ಸರಳ, ಸಜ್ಜನಿಕೆ, ಸ್ನೇಹ ಜೀವಿ, ಮಗು ಥರಾ ಮನಸ್ಸಿನ ಶಿವಣ್ಣ ಮಕ್ಕಳ ಜೊತೆ ಅಕ್ಷರಶಃ ಮಗುವಾಗಿ ಬಿಡ್ತಾರೆ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣರಿಗೆ ಸಂಬಂಧಿಸಿದ ವಿಡಿಯೋ ಒಂದು ಭಾರೀ ವೈರಲ್ ಆಗ್ತಿದೆ. ಸಂಬಂಧಿಕರ ಮಕ್ಕಳ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ತೆಗೆದ ಫೋಟೋ ಹಾಗೂ ವಿಡಿಯೋಗಳು ಇವು ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಶಿವಣ್ಣ, ತೊಟ್ಟಿಲಲ್ಲಿ ಮಲಗಿಕೊಂಡಿದ್ದಾರೆ. ಕಾಲು ಮೇಲೆ ಕಾಲು ಹಾಕಿ ಮಲಗಿ, ಒಂದು ಕೈಯನ್ನ ತಲೆ ದಿಂಬಾಗಿ ಇಟ್ಟುಕೊಂಡು …
Read More »ಕೊಂಡೋತ್ಸವದ ವೇಳೆ ಅವಘಡ; ಮಹಿಳೆ ಸಾವು, 45ಕ್ಕೂ ಹೆಚ್ಚು ಮಂದಿಗೆ ಗಾಯ
ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಕೊಂಡೋತ್ಸವ ನಡೆಯುತ್ತಿದ್ದ ವೇಳೆ ಅವಘಡ ನಡೆದಿದೆ. ಕಟ್ಟಡ ಒಂದರ ಸಜ್ಜ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ. ಪುಟ್ಟಲಿಂಗಮ್ಮ ಮೃತ ಮಹಿಳೆ. ಗ್ರಾಮದ ಬಸವೇಶ್ವರ ದೇವಾಲಯದ ಕೊಂಡೋತ್ಸವ ಇತ್ತು. ಈ ಕೊಂಡೋತ್ಸವ ನೋಡಲು ಹಳೆಯ ಕಟ್ಟಡದ ಮೇಲೆ ಜನರು ನಿಂತಿದ್ದರು. ಹಳೆ ಕಟ್ಟಡವಾದ್ದರಿಂದ ಮನೆಯ ಸಜ್ಜ ಕುಸಿದು ಮಹಿಳೆ ಸಾವನ್ನಪ್ಪಿದ್ದಾಳೆ. ದುರ್ಘಟನೆಯಲ್ಲಿ ಸುಮಾರು 30 ರಿಂದ 40 ಜನರಿಗೆ ಗಾಯವಾಗಿದೆ. ಗಾಯಳುಗಳಿಗೆ ಮದ್ದೂರಿನ ಸರ್ಕಾರಿ …
Read More »ಡೆತ್ನೋಟ್ ಬರೆದಿಟ್ಟು ಶಂಕರಪ್ಪ ಆತ್ಮಹತ್ಯೆ! ಮದ್ವೆಯಾದ 5 ತಿಂಗಳಲ್ಲೇ ದುರಂತ, ಪತ್ನಿ ಮೇಘನಾಳ ಗೋಳಾಟ ನೋಡಲಾಗ್ತಿಲ್ಲ.
ಕುಣಿಗಲ್: ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜತೆ ಯುವತಿಯೇ ಇಷ್ಟಪಟ್ಟು ಸರಳವಾಗಿ ಮದುವೆ ಆಗಿದ್ದರು. ಈ ಜೋಡಿಯ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು ಕೂಡ. ‘ಒಲವಿನ ಬದುಕಿಗೆ ಪ್ರೀತಿಯೊಂದಿದ್ದರೆ ಸಾಕು ಬೇರೇನೂ ಬೇಡ. ಶುಭವಾಗಲಿ’ ಎಂದು ನೂರಾರು ಜನ ಹರಸಿದ್ದರು ಕೂಡ. ಆದರೀಗ ಈ ಜೋಡಿಯ ಬಾಳಲ್ಲಿ ದುರಂತ ಸಂಭವಿಸಿದೆ. ಯುವತಿ ಜತೆ ಸಪ್ತಪದಿ ತುಳಿದಿದ್ದ ರೈತ ಶಂಕರಪ್ಪ ಇಂದು (ಮಂಗಳವಾರ) ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ …
Read More »53.79 ಟನ್ ಕಬ್ಬು ಸಾಗಿಸಿ ದಾಖಲೆ
ಮುಧೋಳ: ಜಮಖಂಡಿ ತಾಲ್ಲೂಕು ನಾವಲಗಿ ಗ್ರಾಮದ ಪ್ರಗತಿಪರ ರೈತ ಬಸಪ್ಪ ಸದಪ್ಪ ಮುಗಳಖೋಡ ತಮ್ಮ ಜಮೀನಿನಲ್ಲಿ ಬೆಳೆದ 53.79 ಟನ್ ಕಬ್ಬನ್ನು ತಮ್ಮ ಟ್ರ್ಯಾಕ್ಟರ್ ನಲ್ಲಿ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆಗೆ ಸಾಗಿಸಿ ದಾಖಲೆ ಮಾಡಿದರು. ನಿರಾಣಿ ಸಕ್ಕರೆ ಕಾರ್ಖಾನೆಯ ಕಬ್ಬು ವಿಭಾಗದ ನಿರ್ದೇಶಕ ಎನ್.ವಿ ಪಡಿಯಾರ ಮತ್ತು ಡಿ.ಬಿ.ನಾಯಕ, ಕೆ. ದ್ವಾರಕೀಶ್, ಅವರು ಪ್ರಗತಿಪರ ರೈತ ಬಸಪ್ಪ ಅವರನ್ನು ಸನ್ಮಾನಿಸಿದರು. ‘53.79 ಟನ್ ಕಬ್ಬು ಸಾಗಿಸಿರುವುದು ಸಾರ್ವಕಾಲಿಕ ದಾಖಲೆಯಾಗಿದೆ’ ಎಂದು …
Read More »40 ಕ್ಕೂ ಹೆಚ್ಚು ಕೃಷಿ ಸಾಧನಗಳ ಆವಿಷ್ಕಾರ: ಧಾರವಾಡದ ರೈತ ಅಬ್ದುಲ್ ಖಾದರ್ ನಡಕಟ್ಟಿನ್‌ಗೆ ‘ಪದ್ಮಶ್ರಿ’
ನವದೆಹಲಿ: ಧಾರವಾಡದ ಕೃಷಿ ಸಂಶೋಧಕ ಅಬ್ದುಲ್ ಖಾದರ್ ನಡಕಟ್ಟಿನ್ ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು. ಭಾರತದಾದ್ಯಂತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ 40 ಕ್ಕೂ ಹೆಚ್ಚು ಆವಿಷ್ಕಾರಗಳಿಗೆ ಅವರು ಈ ವಿಶೇಷ ಮನ್ನಣೆ ಪಡೆದಿದ್ದಾರೆ. ನಾನೊಬ್ಬ ಸಾಮಾನ್ಯ ರೈತ. ಆದರೆ, ಕಳೆದ 35 ವರ್ಷಗಳಲ್ಲಿ ಕೃಷಿಯಲ್ಲಿ ಬಳಸುವ ಯಂತ್ರಗಳ ಕುರಿತು ನಾನು ನಡೆಸಿದ ಸಂಶೋಧನೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ …
Read More »ಏಪ್ರಿಲ್ 1 ರಿಂದ ಬದಲಾಗಲಿವೆ ಈ 5 ನಿಯಮಗಳು: ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ
ದೆಹಲಿ: ಹಣಕಾಸು ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳಲಿದೆ. ಹಣಕಾಸು ವರ್ಷ ಏಪ್ರಿಲ್ 1 ರಿಂದ ಅನೇಕ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಇದು ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ. ಏಪ್ರಿಲ್ 1 ರಿಂದ ಟ್ರ್ಯಾಕ್‌ಗಳು, ಜಿಎಸ್‌ಟಿ, ಪ್ಯಾನ್-ಆಧಾರ್ ಲಿಂಕ್, ಎಫ್‌ಡಿ ಸೇರಿದಂತೆ ಬ್ಯಾಂಕ್‌ನ ನಿಯಮಗಳು ಬದಲಾಗುತ್ತವೆ. ಹೀಗಾಗಿ ಅಂತಹ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಅತ್ಯಗತ್ಯ. ಅವುಗಳು ಯಾವುವು ಎಂದು ಎಲ್ಲರೂ ತಿಳಿದುಕೊಂಡರೆ ಮುಂದಾಗುವ …
Read More »ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಹೂ ನೀಡಿ ಸ್ವಾಗತಿಸಿದ :ಶಾಸಕ ಅನಿಲ್ ಬೆನಕೆ!
ಬೆಳಗಾವಿ: ಶಾಲಾ- ಕಾಲೇಜುಗಳಲ್ಲಿ ‘ಧರ್ಮವಸ್ತ್ರ’ ಧರಿಸಿ ಬರಕೂಡದು ಎಂಬ ಹೈಕೋರ್ಟ್ ಆದೇಶದ ಮಧ್ಯೆಯೇ, ಇಂದಿನಿಂದ ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಳಗಾವಿಯ ಶಾಲೆಯೊಂದರಲ್ಲಿ ಮಕ್ಕಳು ಹಿಜಾಬ್ ಧರಿಸಿ ಬಂದಿದ್ದು, ಬಿಜೆಪಿ ಶಾಸಕ ಅನಿಲ್ ಬೆನಕೆ ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದ್ದಾರೆ. ನಗರದ ಸರ್ದಾರ್ ಹೈಸ್ಕೂಲ್ನಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಆಗಮಿಸಿದಾಗ, ಉಪಸ್ಥಿತರಿದ್ದ ಶಾಸಕ ಅನಿಲ ಬೆನಕೆ ಅವರು, ಮಕ್ಕಳಿಗೆ ಗುಲಾಬಿ ಹೂ ನೀಡಿ ಶುಭ ಕೋರಿದ್ದಾರೆ. ಇದೇ ವೇಳೆ ಹಿಜಾಬ್ ಧರಿಸಿ …
Read More »ದೇವೇಗೌಡರ ಪತ್ನಿ ಚನ್ನಮ್ಮಗೆ ಐಟಿ ನೋಟಿಸ್! ಕಬ್ಬಿನ ಗದ್ದೆಗೆ ಅಧಿಕಾರಿಗಳನ್ನ ಆಹ್ವಾನಿಸಿದ ರೇವಣ್ಣ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ಹಾಸನದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ತಾಯಿಗೆ ಐಟಿ ಅಧಿಕಾರಿಗಳಿಂದ ನೋಟಿಸ್ ಬಂದಿದೆ. ಒಬ್ಬ ಮಾಜಿ ಪ್ರಧಾನಿ ಪತ್ನಿಗೆ ಹೀಗೆ ಮಾಡ್ತಾರಾ? ದೊಡ್ಡಪುರದ ಬಳಿ ನಮ್ಮ ತಾಯಿ ಹೆಸರಿನ ಜಮೀನಿನಲ್ಲಿ ಕಬ್ಬು ಬೆಳೆದಿದ್ದೀವಿ. ನಮ್ಮ ತಾಯಿಗೆ ಸೇರಿದ ಗದ್ದೆಯಲ್ಲಿ ಕಬ್ಬು ಬೆಳೆದಿದ್ದಕ್ಕೆ ಐಟಿ ನೋಟಿಸ್ ಜಾರಿ ಮಾಡಿದೆ. …
Read More »ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ
ಬೆಂಗಳೂರು : ರಾಜ್ಯದಲ್ಲಿ ಒಬಿಸಿಗಳಿಗೆ ಮೀಸಲಾತಿ ಕಲ್ಪಿಸಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಭರವಸೆ ನೀಡಿದ್ದಾರೆ. ವಿಧಾನ ಪರಿಷತ್ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ-2022 ಅನ್ನು ಸಚಿವ ಈಶ್ವರಪ್ಪ ಮಂಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ …
Read More »ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ- ಸಂಸದ ಈರಣ್ಣಾ ಕಡಾಡಿ
ಬೆಳಗಾವಿ: ಸ್ವತಂತ್ರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸ್ಮರಣೆಗಾಗಿ ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲೆಯ ಸಂಗೋಳ್ಳಿ ಗ್ರಾಮದಲ್ಲಿ ನಿರ್ಮಿಸಿರುವ ಸೈನಿಕ ಶಾಲೆಯನ್ನು ಕೇಂದ್ರ ರಕ್ಷಣಾ ಇಲಾಖೆಯ ಅಧೀನದಲ್ಲಿ ತೆಗೆದುಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು. ರವಿವಾರ ಮಾ-27 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ದೇಶಾದ್ಯಂತ 100 ಹೊಸ ಸೈನಿಕ …
Read More »