ಬೆಂಗಳೂರು: ರಾಜ್ಯವು ಈಗಾಗಲೇ ಮಳೆಯಿಂದ ತತ್ತರಿಸಿದೆ. ಇನ್ನೂ ಮತ್ತೆ ರಾಜ್ಯಾದ್ಯಂತ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು, ದ. ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ವರುಣನ ಆರ್ಭಟ ಕೊಂಚ ಕಡಿಮೆಯಾಗಿತ್ತು. ಇನ್ನೂ ಮುಂದಿನ ದಿನಗಳಲ್ಲಿ ರಾಜ್ಯದ ಕೆಲವು ಭಾಗಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ …
Read More »ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೊ ಹಂಚಿ ಟಿಎಸ್‌ಆರ್‌ಟಿಸಿ ಎಚ್ಚರಿಕೆ
ಹೈದರಾಬಾದ್: ಮೋಟರ್ ಬೈಕ್‌ನ ಹಿಂಬದಿ ಚಕ್ರಕ್ಕೆ ಬುರ್ಖಾ ಸಿಲುಕಿ, ಕೆಳಗೆ ಬಿದ್ದ 18 ವರ್ಷದ ಯುವತಿ ಸಾವಿಗೀಡಾಗಿರುವ ಘಟನೆ ಹೈದರಾಬಾದ್‌ನಲ್ಲಿ ಇತ್ತೀಚೆಗೆ ಸಂಭವಿಸಿದೆ. ಸೋದರನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಬುರ್ಖಾ ಹಿಂಬದಿಯ ಚಕ್ರಕ್ಕೆ ಸುತ್ತಿಕೊಂಡಿದೆ. ಹೀಗಾಗಿ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಆದರೆ, ಯುವತಿಗೆ ಗಂಭೀರ ಗಾಯಗಳಾಗಿತ್ತು ಎನ್ನಲಾಗಿದ್ದು, ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಪಘಾತದ ವಿಡಿಯೋವನ್ನು ತೆಲಂಗಾಣದ ಸಾರಿಗೆ ನಿಗಮದ ಎಂಡಿ ವಿಸಿ ಸಜ್ಜನರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, …
Read More »ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶ: 1,201 ಹುದ್ದೆಗಳು ಖಾಲಿ..!
ಬೆಂಗಳೂರು : ರೈಲ್ವೆ ಇಲಾಖೆ ಸೇರಲು ಬಯಸುವವರಿಗೆ ಸುವರ್ಣಾವಕಾಶವೊಂದು ಒಲಿದು ಬಂದಿದೆ. ಪೂರ್ವ ರೈಲ್ವೆ ಯಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು apprenticeshipindia.org ನಲ್ಲಿ ಅಪ್ರೆಂಟಿಸ್‌ಶಿಪ್ ಇಂಡಿಯಾದ ಅಧಿಕೃತ ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ ಬಹುದು. ಒಟ್ಟು 1,201 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 20, 2022 …
Read More »‘ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು’: ಸಿದ್ದರಾಮಯ್ಯ ವ್ಯಂಗ್ಯ
‘ಬಿಎಸ್ವೈ ಹೇಳಿದಂತೆ ಬೆಂಗಳೂರಿನ ಚಿತ್ರಣವೇ ಬದಲು’: ಸಿದ್ದರಾಮಯ್ಯ ವ್ಯಂಗ್ಯ ಬೆಂಗಳೂರು, ಮೇ 20: ಮಳೆಯಿಂದ ತತ್ತರಿಸಿ ಹೋಗಿರುವ ನಗರದ ವಿವಿಧ ಭಾಗಗಳಿಗೆ ರಾಜಕೀಯ ಮುಖಂಡರು ಪ್ರದಕ್ಷಿಣೆ ಹಾಕುತ್ತಿದ್ದಾರೆ. ಅದರಂತೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಾಂಧಿನಗರ, ಶಿವಾಜಿನಗರ, ಬ್ಯಾಟರಾಯನಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಚರಿಸಿ ಮಳೆಯಿಂದ ಉಂಟಾಗಿರುವ ಹಾನಿಯನ್ನು ವೀಕ್ಷಿಸಿದ್ದಾರೆ. ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಆದ್ಯತೆ ಮೇರೆಗೆ ಅವುಗಳನ್ನು ಪರಿಹರಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ ಸಿದ್ದರಾಮಯ್ಯ, ಮಳೆಯಿಂದ ಇಷ್ಟೊಂದು ಆವಾಂತರವಾಗಲು ಸರಕಾರದ …
Read More »ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.
ತೆಲಂಗಾಣದ(Telangana) ಹೈದರಾಬಾದ್‌ನಲ್ಲಿರುವ(Hyderabad) ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ(Glenigals Global Hospital) ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ರೋಗಿಯು ಆರು ತಿಂಗಳಿಗೂ ಹೆಚ್ಚು ಕಾಲ ತನ್ನ ಎಡ ಸೊಂಟದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದ ಹಿನ್ನಲೆ, ಬೇಸಿಗೆಯ ತಿಂಗಳು ಪ್ರಾರಂಭವಾದಾಗಿನಿಂದ ತಾಪಮಾನದ ಪರಿಣಾಮ ಇದು ಮತ್ತಷ್ಟು ಉಲ್ಬಣಗೊಂಡಿದೆ. ಹೀಗಾಗಿ ಕೂಡಲೇ ಶಸ್ತ್ರಚಿಕಿತ್ಸೆಗೆ ಎಂದು ಬಂದ ರೋಗಿಗೆ ಕಾದಿದ್ದು ಆಶ್ಚರ್ಯವೇ, ವೈದ್ಯರಿಗೂ …
Read More »ಮಳೆ ಹಾನಿ ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಬೆಳಗ್ಗೆ ಸಿಟಿ ರೌಂಡ್ಸ್
ಬೆಂಗಳೂರು: ಮಂಗಳವಾರ ರಾತ್ರಿ ಸುರಿದ ಮಹಾಮಳೆಗೆ ರಾಜ್ಯ ರಾಜಧಾನಿ ಬೆಂಗಳೂರು ಅಕ್ಷರಶಃ ತತ್ತರಿಸಿದೆ. ಬುಧವಾರವೂ ಅಬ್ಬರಿಸಿದ ವರುಣ, ಇಂದು ಬೆಳ್ಳಂಬೆಳಗ್ಗೆಯೂ ಅಬ್ಬರಿಸುತ್ತಿದ್ದು, ಜನಜೀವನ ಮೂರಾಬಟ್ಟೆಯಾಗಿದೆ. ಸಾವಿರಾರು ಮನೆಗಳಿಗೆ ಮಳೆ ನೀರಿನ ಜತೆಗೆ ಕೊಳಚೆ ನೀರೂ ನುಗ್ಗಿದೆ, ತಗ್ಗುಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಮಳೆ ಹಾನಿ ವೀಕ್ಷಿಸಲು ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರೇ ಇಂದು ಬೆಳಗ್ಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಸಿಎಂ ನಿವಾಸದಿಂದ ಅಧಿಕಾರಿಗಳ ಜತೆ ವೋಲ್ವೋ ಬಸ್ ಹತ್ತಿದ ಬೊಮ್ಮಾಯಿ ಅವರು …
Read More »ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್
ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಧುಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಸುಪ್ರೀಕೋರ್ಟ್ ಗುರುವಾರ ಆದೇಶಿಸಿದೆ.ಮೂರು ದಶಕಗಳ ಬಳಿಕ ಇದೀಗ ನ್ಯಾಯಾಲಯ ಪ್ರಕರಣದ ತೀರ್ಪನ್ನು ಪ್ರಕಟಿಸಿದೆ. 1988ರಲ್ಲಿ ನಡೆದ ರಸ್ತೆ ಗಲಾಟೆ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಅಪರಾಧಿ ಎಂದು ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿದೆ. ಈ ಗಲಾಟೆಯಲ್ಲಿ ಓರ್ವ ಮೃತಪಟ್ಟಿದ್ದ.ಇನ್ನು ಒಂದು ವರ್ಷದ ಜೈಲು ಶಿಕ್ಷೆ ಜತೆಗೆ 1 ಸಾವಿರ ರೂ. ದಂಡ ವಿಧಿಸಿದೆ. …
Read More »ಗುತ್ತಿಗೆದಾರರ 40% ಕಮಿಷನ್ ಕೂಗಿಗೆ ಧ್ವನಿಯಾಗಿದ್ದ ಕಾಂಗ್ರೆಸ್ ಈಗ ಉಲ್ಟಾ?
ರಾಜ್ಯ ಬಿಜೆಪಿ ಸರಕಾರ ನಲವತ್ತು ಪರ್ಸೆಂಟ್ ಅವ್ಯವಹಾರ ನಡೆಸುತ್ತಿದೆ ಎನ್ನುವ ಆರೋಪ ಮನೆಮಾತಾಗಲು ಪ್ರಮುಖ ಕಾರಣವಾಗಿದ್ದ ಗುತ್ತಿಗೆದಾರರ ಸಂಘ ಮತ್ತು ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಕಾಂಗ್ರೆಸ್ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ರಾಜ್ಯ ಸರಕಾರದ ಇಲಾಖೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಜಲಸಂಪನ್ಮೂಲ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಕೆಂಪಣ್ಣ ಅವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು. ಪ್ರಧಾನಿಗೆ ಬರೆದ ಪತ್ರ ಸಾರ್ವಜನಿಕವಾಗುತ್ತಿದ್ದಂತೆಯೇ ವಿರೋಧ …
Read More »ಚಿಕ್ಕಬಳ್ಳಾಪುರದ ಒಂದೇ ಶಾಲೆಯ ಮೂವರು ರಾಜ್ಯಕ್ಕೆ ಪ್ರಥಮ 625 ಅಂಕಗಳನ್ನು ಪಡೆದಿದ್ದಾರೆ.
ಚಿಕ್ಕಬಳ್ಳಾಫುರ: ಜಿಲ್ಲೆಯ ಒಂದೇ ಶಾಲೆಯ ಮೂವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಶಾಲೆಯ ಜಯಂತಿ ಬಿ ಗೌಡ, ಲೀಸಾ ಎಚ್.ಸಿ, ಪ್ರೀತಿ ಎಸ್ 625 ಅಂಕಗಳನ್ನು ಪಡೆದಿದ್ದಾರೆ. ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ. ಶಿಡ್ಲಘಟ್ಟದ ಬಿಜಿಎಸ್ ಶಾಲೆಯ ಜಿ ಹರ್ಷಿತಾ ಹಾಗೂ ಗೌರಿಬಿದನೂರಿನ ಬಿಜಿಎಸ್ ಶಾಲೆಯ ತೃಪ್ತಿ ಕೆಸಿ 625 ಅಂಕಗಳನ್ನು ಪಡೆದಿದ್ದಾರೆ. ಈ ಬಾರಿ ರಾಜ್ಯದಲ್ಲಿ ಶೇ.85.63 …
Read More »ಬಿಡದಿ ನಿತ್ಯಾನಂದನ ಆರೋಗ್ಯ.ಬಿಗಡಾಯಿಸಿತೇ .?
ನವದೆಹಲಿ: ಕೈಲಾಸ ದೇಶದ ಪೀಠಾಧಿಪತಿ ಬಿಡದಿ ನಿತ್ಯಾನಂದನ ಆರೋಗ್ಯ ತೀವ್ರವಾಗಿ ಬಿಗಡಾಯಿಸಿರುವ ಶಂಕೆ ಮೂಡಿದೆ. ತಾನು ಬದುಕಲು ಬಯಸುತ್ತಿಲ್ಲ ಎಂದು ನಿತ್ಯಾನಂದ ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ತನಗೆ ಕ್ಯಾನ್ಸರ್ ಇಲ್ಲ, ದೇಹದ ಎಲ್ಲಾ ಅಂಗಾಂಗ ಸರಿಯಾಗಿ ಕೆಲಸ ಮಾಡ್ತಿವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಆದರೆ ತಮಗೆ ಅನ್ನ, ನೀರು ಸೇವಿಸಲು ಆಗುತ್ತಿಲ್ಲ. ಒಂದು ವೇಳೆ ಬಲವಂತವಾಗಿ ಆಹಾರ ಸೇವಿಸಿದರೂ ಅದು ಜೀರ್ಣವಾಗುತ್ತಿಲ್ಲ. ನಿತ್ಯ ಪೂಜೆ ಮಾತ್ರ ಮಾಡಲು …
Read More »