ನವದೆಹಲಿ : ರಾಜ್ಯ ಸರ್ಕಾರದ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ ದೊರೆತಿದೆ. ಸರ್ಕಾರದ ಸೇವಾ ಸಿಂಧು ಪೋರ್ಟಲ್‌ಗೆ ಕೇಂದ್ರ ಸರ್ಕಾರದ ಉತ್ಕೃಷ್ಟ ಪ್ರಶಸ್ತಿ ದೊರೆತಿದೆ. ಹೌದು, ಉತ್ಕೃಷ್ಟ ಸಾರ್ವಜನಿಕ ಆಡಳಿತಕ್ಕೆ ಕೇಂದ್ರ ಸರ್ಕಾರ ನೀಡುವ ಸುಗಮ ಸೇವೆ ವಿಭಾಗದ ಪ್ರಶಸ್ತಿಗೆ ಕರ್ನಾಟಕ ಆಯ್ಕೆಯಾಗಿದ್ದು, ದೆಹಲಿ ವಿಜ್ಞಾನ ಭವನದಲ್ಲಿ ಪ್ರಧಾನಿ ಮೋದಿ ಪ್ರಶಸ್ತಿ ಪ್ರಧಾನ ಮಾಡಿದರು. ಇನ್ನು ರಾಜ್ಯ ಸರ್ಕಾರದ ಪರ ಐಎಎಸ್ ಅಧಿಕಾರಿ ದೀಪ್ತಿ ಆದಿತ್ಯ ಕಾನಡೆ ಪ್ರಶಸ್ತಿ ಸ್ವೀಕರಿಸಿದರು. …
Read More »ದೆಹಲಿಯ ಖಾಸಗಿ ಶಾಲೆಗಳ 4 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ: ಕೇಜ್ರಿವಾಲ್
ಬೆಂಗಳೂರು: ದೆಹಲಿಯಲ್ಲಿ ಈ ವರ್ಷ ಖಾಸಗಿ ಶಾಲೆಗಳನ್ನು ತೊರೆದು 4 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ರ ಕೇಜ್ರಿವಾಲ್ ಹೇಳಿದ್ದಾರೆ. ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೆಹಲಿಯಲ್ಲಿ ಐದು ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ಬದಲಾಯಿಸಿದ್ದೇವೆ. ಈ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ. ದೆಹಲಿಯಲ್ಲಿ ಆಸ್ಪತ್ರೆಗಳ ಪರಿಸ್ಥಿತಿಯೂ …
Read More »BREAKING ಸಿನಿಮೀಯ ರೀತಿಯಲ್ಲಿ ಮೂವರು ವಿಚಾರಣಾಧೀನ ಕೈದಿಗಳು ಎಸ್ಕೇಪ್
ರಾಯಚೂರು: ಮೂವರು ವಿಚಾರಣಾಧೀನ ಕೈದಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ. ಮಹಾರಾಷ್ಟ್ರ ಮೂಲದ ಹರ್ಷ, ರಾಜೇಶ್ ಖನ್ನಾ ಮಯ ಹಾಗೂ ಗೋವಿಂದ ಪಲ್ಲು ಪರಾರಿಯಾದ ವಿಚಾರಣಾಧೀನ ಕೈದಿಗಳು. ಏನಿದು ಪ್ರಕರಣ..? ಈ ಮೂವರು ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ರಾಬರಿ ಮತ್ತು ಕೊಲೆ ಮಾಡಿರುವ ಆರೋಪ ಇದೆ. ಆರೋಪ ಪ್ರಕರಣದಲ್ಲಿ ಬಂಧಿತರಾಗಿದ್ದ ಇವರನ್ನ 2ನೇ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರು ಪಡಿಸಿದ್ದರು. ವಿಚಾರಣೆ ಮುಗಿದ ಬಳಿಕ …
Read More »ಶೋಷಿತರ ಸಬಲೀಕರಣಕ್ಕೆ ಸಾಲ ಯೋಜನೆ; ಬ್ಯಾಂಕ್‌ಗಳು ಅರ್ಜಿ ತಿರಸ್ಕರಿಸಿದರೆ ನಿಗಮದಿಂದಲೇ ಆರ್ಥಿಕ ಸಹಾಯ
ಬೆಂಗಳೂರು: ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಶೋಷಿತರಿಗೆ ಸಕಾಲಕ್ಕೆ ಪುನರ್ವಸತಿ ಮತ್ತು ಪರಿಹಾರ ಸಿಗುತ್ತಿಲ್ಲ ಎಂಬ ಕೊರಗು ನಿವಾರಿಸಲು ಸರ್ಕಾರ ಮುಂದಾಗಿದೆ. ಉದ್ಯಮ, ಸೇವೆ, ವ್ಯಾಪಾರ ಯೋಜನೆಯಡಿ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಬ್ಯಾಂಕ್‌ಗಳು ತಿರಸ್ಕರಿಸಿದರೂ ಪರಿಶಿಷ್ಟ ಜಾತಿ ಸಂತ್ರಸ್ತರು ಇನ್ನು ಹೆದರಬೇಕಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದಲೇ ಸಹಾಯಧನದ ಜತೆಗೆ ನೇರ ಸಾಲ ಸೌಲಭ್ಯವೂ ದೊರೆಯಲಿದೆ. ಜಿಲ್ಲಾಧಿಕಾರಿ ಹಂತದಲ್ಲಿ ಈ ಯೋಜನೆ ಅನುಷ್ಠಾನವಾಗಲಿದೆ. ದಲಿತ ಸಂಘಟನೆಗಳ ಧರಣಿಗೆ ಸರ್ಕಾರ ಸ್ಪಂದಿಸಿದ್ದು, ಸಮಾಜ ಕಲ್ಯಾಣ ಇಲಾಖೆ …
Read More »ಸ್ನೇಹಿತನ ಶವ ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಾರ್ಗ ಮಧ್ಯೆ ಸ್ಥಳದಲ್ಲೇ ಸಾವು!
ರಾಯಚೂರು: ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು ಮಿತ್ರರು ಮಾರ್ಗಮಧ್ಯೆ ಭೀಕರ ಅಪಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಈ ಅಪಘಾತ ಸಂಭವಿಸಿದ್ದು, ಅಂಬರೀಷ್ (30), ಗೋವಿಂದ್ (35) ದೇವರಾಜ್ (34) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಚಾಲಕ ಉಸ್ಮಾನ್ ಪಾಷಾ ಹಾಗೂ ಯಲ್ಲಾಲಿಂಗ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಸಾವಿಗೀಡಾದವರು ಹಾಗೂ ಗಾಯಾಳುಗಳು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ …
Read More »ಗೃಹ, ವಾಹನ ಸಾಲಗಾರರಿಗೆ ಬಿಗ್ ಶಾಕ್ : ಸಾಲದ `EMI’ ಏರಿಕೆ!
ನವದೆಹಲಿ:ಕಳೆದ ಕೆಲವು ದಿನಗಳಲ್ಲಿ ಹಲವಾರು ಬ್ಯಾಂಕ್‌ಗಳು ತಮ್ಮ ಕನಿಷ್ಠ ವೆಚ್ಚದ ನಿಧಿ ಆಧಾರಿತ ಸಾಲ ದರಗಳನ್ನು (MCLR) ಹೆಚ್ಚಿಸಿವೆ.ಆದ್ದರಿಂದ ಕಾರ್ಪೊರೇಟ್, ಗೃಹ ಮತ್ತು ವಾಹನ ಸಾಲದ ದರಗಳು ಹೆಚ್ಚಾಗುವ ಸಾಧ್ಯತೆಯಿದೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಕಳೆದ ಕೆಲವು ದಿನಗಳಲ್ಲಿ ಏಪ್ರಿಲ್ 12 ರಿಂದ ದರಗಳನ್ನು ಹೆಚ್ಚಿಸಿವೆ. ಎಸ್‌ಬಿಐ ತನ್ನ ಎಂಸಿಎಲ್‌ಆರ್ ಅನ್ನು ಎಲ್ಲಾ ಅವಧಿಗಳಲ್ಲಿ 10 ಬೇಸಿಸ್ ಪಾಯಿಂಟ್‌ಗಳು …
Read More »ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಯಿಂದ ಕಮಲ್‌ಪಂತ್ out ‘: ಅಲೋಕ್ ಕುಮಾರ್ ಗೆ in
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಮರು ನೇಮಕ ಮಾಡುವ ಸಾಧ್ಯತೆಯಿದೆ ಎನ್ನಲಾಗಿದ್ದು, ಈ ಮೂಲಕ ರಾಜ್ಯ ಸರ್ಕಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಖಡಕ್ ಐಪಿಎಸ್ ಅಧಿಕಾರಿಗೆ ಕೆಲ ವಹಿಸಲು ಮುಂದಾಗಿದೆ ಎನ್ನಲಾಗಿದೆ. ಸಾಮನ್ಯವಾಗಿ ಬೆಂಗಳೂರಿನ ಪೊಲೀಸ್ ಕಮಿಷನರ್‌ಗಳನ್ನು ಪ್ರತಿ ವರ್ಷ ಬದಲಾಯಿಸಲಾಗುತ್ತದೆ. ಆದರೆ ಸದ್ಯ ಇರುವ ಕಮಲ್ ಪಂತ್ ಅವರನ್ನು ಕೋವಿಡ್ ಬಳಿಕ ನಡೆದ ಕಾರಣಗಳಿಂದಾಗಿ ಇನ್ನೂ ಅಧಿಕಾರದಲ್ಲಿ …
Read More »ಮದ್ವೆಗೆ ಹೋಗ್ತಿದ್ದಾಗ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು
ರಾಯಚೂರು: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗೊಲ್ಲಪಲ್ಲಿಯಲ್ಲಿ ನಡೆದಿದೆ. ಮೃತರೆಲ್ಲರೂ ಯಾದಗಿರಿ ಜಿಲ್ಲೆಯ ವಡಗೇರದವರಾಗಿದ್ದು, ಬೆಂಗಳೂರಿನಿಂದ ಮದುವೆಗೆಂದು ಸ್ವಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ದುರ್ಘಟನೆಯಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಲಿಂಗಸಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಟ್ಟಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »ರಸ್ತೆ ಮಾಡಿಸಿಕೊಡಿ’ ಎಂದ ಯುವಕನ ಕಪಾಳಕ್ಕೆ ಬಾರಿಸಿದ ಪಾವಗಡದ ಶಾಸಕ
ತುಮಕೂರು: ‘ಸರ್ ನಮ್ಮೂರಿಗೆ ರಸ್ತೆ ಇಲ್ಲ, ಮಾಡಿಸಿಕೊಡಿ’ ಎಂದು ಮನವಿ ಮಾಡಿಕೊಂಡ ಯುವಕನಿಗೆ ಪಾವಗಡದ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಕಪಾಳಮೋಕ್ಷ ಮಾಡಿದ್ದಾರೆ. ಸಾರ್ವಜನಿಕರ ಎದುರೇ ಶಾಸಕರು ಕಪಾಳಮೋಕ್ಷ ಮಾಡಿದ್ದಾರೆ. ತಾಲೂಕು ಕಚೇರಿ ಆವರಣದಲ್ಲಿ ಈ ಪ್ರಸಂಗ ನಡೆದಿದ್ದು, ಸರ್ ನಮ್ಮೂರಿಗೆ ರಸ್ತೆ ಇಲ್ಲ. ರಸ್ತೆ ಹದಗೆಟ್ಟು ಹೋಗಿದೆ. ಯಾರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ನೀವಾದರೂ ರಸ್ತೆ ಮಾಡಿಸಿ ಸಾರಿಗೆ ವ್ಯವಸ್ಥೆ ಮಾಡಿಸಿಕೊಡಿ ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ. ಇದಕ್ಕೆ …
Read More »ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ : ಸಿಎಂ ಬೊಮ್ಮಾಯಿ, ‘
ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಯಿಂದ ಹೆಚ್ಚಿತ್ತಿರುವ ರಾಜ್ಯ ಸರ್ಕಾರ, ಇನ್ಮುಂದೆ ಮೌಖಿಕ ಆದೇಶದ ಮೇಲೆ ಯಾರೂ ಕಾಮಗಾರಿ ಮಾಡುವಂತಿಲ್ಲ ಎಂದು ತಿಳಿಸಿದೆ. ಶಿವಮೊಗ್ಗದಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ‘ಲೋಕಲ್ ಬಾಂಡೀಸ್ʼನಲ್ಲಿ, ಪಂಚಾಯತ್ ರಾಜ್ ಬಾಂಡೀಸ್ʼನಲ್ಲೂ ಮೌಖಿಕ ಆದೇಶದ ಮೇಲೆ ಕೆಲಸಗಳು ನಡೆಯುತ್ತವೆ. ಆದ್ರೆ, ನಾನು ಈಗಾಗ್ಲೇ ಪ್ರತಿ ಡಿಪಾರ್ಟ್ಮೆಂಟ್ʼಗೆ ಸೂಚನೆ ನೀಡಿದ್ದೇನೆ. ಯಾವುದೇ ಮೌಖಿಕ ಆದೇಶದ ಮೇಲೆ ಕೆಲಸದ ಕಾಮಗಾರಿ ಮಾಡಬಾರದು. ಒಂದ್ವೇಳೆ ಮಾಡಿದ್ರೆ, …
Read More »