Breaking News

ರಾಷ್ಟ್ರೀಯ

ರಾಜ್ಯಸಭೆಯ ಕೊನೆಯ 7 ಅಧಿವೇಶನಗಳಲ್ಲಿ ಶೇ100 ಹಾಜರಾತಿ ಪಡೆದ ಏಕೈಕ ಸಂಸದ ಎಸ್‌ ಆರ್ ಬಾಲಸುಬ್ರಮಣ್ಯಂ 

ದೆಹಲಿ: ಶೇಕಡಾ 78 ರಷ್ಟು ರಾಜ್ಯಸಭಾ (Rajya Sabha) ಸದಸ್ಯರು ಸದನದ ಕಲಾಪಗಳಿಗೆ ಪ್ರತಿನಿತ್ಯ ಹಾಜರಾಗುತ್ತಿದ್ದರು ಎಂದು ಸದನದ ಸೆಕ್ರೆಟರಿಯಟ್ ನಡೆಸಿದ ಅಧ್ಯಯನವು ತೋರಿಸಿದೆ. ಸಂಸತ್ತಿನ ಮೇಲ್ಮನೆಯಲ್ಲಿ ಸಂಸದರ ಹಾಜರಾತಿಯ ವಿಶ್ಲೇಷಣೆ ಪ್ರಕಾರ ಎಐಎಡಿಎಂಕೆ (AIADMK) ಸದಸ್ಯ ಎಸ್‌ಆರ್ ಬಾಲಸುಬ್ರಮಣ್ಯಂ(SR Balasubramaniam) ಅಧಿವೇಶನಕ್ಕೆ ತಪ್ಪದೇ ಹಾಜರಾಗುವ ರಾಜ್ಯಸಭಾ ಸದಸ್ಯರು ಎಂದು ಹೇಳಿದೆ. ಅಧ್ಯಯನದ ಪ್ರಕಾರ 75ರ ಹರೆಯದ ಬಾಲಸುಬ್ರಮಣ್ಯಂ ಈ 7 ಅಧಿವೇಶನಗಳ ಎಲ್ಲಾ 138 ಕಲಾಪಗಳಲ್ಲಿ ಭಾಗವಹಿಸಿದರು. ಒಂದು …

Read More »

ತಿರುಪತಿಗೆಂದು ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ – ಯುವಕನಿಗೆ 5 ವರ್ಷ ಜೈಲು!

ಚಾಮರಾಜನಗರ: ದೇಗುಲ ದರ್ಶನಕ್ಕೆಂದು ಅಪ್ರಾಪ್ತೆಯನ್ನು ತಿರುಪತಿಗೆ ಕರೆದೊಯ್ದು ರೈಲಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾಶಿವ ಎಸ್ ಸುಲ್ತಾನಪುರಿ 5 ವರ್ಷ ಸಜೆ ವಿಧಿಸಲು ಆದೇಶಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣ ನಿವಾಸಿ ಕುಮಾರ್ ಅಲಿಯಾಸ್ ಧ್ರುವ(19) ಎಂಬ ಯುವಕ ಶಿಕ್ಷೆಗೊಳಗಾದವ. ಕುಮಾರನು ಕೂಲಿ ಕಾರ್ಮಿಕನಾಗಿದ್ದು, 17 ವರ್ಷದ ಅಪ್ರಾಪ್ತೆಯನ್ನು ಪುಸಲಾಯಿಸಿ ಪ್ರೀತಿಸುವುದಾಗಿ ಪೀಡಿಸಿ ಕೊನೆಗೇ ದೇಗುಲಕ್ಕೆ ಹೋಗೋಣವೆಂದು 2019 ಫೆ.24 ರಂದು ತಿರುಮಲ …

Read More »

ವಿಜಯನಗರದಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವು ಪ್ರಕರಣ; ಗ್ರಾಮ ತೊರೆದ ಜನರು, ಶಾಲೆಗೆ ರಜೆ ಘೋಷಣೆ

ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ. ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು …

Read More »

WhatsApp, Facebook, Instagram ಬಂದ್ – 9 ಗಂಟೆಯಲ್ಲಿ ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ

ಬೆಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್ (WhatsApp), ಫೇಸ್‍ಬುಕ್ (Facebook) ಮತ್ತು ಇನ್‍ಸ್ಟಾಗ್ರಾಂ (Instagram) ಜಗತ್ತಿನಾದ್ಯಂತ ರಾತ್ರಿ 9 ಗಂಟೆಯಿಂದ ಸ್ಥಗಿತಗೊಂಡಿದ್ದವು. ಮಧ್ಯರಾತ್ರಿ 3.30ರ ವೇಳೆಗೆ ವಾಟ್ಸಪ್, ಫೇಸ್‍ಬುಕ್, ಇನ್‍ಸ್ಟಾಗ್ರಾಂ ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಜಗತ್ತಿನಲ್ಲಿ 200 ಕೋಟಿ ಫೇಸ್‍ಬುಕ್ ಬಳಕೆದಾರರಿದ್ದಾರೆ. ಭಾರತದಲ್ಲಿ 53 ಕೋಟಿ ವಾಟ್ಸಪ್ ಬಳಕೆದಾರರು, 41 ಕೋಟಿ ಫೇಸ್‍ಬುಕ್ ಬಳಕೆದಾರರು ಮತ್ತು 21 ಕೋಟಿ ಇನ್‍ಸ್ಟಾಗ್ರಾಂ ಬಳಕೆದಾರರು ಇದ್ದಾರೆ. ವಾಟ್ಸಪ್ ಮತ್ತು ಇನ್‍ಸ್ಟಾಗ್ರಾಂ ಕೂಡಾ …

Read More »

ಹೈಕಮಾಂಡ್ ನಿಂದ ಸಿದ್ದುಗೆ ಬುಲಾವ್: ಇಂದು ದೆಹಲಿಗೆ ಪ್ರಯಾಣ ಸಾಧ್ಯತೆ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆ ಮಾಡಿದ್ದು, ದೆಹಲಿಗೆ ಆಗಮಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಟಿಕೆಟ್ ಹಂಚಿಕೆ ವಿಚಾರದ ಬಗ್ಗೆ ಚರ್ಚಿಸಲು ಹೈಕಮಾಂಡ್, ಸಿದ್ದರಾಮಯ್ಯರನ್ನು ದೆಹಲಿಗೆ ಬರುವಂತೆ ಬುಲಾವ್ ನೀಡಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್​ ಟಿಕೆಟ್ ಫೈನಲ್ ಆಗಿದ್ದು, ಅಶೋಕ್​ …

Read More »

ರೈತರ ಆದಾಯ ದ್ವಿಗುಣಗೊಳಿಸಲು ಉನ್ನತಮಟ್ಟದ ಸಮಿತಿ ರಚನೆ : ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು : 2023ರ ವೇಳೆಗೆ ರಾಜ್ಯದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನ‌ ಜಿಕೆವಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸುವ ಕುರಿತು ಸಮಗ್ರ ಕೃಷಿ ಪದ್ದತಿಯ ವಿಸ್ತರಣೆ ಹಾಗೂ ಜನಪ್ರೀಯ ಕಾರ್ಯಕ್ರಮವನ್ನು ಅಳವಡಿಸಲು ಆರ್‌ಕೆವಿವೈ ಯೋಜನೆಯಡಿ ರೂ 72‌34 ಕೋಟಿಗಳ ಅನುದಾನವನ್ನು ಒದಗಿಸಲಾಗಿದ್ದು …

Read More »

ಶಾರುಖ್ ಖಾನ್ ಪುತ್ರನಿಗೆ ಸಿಗದ ಜಾಮೀನು

ಮುಂಬೈ: ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾದ ಪ್ರಕರಣದಡಿ ಬಂಧಿತರಾಗಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಮತ್ತೆ ಎನ್.ಸಿ.ಬಿ. ಕಸ್ಟಡಿಗೆ ನೀಡಲಾಗಿದೆ. ಇಂದು ವಿಚಾರಣೆ ನಡೆಸಿದ ಮುಂಬೈನ ಕಿಲ್ಲಾ ಕೋರ್ಟ್ ಅಕ್ಟೋಬರ್ 7 ರವರೆಗೆ NCB ಕಸ್ಟಡಿಗೆ ನೀಡಿ ಆದೇಶ ನೀಡಿದೆ. ಮುಂಬೈ ಗೋವಾ ನಡುವೆ ಸಮುದ್ರದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಶನಿವಾರ ರಾತ್ರಿ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಆರ್ಯನ್ …

Read More »

ಗೋಕಾಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಾನ್ ಶಾಪ್ ಕಳ್ಳತನ ಪ್ರಕರಣ

  ಗೋಕಾಕ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಸವರಾಜ ಪೂಜೇರಿ ಮಾಲೀಕತ್ವದ ಪಾನ್ ಶಾಪ್ ಅಂಗಡಿ ಇಂದು ಬೆಳಿಗ್ಗೆ ಸುಮಾರು 4 ಘಂಟೆಗೆ ಕೀಲಿ ಲಾಕ್ ಮುರಿದು ಕಳ್ಳತನ ನಡೆದಿದ್ದು.ಬೆಳಿಗ್ಗೆ 5 ಘಂಟೆಗೆ ಅಂಗಡಿ ತೆಗೆಯಲು ಬಂದ್ ಮಾಲೀಕ ಬಸು ಪೂಜೇರಿ ಅಂಗಡಿ ಕಳ್ಳತನ ಆಗಿರುವುದುನ್ನು ಕಂಡು 112 ಸಹಾಯವಾಣಿಗೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಪಿಎಸ್‌ಐ ವಾಲೀಕರ ಹಾಗೂ ಪೊಲೀಸ 112 ಸಿಬ್ಬಂದಿಗಳು ತನಿಖೆ ನಡೆಸಿ ಸ್ಥಳೀಯರಿಂದ …

Read More »

ಉಪಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿ ನೇಮಕ | ವಿಜಯೇಂದ್ರಗೆ ಸಿಗದ ಸ್ಥಾನ

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಇಂದು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಎರಡೂ ಕ್ಷೇತ್ರಗಳ ಉಸ್ತುವಾರಿ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್‍ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ಸಿಗದಿರುವುದು ಇದೀಗ ಗಮನ ಸೆಳೆಯುತ್ತಿದೆ. ಸಿಂಧಗಿ ವಿಧಾನ ಸಭೆ ಕ್ಷೇತ್ರಕ್ಕೆ ಗೋವಿಂದ್ ಕಾರಜೋಳ, ವಿ.ಸೋಮಣ್ಣ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ …

Read More »

ಆನಂದ್ ಸಿಂಗ್‍ರನ್ನು ಉಡಕ್ಕೆ ಹೋಲಿಸಿದ ಬೊಮ್ಮಾಯಿ

ವಿಜಯನಗರ: ರಾಜ್ಯದ ನೂತನ ಜಿಲ್ಲೆಯಾಗಿ ವಿಜಯನಗರ ಅಧಿಕೃತವಾಗಿ ಇಂದು ಉದ್ಘಾಟನೆಯಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯ ಮುನಿಸಿಪಲ್ ಕ್ರೀಡಾಂಗಣದಲ್ಲಿ ರಚಿಸಿದ್ದ  ಭವ್ಯ ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‍ವೈ ಅಧಿಕೃತವಾಗಿ ಜಿಲ್ಲೆಯ ಉದ್ಘಾಟನೆಯನ್ನು ಮಾಡಿದ್ದಾರೆ. ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್ ಹಠವಾದಿ. ಅವರು ಒಂದು ಕೆಲಸ ಹಿಡಿದರೆ ಮಾಡದೇ ಬಿಡಲ್ಲ. ಅವರು ಉಡದ ಹಾಗೆ ಕೆಲಸ ಮುಗಿಯುವವರೆಗೂ ಬಿಡಲ್ಲ. ನೂತನ ಜಿಲ್ಲೆಯ ಅಭಿವೃದ್ಧಿಗೆ ಇಡೀ …

Read More »