RSSನ ಬಲವಂತವಾದ ಕೋಮುವಾದದ ತಂತ್ರಗಳಿಗೆ ಬಗ್ಗದ ಯಡಿಯೂರಪ್ಪ ಅವರನ್ನು ನಿರ್ದಯವಾಗಿ ಕೆಳಗೆ ಇಳಿಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು, ಇದೀಗ ಬೊಮ್ಮಾಯಿ ಅವರನ್ನು ಸಂಪೂರ್ಣ RSS ಗುಲಾಮಗಿರಿಗೆ ಒಳಪಡಿಸಿದ್ದಾರೆ. ತಮ್ಮ ಮೆದುಳು ಮತ್ತು ಪಂಚೇಂದ್ರಿಯಗಳನ್ನು RSS ನವರಿಗೆ ಕೊಟ್ಟು ಕುಳಿತಿರುವ ಬೊಮ್ಮಾಯಿ ಅವರು ತಾವೊಬ್ಬ ಆರ್ ಎಸ್ ಎಸ್ ನ ತೊಗಲು ಗೊಂಬೆ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ. ಇನ್ನು ಹಾಸ್ಯಾಸ್ಪದ ಎಂಬಂತೆ ಬೊಮ್ಮಾಯಿಯವರು ನೀವು ಆರ್ಯರೋ ದ್ರಾವಿಡರೋ …
Read More »ನಾಳೆ ಪೆಟ್ರೋಲ್-ಡೀಸೆಲ್ ಸಿಗೋದು ಡೌಟ್..!
ಬೆಂಗಳೂರು, ಮೇ 30- ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ನಾಳೆ ಪೆಟ್ರೋಲ್ ಬಂಕ್ ಮಾಲೀಕರು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಪೆಟ್ರೋಲ್ ಪೂರೈಕೆಯಲ್ಲಿನ ವೈಫಲ್ಯದಿಂದ ತೊಂದರೆಗೆ ಸಿಲುಕಿರುವ ಪೆಟ್ರೋಲ್ ಬಂಕ್ ಮಾಲೀಕರು ನಾಳೆ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದರಿಂದ ಸಾರ್ವಜನಿಕ ಸೇವೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. 2017ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಒಂದು ರೂ. ಕಮಿಷನ್ ನೀಡಬೇಕೆಂದು ಒಕ್ಕೂಟದ ಪ್ರಮುಖ …
Read More »ನಪೂಂಸಕರು ಯಾರು ಅಂತ ಇಡೀ ರಾಷ್ಟ್ರಕ್ಕೆ ಗೊತ್ತಿದೆ – ಸಿದ್ದುಗೆ ಶೆಟ್ಟರ್ ಟಾಂಗ್
ಗದಗ: ನಪೂಂಸಕರು ಯಾರು ಅಂತ ಇಡೀ ರಾಷ್ಟ್ರಕ್ಕೆ ಗೊತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ನಪೂಂಸಕರ ಸಂಘ ಹಾಗೂ ಆರ್‌ಎಸ್‌ಎಸ್ ಮೂಲಕ್ಕೆ ಕೈ ಹಾಕಿದ್ದ ಸಿದ್ದರಾಮಯ್ಯಗೆ ಜಗದೀಶ್ ಶೆಟ್ಟರ್ ಮಾತಿನ ತಿರುಗೇಟು ನೀಡಿದ್ದಾರೆ. ಗದಗದಲ್ಲಿ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಪರ ಮತಯಾಚಣೆಗೆ ಆಗಮಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಪೂಂಸಕರು ಯಾರು? ಏನು …
Read More »ವೇದಿಕೆಯ ಮೇಲೆ ಹಾಡುತ್ತಲೇ ಕುಸಿದುಬಿದ್ದು ಸಂಗೀತದಲ್ಲಿ ಲೀನರಾದ ಖ್ಯಾತ ಗಾಯಕ-
ತಿರುವನಂತಪುರ (ಕೇರಳ): ಕಲೆಯನ್ನು ಆರಾಧಿಸುವ ಕಲಾವಿದರು ಅದೇ ಕಲೆಯ ಪ್ರದರ್ಶನ ನೀಡುತ್ತಿರುವಾಗಲೇ ಮೃತಪಟ್ಟಿರುವ ಘಟನೆಗಳನ್ನು ಆಗಾಗ್ಗೆ ಕೇಳುತ್ತಲೇ ಇರುತ್ತವೆ. ಕಲೆಯನ್ನೇ ಉಸಿರಾಗಿಸಿಕೊಂಡವರು ಅಥವಾ ತಮ್ಮ ಕೆಲಸವನ್ನು ತುಂಬಾ ಪ್ರೀತಿಯಿಂದ ನಿರ್ವಹಿಸುವವರು ಕರ್ತವ್ಯದಲ್ಲಿ ಇರುವಾಗಿ ಏಕಾಏಕಿ ಮೃತಪಡುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ಸಾವು ಖ್ಯಾತ ಗಾಯಕ ಎಡವ ಬಶೀರ್ ಅವರದ್ದು. ಮಲಯಾಳ ಚಿತ್ರದ ಹಿನ್ನೆಲೆ ಗಾಯಕರಾಗಿ ಬಹಳ ಪ್ರಸಿದ್ಧಿ ಪಡೆದಿರುವ ಬಶೀರ್ ಅವರು, ಕೇರಳದ ಅಲಪ್ಪುಳದಲ್ಲಿ ನಡೆದ ‘ಬ್ಲೂ …
Read More »ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ: ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಮೈಸೂರು: ಫಾಸ್ಟ್ ಹಾಗೂ ಬ್ಯೂಸಿ ಲೈಫ್ ಇಂದಿನ ಯುವ ದಂಪತಿಗಳು ರೆಡಿ ಟು ಈಟ್ ಫುಡ್ ಗಳ ಮೇಲೆ ಅವಲಂಬಿತರಾಗುತ್ತಿರುವುದು ಹೆಚ್ಚಾಗಿದೆ. ಆದರೆ, ಈ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯುಂಟು ಮಾಡಿದೆ. ಪತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ಎಲ್ಲೆಲ್ಲೂ ಮ್ಯಾಗಿ ಮಾಡಿ ಹಾಕುತ್ತಿದ್ದಾಳೆಂದು ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್, ಸಣ್ಣಪುಟ್ಟ ವಿಚಾರಗಳಿಗೆ …
Read More »ರಾಜಸ್ಥಾನ ತಂಡದ ವಿರುದ್ಧ ಕಳಪೆ ಪ್ರದರ್ಶನ: ಆರ್ಸಿಬಿಯ ಮುಹಮ್ಮದ್ ಸಿರಾಜ್ ಕುಟುಂಬಸ್ಥರಿಗೆ ಆನ್‌ಲೈನ್ ನಿಂದನೆ
ಬೆಂಗಳೂರು: ಎರಡನೇ ಕ್ವಾಲಿಫೈರ್ ಪಂದ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭಾರೀ ಆಘಾತ ಎದುರಾಗಿದೆ. ರಾಜಸ್ತಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಗಳಾದ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ್ದಾರೆ. ಬಟ್ಲರ್ ಮತ್ತು ಜೈಸ್ವಾಲ್ ಇಬ್ಬರೂ ಚೆನ್ನಾಗಿ ಆಟವನ್ನು ಪ್ರಾರಂಭಿಸಿದ್ದು, ಇನ್ನಿಂಗ್ಸ್‌ನ ಮೊದಲ ಆರು ಓವರ್‌ಗಳಲ್ಲಿ 60 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 158 ಗುರಿಯನ್ನು ಮಾತ್ರ ಎದುರಾಳಗಳಿಗೆ ನೀಡಲು ಸಾಧ್ಯವಾದ ಆರ್‌ಸಿಬಿಗೆ ಇವರ ಆಟವು ಮಾರಕವಾಗಿ ಪರಿಣಮಿಸಿದೆ. …
Read More »ಮೊಮ್ಮಗಳಿಗೆ ಲೈಂಗಿಕ ಕಿರುಕುಳ; ಸೊಸೆ ಆರೋಪ- ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ
ನವದೆಹಲಿ: ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೂರು ದಿನಗಳ ನಂತರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ (ಮೇ 27) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಹುಗುಣ(59ವರ್ಷ) ಅವರು ತಮ್ಮ ಹಲ್ ಡ್ವಾನಿ ಪೊಲೀಸ್ ಠಾಣೆಯ ತುರ್ತು (112) ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಾನು ಆತ್ಮಹತ್ಯೆ …
Read More »ಮೊಬೈಲ್ ಕಳೆದು ಹೋದರೆ, ಕಳ್ಳತನವಾದ್ರೆ ಚಿಂತೆ ಬೇಡ.. ಈ ‘APP’ ಹುಡುಕಿಕೊಡಲಿದೆ
ವಾರಾಣಸಿ(ಉತ್ತರ ಪ್ರದೇಶ): ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಸಿಮ್ ಬ್ಲಾಕ್ ಮಾಡಿಸಿ, ಸುಮ್ಮನಾಗಿ ಬಿಡುತ್ತೇವೆ. ಆದರೆ, ವಾರಣಾಸಿಯ ಇಬ್ಬರು ಯುವಕರು ಕಂಡು ಹಿಡಿದಿರುವ ಆಯಪ್ನಿಂದ ನಾವು ಕಳೆದುಕೊಂಡಿರುವ ಫೋನ್ ವಾಪಸ್ ಪಡೆದುಕೊಳ್ಳಬಹುದಾಗಿದೆ. ಅದಕ್ಕೋಸ್ಕರ ಕಳೆದ ಒಂದು ವರ್ಷದಿಂದ ಅವರು ಶ್ರಮಪಟ್ಟಿದ್ದಾರೆ. ಮೊಬೈಲ್ ಕಳೆದು ಹೋದ್ರೆ, ಕಳ್ಳತನವಾದ್ರೆ ಚಿಂತೆ ಬೇಡ… ಈ ‘APP’ ಹುಡುಕಿಕೊಡಲಿದೆ ನಿಮ್ಮ ಫೋನ್!ಕಾಶಿಯ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಳೆದ ಹೋದ ಮೊಬೈಲ್ ಫೋನ್ ಪತ್ತೆ ಹಚ್ಚುವ ಆಯಪ್ …
Read More »CM ಕನಸು ಕಾಣ್ತಿರೋ ಡಿ.ಕೆ.ಶಿವಕುಮಾರ್ ಮತ್ತೆ ಸಂಕಷ್ಟ.. ED ಚಾರ್ಜ್ಶೀಟ್ನಲ್ಲಿ ಏನಿದೆ?
ಕೆಪಿಸಿಸಿ ಸಾರಥಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಪ್ರಕರಣ ಮರುಜೀವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆ ತಯಾರಿಯಲ್ಲಿರೋ ಡಿಕೆ ಶಿವಕುಮಾರ್ಗೆ ಚಾರ್ಜ್ಶೀಟ್ ಶಾಕ್ ಎದುರಾಗಿದೆ. ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ, ಪಕ್ಷ ಸಂಘಟನೆ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸರ್ಕಾರ ರಚನೆ ಕಸರತ್ತಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವ್ರಂತೆ ಓಡಾಡ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಅವರ ಈ …
Read More »ನಕಲಿ ದಾಖಲೆ ಸೃಷ್ಟಿ; ಹದಿನೇಳು ಮಂದಿ ವಿರುದ್ಧ ಪ್ರಕರಣ
ಹೊಸಪೇಟೆ (ವಿಜಯನಗರ): ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿ ಸರ್ಕಾರಕ್ಕೆ ವಂಚಿಸಿರುವ ದೂರಿನ ಮೇರೆಗೆ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಪ್ರತ್ಯೇಕ ಘಟನೆಗಳಡಿ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಒಂದು ಪ್ರಕರಣದಲ್ಲಿ ಹೊಸಪೇಟೆ ನಗರಸಭೆ ಸಿಬ್ಬಂದಿ ಹಾಗೂ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ/ಸಿಬ್ಬಂದಿ ಎಂದಷ್ಟೇ ದೂರು ಕೊಡಲಾಗಿದೆ. ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ನಾಲ್ಕೂ ಪ್ರಕರಣಗಳಲ್ಲಿ ಅಧಿಕಾರಿಗಳೇ ಖುದ್ದು ಠಾಣೆಗೆ ದೂರು ಕೊಟ್ಟಿದ್ದಾರೆ. …
Read More »