Breaking News

ರಾಷ್ಟ್ರೀಯ

NDTV ಖರೀದಿಸಿದ ಗೌತಮ್ ಅದಾನಿ

ನವದೆಹಲಿ, ಆಗಸ್ಟ್ 23: ನ್ಯೂ ಡೆಲ್ಲಿ ಟೆಲಿವಿಷನ್(NDTV) ಮಾಧ್ಯಮ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಉದ್ಯಮಿ ಗೌತಮ್ ಅದಾನಿ ಎಂಟ್ರಿ ಕೊಟ್ಟಿದ್ದಾರೆ. ಸರಿ ಸುಮಾರು 29.18 ರಷ್ಟು ಪಾಲನ್ನು ಅದಾನಿ ಎಂಟರ್ ಪ್ರೈಸಸ್ ಖರೀದಿಸಿದ್ದು, ಈ ಮೂಲಕ NDTV ಅದಾನಿ ಸಂಸ್ಥೆ ಪಾಲಾಗಿದೆ ಎನ್ನಬಹುದು.   ಅದಾನಿ ಎಂಟರ್‌ಪ್ರೈಸಸ್ ಮಂಗಳವಾರ ತನ್ನ ಮಾಧ್ಯಮ ಘಟಕವು ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ ಪರೋಕ್ಷವಾಗಿ ಶೇಕಡಾ 29.18 ಪಾಲನ್ನು ಖರೀದಿಸಲಿದೆ ಮತ್ತು …

Read More »

ಅಂಬೇಡ್ಕರ್ ಟು ಟಿಪ್ಪು ಸುಲ್ತಾನ್ ಸರ್ಕಲ್, ಕಲ್ಲೇಶ್ವರ ಸರ್ಕಲ್ ಟು ಶಿವಬೋಧರಂಗ ಮಠತನಕ ರಸ್ತೆ ಅಭಿವೃದ್ಧಿ ಶೀಘ್ರ : ಶಾಸಕ ಬಾಲಚಂದ್ರ ಜಾರಕಿಹೊಳಿ

    ಮೂಡಲಗಿ: ಮೂಡಲಗಿ ಪಟ್ಟಣದ ಸಾರ್ವಜನಿಕರ ಕೋರಿಕೆಯ ಮೇರೆಗೆ ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತ ಹಾಗೂ ಕಲ್ಮೇಶ್ವರ ವೃತ್ತದಿಂದ ಶಿವಬೋಧರಂಗ ಮಠದವರೆಗೆ ಸ್ವಂತ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ.   ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗೆ 9 ಮೀಟರ್ ಅಗಲದ 1 ಕಿ.ಮೀ ವರೆಗಿನ ರಸ್ತೆಯನ್ನು ಇಷ್ಟರಲ್ಲಿಯೇ ಅಭಿವೃದ್ಧಿಪಡಿಸಲಾಗುವುದು. ಕಲ್ಮೇಶ್ವರ ವೃತ್ತದಿಂದ ಮಠದವರೆಗಿನ 500 …

Read More »

ಭ್ರಷ್ಟರ ವಿರುದ್ಧ ಸಮರಕ್ಕೆ ಲೋಕಾಯುಕ್ತ ಅಣಿ

ಬೆಂಗಳೂರು : ಸರ್ಕಾರದಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ವಿರುದ್ಧ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ಯ ಅಸ್ತ್ರ ಝಳಪಿಸಲು ಲೋಕಾಯುಕ್ತ ಮತ್ತೆ ಸಜ್ಜಾಗಿದೆ. ದೂರು ಬಂದರೆ ತಕ್ಷಣದಲ್ಲೇ ಪ್ರಕರಣ ದಾಖಲಿಸಲು ಲೋಕಾ ಯುಕ್ತ ಪೊಲೀಸ್‌ ಘಟಕವು ಸನ್ನದ್ಧವಾಗಿದೆ. ಹೈಕೋರ್ಟ್‌ ತೀರ್ಪಿನ ಕುರಿತು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ, ಸಂಸ್ಥೆಯ ಪೊಲೀಸ್‌ ಘಟಕ ಹಾಗೂ ನ್ಯಾಯಾಂಗ ವಿಭಾಗದ ಅಧಿಕಾರಿಗಳ ಜತೆಗೂ ಸರಣಿ ಸಭೆಗಳನ್ನು ನಡೆಸಿದ್ದಾರೆ. ಭ್ರಷ್ಟಾಚಾರ, ಅಧಿಕಾರ …

Read More »

22 ಶಾಲೆಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸೂಚನೆ

ಬೆಳಗಾವಿ – ಚಿರತೆ ಆತಂಕದ ಹಿನ್ನೆಲೆಯಲ್ಲಿ ಬೆಳಗಾವಿಯ 22 ಶಾಲೆಗಳು ಕಳೆದ ಹಲವು ದಿನಗಳಿಂದ ಶೈಕ್ಷಿಣಿಕವಾಗಿ ತೀವ್ರ ಗೊಂದಲದಲ್ಲಿವೆ. ರಜೆ ಕೊಡದಿದ್ದರೆ ಚಿರತೆ ದಾಳಿಯಿಂದ ಮಕ್ಕಳಿಗೆ ತೊಂದರೆಯಾದರೆ ಎನ್ನುವ ಆತಂಕ, ರಜೆ ಕೊಟ್ಟರೆ ಪಾಠವಿಲ್ಲದೆ ಮಕ್ಕಳ ಭವಿಷ್ಯದ ಚಿಂತೆ. ಆರಂಭದಲ್ಲಿ ಒಂದು ವಾರ ರಜೆ ನೀಡಿದ್ದ ಶಿಕ್ಷಣ ಇಲಾಖೆ ನಂತರ ಎಲ್ಲ ಮುನ್ನೆಚ್ಚರಿಕೆ ವಹಿಸಿಕೊಂಡು ಶಾಲೆಗಳನ್ನು ನಡೆಸುವಂತೆ ಸೂಚನೆ ನೀಡಿತ್ತು. ಆದರೆ ಸೋಮವಾರ ಮತ್ತೆ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಹಾಗಾಗಿ …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ: ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

  ಗೋಕಾಕ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಘಟನೆ ಖಂಡಿಸಿ ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಸಿದ್ದಲಿಂಗ ದಳವಾಯಿ, ವಿವೇಕ್ ಜತ್ತಿ, ಮಂಜುಳಾ ರಾಮಾನಗಟ್ಟಿ, ಹಾಗೂ ಅನೇಕರು ಉಪಸ್ಥಿತರಿದ್ದರು

Read More »

ಸ್ಪೈ ಕ್ಯಾಮರಾ ಬಳಸಿ ನಗ್ನ ಚಿತ್ರ ಸೆರೆ.. ಯುವತಿಗೆ ಅದೇ ಫೋಟೋ ಕಳಿಸಿ ಬ್ಲಾಕ್ ಮೇಲ್

ಬೆಂಗಳೂರು: ನಗರದಲ್ಲಿ ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸ್ಪೈ ಕ್ಯಾಮರಾ ಬಳಸಿ ಮಹಿಳೆಯರ ನಗ್ನ ಚಿತ್ರ ಸೆರೆ ಹಿಡಿಯುತ್ತಿದ್ದ ಮಹೇಶ ಬಂಧಿತ ಆರೋಪಿ. ಮೊದಲು ಯುವತಿಗೆ ನಕಲಿ ಇನ್​​ಸ್ಟಾಗ್ರಾಮ್ ಮೂಲಕ ಮೆಸೇಜ್ ಮಾಡಿದ್ದ ಮಹೇಶ, ತನ್ನ ಜೊತೆ ಚಾಟ್ ಮಾಡು ಇಲ್ಲದಿದ್ದರೆ ನಗ್ನ ವಿಡಿಯೋ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಎಂದು ಪ್ರಕರಣದ ಕುರಿತು ಈಶಾನ್ಯ …

Read More »

ಬಾಕಿ ಕೊಡಿ; ವಿದ್ಯುತ್‌ ಖರೀದಿಸಿ: ಕರ್ನಾಟಕ ಸೇರಿ 13 ರಾಜ್ಯಗಳಿಗೆ ತಡೆ

ಬಾಕಿ ಪಾವತಿ ಮಾಡುವವರೆಗೆ ವಿದ್ಯುತ್‌ ಖರೀದಿ ಮತ್ತು ವಿತರಣೆ ಮಾಡಬೇಡಿ’ ಎಂದು ಕರ್ನಾಟಕ ಸೇರಿದಂತೆ 13 ರಾಜ್ಯಗಳಿಗೆ ಕೇಂದ್ರ ಸರ್ಕಾರ ಫ‌ರ್ಮಾನು ಹೊರಡಿಸಿದೆ. ಖಾಸಗಿ ವಿದ್ಯುತ್‌ ಉತ್ಪಾದಕರಿಗೆ ಒಟ್ಟು 5,085 ಕೋಟಿ ರೂ. ಮೊತ್ತವನ್ನು ಈ ರಾಜ್ಯಗಳು ನೀಡಲು ಬಾಕಿ ಇವೆ. ದಕ್ಷಿಣ ಭಾರತದಿಂದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಸೇರಿಕೊಂಡಿವೆ. ಇದರಿಂದ ವಿದ್ಯುತ್‌ ಪೂರೈಕೆ ಮತ್ತು ಸರಬರಾಜಿನ ಮೇಲೆ, ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳೇನು ನೋಡೋಣ. ಏನಿದು ಬೆಳವಣಿಗೆ? …

Read More »

ತಮ್ಮ ಪುಟ್ಟ ಮಗುವಿಗೆ ಶ್ರೀ ಕೃಷ್ಣನ ವೇಶ ಹಾಕಿ ಭಾವೈಕ್ಯತೆ ಮೆರೆದ ಮುಸ್ಲಿಂ ಕುಟುಂಬ..!!

ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮನೆಯ ಮಗುವಿಗೆ ಶ್ರೀಕೃಷ್ಣನ ವೇಶವನ್ನು ಹಾಕಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂದೇಶವನ್ನು ಸಾರಿದ ಅರ್ಥಪೂರ್ಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಭಾರತದಂಥ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶದಲ್ಲಿ ಕಂಡುಬಂದ ಅದ್ಭು ದೃಶ್ಯವಿದು. ದೇವನೊಬ್ಬ ನಾಮ ಹಲವು ಎಂದು ಸಾರುತ್ತ ಮುಸ್ಲಿಂ ಕುಟುಂಬವೊಂದು ತಮ್ಮ ಮನೆಯ ಚಿಕ್ಕ ಮಗುವಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ …

Read More »

ಚುನಾವಣೆ ಮುಂದೂಡಲು”ಸುಗ್ರೀವಾಜ್ಞೆ’ ನೆಪ? : ಹೆಚ್ಚಾಗಲಿದೆ ತಾ.ಪಂ,ಜಿ.ಪಂ. ಕ್ಷೇತ್ರಗಳ ಸಂಖ್ಯೆ

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಹಾದಿ ಸುಗಮವಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಏಕೆಂದರೆ, ಕ್ಷೇತ್ರಗಳ ಜನಸಂಖ್ಯೆ ನಿಗದಿಗೆ ಸಂಬಂಧಿಸಿದಂತೆ “ಸುಗ್ರೀವಾಜ್ಞೆ’ ತರಲು ಸರ್ಕಾರ ನಿರ್ಧರಿಸಿದೆ.   ತಾ.ಪಂ ಹಾಗೂ ಜಿ.ಪಂ ಕ್ಷೇತ್ರಗಳ ಜನಸಂಖ್ಯೆ ಬಗ್ಗೆ “ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ವಿಧೇಯಕ-2022ನ್ನು ಕಳೆದ ಮಾರ್ಚ್‌ನಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು. ಇದೀಗ ಈ ತಿದ್ದುಪಡಿ ಕಾಯ್ದೆಯ ಸೆಕ್ಷನ್‌ 121 ಮತ್ತು ಸೆಕ್ಷನ್‌ 160ರ …

Read More »

ಎಲ್ಲ ಗ್ರಾಮ ಪಂಚಾಯತಗಳು ಈ ಯೋಜನೆಯನ್ನು ಸದ್ಬಳಕೆ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ತೋಟದ ರಸ್ತೆ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲು ಅನುಮತಿ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳನ್ನು ಇತ್ತೀಚೆಗೆ ಕೋರಿದ್ದರು ಎಂಬುದು ಉಲ್ಲೇಖಾರ್ಹ.   *ಎಲ್ಲ ಗ್ರಾಮ ಪಂಚಾಯತಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ :* ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರ ಆದೇಶಿಸಿದ್ದು, ಎಲ್ಲ ಗ್ರಾಮ ಪಂಚಾಯತಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ …

Read More »