Breaking News

ರಾಷ್ಟ್ರೀಯ

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೆಟಿಯಾದ ಬಿ.ವೈ. ವಿಜಯೇಂದ್ರ; ಯೋಗೇಶ್ವರ್ ಗೆ ‘ಪಂಚ್’ ನೀಡಿದ ಸಿಎಂ ಪುತ್ರ.!

ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿರುವ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದೀಗ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ದೆಹಲಿಯ ಖಾಸಗಿ ಹೋಟೆಲ್ ನಲ್ಲಿ ಬಿ.ವೈ.ವಿಜಯೇಂದ್ರ, ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕಾರಣದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅರುಣ್ ಸಿಂಗ್ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅರುಣ್ ಸಿಂಗ್ ಭೇಟಿ ಬಳಿಕ ಬಿಜೆಪಿ …

Read More »

ಸೀಜ್ ಮಾಡಲಾದ ಸಾವಿರಾರು ವಾಹನಗಳಿಂದ ಮೈದಾನ ಫುಲ್

ಕಲಬುರಗಿ: ಕೊರೊನಾ ನಿಯಂತ್ರಿಸಲು, ರಾಜ್ಯಾದ್ಯಂತ ಲಾಕ್​​ಡೌನ್ ಜಾರಿಯಲ್ಲಿದೆ. ಅಗನತ್ಯವಾಗಿ ಹೊರಗಡೆ ಓಡಾಡದಂತೆ ಜನರಿಗೆ ಸೂಚನೆ ನೀಡಲಾಗಿದೆ. ಆದ್ರೂ ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ಹೊರಗಡೆ ಓಡಾಡುವ ಸಾವಿರಾರು ವಾಹನಗಳನ್ನ ಪೊಲೀಸರು ಸೀಜ್ ಮಾಡ್ತಿದ್ದಾರೆ. ಕಲಬುರಗಿಯಲ್ಲಿ ಹೀಗೆ ಜಪ್ತಿ ಮಾಡಲಾದ ವಾಹನಗಳಿಂದ ಇಡೀ ಮೈದಾನವೇ ತುಂಬಿಹೋಗಿದೆ.   ಅನಗತ್ಯವಾಗಿ ಹೊರಬಂದವರ ಬೈಕ್ ಹಾಗೂ ಕಾರ್​ಗಳನ್ನ ಸೀಜ್ ಮಾಡಿರುವ ಪೊಲೀಸರು, ಅವುಗಳನ್ನ ಡಿಎಆರ್ ಮೈದಾನದಲ್ಲಿ ಪಾರ್ಕ್‌ ಮಾಡ್ತಿದ್ದಾರೆ. ಜಪ್ತಿಯಾದ ಬೈಕ್, ಕಾರ್, ಆಟೋಗಳನ್ನ ಪ್ರತಿದಿನ …

Read More »

ಯುವತಿಯರೊಂದಿಗೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೋಜು-ಮಸ್ತಿ

ಮಂಡ್ಯ: ಲಾಕ್‍ಡೌನ್ ಅನ್ನು ಲೆಕ್ಕಿಸದೆ ಯುವಕರು ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವತಿಯರೊಂದಿಗೆ ಪಾರ್ಟಿ ನಡೆಸಲು ಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.   ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೈಸೂರು ಮೂಲದ ಯುವಕರು-ಯುವತಿಯರನ್ನು ಕರೆದುಕೊಂಡು ಮೋಜು-ಮಸ್ತಿ ಮಾಡಲು ಬಂದಿದ್ದಾರೆ. ಈ ವೇಳೆ ಇದನ್ನು ಕಂಡ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಯುವಕರು ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಕೆಆರ್‍ಎಸ್ ಪೊಲೀಸ್ ಠಾಣೆಗೆ ಈ ಬಗ್ಗೆ …

Read More »

ತಿಂಗಳ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ: ಜೂನ್‌ 26ರವರೆಗೆ ಅವಕಾಶ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (ಜಿಎಸ್‌ಟಿ) ಅಡಿಯಲ್ಲಿ, ಮೇ ತಿಂಗಳ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌-1 ಸಲ್ಲಿಸಲು ಗಡುವನ್ನು ಜೂನ್‌ 26ರವರೆಗೆ ವಿಸ್ತರಣೆ ಮಾಡಲಾಗಿದೆ. ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಜಿಎಸ್‌ಟಿ ಮಂಡಳಿಯು ನೀಡಿರುವ ವಿವಿಧ ವಿನಾಯಿತಿಗಳ ಕುರಿತು ಸರಣಿ ಟ್ವೀಟ್‌ ಮಾಡಿದೆ. ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳಿನ 11ನೇ ತಾರೀಕಿನ ಒಳಗಾಗಿ ಜಿಎಸ್‌ಟಿಆರ್‌-1ರಲ್ಲಿ …

Read More »

5 ಜಿ ನೆಟ್ವರ್ಕ್ ಸ್ಥಾಪನೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಟಿ ಜುಹಿ ಚಾವ್ಲಾ

ನವದೆಹಲಿ : ಈಗಾಗಲೇ ದೇಶದ ಎಲ್ಲೆಡೆ 4 ಜಿ ವೈರ್ಲೆಸ್ ನೆಟ್ವರ್ಕ್ ಪ್ರಚಲಿತದಲ್ಲಿದೆ. ಆದರೆ ಇದನ್ನು ಇನ್ನೂ ಉತ್ತಮಗೊಳಿಸುವ ಹಿನ್ನೆಲೆಯಲ್ಲಿ 5ಜಿ ನೆಟ್ವರ್ಕ್ ಗಳನ್ನು ತರುವ ಸಂಶೋಧನೆಗಳು ಹಾಗೂ ಪ್ರಯೋಗಗಳು ನಡೆಯುತ್ತವೆ. 5 ಜಿ ವೈರ್‌ಲೆಸ್ ನೆಟ್‌ವರ್ಕ್‌ಗಳನ್ನು ಸ್ಥಾಪನೆ ಮಾಡುವುದರ ವಿರುದ್ಧ ಅನೇಕ ಪರಿಸರವಾದಿಗಳು ಧ್ವನಿ ಎತ್ತಿದ್ದರು ಮತ್ತು ಇದನ್ನು ವಿರೋಧಿಸಿದ್ದರು. ಇದೀಗ ಇದರ ವಿರುದ್ಧ ಬಾಲಿವುಡ್ ಖ್ಯಾತ ನಟಿ ಪರಿಸರವಾದಿ ಜುಹಿ ಚಾವ್ಲಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 5 …

Read More »

46 ವರ್ಷ ವಯಸ್ಸಿನ ಅಂಧ ವ್ಯಕ್ತಿ​​​ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ.

ಝಾಂಗ್ ಹೋಂಗ್ ಎಂಬ 46 ವರ್ಷ ವಯಸ್ಸಿನ ಅಂಧ ವ್ಯಕ್ತಿ​​​ ಮೌಂಟ್ ಎವರೆಸ್ಟ್ ಪರ್ವತ ಏರಿದ್ದಾರೆ. ಚೀನಾ ಮೂಲದ ಇವರು ನೇಪಾಳ ಕಡೆಯಿಂದ ಪರ್ವತ ಹತ್ತಿ ದಾಖಲೆ ಬರೆದಿದ್ದಾರೆ. ಇಡೀ ಏಷ್ಯಾದಲ್ಲೇ ಮೌಂಟ್ ಎವರೆಸ್ಟ್ ಏರಿದ ಮೊದಲ ಅಂಧ ಅನ್ನೋ ಬಿರುದು ಪಡೆದಿದ್ದು, ವಿಶ್ವದಲ್ಲಿ ಮೌಂಟ್ ಎವರೆಸ್ಟ್ ಏರಿದ 3ನೇ ಅಂಧ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಝಾಂಗ್ ಹೋಂಗ್​​​, ಗಟ್ಟಿ ಮನಸ್ಸೊಂದಿದ್ರೆ ನಿನ್ ಕೈಲಿ ಆಗಲ್ಲ ಅನ್ನೋ ವಿಚಾರವನ್ನು …

Read More »

ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಗದಗದಲ್ಲಿ ಅಜ್ಜಿ ಪರದಾಟ; ವಾಪಸ್ ಊರಿಗೆ ಕಳುಹಿಸಿದ ಪೊಲೀಸರು

ಗದಗ: ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಕಾರಣ ಬಸ್ಗಳ ಓಡಾಡ ಸಂಪೂರ್ಣವಾಗಿ ನಿಂತಿದೆ. ಹೀಗಾಗಿ ವೃದ್ಧಾಪ್ಯ ವೇತನ ಪಡೆಯುವುದಕ್ಕೆ ಅಜ್ಜಿಯೊಬ್ಬರು ಪರದಾಟ ಪಟ್ಟಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಅಂಚೆ ಕಚೇರಿಗೆ ಬರುವಂತೆ ವೃದ್ಧೆಗೆ ತಿಳಿಸಿದ್ದರು. ಹೀಗಾಗಿ ಅಜ್ಜಿ ಅಂಚೆ ಕಚೇರಿಗೆ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಪೊಲೀಸರು ಅಜ್ಜಿಯನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ವೃದ್ಧಾಪ್ಯ ವೇತನ ಪಡೆಯಲು ಎರಡು ಕಿಲೋಮೀಟರ್ ನಡೆದುಕೊಂಡ ಬಂದ ಭಜಂತ್ರಿ ನಗರದ …

Read More »

ಮಗನ ಔಷಧಿಗೆ 280 ಕಿಲೋಮೀಟರ್ ಸೈಕಲ್ ತುಳಿದ ಅಪ್ಪ

ಮೈಸೂರು : ಮಗನಿಗೆ ಔಷಧಿ ತರಲು ಸುಮಾರು 280 ಕಿಲೋಮೀಟರ್ ವರೆಗೆ ತಂದೆ ಸೈಕಲ್ ತುಳಿದಿರುವ ಮನ ಕಲಕುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡುತ್ತಿರುವ ಜಿಲ್ಲೆಯ ಗಾಣಿಗನಕೊಪ್ಪಲು ಗ್ರಾಮದ ನಿವಾಸಿ ಆನಂದ್ ಎಂಬುವವರು ತನ್ನ ಮಗನಿಗೆ ಔಷಧಿ ತರಲು ಸೈಕಲ್ ನಲ್ಲಿ ಸುಮಾರು 280 ಕಿಲೋಮೀಟರ್ ಹೋಗಿದ್ದಾರೆ. ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. …

Read More »

ಎಣ್ಣೆ ಪ್ರಿಯರಿಗೆ ಶಾಕ್ ಲಸಿಕೆ ತೆಗೆದುಕೊಳ್ಳದವರಿಗೆ ಮದ್ಯ ಸಿಗಲ್ಲ –

ಲಕ್ನೋ: ಕೊರೊನಾ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಲು ಉತ್ತರ ಪ್ರದೇಶದ ಬಾರ್ ಮಾಲೀಕರು ಮುಂದಾಗಿದ್ದಾರೆ. ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸಲು ಸರ್ಕಾರ ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ನಡುವೆ ಉತ್ತರ ಪ್ರದೇಶದ ಇಟಾವಾ ಜಿಲ್ಲಾಡಳಿತ ಒಂದು ಹೆಜ್ಜೆ ಮುಂದೆ ಹೋಗಿ ಲಸಿಕೆ ಪಡೆದವರಿಗೆ ಮಾತ್ರ ಮದ್ಯ ನೀಡಬೇಕೆಂದು ಎಲ್ಲ ಮದ್ಯದಂಗಡಿಗಳಿಗೆ ಆದೇಶ ಹೊರಡಿಸಿದೆ. ಈ ಆದೇಶವನ್ನು ಬಾರ್ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಬಾರ್ ಮುಂಭಾಗ ಗೋಡೆಗಳ ಮೇಲೆ …

Read More »

ಅಭಿಮಾನಿ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ವಿರಾಟ್‌!

ಮುಂಬಯಿ : ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿ ಸುದ್ದಿಯಾಗಿದ್ದಾರೆ. ಇದು ಕನ್ನಡಿಗರಿಗೆ ಬಹಳ ಖುಷಿ ತಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಅಭಿಮಾನಿ, “ನಿಮಗೆ ಕನ್ನಡ ಮಾತ ನಾಡಲು ಮತ್ತು ಅರ್ಥಮಾಡಿ ಕೊಳ್ಳಲು ಬರುತ್ತದೆಯೇ?’ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, “ಸ್ವಲ್ಪ ಸ್ವಲ್ಪ ಸರ್‌, ಬಟ್‌ ಡೋಂಟ್‌ ಅಂಡರ್‌ಸ್ಟಾಂಡ್‌ಎಟ್‌ ಆಲ್‌’ ಎಂದು ಉತ್ತರಿಸುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಅದರಲ್ಲೂ ಕೊಹ್ಲಿಯ ಈ …

Read More »