Breaking News

ರಾಷ್ಟ್ರೀಯ

ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

  ಮೂಡಲಗಿ : ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ಯ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ ಅವರು, ಶಿಕ್ಷಕರಿಂದ ಮಾತ್ರ ಈ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವೆಂದು ಹೇಳಿದರು. ಕಳೆದ ಒಂದೂವರೆ ದಶಕದಿಂದ ಅರಭಾವಿ ಮತಕ್ಷೇತ್ರದಲ್ಲಿ ಶಿಕ್ಷಣದ …

Read More »

ಬಿಕಿನಿ ತೊಟ್ಟು, ಮಾಸ್ಕ್​ ಹಾಕಿ ಏರ್​​ಪೋರ್ಟ್​ಗೆ ಬಂದ ಮಹಿಳೆ; ..

ಮಹಿಳೆಯೊಬ್ಬರು ಕೇವಲ ಬಿಕಿನಿ ತೊಟ್ಟು ಏರ್​​​ಪೋರ್ಟ್​ಗೆ ಬಂದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. ಅಮೆರಿಕಾದ ಮಿಯಾಮಿ ವಿಮಾನ ನಿಲ್ದಾಣಕ್ಕೆ ಬಿಕಿನಿ ತೊಟ್ಟ ಮಹಿಳೆ ಬಂದಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಗ್ರೀನ್​​ ಬಿಕಿನಿ ತೊಟ್ಟು ಏರ್​​ಪೋರ್ಟ್​ಗೆ ಬಂದಿದ್ದ ಮಹಿಳೆ ಮಾಸ್ಕ್​​​ ಹಾಕುವುದು ಮಾತ್ರ ಮರೆತಿರಲಿಲ್ಲ. ಕೈಯಲ್ಲಿ ಬ್ಯಾಗ್​​ ಹಿಡಿದು ಬಂದಿದ್ದ ಇವರು ಎಲ್ಲಿಗೆ ಹೊರಟಿದ್ದರು ಎಂಬ ಏರ್​​​ಪೋರ್ಟ್​ ಸಿಬ್ಬಂದಿ ಯಾವುದೇ ಮಾಹಿತಿ ನೀಡಿಲ್ಲ. ಏರ್​​ಪೋರ್ಟ್​ನಲ್ಲಿ ನಡೆದುಕೊಂಡು ಬರುತ್ತಿರುವ ಬಿಕಿನಿ ತೊಟ್ಟ ಮಹಿಳೆಯ ವಿಡಿಯೋ …

Read More »

ವಿವಾದಾತ್ಮಕ ಹೇಳಿಕೆ ನೀಡದಂತೆ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ

ಬೆಂಗಳೂರು: ಸರ್ಕಾರಕ್ಕೆ ಮುಜುಗರವಾಗಬಹುದಾದ ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡದಂತೆ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಕೆಲ ಸಚಿವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದ ‘ಅಷ್ಟೊತ್ತಿನಲ್ಲಿ ಹೆಣ್ಣುಮಕ್ಕಳು ಯಾಕೆ ಅಲ್ಲಿಗೆ ಹೋಗಬೇಕಿತ್ತು’ ಎಂಬ ಮಾತನ್ನು ನೆನಪಿಸಿದ್ದಾರೆ. ಸೆಕೆಂಡ್ ಶಿಫ್ಟ್​ನಲ್ಲಿ ಹೆಣ್ಣುಮಕ್ಕಳು ಕೆಲಸ ಮಾಡುವುದಿಲ್ಲವಾ? ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿಕೆಯಿಂದ ವಿವಾದವಾಗಿತ್ತು. ಎಂಬ ಮಾತು ಸಭೆಯಲ್ಲಿ ಕೇಳಿಬಂದಿದೆ. ಮುಖ್ಯಮಂತ್ರಿ ಬಸವರಾಜ …

Read More »

ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

ಕಾಂಗ್ರೆಸ್​ಗೆ ಪದಾಧಿಕಾರಿಗಳ ನೇಮಕದ ಬಗ್ಗೆ ಸೂಚಿಸಿದ್ದೇನೆ. ಮಾಸಾಂತ್ಯದಲ್ಲಿ ಎಲ್ಲಾ ಘಟಕಗಳಿಗೆ ನೇಮಕಾತಿ ಮಾಡುತ್ತೇವೆ. ಕಾಂಗ್ರೆಸ್​ನಿಂದ ಸಾಂಸ್ಕೃತಿಕ, ಸಾರಿಗೆ ವಿಭಾಗ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಬೆಂಗಳೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಜಿಲ್ಲಾ ಕಾಂಗ್ರೆಸ್​ ನಾಯಕರ ಅಭಿಪ್ರಾಯವನ್ನು ಕೇಳಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಶನಿವಾರ (ಸಪ್ಟೆಂಬರ್ 4)​ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್​ …

Read More »

ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಎರಡು ವರ್ಷದ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಕ್ರೂರ ಅಪ್ಪ

ಹರಿಯಾಣ : ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಹರಿಯಾಣದ ಗುರುಗ್ರಾಮದಲ್ಲಿ ಕೇಳಿಬಂದಿದೆ. ಗುರುಗ್ರಾಮದ ಪಟೌಡಿ ಏರಿಯಾದಲ್ಲಿ ಅಪ್ಪನೇ ಮಗಳ ಮೇಲೆ ಈ ಕೃತ್ಯವನ್ನು ಮಾಡಿದ್ದಾನೆ ಎನ್ನಲಾಗಿದೆ. ಘಟನೆ ಆಗಸ್ಟ್ 28ರಂದು ನಡೆದಿದ್ದು, ಸೆಪ್ಟೆಂಬರ್ ಎರಡಕ್ಕೆ ಬೆಳಕಿಗೆ ಬಂದಿದೆ. ಈಗಾಗಲೇ ಪೊಲೀಸರು ಆರೋಪಿ ಅಪ್ಪನ ವಿರುದ್ಧ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಗಂಡ – ಹೆಂಡತಿ ಹಸುಗೂಸನ್ನು ಕರೆದುಕೊಂಡು ಬಿಹಾರದಿಂದ …

Read More »

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ   ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …

Read More »

ಹಾವು ಕಚ್ಚಿ ತಂದೆ-ಮಗ ಇಬ್ಬರೂ ಸಾವು

ಚಿಕ್ಕೋಡಿ: ಹಾವು ಕಚ್ಚಿ ತಂದೆ-ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ (14) ಹಾಗೂ ಮುತ್ತಪ್ಪ ಬಾಳಪ್ಪ ಕುಂಬಾರ (40) ಮೃತ ದುರ್ದೈವಿಗಳು. ಕಳೆದ ಆಗಸ್ಟ್ 29 ರಂದು ಹಾವು ಕಚ್ಚಿತ್ತು. ಪರಿಣಾಮ ಆಗಸ್ಟ್ 31 ರಂದು ಮಲ್ಲಿಕಾರ್ಜುನ್ ಮುತ್ತಪ್ಪ ಕುಂಬಾರ ಮೃತಪಟ್ಟಿದ್ದಾರೆ. ಸೆಪ್ಟೆಂಬರ್ 2 ರಂದು ಮುತ್ತಪ್ಪ ಬಾಳಪ್ಪ ಕುಂಬಾರ ಮೃತಪಟ್ಟಿದ್ದಾನೆ ಅಂತಾ ವರದಿಯಾಗಿದೆ. ಅಥಣಿ ಖಾಸಗಿ …

Read More »

ದೇಶ ಬಿಡಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮದುವೆಯಾಗ್ತಿರುವ ಹುಡುಗಿಯರು.!

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತ್ರ ಜನರು ದೇಶ ಬಿಡ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನ ಸಂದಣಿಯಿದೆ. ಆದ್ರೆ ಮಹಿಳೆಯರಿಗೆ ದೇಶ ಬಿಡುವುದು ಕಷ್ಟವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂಟಿ ಮಹಿಳೆ ಹಾಗೂ ಹುಡುಗಿಯರಿಗೆ ಪ್ರವೇಶ ಸಿಗ್ತಿಲ್ಲ. ಇದ್ರಿಂದ ತಪ್ಪಿಸಿಕೊಳ್ಳಲು ಕೆಲ ಹುಡುಗಿಯರನ್ನು ಒತ್ತಾಯ ಪೂರ್ವಕವಾಗಿ ಅಲ್ಲಿರುವ ಯಾವುದೋ ವ್ಯಕ್ತಿಗೆ ಮದುವೆ ಮಾಡಲಾಗ್ತಿದೆ. ಕೆಲ ಹುಡುಗಿಯರು, ಅಪರಿಚಿತನ ಪತ್ನಿಯೆಂದು ಸುಳ್ಳು ಹೇಳಿ ವಿಮಾನ ಏರುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದ ಕುಟುಂಬಸ್ಥರು, ಮಗಳನ್ನು …

Read More »

ನಾಳೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ತಮ್ಮ ಗಮನಕ್ಕೆ…

ಗೋಕಾಕ ಕೋವಿಡ್ ಮಹಾಮಾರಿ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಗಡಿ ಜಿಲ್ಲೆ ಬೆಳಗಾವಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಹಿಂಪಡೆದು ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.ಗೋಕಾಕ ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಪ್ರತಿಕಾಗೋಷ್ಠಿ ತಿಳಿಸಿದ್ದಾರೆ.

Read More »

ಬಟ್ಟೆ ಬ್ಯಾಗ್ ಖರೀದಿಯಲ್ಲಿ ರೋಹಿಣಿ ಅಕ್ರಮ: ಸಾ.ರಾ. ಮಹೇಶ್ ಆರೋಪ

ಮೈಸೂರು: ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ಟಿ ಸೇರಿ ₹ 9 ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಈ ಒಂದು ಬ್ಯಾಗ್ ಬೆಲೆ ₹ 52 ಇದೆ ಎಂದು ದಾಖಲೆ …

Read More »