ಬೆಂಗಳೂರು: ಯಾವುದೇ ತಿಳಿವಳಿಕೆ ನೀಡದೇ ದಿನಗೂಲಿ ನೌಕರರ ಶೆಡ್‌ಗಳನ್ನ ನೆಲಸಮಗೊಳಿಸಿ ಜಾತಿ ನಿಂದನೆ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ (ಜ.20) ಬೆಳಗ್ಗೆ 11ಕ್ಕೆ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ದಿನಗೂಲಿ ಕಾರ್ಮಿಕರ ಮನೆಗಳನ್ನು ನೆಲಸಮ ಮಾಡಿರುವ ಆರೋಪ ಮುನಿರತ್ನ ಅವರ ವಿರುದ್ಧ ಕೇಳಿ ಬಂದಿದ್ದು, ಶಾಸಕರು ಸೇರಿದಂತೆ ಏಳು ಜನರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪೀಣ್ಯ …
Read More »ಜಿಮ್ಸ್ ನಿರ್ದೇಶಕ, ಅಧೀಕ್ಷಕಿ ನಡುವೆ ಅಧಿಕಾರಕ್ಕಾಗಿ ಪೈಟ್
ಗದಗ, ಜನವರಿ 21: ಜಿಮ್ಸ್ ಆಸ್ಪತ್ರೆ ಗದಗ ಜಿಲ್ಲೆ ಅಷ್ಟೇ ಅಲ್ಲ ಹಾವೇರಿ, ಕೊಪ್ಪಳ, ಬಾಗಲಕೋಟೆಯ ಗಡಿ ಭಾಗದ ಸಾವಿರಾರು ರೋಗಿಗಳ ಚಿಕಿತ್ಸಾ ತಾಣ. ಆದರೆ, ಇತ್ತೀಚಿಗೆ ಈ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆರೋಪ ಕೇಳಿಬಂದಿದೆ. ಯಾಕಂದರೆ, ಮುಖ್ಯ ವೈದ್ಯಾಧಿಕಾರಿಗಳ ಕಿತ್ತಾಟದಿಂದ ಇಡೀ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಳಿ ತಪ್ಪಿದ ರೈಲು ಬಂಡಿಯಂತಾಗಿದೆ. ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ಹಾಗೂ ಜಿಮ್ಸ್ ಅಧೀಕ್ಷಕಿ ರೇಖಾ ಸೋನಾವನೆ ನಡುವೆ ಕಳೆದ ಎರಡು …
Read More »ವಿಜಯಪುರದಲ್ಲಿ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ, ಐವರು ಆರೋಪಿಗಳ ಬಂಧನ
ವಿಜಯಪುರ: ಇಟ್ಟಿಗೆ ಭಟ್ಟಿಯ ಮಾಲೀಕ ಹಾಗೂ ಇತರ ಮೂವರು ಸೇರಿಕೊಂಡು ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ನಗರದ ಹೊರಭಾಗದ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ. ಈ ಸಂಬಂಧ ಖೇಮು ರಾಠೋಡ, ಸಚಿನ ಮಾನವರ, ವಿಶಾಲ ಜುಮನಾಳ, ರೋಹನ್ ಗಾಂಧಿನಗರ ಮತ್ತು ಕನಕಮೂರ್ತಿ ಗೊಂದಳಿ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಗಡ ಹಣ ಪಡೆದಿದ್ದರ ಕೆಲಸ ಮಾಡುವ ವಿಚಾರದ ಕುರಿತು ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಪೈಪ್ಗಳಿಂದ …
Read More »ಹುಣಶ್ಯಾಳ ಪಿಜಿ ಇಂಚರ ತೋಟದ ಶಾಲೆಯ ಗಣಿತ ಪ್ರಯೋಗಾಲಯಕ್ಕೆ ಮನಸೋತ ಶಾಸಕ ಬಾಲಚಂದ್ರ ಜಾರಕಿಹೊಳಿ
ಶಾಲೆಯ ಶಿಕ್ಷಕರಿಗೆ ಶಹಬ್ಬಾಸ್ಗಿರಿ ಕೊಟ್ಟ ಶಾಸಕರು ಮೂಡಲಗಿ- ಯಾವುದೇ ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲದೇ ಶೂನ್ಯ ಬಂಡವಾಳದೊಂದಿಗೆ ಆರಂಭಿಸಲಾದ ಹುಣಶ್ಯಾಳ ಪಿಜಿ ಗ್ರಾಮದ ಇಂಚಲ ತೋಟದ ಶಾಲೆಯ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲ್ಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿರುವ ಇಂಚಲ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು, ಶ್ರೀನಿವಾಸ ರಾಮಾನುಜನ ಗಣಿತ ಪ್ರಯೋಗಾಲಯದ ಕುರಿತು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ …
Read More »ಕೃಷಿ ಇಲಾಖೆಯ ವತಿಯಿಂದ ಜನವರಿ 23 ರಿಂದ 25ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳ -2025ನ್ನು ಆಯೋಜಿಸಲಾಗಿದೆ.
ಬೆಂಗಳೂರು : ಕೃಷಿ ಇಲಾಖೆಯ ವತಿಯಿಂದ ಜನವರಿ 23 ರಿಂದ 25ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ, ಸಾವಯವ ಮತ್ತು ಸಿರಿಧಾನ್ಯ ಮೇಳ -2025ನ್ನು ಆಯೋಜಿಸಲಾಗಿದೆ. ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ, ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನ ತ್ರಿಪುರನಿವಾಸಿನಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು. ಸರ್ಕಾರವು ಸುಮಾರು …
Read More »ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ಅಭಿನಂದನೆ
ಬೆಳಗಾವಿ : ಐದನೇ ಬಾರಿಗೆ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯನ್ನು ಗೆದ್ದ ಕರ್ನಾಟಕ ತಂಡಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. “ಗುಜರಾತಿನ ವಡೋದರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ 36 ರನ್ ಗಳ ಅಂತರದಲ್ಲಿ ವಿದರ್ಭ ತಂಡವನ್ನು ಮಣಿಸಿರುವುದು ಸಂತೋಷದ ಸಂಗತಿ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನದೊಂದಿಗೆ ಕರ್ನಾಟಕ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ” ಎಂದು …
Read More »ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ವನ್ಯಜೀವಿ ಮಂಡಳಿ ಮುಂದಿನ ಎರಡು ತಿಂಗಳ ಒಳಗಾಗಿ ಅನುಮತಿ ನೀಡಬೇಕು.:ಹೆಚ್. ಕೆ.ಪಾಟೀಲ್
ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಪರಿಸರ ಮತ್ತು ವನ್ಯಜೀವಿ ಮಂಡಳಿ ಮುಂದಿನ ಎರಡು ತಿಂಗಳ ಒಳಗಾಗಿ ಅನುಮತಿ ನೀಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಕಾನೂನು ಸಚಿವ ಹೆಚ್. ಕೆ.ಪಾಟೀಲ್ ಎಚ್ಚರಿಕೆ ಕೊಟ್ಟಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಸಂಸತ್ ಅಧಿವೇಶನದಲ್ಲಿ ಫಾರೆಸ್ಟ್ ಕ್ಲಿಯರೆನ್ಸ್ ಸಿಗಬಹುದೆಂಬ ಆಶಾವಾದ ನಮ್ಮದು ಆಗಿತ್ತು. ಆದರೆ ಕೇಂದ್ರ ಸರ್ಕಾರ ನಿರಾಶೆ ಮಾಡಿದೆ. ಅದೇ ಚುನಾವಣೆಗಳು ಬಂದಾಗ ಪ್ರಧಾನಿ …
Read More »ಕೃಷಿ ವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಲುಪತಿಗಳಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ… ಸಿಎಂ ಕುಲಪತಿಗಳ ವಿರುದ್ಧ ದೂರು..
ಕೃಷಿ ವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಕುಲುಪತಿಗಳಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ… ಸಿಎಂ ಕುಲಪತಿಗಳ ವಿರುದ್ಧ ದೂರು.. ಕಳೆದ ಎರಡು ದಿನಗಳ ಹಿಂದೆ ಧಾರವಾಡ ಕೃಷಿ ವಿವಿಯಲ್ಲಿ ನಡೆದಿದ್ದ ಕೃಷಿವಿವಿ ಅಮೃತ ಮಹೋತ್ಸ ಮತ್ತು ಹಳೆ ವಿದ್ಯಾರ್ಥಿಗಳಸಮ್ಮಿಲನ ಕಾರ್ಯಕ್ರಮದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೆ ವೇದಿಕೆಯ ಮೇಲೆ ಮಾತನಾಡಲು ಅವಕಾಶ ನೀಡದೇ ಕುಲಪತಿಗಳ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಆರೋಪ ಕೇಳಿ ಬಂದಿದ್ದು, …
Read More »ಕುಂಭಮೇಳಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು !!
: ಹೀಗಿದೆ ವೇಳಾಪಟ್ಟಿ – KUMBH MELA ಕುಂಭಮೇಳಕ್ಕೆ ಪ್ರಯಾಣ ಬೆಳೆಸಲು ಹುಬ್ಬಳ್ಳಿಯಿಂದ ಎರಡು ವಿಶೇಷ ರೈಲುಗಳನ್ನು ಪ್ರಾರಂಭಿಸಲಾಗಿದೆ. ಈ ರೈಲು ಸಂಚಾರದ ಹೆಚ್ಚಿನ ವಿವರಗಳು ಇಲ್ಲಿವೆ. ಹುಬ್ಬಳ್ಳಿ-ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ: ರೈಲು ಸಂಖ್ಯೆ 07379 – ಎಸ್ಎಸ್ಎಸ್ ಹುಬ್ಬಳ್ಳಿ-ತುಂಡ್ಲಾ ವಿಶೇಷ ಎಕ್ಸ್ ಪ್ರೆಸ್ ರೈಲು ಜನವರಿ 20 ರಂದು (ಸೋಮವಾರ) 00:45 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಟು, ಜನವರಿ 22 …
Read More »ಸೈಫ್ ಅಲಿ ಖಾನ್ ಮೇಲಿನ ದಾಳಿ ಆಘಾತ ತಂದಿದೆ: ನಟಿ ಶಿಲ್ಪಾ ಶೆಟ್ಟಿ
ರಾಯಚೂರು: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಡೆದಿರುವ ದಾಳಿ ಆಘಾತ ಮೂಡಿಸಿದೆ ಎಂದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದ್ದಾರೆ. ರಾಯಚೂರಿನಲ್ಲಿ ಖಾಸಗಿ ಜ್ಯುವೆಲ್ಲರಿ ಶಾಪ್ ಉದ್ಘಾಟಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ಶಾಕ್ ಆಗಿದ್ದೇನೆ. ಅವರು ಚೇತರಿಸಿಕೊಂಡು ಬೇಗ ಗುಣಮುಖವಾಗಲಿದ್ದಾರೆ. ಮುಂಬೈ ಪೊಲೀಸರು ಈ ಘಟನೆಗೆ ಕಾರಣನಾದವರನ್ನು ಪತ್ತೆ ಹಚ್ಚಿ ಬಂಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನ್ನಡದ ಸಿನಿಮಾಗಳಲ್ಲಿ ನಟಿಸಲು ಅತ್ಯಂತ ಉತ್ಸುಕಳಾಗಿದ್ದೇನೆ. …
Read More »