(ಗುಜರಾತ) – ಮುಂಬರುವ ೩ ವರ್ಷಗಳಲ್ಲಿ ಭಾರತದಲ್ಲಿ ಅಮೆರಿಕದ ರಸ್ತೆಗಳ ಗುಣಮಟ್ಟವಿರುವ ರಸ್ತೆಗಳು ಕಾಣಲು ಸಿಗಲಿವೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ ಗಡಕರಿ ಅವರು ಹೇಳಿದರು. ಅವರು ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಬನಾಸಕಾಂಠಾ ಜಿಲ್ಲೆಯ ದಿಸಾ ನಗರದಲ್ಲಿ ೩.೭೫ ಕಿ.ಮೀ. ಉದ್ದದ ನಾಲ್ಕು ಪಥದ ಮೇಲ್ಸೇತುವೆಯನ್ನು ಆನ್‌ಲೈನ್ ಮುಖಾಂತರ ಗಡಕರಿಯವರು ಉದ್ಘಾಟಿಸಿದರು. ದೇಶದಾದ್ಯಂತ ರಸ್ತೆ ನಿರ್ಮಾಣ ಕಾರ್ಯವು ಭರದಿಂದ ಸಾಗಿದೆ. ಪ್ರಸ್ತುತ, ಭಾರತದಲ್ಲಿ ಪ್ರತಿದಿನ …
Read More »ಮಂಜು ತಂದೆ-ತಾಯಿ ಬಳಿ ಮದುವೆ ಬಗ್ಗೆ ಮಾತಾಡಿದ್ದೇನೆ’; ಎಲ್ಲರ ಮುಂದೆ ವಿಷಯ ತಿಳಿಸಿದ ದಿವ್ಯಾ ಸುರೇಶ್
ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆಯನ್ನು (Bigg Boss Finale) ಕಿಚ್ಚ ಸುದೀಪ್ ಅವರು ತುಂಬಾ ಲವಲವಿಕೆಯಿಂದ ನಡೆಸಿಕೊಟ್ಟಿದ್ದಾರೆ. ಯಾರು ವಿನ್ನರ್ ಎಂಬುದನ್ನು ತಿಳಿಸುವುದರ ಜೊತೆಗೆ ಹಲವು ವಿಚಾರಗಳು ಈ ವೇದಿಕೆಯಲ್ಲಿ ಚರ್ಚೆ ಆಗಿವೆ. ಹತ್ತು ಹಲವು ತಮಾಷೆಯ ಮಾತುಗಳ ಮೂಲಕ ಇಡೀ ವಾತಾವರಣವನ್ನು ಸುದೀಪ್ ರಂಗಾಗಿಸಿದ್ದಾರೆ. ಈ ವೇಳೆ ಮಂಜು ಪಾವಗಡ ಮತ್ತು ಅರವಿಂದ್ ಕೆಪಿ ಅವರ ಮದುವೆ ಬಗ್ಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಸಂಬಂಧಪಟ್ಟಂತೆ …
Read More »ಕೃಷಿ ಹೊಂಡಕ್ಕೆ ಎರಡು ಜೀವ ಬಲಿ; 4 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಬ್ಬರ ಸಾವು
ಚಿತ್ರದುರ್ಗ: ರಜೆಯಲ್ಲಿ ಮಕ್ಕಳು ನೀರಿಗಿಳಿದು ಅನಾಹುತ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಜಮೀನೊಂದರಲ್ಲಿದ್ದ ಕೃಷಿಹೊಂಡಕ್ಕೆ ಎರಡು ಜೀವಗಳು ಬಲಿಯಾಗಿವೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕು ಐಮಂಗಲ ಹೋಬಳಿಯ ವದ್ದಿಕೆರೆ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಜಮೀನಿನ ಕೃಷಿಹೊಂಡಕ್ಕೆ ಬಿದ್ದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಆರನೇ ತರಗತಿಯ ರಘು (12), ನಾಲ್ಕನೇ ತರಗತಿ ಸಿದ್ಧೇಶ್ (10) ಮೃತಪಟ್ಟವರು.
Read More »ಎಸ್ಎಸ್ಎಲ್ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟ
ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಎಸ್ಎಸ್ಎಲ್ಸಿ ಫಲಿತಾಂಶ ಆಗಸ್ಟ್ 9 ರ ಸೋಮವಾರ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಸೋಮವಾರ ಮಧ್ಯಾಹ್ನ 3:30 ಕ್ಕೆ ಪರೀಕ್ಷೆಯ ಫಲಿತಾಂಶ ಹೊರಬೀಳಲಿದೆ. ವಿದ್ಯಾರ್ಥಿಗಳ ಮೊಬೈಲ್ಗಳಿಗೆ ನೇರವಾಗಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನ ಕಳುಹಿಸಲಾಗುವುದು ಎಂದು ಹೇಳಲಾಗಿದೆ. ಅಂದು ಮಧ್ಯಾಹ್ನ 3:30ಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಸಚಿವರಿಗೆ ಇಲಾಖೆಯ ನಿರ್ದೇಶಕರು, ಕಾರ್ಯದರ್ಶಿಗಳು ಸಾಥ್ ನೀಡಲಿದ್ದಾರೆ.
Read More »ಜೋಗ: ಅಧಿಕಾರಿಗಳ ಹಾಗೂ ಪ್ರವಾಸಿಗರ ಸಂಘರ್ಷ
ಕಾರ್ಗಲ್: ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ದೃಢೀಕರಣ ಕಡ್ಡಾಯಗೊಳಿಸಿರುವ ಜಿಲ್ಲಾಧಿಕಾರಿ ಆದೇಶ ಶುಕ್ರವಾರ ಸಂಘರ್ಷಕ್ಕೆ ಕಾರಣವಾಗಿತ್ತು. ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಬಂದಿದ್ದ ಭಾರಿ ಸಂಖ್ಯೆಯ ಪ್ರವಾಸಿಗರು, ‘ಆರ್‌ಟಿಪಿಸಿಆರ್ ಪರೀಕ್ಷಾ ವರದಿ ಕಡ್ಡಾಯ ಎಂದು ಸರ್ಕಾರ ಘೋಷಣೆ ಮಾಡಿಲ್ಲ. ಈ ಬಗ್ಗೆ ಎಲ್ಲಿಯೂ ಮುಂಚಿತವಾಗಿ ಮಾಹಿತಿ ನೀಡಿಲ್ಲ. ಪ್ರಕೃತಿ ಸೌಂದರ್ಯವನ್ನು ವೀಕ್ಷಿಸುವ ಆಶಯದಿಂದ ನೂರಾರು ಕಿ.ಮೀ. ದೂರದಿಂದ ನಿರೀಕ್ಷೆಯೊಂದಿಗೆ ಬರುವ ನಮಗೆ ನಿರಾಸೆ ಮೂಡಿಸಿದಂತಾಗಿದೆ. …
Read More »ಗಡಿಭಾಗಗಳಲ್ಲಿ ದಿಢೀರ್ ಕರ್ಫ್ಯೂ: ತರಕಾರಿಗಳನ್ನು ರಸ್ತೆಗೆ ಎಸೆದು ವ್ಯಾಪಾರಸ್ಥರ ಆಕ್ರೋಶ
ಕಲಬುರಗಿ: ಜಿಲ್ಲೆಯಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ರೈತರು ಹಾಗು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಲಾಕ್ಡೌನ್ ಸಡಲಿಕೆ ನಂತರ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವುದರೊಳಗೆ ಮತ್ತೆ ಕರ್ಫ್ಯೂ ಜಾರಿಯಾಗಿದ್ದರಿಂದ ರೈತರು ಮತ್ತು ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ತಳ್ಳಿದೆ. ಮಧ್ಯಾಹ್ನ 2 ಗಂಟೆಯವರೆಗೂ ತರಕಾರಿ ಖರೀದಿ ಮತ್ತು ಮಾರಾಟಕ್ಕೆ ಅವಕಾಶ ಇದ್ದರೂ ಮಾರ್ಕೆಟ್ಗೆ ಜನ ಬರುತ್ತಿಲ್ಲ ಎಂದು ಗೋಳಾಡುತ್ತಿರುವ ವ್ಯಾಪಾರಸ್ಥರು, ದಿಢೀರ್ ಕರ್ಫ್ಯೂನಿಂದ ವಹಿವಾಟು ಬಂದ್ ಆಗಿದೆ ಎನ್ನುತ್ತಿದ್ದಾರೆ. ಇನ್ನು ಕಲಬುರಗಿ …
Read More »ಒಂದೇ ಬಾರಿ 300 ಬರ್ಗರ್ ಮತ್ತು 100 ಡ್ರಿಂಕ್ಸ್ ಆರ್ಡರ್ ಮಾಡಿದ ಗ್ರಾಹಕ
ಆಸ್ಟ್ರೇಲಿಯಾದಲ್ಲಿರುವ ಮ್ಯಾಕ್‌ಡೊನಾಲ್ಡ್ಸ್ ಸ್ಟೋರ್ ಒಂದರ ಸಿಬ್ಬಂದಿ ಒಮ್ಮೆಲೇ 3,400 ಡಾಲರ್ (1.86 ಲಕ್ಷ ರೂಪಾಯಿ) ಮೌಲ್ಯದ ಆರ್ಡರ್ ಬಂದಿದ್ದನ್ನು ನೋಡಿ ದಂಗು ಬಡಿದಿದ್ದಾರೆ. ಆರ್ಡರ್‌ನಲ್ಲಿ 300ಕ್ಕೂ ಹೆಚ್ಚು ಬರ್ಗರ್‌ಗಳು ಹಾಗೂ 100ಕ್ಕೂ ಹೆಚ್ಚು ಪಾನೀಯಗಳಿದ್ದು, ಜೊತೆಗೆ 20 ನಗೆಟ್‌ಗಳು, ಫ್ರೈಸ್‌ನ 69 ಪ್ಯಾಕ್‌ಗಳು, ವೆನಿಲ್ಲಾ ಕೋಕ್ ಹಾಗೂ ಚೀಸ್‌ಗಳನ್ನೂ ಸಹ ಹೇಳಲಾಗಿದೆ. ಈ ಜಂಬೋ ಆರ್ಡರ್‌ನ ವಿವರಗಳನ್ನು ಮ್ಯಾಕ್‌ಡೊನಾಲ್ಡ್ಸ್‌ನ ಸಿಬ್ಬಂದಿಯಲ್ಲಿ ಒಬ್ಬರು ಫೇಸ್ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Read More »ಕಾನೂನು ಹೋರಾಟದಲ್ಲಿ ರಿಲಯನ್ಸ್ ವಿರುದ್ಧ ಅಮೆಜಾನ್‌ಗೆ ಜಯ
ನವದೆಹಲಿ: ಭಾರತದ ಆನ್‌ಲೈನ್ ವ್ಯಾಪಾರದ ಪ್ರತಿ ಸ್ಪರ್ಧಿಗಳಾದ ಮುಕೇಶ್ ಅಂಬಾನಿ ಮತ್ತು ಜೆಫ್ ಬೆಜೋಸ್ ನಡುವಿನ ಕಾನೂನು ಹೋರಾಟದಲ್ಲಿ ಜೆಫ್ ಗೆ ಜಯದಕ್ಕಿದೆ. ಫ್ಯೂಚರ್ ಗ್ರೂಪ್‌ನ ರಿಟೇಲ್ ಆಸ್ತಿಯನ್ನು ಖರೀದಿಸುವ 3.4 ಶತ ಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ರಿಲಯನ್ಸ್ ಕಂಪನಿ ಮುಂದುವರಿ ಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. ಇದರಿಂದಾಗಿ ಅಮೆಜಾನ್‌ಗೆ ದೊಡ್ಡ ಯಶಸ್ಸುಸಿಕ್ಕಂತಾಗಿದೆ. ತನ್ನ ಪಾಲುದಾರ ಸಂಸ್ಥೆ ಫ್ಯೂಚರ್ ಗ್ರೂಪ್ ವಿರುದ್ಧ ಅಮೆಜಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ತನ್ನ ರಿಟೇಲ್ …
Read More »ಆಸ್ತಿ ಗಳಿಕೆ ವಿಚಾರವಾಗಿ ಐಟಿ ಬದಲು ಇಡಿ ತನಿಖೆ ಆಶ್ಚರ್ಯ ಮೂಡಿಸಿದೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಇಡಿ ಅಧಿಕಾರಿಗಳು ಐಎಂಎ ವಿಚಾರಕ್ಕೆ ದಾಳಿ ಮಾಡಿಲ್ಲ, ಆಸ್ತಿ ವಿಚಾರವಾಗಿ ದಾಳಿ ಮಾಡಿದ್ದಾರೆ ಎಂದು ನಮ್ಮ ಶಾಸಕರಾದ ಜಮೀರ್ ಅಹಮದ್ ಹೇಳಿದ್ದಾರೆ. ಆಸ್ತಿ ಗಳಿಕೆ ವಿಚಾರವಾಗಿ ಆದಾಯ ಇಲಾಖೆ (IT) ಬದಲು ಜಾರಿ ನಿರ್ದೇಶನಾಲಯ (ED) ದಾಳಿ ಮಾಡಿರುವುದು ಅಚ್ಚರಿ ಮೂಡಿಸಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ದಾಳಿಗೂ …
Read More »ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ; 6 ಕೋಟಿ ಮೌಲ್ಯದ ಎಂಐ ಫೋನ್ ಕಳ್ಳತನ
ಕೋಲಾರ: ಮೊಬೈಲ್ ಫೋನ್ ಸಾಗಿಸುತ್ತಿದ್ದ ಲಾರಿ ದರೋಡೆ ಮಾಡಿದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗ್ರಾಮ ದೇವರಾಯಸಮುದ್ರ ಬಳಿಯ ರಾಷ್ಟ್ರೀಯ ಹೆದ್ದಾರೆ 75 ರಲ್ಲಿ ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ದರೋಡೆ ಆಗಿದೆ ಎಂದು ತಿಳಿದುಬಂದಿದೆ. ಎಂಐ ಕಂಪನಿಗೆ ಸೇರಿದ ಮೊಬೈಲ್ ಫೋನ್‌ಗಳ ದರೋಡೆ ಮಾಡಲಾಗಿದ್ದು, ಮೊಬೈಲ್ನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ವೇಳೆ ಕೃತ್ಯ ನಡೆದಿದೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ …
Read More »