ನಾಳೆ ನಡೆಯಲಿರುವ ಸಭೆಯಲ್ಲಿ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಮುಖ್ಯಮಂತ್ರಿಗಳು ಎಲ್ಲರ ಸಲಹೆ ಪಡೆದುಕೊಳ್ಳುತ್ತಾರೆ. ಜನಸಾಮಾನ್ಯರನ್ನು ಯಾವುದೇ ರೀತಿ ಸಂಕಷ್ಟದಲ್ಲಿ ಸಿಲುಕಿಸಲು ಮತ್ತು ಅವರ ಭಾವನೆಗಳಿಗೆ ವಿರೋಧ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.ನಾಳೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಯಲಿರುವ ಹೈವೋಲ್ಟೇಜ್ ಕೋವಿಡ್ ಸಭೆ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್ ಜನರ ಹಿತ ದೃಷ್ಟಿಯಲ್ಲಿ, ಆರೋಗ್ಯದ ಹಿತ ದೃಷ್ಟಿಯಲ್ಲಿ ಏನು …
Read More »ಕೊರೊನಾ ಪೀಕ್‍ಗೆ ಹೋಗುವ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚಿಸುತ್ತೇವೆ: ಸಚಿವ ಬಿ.ಸಿ.ನಾಗೇಶ್
ಈಗಾಗಲೇ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ದಿನಾಂಕವನ್ನು ಘೋಷಣೆ ಮಾಡಿದ್ದೇವೆ. ಕೊರೊನಾ ಪೀಕ್‍ಗೆ ಹೋಗುತ್ತೆ ಎಂದು ಬಹಳ ಜನ ಮಾತನಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ತಾಂತ್ರಿಕ ಸಲಹಾ ಸಮಿತಿ ಒಂದು ವೇಳೆ ಅನುಮತಿ ಕೊಟ್ಟರೆ ಮಹಾನಗರಗಳಲ್ಲಿಯೂ ಶಾಲೆಗಳನ್ನು ಆರಂಭಿಸಲು ಪ್ರಯತ್ನಿಸುತ್ತೇವೆ. ನಾಳೆ ತಾಂತ್ರಿಕ ಸಲಹಾ ಸಮಿತಿ …
Read More »ಶಾಸಕ ಅನಿಲ್ ಬೆನಕೆ ವಿರುದ್ಧ ಕೇಸ್ ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ
ಬೆಳಗಾವಿ: ಕಾಂಗ್ರೆಸ್ ಪ್ರತಿಭಟನೆಗೂ ಮೊದಲೇ ಸರ್ಕಾರ ಬೆದರಿತಾ ಎಂಬ ಪ್ರಶ್ನೆಯೊಂದು ಎದ್ದಿದೆ. ಕಾಂಗ್ರೆಸ್ ಪ್ರತಿಭಟನೆ ಅಸ್ತ್ರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಕರೋನಾ ರೂಲ್ಸ್ ಬ್ರೇಕ್ ಮಾಡಿದ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ವಿರುದ್ಧ ಕೇಸ್ ದಾಖಲಿಸಿದೆ. ವೀಕೆಂಡ್ ಕರ್ಫ್ಯೂ ಮಧ್ಯೆಯೂ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಅನಿಲ್ ಬೆನಕೆ ಭಾಗಿಯಾಗಿದ್ದರು. ಜನವರಿ 16ರಂದು ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಮಾಸ್ಕ್ ಹಾಕದೇ …
Read More »ಕಳ್ಳ ಸಹೋದರರ ಸೆರೆ: ಐದು ಬೈಕ್ ಜಪ್ತಿ
ಕಲಬುರಗಿ: ನಗರದಲ್ಲಿ ಹಾಡು ಹಗಲೇ ಬೈಕ್‌ಗಳ ಕಳ್ಳತನದಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಸಹೋದರರನ್ನು ಉತ್ತರ ಉಪವಿಭಾಗದ ಚೌಕ್ ಠಾಣೆ ಪೊಲೀಸರು ಬಂಧಿಸಿ, 3.5 ಲಕ್ಷ ರೂ. ಮೌಲ್ಯದ ಐದು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಕಾಳಗಿ ತಾಲೂಕಿನ ಕೊರವಾರ ಗ್ರಾಮದ ವಿಕಾಸ ಹೊಸಮನಿ, ರಾಮಚಂದ್ರ ಹೊಸಮನಿ ಬಂಧಿತ ಸಹೋದರರು. ಬುಧವಾರ ಬೆಳಗ್ಗೆ ತಾಜ್ ಸುಲ್ತಾಪುರ ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ತಡೆದು ವಿಚಾರಣೆ ನಡೆಸಿದಾಗ ಈ ಕಳ್ಳರು …
Read More »ಬೆಳಗಾವಿ: ಕಣಕುಂಬಿಯಲ್ಲಿ ಮರಕ್ಕೆ ಅಪ್ಪಿಳಿಸದ ಕಾರು: ಸ್ಥಳದಲ್ಲೇ ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ
ಬೆಳಗಾವಿ: ಚಾಲಕನ ನಿಯಂತ್ರಣ ಕೈ ತಪ್ಪಿ ಕಾರೊಂದು ಮರಕ್ಕೆ ಅಪ್ಪಳಿಸಿದ ಪರಿಣಾಮ ಮಹಿಳೋರ್ವಳು ಸ್ಥಳದಲ್ಲೇ ಅಸುನೀಗಿರುವ ಘಟನೆ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಗುಲಾಬಿ ಪಾಂಡುರಂಗ ಗವಸ್( 38) ಮೃತ ಮಹಿಳೆ. ಸಂಬಂಧಿಕರ ಮನೆಯಲ್ಲಿಕಾರ್ಯಕ್ರಮ ಮುಗಿಸಿಕೊಂಡು ಬೆಳಗಾವಿ ಆಗಮಿಸುವ ವೇಳೆಯಲ್ಲಿ ಕಣಕುಂಬಿ ಪ್ರವಾಸಿ ಮಂದಿರದ ಬಳಿಯ ಈ ಅವಘಡ ಸಂಭವಿಸಿದೆ. ಕಾರನ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ಬೃಹತ್ ತಿರುವಿನಲ್ಲಿ ಚಾಲಕನ …
Read More »ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು
ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಅನುಮತಿ ಪಡೆದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗೆ ಸಂಪೂರ್ಣವಾಗಿ ನಿಯಮಿತ ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡುವಂತೆ ಭಾರತದ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಲಸಿಕೆಗಳಿಗೆ ಮಾರುಕಟ್ಟೆ ದೃಢೀಕರಣ ಸಿಕ್ಕರೆ, ಅವು ಔಷಧ ಮಾರುಕಟ್ಟೆಯಲ್ಲಿ ಸಿಗಲಿವೆ. ಸೀರಂ ಇನ್ಸ್ಟಿಟ್ಯೂಟ್ನ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳ ಸ್ಥಿತಿಯನ್ನು ಅಪ್ಗ್ರೇಡ್ ಮಾಡಬೇಕು ಅಂದರೆ, ಸದ್ಯ ಅವುಗಳನ್ನು ತುರ್ತುಸಂದರ್ಭದಲ್ಲಿ ವಯಸ್ಕರಿಗೆ ಷರತ್ತುಬದ್ಧವಾಗಿ, ನಿಯಂತ್ರಿತವಾಗಿ ನೀಡಲಾಗುತ್ತಿದೆ. …
Read More »ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ.. ಅಪಾರ ವನಸಂಪತ್ತು ನಾಶ
ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ವನಸಂಪತ್ತು ನಾಶವಾಗಿದೆ. ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು ಸುಮಾರು 2 ಕಿ.ಮೀ ವಾಪ್ತಿವರೆಗೂ ಬೆಂಕಿ ಆವರಿಸಿದೆ. ಇನ್ನು, ನವಿಲು, ಚಿರತೆ, ಜಿಂಕೆಗಳು ಸೇರಿದಂತೆ ಅನೇಕ ಪ್ರಾಣಿಗಳು ಅಗ್ನಿಗೆ ಆಹುತಿಯಾಗಿವೆ ಅಂತಾ ಹೇಳಲಾಗ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ತೆರಳಲು ಸಾಧ್ಯವಾಗದ ಸ್ಥಳದಲ್ಲಿ ಬೆಂಕಿ ಆವರಿಸಿಕೊಂಡಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
Read More »ರಾಜ್ಯದ ಇಂದಿನ ಕೊರೋನಾ ವರದಿ
ಬೆಂಗಳೂರು- ಕರ್ನಾಟಕದಲ್ಲಿ ಇಂದು 40,499 ಹೊಸ ಪ್ರಕರಣಗಳು ಕಂಡು ಬಂದಿವೆ. ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 24,135 ರಾಜ್ಯದಲ್ಲಿ ಧನಾತ್ಮಕ ದರ: 18.80% ಬಿಡುಗಡೆಗಳು: 23,209 ಸಕ್ರಿಯ ಪ್ರಕರಣಗಳು ರಾಜ್ಯ: 2,67,650 (ಬೆಂಗಳೂರಿನಲ್ಲಿ- 184000) ಸಾವುಗಳು: 21 (ಬೆಂಗಳೂರು- 05) ಪರೀಕ್ಷೆಗಳು: 2,15,312 ಕೋವಿಡ್ ನಿರ್ಬಂಧ ಸಡಿಲಿಕೆ: ತಜ್ಞರ ಸಭೆ ನಂತರ ತೀರ್ಮಾನ.
Read More »ವಿದ್ಯಾರ್ಥಿಗಳಿಂದ ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ.
ಹುಬ್ಬಳ್ಳಿ: ‘ಬಡ, ನಿರ್ಗತಿಕ ಹಾಗೂ ದಾಸೋಹ ಕೈಂಕರ್ಯ ನಡೆಸುತ್ತಿರುವ ಮಠಗಳಿಗೆ ವಿತರಿಸುವುದಕ್ಕಾಗಿ, ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್) ವಿದ್ಯಾರ್ಥಿಗಳು ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ ಆರಂಭಿಸಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಡಿ.ವಿ. ಹೊನಗಣ್ಣವರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಮಾರು 50 ವಿದ್ಯಾರ್ಥಿಗಳು ಜ. 1ರಿಂದ 20ರವರೆಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದುವರೆಗೆ 25 ಕೆ.ಜಿ.ಯ 200ಕ್ಕೂ ಹೆಚ್ಚು ಅಕ್ಕಿ ಚೀಲಗಳು ಸಂಗ್ರಹವಾಗಿವೆ. …
Read More »ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆ
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಆಕಳು ಮೇಯಿಸಲು ಬಿಟ್ಟಿದ್ದಿಯಾ ಎಂದು ಜಗಳ ತೆಗೆದು ಶ್ರೀಕಾಂತ ಕಟಾಬಳಿ ಎನ್ನುವ ಯುವಕನ ಮೇಲೆ ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್ ಹಾಗೂ ರಂಜಿತ್ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಶ್ರೀಕಾಂತ ಕಟಾಬಳಿ ತಲೆಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದಡ್ಡಿ …
Read More »