ಗೋಕಾಕ : ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಗೋವಿಂದ ಕಾರಜೋಳ ಅವರು ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರಲಿಕ್ಕೆ ಕಾರಜೋಳ …
Read More »ಸಚಿವೆ ಶಶಿಕಲಾ ಜೊಲ್ಲೆಗೂ ಕೋವಿಡ್
ಬೆಳಗಾವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಬಗ್ಗೆ ಸಚಿವರೇ ಸ್ವತಃ ಮಾಹಿತಿ ನೀಡಿದ್ದಾರೆ. ನನಗೆ ಕೋವಿಡ್ ಸೋಂಕು ಖಚಿತಪಟ್ಟಿದ್ದು ಹೋಂ ಐಸೋಲೇಶನ್‌ನಲ್ಲಿ ಇದ್ದೇನೆ, ಆರೋಗ್ಯವಾಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ವಿನಂತಿಸಿದ್ದಾರೆ.
Read More »ಲಾರಿ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ
ಹಾವೇರಿ: ಮೆಕ್ಕೆಜೋಳ ತುಂಬಿದ ಲಾರಿ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ ಬಳಿ ನಡೆದಿದೆ. ಆನಂದ (35), ಮಂಜು (37) ಹಾಗೂ ಆನಂದ (33) ಮೃತರು. ಮೆಕ್ಕೆಜೋಳ ತುಂಬಿದ್ದ ಲಾರಿ ಇಚ್ಚಂಗಿ ಗ್ರಾಮದಿಂದ ಹೊಸರಿತ್ತಿ ಗ್ರಾಮಕ್ಕೆ ತೆರಳುತ್ತಿತ್ತು. ಈ ವೇಳೆ ಈ ದುರಂತ ಸಂಭವಿಸಿದೆ. ಮೃತರು ಲಾರಿಯಲ್ಲಿದ್ದ ಮೂವರು ಹಮಾಲರಾಗಿದ್ದು, ಲಾರಿ ಪಲ್ಟಿಯಾದ ವೇಳೆ ಲಾರಿ ಕೆಳಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು …
Read More »ಬೆಳಗಾವಿ ಜಿಲ್ಲೆಯ ಸೋಮವಾರದ ಕೊರೋನಾ ಮಾಹಿತಿ; ಸವದತ್ತಿಯ ವ್ಯಕ್ತಿ ಬಲಿ
ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ 625 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಬೆಳಗಾವಿ ನಗರದಲ್ಲಿ 325, ಸವದತ್ತಿಯಲ್ಲಿ 59, ರಾಮದುರ್ಗದಲ್ಲಿ 47, ಚಿಕ್ಕೋಡಿಯಲ್ಲಿ 43, ರಾಯಬಾಗದಲ್ಲಿ 35, ಬೈಲಹೊಂಗಲದಲ್ಲಿ 32, ಅಥಣಿಯಲ್ಲಿ 27, ಗೋಕಾಕಲ್ಲಿ 24, ಖಾನಾಪುರದಲ್ಲಿ 20 ಜನರಿಗೆ ಸೋಂಕು ಪತ್ತೆಯಾಗಿದೆ. ಸವದತ್ತಿಯ 49 ವರ್ಷದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲೆಯಲ್ಲಿ ಇನ್ನೂ 1144 ಜನರು ಕೊರೋನಾ …
Read More »ಬೆಳಗಾವಿ: ಶಾರ್ಟ್ ಸರ್ಕ್ಯೂಟ್, ಸಿಲೀಂಡರ್ ಸ್ಪೋಟ, ಅಗ್ನಿ ಅನಾಹುತ
ಬೆಳಗಾವಿ – ನಗರದ ಚವ್ಹಾಟ್ ಗಲ್ಲಿಯ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಒಂದೂವರೆ ಲಕ್ಷ ರೂ. ಗೂ ಹೆಚ್ಚಿನ ಮೊತ್ತದ ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ. ಚವ್ಹಾಟ್ ಗಲ್ಲಿಯ ಶಹಾಪುರಕರ್ ಎಂಬುವವರ ಮನೆಯಲ್ಲಿ ಮೊದಲು ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿ ಗ್ಯಾಸ್ ಸಿಲೀಂಡರ್ ಗೆ ತಗುಲಿ ಸಿಲಿಂಡರ್ ಸಹ ಸ್ಪೋಟಗೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು ಬೆಂಕಿ …
Read More »ದೇಶದ ಗಡಿಯಲ್ಲಿ ಒಳ ನುಗ್ಗಲು ಉಗ್ರರ ಸಂಚು
ದೇಶದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಕೆಲವೊಂದು ಭಯೋತ್ಪಾದಕ ಸಂಘಟನೆಗಳಿಂದ ಜೀವ ಬೆದರಿಕೆಯ ಕರೆಗಳು ಬಂದಿದ್ದು, ಈ ಹಿನ್ನೆಲೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಬಿಎಸ್ಎಫ್ ಹದ್ದಿನ ಕಣ್ಣಿಟ್ಟಿದೆ.ಈ ಕುರಿತು ಮಾಹಿತಿ ನೀಡಿದ ಭದ್ರತಾ ಪಡೆ ಇನ್ಸ್ಪೆಕ್ಟರ್ ಡಿ.ಕೆ ಬೂರಾ, ಕಾಶ್ಮೀರಗಡಿಯಲ್ಲಿ ಈಗಾಗಲೇ ನಿಗಾ ವಹಿಸಲಾಗಿದ್ದು,ಎರಡು ವಾರಗಳ ಕಾಲ ಗಡಿಯಲ್ಲಿ ಹೆಚ್ಚಿನ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದ್ದೇವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗಿದ್ದು, ಅಹಿತಕರ …
Read More »ನಾಥೂರಾಮ್ ಗೋಡ್ಸೆ ಕುರಿತ ಸಿನಿಮಾ ವಿರೋಧಿಸಿ ಮೋದಿಗೆ ಪತ್ರ
1948ರ ಜ.30ರಂದು ಗಾಂಧೀಜಿ ಹತ್ಯೆ ಆಯಿತು. ನಾಥೂರಾಮ್ ಗೋಡ್ಸೆಯ ಗುಂಡೇಟಿಗೆ ಗಾಂಧಿ ಬಲಿಯಾದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆಗಳನ್ನೇ ಆಧರಿಸಿ ಈ ಸಿನಿಮಾ ತಯಾರಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ‘Why I killed Gandhi’ ಚಿತ್ರತಂಡ ಹೇಳಿಕೊಂಡಿದೆ.
Read More »ಸಂಪುಟ ವಿಸ್ತರಣೆ, ಬೆಳಗಾವಿ ರಹಸ್ಯ ಸಭೆ; ಸಿಎಂ ನೀಡಿದ ಪ್ರತಿಕ್ರಿಯೆಯೇನು?
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯ ರಾಜಕೀಯ ಚಟುವಟಿಕೆ ಮತ್ತೆ ಗರಿಗೆದರಲು ಕಾರಣವಾಗಿದ್ದು, ಮಾರ್ಚ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವಾಕಾಂಕ್ಷಿಗಳು ಮಾರ್ಚ್ ನಲ್ಲಿ ಬೇಡ ಸಂಪುಟ ವಿಸ್ತರಣೆ ಈಗಲೇ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿ ಇದೆ. ಅದನ್ನು ಯಾವಾಗ ಭರ್ತಿ …
Read More »ಗೆಲುವಿಗಾಗಿ ನೂರೆಂಟು ಸರ್ಕಸ್.. ಪಂಚರಾಜ್ಯಗಳಲ್ಲಿ ‘ರಾಜಕೀಯ ತಂತ್ರ’ ಹೇಗಿದೆ..?
ಪಂಚರಾಜ್ಯಗಳ ಚುನಾವಣೆ ಬಿಸಿ ಏರ್ತಿದೆ. ಉತ್ತರ ಪ್ರದೇಶದಲ್ಲಿ ಕುರ್ಚಿಯಾಟ ಮುಂದುವರೆದಿದೆ. ಪಂಜಾಬ್ನಲ್ಲಿ ಕ್ಯಾಪ್ಟನ್ ತನ್ನ ಪಕ್ಷದ ಹುರಿಯಾಳುಗಳನ್ನ ಪ್ರಕಟಿಸಿದ್ದಾರೆ. ಇತ್ತ ಗೋವಾದಲ್ಲಿ ಕಳೆದ ಬಾರಿ ಕೈ ಸುಟ್ಕೊಂಡಿದ್ದ ಕಾಂಗ್ರೆಸ್, ಈ ಸಲ ಚುನಾವಣೆ ಮುನ್ನವೇ ಆಣೆ ಪ್ರಮಾಣದ ಮೊರೆ ಹೋಗಿದೆ. ಸಮೀಕ್ಷೆಗಳಿಗೆ ಬೀಳುತ್ತಾ ಬ್ರೇಕ್..? ವಿವಿಧ ಸುದ್ದಿ ವಾಹಿನಗಳಲ್ಲಿ ಪ್ರಸಾರ ಆಗ್ತಿರುವ ಚುನಾವಣೆ ಸಮೀಕ್ಷೆಗಳಿಗೆ ಬ್ರೇಕ್ ಹಾಕುವಂತೆ ಸಮಾಜವಾದಿ ಪಕ್ಷ ಆಗ್ರಹಿಸಿದೆ. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಅಂತ …
Read More »3ನೇ ಅಲೆ ಎಫೆಕ್ಟ್.. ಒಂದು ವೇಳೆ ನೀವು ಪತ್ರಿಕೆ ಕೊಳ್ಳದಿದ್ರೆ 3.5 ಲಕ್ಷ ಕುಟುಂಬಗಳು ಬೀದಿಗೆ
ಬಂದ್ ಇರಲಿ, ಲಾಕ್ ಡೌನ್ ಇರಲಿ. ದಿನ ಪತ್ರಿಕೆ ಹಾಕೋರು ಮಳೆ ಚಳಿ ಗಾಳಿ ಲೆಕ್ಕಿಸದೇ ಅದೇನೇ ಕಷ್ಟಗಳಿದ್ರೂ ನಾವು ಬೆಡ್ನಿಂದ ಎದ್ದೇಳುವಷ್ಟರಲ್ಲಿ ಹಳ್ಳಿಯಿಂದ ದಿಲ್ಲಿವರೆಗಿನ ಸುದ್ದಿಗಳನ್ನ ನಮ್ಮ ಮನೆ ಬಾಗಿಲುಗಳಿಗೆ ತಲುಪಿಸುವ ಕೆಲಸ ಮಾಡ್ತಾರೆ. ಆದರೆ ಅವರ ಸಮಸ್ಯೆಗಳು ಮಾತ್ರ ಬೆಟ್ಟದಷ್ಟು. ಹೀಗೆ ಕಷ್ಟದಲ್ಲೇ ಜೀವನ ಸಾಗಿಸುತ್ತಿದ್ದವರೂ ಸದ್ಯ ಕಂಗಾಲಾಗಿದ್ದಾರೆ. ದಿನ ಬೆಳಗಾದ್ರೆ ಸಾಕು ಬಿಸಿ ಬಿಸಿ ಕಾಫಿ ಜೊತೆಗೆ ದಿನ ಪತ್ರಿಕೆ ಓದುವುದರೊಂದಿಗೆ ಬಹುತೇಕರ ದಿನಚರಿ ಶುರುವಾಗುತ್ತೆ. …
Read More »