Breaking News

ರಾಷ್ಟ್ರೀಯ

ಅಕ್ಷಯ್​​ ಬಳಿಕ ಯಶ್​ಗೆ ಪಾನ್​ ಮಸಾಲ ಆಫರ್; ಎಷ್ಟು ಕೋಟಿ ಕೊಟ್ರೂ ಈ ಕೆಲಸ ಮಾಡಲ್ಲ ಎಂದ ನಟ​

ಸಿನಿಮಾ ಮಾತ್ರವಲ್ಲದೇ ಜಾಹೀರಾತು ಕ್ಷೇತ್ರದಲ್ಲೂ ಯಶ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಆದರೆ ಆಯ್ಕೆಗಳ ವಿಚಾರದಲ್ಲಿ ಅವರು ತಮ್ಮದೇ ನಿಲುವು ಹೊಂದಿದ್ದಾರೆ.​’ರಾಕಿಂಗ್​ ಸ್ಟಾರ್​’ ಯಶ್ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ. ಈಗ ಅವರು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಯಶ್ (Yash)​ ಜೊತೆ ಕೆಲಸ ಮಾಡಲು ದೊಡ್ಡ ದೊಡ್ಡ ಪ್ರೊಡಕ್ಷನ್​ ಕಂಪನಿಗಳು ಕಾದಿವೆ. ಹಾಗೆಯೇ ಅನೇಕ ಬ್ರ್ಯಾಂಡ್​ಗಳಿಂದಲೂ ಅವರಿಗೆ ಆಫರ್​ ಬರುತ್ತಿದೆ. ಆದರೆ ಅವುಗಳನ್ನು ಒಪ್ಪಿಕೊಳ್ಳುವಲ್ಲಿ …

Read More »

ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗಷ್ಟೇ ಅಡ್ಮಿಷನ್

ಬೆಂಗಳೂರು : ನಗರದ ರಿಚರ್ಡ್ ಕ್ಲಾರೆನ್ಸ್ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬೇರೆ ಧರ್ಮದ ಮಕ್ಕಳಿಗೆ ಪ್ರವೇಶ ಇಲ್ಲವೆಂದು ಆಡಳಿತ ಮಂಡಳಿ ಆದೇಶವನ್ನು ಹೊರಡಿಸಿದೆ. ಇತ್ತೀಚೆಗಷ್ಟೇ ಶಾಲೆಯಲ್ಲಿ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರದಿಂದ ಕ್ಲಾರೆನ್ಸ್ ಶಾಲೆಗೆ ನೋಟಿಸ್ ನೀಡಲಾಗಿತ್ತು. ಇದೀಗ ಬೈಬಲ್ ವಾರ್ ಮುಂದುವರಿದಿದ್ದು, ಮುಂದಿನ ವರ್ಷದಿಂದ ಕ್ರಿಶ್ಚಿಯನ್ ಮಕ್ಕಳಿಗೆ ಮಾತ್ರ ಪ್ರವೇಶ ನೀಡಿ, ಹಿಂದೂ ಮಕ್ಕಳಿಗೆ ಪ್ರವೇಶ ಮಾಡಿಕೊಳ್ಳದಂತೆ ಶಾಲಾ …

Read More »

ನಿಮ್ಮ ಜಮೀನಿನ ಪೋಡಿ ನೀವೇ ಮಾಡಿಕೊಳ್ಳಿ

ಬೆಂಗಳೂರು,ಏ.30- ಭೂ ಅರ್ಜಿಗಳನ್ನು ತೀವ್ರವಾಗಿ ಇತ್ಯರ್ಥಪಡಿಸುವ ಸದುದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಕಂದಾಯ ಇಲಾಖೆ ನಿಮ್ಮ ಪೋಡಿ ನೀವೇ ಮಾಡಿ ಸ್ವಾವಲಂಬಿ ಎಂಬ ವಿನೂತನ ಯೋಜನೆ ಯನ್ನು ಜಾರಿ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಸಾರ್ವಜನಿಕರು ತಮ್ಮ ಸ್ವಂತ ಭೂಮಿಯ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಬಹುದು. ಇದು ಸಂಪೂರ್ಣ ಕಾನೂನಿನ ಮಾನ್ಯತೆಯನ್ನು ಹೊಂದಿದ್ದು, ಭೂಮಾಪನ ಇಲಾಖೆಯಿಂದ ಆನ್‍ಲೈನ್ ಅನುಮೋದನೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಆರ್.ಅಶೋಕ್ ತಿಳಿಸಿದರು. ಸ್ವಾವಲಂಬಿ ಯೋಜನೆಯನ್ನು 11 ಇ-ಸ್ಕೆಚ್ ಭೂ …

Read More »

ಮುಸ್ಲಿಮರಿಗೆ ದ್ರೋಹ ಮಾಡಿದರೆ ರಾಜಕೀಯ ನಿವೃತ್ತಿ : ಶಾಸಕ ಜಿ ಸೋಮಶೇಖರ ರೆಡ್ಡಿ

ಬಳ್ಳಾರಿ: ನನ್ನ ಕೊನೆಯ ಉಸಿರು ಇರುವವರೆಗೂ ಮುಸ್ಲಿಂ ಸಮುದಾಯದಕ್ಕೆ ದ್ರೋಹ ಮಾಡಲ್ಲ. ನಾನೇನಾದರೂ ಮುಸ್ಲಿಂರಿಗೆ ದ್ರೋಹ ಬಗೆದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದ್ದಾರೆ. ಅವರು ನಗರದ ಕೌಲಬಜಾರ್​​​​ನ ಎಂ.ಆರ್. ಫಂಕ್ಷನ್ ಹಾಲ್‌ನಲ್ಲಿ ರಂಜಾನ್ ಪ್ರಯುಕ್ತ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು. ನಾನು ನಿಷ್ಠುರವಾದಿ, ಮನಸ್ಸಿನಲ್ಲಿ ಇರುವುದನ್ನು ಹೇಳಿ ಬಿಡುತ್ತೇನೆ, ಮತ್ತೆ ಅದನ್ನು ಮರೆತು …

Read More »

PSI ನೇಮಕಾತಿ ರದ್ದು ಮಾಡಿದ ‘ರಾಜ್ಯ ಸರ್ಕಾರ’: ಹೆಚ್ಚಿದ ಆಕ್ರೋಶ, ವ್ಯಾಪಕ ಟೀಕೆ ಇಂದಿನಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ರಾಜ್ಯ ಸರ್ಕಾರದ ನಿದ್ದೆಕೆಡಿಸಿರುವ PSI ನೇಮಕ ಹಗರಣ ದಿನದಿಂದ ದಿನಕ್ಕೆ ಒಂದ ತಿರುವು ಪಡೆದುಕೊಳ್ಳುತ್ತಿದ್ದು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಿ ಮತ್ತೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.   ಈ ನಡುವೆ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಅಭ್ಯರ್ಥಿಗಳ ಸೇರಿದಂತೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿದ್ದು, ಸರ್ಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ. ಸರ್ಕಾರ ಯಾರದ್ದೂ ತಪ್ಪನ್ನು ನಮಗೆ ಶಿಕ್ಷೆ ನೀಡಲು ಮುಂದಾಗಿರುವುದು ನಮಗೆ ಬೇಸರ ತಂದಿದ್ದೆ, ಈ ನಿಟ್ಟಿನಲ್ಲಿ ಕಾನೂನು …

Read More »

ಇಂದು ಈ ವರ್ಷದ ಮೊದಲ ಸೂರ್ಯಗ್ರಹಣ : ಎಲ್ಲೆಲ್ಲಿ ಗೋಚರಿಸಲಿದೆ ಗೊತ್ತಾ?

ನವದೆಹಲಿ : 2022 ರ ಮೊದಲ ಸೂರ್ಯ ಗ್ರಹಣ ಏಪ್ರಿಲ್ 30 ಇಂದು ಸಂಭವಿಸುತ್ತದೆ. ಇದು 2022 ರಲ್ಲಿ ಬರುವ ಎರಡು ಭಾಗಶಃ ಸೌರ ಗ್ರಹಣಗಳಲ್ಲಿ ಮೊದಲನೆಯದು; ಎರಡನೆಯದು ಅಕ್ಟೋಬರ್ 25 ರಂದು ಸಂಭವಿಸುತ್ತದೆ.   2023 ರವರೆಗೆ ನಾವು ಮತ್ತೊಂದು ಸಂಪೂರ್ಣ ಸೂರ್ಯಗ್ರಹಣವನ್ನು ನೋಡುವುದಿಲ್ಲ.ಒಂದೇ ರೇಖೆಯಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯಗ್ರಹಣವು ಒಂದು ಅದ್ಭುತವಾದ ದೃಶ್ಯ ಮತ್ತು ಅಪರೂಪದ ಖಗೋಳ ಘಟನೆಯಾಗಿದೆ. …

Read More »

ರಾಜ್ಯದಾದ್ಯಂತ ಮೇ.16ರಿಂದ ಶಾಲೆ ಪ್ರಾರಂಭ,

ಬೆಂಗಳೂರು: 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿನ ಕಲಿಕಾ ಕೊರತೆಯನ್ನು ಸರಿದೂಗಿಸೋ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.   ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ( School Education Department ) 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಈ ವೇಳಾಪಟ್ಟಿಯಂತೆ ಪ್ರಸಕ್ತ ವರ್ಷವನ್ನು ಕಲಿಕಾ ಚೇತರಿಕೆ ವರ್ಷವೆಂದು ಸಂಕಲ್ಪಿಸಲಾಗಿದ್ದು, ವಾರ್ಷಿಕ ಪಠ್ಯವಸ್ತು ಬೋಧನೆಯನ್ನು ಕಲಿಕಾ …

Read More »

ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ, ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ –

ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ. ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದರೆ ಸಿಐಡಿ ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರದ ಪುಣೆಯ ಹೋಟೆಲ್‍ವೊಂದರ ಬಳಿ ದಿವ್ಯಾ …

Read More »

ಸಿಎಂ ಮನೆಯಲ್ಲೇ ಚರ್ಚೆಗೆ ಮುಹೂರ್ತ ಫಿಕ್ಸ್

ಬೆಂಗಳೂರು: ಮೇ 3 ಬಿಜೆಪಿಗೆ ಬಿಗ್ ಡೇ ಆಗಲಿದೆ. ಸಂಪುಟ ಪುನಾರಚನೆಯ ಮಾತುಕತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಯಲ್ಲೇ ನಡೆಯಲಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಸವರಾಜ ಬೊಮ್ಮಾಯಿ ಅವರು ಊಟದ ವ್ಯವಸ್ಥೆ ಏರ್ಪಾಡು ಮಾಡಿದ್ದಾರೆ. ಮಧ್ಯಾಹ್ನ 2 ರಿಂದ 3ಗಂಟೆ ತನಕ ಸಿಎಂ ಸರ್ಕಾರಿ ನಿವಾಸದಲ್ಲಿ ಅಮಿತ್ ಶಾ ಲಂಚ್ ಟಾಕ್ ನಡೆಯಲಿದೆ. ಆ ಒಂದು ಗಂಟೆಯಲ್ಲಿ ರಾಜ್ಯ ಸಂಪುಟ …

Read More »

ಆರೋಪಿಗಳ ಕುಟುಂಬಕ್ಕೆ ಸಹಾಯ ಮಾಡಿದ್ದು ತಪ್ಪು : ಜಮೀರ್ ನಡೆಗೆ ನಲಪಾಡ್ ರಿಯಾಕ್ಷನ್

ಧಾರವಾಡ: ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮನೆಯವರಿಗೆ ರಂಜಾನ್ ಪ್ರಯುಕ್ತ ಶಾಸಕ ಜಮೀರ್ ಅಹ್ಮದ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೊಹಮ್ಮದ್ ನಲಪಾಡ್, ನಾನು ಅದರ ಜೊತೆಗೂ ನಿಂತುಕೊಳ್ಳಲ್ಲ ಎಂದಿದ್ದಾರೆ. ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಅದು ಅವರ ವೈಯಕ್ತಿಕ. ಪಕ್ಷದ ಬ್ಯಾನರ್ ನಲ್ಲಿ‌ ಕೊಡುತ್ತಿಲ್ಲ. ಅವರ ವೈಯಕ್ತಿಕವಾಗಿ ಕೊಡುತ್ತಿದ್ದಾರೆ. ಪಕ್ಷದಿಂದ ಕೊಟ್ಟಾಗ ಕಮೆಂಟ್ ಮಾಡಬಹುದು. ನನಗೇನು ಇದು ಸರಿ ಎನ್ನಿಸುತ್ತಿಲ್ಲ. …

Read More »