ಬೆಳಗಾವಿ: ನಾನಾ ರಾಜ್ಯಗಳಲ್ಲಿ ಕಿರಾಣಿ ಹಾಗೂ ಆಭರಣ ಅಂಗಡಿಗಳಲ್ಲಿ ಕಳುವು ನಡೆಸುತ್ತಿದ್ದ ಕುಖ್ಯಾತ ಇರಾನಿ ಗ್ಯಾಂಗ್ ನ ಇಬ್ಬರನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9,58,000 ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ವಿದ್ಯಾ ಜ್ಯುವೆಲರಿ ಶಾಪ್‌ನಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಅಂಗಡಿ ಮಾಲೀಕರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. …
Read More »ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ; ಅಂಗಾಂಗ ದಾನ ಮಾಡಿ ಮೂವರ ಬಾಳಿಗೆ ಬೆಳಕಾದ ಕಮಲವ್ವ
ಬೆಳಗಾವಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಎಸ್ ಡಿ ಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಎತ್ತಿನಗುಡ್ಡ ಗ್ರಾಮದ 48 ವರ್ಷದ ಕಮಲವ್ವ ಕೆಲಗೇರಿ ಅವರು ತಮ್ಮ ಅಂಗಾಂಗಳನ್ನು ದಾನ ಮಾಡಿ ಮೂವರ ಜೀವ ಉಳಿಸಿ ಸಮಾಜಕ್ಕೆ ಪ್ರೇರಣಾದಾಯಿಯಾಗಿದ್ದಾರೆ. ಕಮಲವ್ವ ಅವರ ಒಂದು ಕಿಡ್ನಿಯನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. …
Read More »ಗುರುವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ
ಮೇಷ: ಆರೋಗ್ಯ ಗಮನಿಸಿ. ನಿರೀಕ್ಷಿತ ಧನಾಗಮ. ಸಂದಭೋìಚಿತ ವಿಚಾರದಿಂದ ಸಹೋದರಾದಿ ಸುಖ. ಗೃಹ ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ಪ್ರಗತಿ. ಸಾಂಸಾರಿಕ ಸುಖ ಮಧ್ಯಮ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ಉದ್ಯೋಗ ವ್ಯವಹಾರದ ಬಗ್ಗೆ ಪ್ರಯಾಣ . ವೃಷಭ: ಆರೋಗ್ಯ ವೃದ್ಧಿ. ಹೆಚ್ಚಿದ ಧನಾಗಮ. ಬಂಧುಮಿತ್ರರ ಸಹಾಯ. ಆಸ್ತಿ ವಿಚಾರದಲ್ಲಿ ಮುನ್ನಡೆ. ವಿದ್ಯಾರ್ಜನೆಯಲ್ಲಿ ನಿಪುಣತೆ. ಸ್ಪರ್ಧಾತ್ಮಕ ಮನೋಭಾವ. ಸಾಂಸಾರಿಕ ಸುಖ ಮಧ್ಯಮ. ಧರ್ಮಕರ್ಮದಲ್ಲಿ ಶ್ರೇಯಸ್ಸು. ನಿರೀಕ್ಷೆಗೂ ಮೀರಿದ ಸ್ಥಾನ ಲಾಭ. …
Read More »ರಾಜಕೀಯ ನಾಯಕನ ರಂಗಿನಾಟದ ರಹಸ್ಯ ಬಟಾಬಯಲು
ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ.ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು “ಎಕ್ಸ್‌ಪೋಸ್” ಮಾಡುತ್ತಾರೆ. ಐಷಾರಾಮಿ ಕೊಠಡಿಯ ಬೆಡ್ ಮೇಲೆ ರಾಜಕಾರಣಿ ಕುಳಿತಿದ್ದು, ಆ ಮಹಿಳೆಯು ಮೊಬೈಲ್ ಕ್ಯಾಮರಾದ ಆನ್ ಮಾಡಿ ಆತನ ಬಂಡವಾಳ ಬಿಚ್ಚಿಡುತ್ತಾಳೆ. ತನ್ನ ಹೆಸರನ್ನು ಹೇಳಿಕೊಂಡು, ಇವನು ನನಗೆ ಮೋಸ ಮಾಡಿದ ವ್ಯಕ್ತಿ. ಅವನು ಅಕ್ರಮ ಸಂಬಂಧ ಹೊಂದಿದ್ದಾನೆ …
Read More »ಗೋಕಾಕದಲ್ಲಿಂದು ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ
*ಗೋಕಾಕ*: ಪ್ರಸಕ್ತ ಸನ್ನಿವೇಶದಲ್ಲಿ ಪ್ರವಾಹ ಭೀತಿ ಇಲ್ಲದಿದ್ದರೂ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪ್ರವಾಹ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಈಗಿನಿಂದಲೇ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಂಜೆ ಜರುಗಿದ ಗೋಕಾಕ ಮತ್ತು ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, …
Read More »ಮಹಿಳಾ ಚಾಲಕರ ತರಬೇತಿ ಕಾರ್ಯಕ್ರಮಕ್ಕೆ ಜಿ.ಪಂ.ಸಿಇಓ ದರ್ಶನ್ ಚಾಲನೆ
ಗ್ರಾಮೀಣ ಪ್ರದೇಶದ ಘನ ಮತ್ತು ದ್ರವ್ಯ ತ್ಯಾಜ್ಯ ಘಟಕದ ನಿರ್ವಹಣೆಯ ವಾಹನಗಳಿಗೆ ಮಹಿಳಾ ಚಾಲಕರಿಗೆ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತಿ ಸಿಇಓ ದರ್ಶನ್ ಎಚ್.ವ್ಹಿ ಅವರು ಚಾಲನೆ ನೀಡಿದರು. ಜಿಲ್ಲಾ ಪಂಚಾಯತಿ, ಸಂಜೀವಿನಿ ಡೇ-ಎನ್‍ಆರ್‍ಎಲ್‍ಎಂ, ಸ್ವಚ್ಛ ಭಾರತ ಮಿಶನ್ ಯೋಜನೆ ಹಾಗೂ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯತಿಗಳ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣೆಗಾಗಿ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ …
Read More »ಬಸವಸಾಗರ ಡ್ಯಾಂನಿಂದ ಕೃಷ್ಣಾಗೆ ಭಾರೀ ಪ್ರಮಾಣದ ನೀರು, ನದಿ ತೀರದಲ್ಲಿ ಪ್ರವಾಹ ಭೀತಿ!
ಯಾದಗಿರಿ: ಮಹಾರಾಷ್ಟ್ರದಲ್ಲಿ (Maharashtra) ಭಾರಿ ಪ್ರಮಾಣದ ಮಳೆಯಾಗುತ್ತಿರುವ (Rain) ಪರಿಣಾಮ ಮಹಾರಾಷ್ಟ್ರದ ಮಹಾಮಳೆಗೆ ಯಾದಗಿರಿ (Yadagiri) ಜಿಲ್ಲೆಯ ಕೃಷ್ಣಾ (Krishna) ಹಾಗೂ ಭೀಮಾನದಿ (Bhima River) ತೀರದಲ್ಲಿ ಪ್ರವಾಹ (Flood) ಭೀತಿ ಎದುರಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯ (Narayanapur Dam) ಈಗ ಭರ್ತಿಯಾಗಿದೆ. 33.33 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 28.820 ಟಿಎಂಸಿ ನೀರು ಸಂಗ್ರಹವಾಗಿದೆ. ಕೃಷ್ಣಾ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ …
Read More »ಬಿಎಸ್‌ವೈಗೆ ಸಿಎಂ ಸ್ಥಾನದ ಆಸೆ ತೋರಿಸಿ ‘ಆಪರೇಷನ್ ಕಮಲ’ ಮಾಡಿಸಿದ್ದು ಯಾರು?: ಸಿದ್ದರಾಮಯ್ಯ
ಬೆಂಗಳೂರು: 4 ದಶಕಗಳ ಕಾಲ ರಕ್ತ-ಬೆವರು ಹರಿಸಿ ಪಕ್ಷ ಕಟ್ಟಿದ್ದ ಬಿ.ಎಸ್.ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದವರು ಯಾರು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಶ್ನಿಸಿದ್ದಾರೆ. ಖರ್ಗೆ, ಪರಮೇಶ್ವರ್ ಮುಗಿಸಿರುವ ಸಿದ್ದು ಮುಂದಿನ ಗುರಿ ಡಿಕೆಶಿ. ಸಿದ್ದರಾಮೋತ್ಸವದಿಂದ ಕಾಂಗ್ರೆಸ್ ಸರ್ವನಾಶವಾಗಲಿದೆ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. #ಒಡೆದಮನೆಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಸೋಮವಾರ ಸರಣಿ ಟ್ವೀಟ್ ಮಾಡಿರುವಸಿದ್ದರಾಮಯ್ಯ, ‘ಪಕ್ಷ ಅಧಿಕಾರದಲ್ಲಿದ್ದಾಗಲೇ ಬಿಎಸ್‍ವೈಯನ್ನು ಜೈಲಿಗೆ ಕಳಿಸಿ ಮುಖ್ಯಮಂತ್ರಿ …
Read More »ಹೀಗಿರಬೇಕು ಮದುವೆ ಅಗ್ರಿಮೆಂಟ್! ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ!
ಮದುವೆಯಲ್ಲಿ ನವ ವಧು-ವರರು ಏಳೇಳು ಜನ್ಮಕ್ಕೂ ಜತೆಯಾಗಿರುವುದಾಗಿ ಪ್ರಮಾಣಿಸುವುದು ಸಾಮಾನ್ಯ. ಆದರೆ ಈ ಮದುವೆಯಲ್ಲಿ ನಡೆದ ಒಪ್ಪಂದ ಕೇಳಿದರೆ ನೀವು ನಗುವುದು ಗ್ಯಾರಂಟಿ. ‘ತಿಂಗಳಿಗೊಂದೇ ಪಿಜ್ಜಾ ತರಿಸಬೇಕು’, ’15 ದಿನಕ್ಕೊಮ್ಮೆ ಶಾಪಿಂಗ್‌ಗೆ ಕರೆದೊಯ್ಯಬೇಕು’, ‘ಮನೆ ಊಟಕ್ಕೆ ಯಾವಾಗಲೂ ಬೇಡ ಎನ್ನಕೂಡದು’, ‘ಪ್ರತಿದಿನ ಜಿಮ್‌ಗೆ ಹೋಗಬೇಕು’, ‘ಪ್ರತಿ ಪಾರ್ಟಿಯಲ್ಲಿ ಒಳ್ಳೊಳ್ಳೆ ಫೋಟೋ ತೆಗೆದುಕೊಡಬೇಕು’, ‘ಪ್ರತಿ ಭಾನುವಾರ ಗಂಡನೇ ತಿಂಡಿ ರೆಡಿ ಮಾಡಬೇಕು’. ಇದು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಮದುವೆಯಾದ ವರ-ವಧು …
Read More »ರಾಜ್ಯದಲ್ಲಿ ಅವಧಿಗೆ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆ..?!
ಬೆಂಗಳೂರು,ಜು.11- ಕರ್ನಾಟಕದಲ್ಲಿ ಅವಧಿಗೂ ಮುನ್ನ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಬರಲಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. 2023ರ ಮೇ ತಿಂಗಳಲ್ಲಿ ನಡೆಯಬೇಕಿರುವ ರಾಜ್ಯ ವಿಧಾನಸಭೆ ಚುನಾವಣೆಯೂ ಈ ವರ್ಷದ ಡಿಸೆಂಬರ್‍ನಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗುಜರಾತ್ ಚುನಾವಣೆಯೂ ಡಿಸೆಂಬರ್‍ಲ್ಲೇ ನಡೆಯಲಿದ್ದು, ಅದರ ಜೊತೆಯಲ್ಲೇ ರಾಜ್ಯ ವಿಧಾನಸಭೆ ಚುನಾವಣೆಯನ್ನು ಮುಗಿಸುವ ತವಕದಲ್ಲಿ ಬಿಜೆಪಿ ಇದ್ದು, ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ. ಬಿಜೆಪಿ ಇಡುತ್ತಿರುವ ಹೆಜ್ಜೆಗಳನ್ನು …
Read More »