಳ ದುರ್ಮರಣ: ಮೂವರಿಗೆ ಗಂಭೀರ ಗಾಯ

ವಿಜಯಪುರ: ಲಾರಿ ಹಾಗೂ ಥವೇರಾ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಕ್ರೀಡಾಪಟುಗಳು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಗಾರ ಕ್ರಾಸ್ ಬಳಿ ಸಂಭವಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಹುಬ್ಬಳ್ಳಿಯ ಕಬ್ಬಡ್ಡಿ ಟೂರ್ನಿಯಲ್ಲಿ ಭಾಗವಹಿಸಲು ಬರುತ್ತಿದ್ದ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಸೋಹೈಲ್ ಮತ್ತು ಮಹಾದೇವ ಎಂಬ 20 ವರ್ಷದ ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಬಗ್ಗೆ ಮಾಹಿತಿ …

Read More »

ಗರಿಗೆದರಿದ ಉಪಚುನಾವಣೆ ಕಣ : ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ

ರಾಯಚೂರು : ಮಸ್ಕಿ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಭರ್ಜರಿ ಪ್ರಚಾ ಆರಂಭಿಸಿದ್ದಾರೆ. ಕಾಂಗ್ರಸ್ ದ್ವಿಚಕ್ರ ವಾಹನ ಹಾಗೂ ಮನೆ ಮನೆ ಪ್ರಚಾರಕ್ಕಿಳಿದಿದೆ. ಕಾಂಗ್ರೆಸ್ ನಾಯಕ ಬಸನಗೌಡ ತುರುವಿಹಾಳ ಬೂತ್ ಮಟ್ಟದಿಂದ ಮತಬೇಟೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಪಕ್ಷದಿಂದಲೂ ಭರ್ಜರಿ ತಯಾರಿ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ ನೇತೃತ್ವದ ಸಮಾವೇಶಕ್ಕೆ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಸ್ಕಿಯಲ್ಲಿ ಮಾರ್ಚ್​ 20ರಂದು ಸಂಜೆ …

Read More »