Breaking News

ರಾಷ್ಟ್ರೀಯ

ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ.. ಸಿಎಂ ಬೊಮ್ಮಾಯಿ ಮನೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿರುವ ಸತ್ಯಾಗ್ರಹಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು. ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಆಯೋಜಿಸಿರುವ ಸತ್ಯಾಗ್ರಹಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಮೀಜಿ ಚಾಲನೆ ನೀಡಿದರು. ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ನಾಲ್ಕನೇ ಬಾರಿ ಮಾತು ತಪ್ಪಿದರೆ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತೇವೆ ಅಂತಾ …

Read More »

2015- 16ರ ಶಿಕ್ಷಕರ ಅಕ್ರಮ ನೇಮಕ ಪ್ರಕರಣ ಸಿಐಡಿ ತನಿಖೆಗೆ: ಸಚಿವ ಬಿ.ಸಿ.ನಾಗೇಶ್

ವಿಧಾನಸಭೆ: 2015- 16ರಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಗೆ ತಿಳಿಸಿದ್ದಾರೆ. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಪಿ.ರಾಜೀವ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, 2015- 16ರಲ್ಲಿ ಇದಕ್ಕಿದ್ದಂತೆ ಒಂದಿಷ್ಟು ಜನರನ್ನು ಯಾವುದೇ ಪರೀಕ್ಷೆ ನಡೆಸದೇ ನೇಮಕ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಪತ್ರಿಕೆಯಲ್ಲಿ ವರದಿ ಬಂದ ನಂತರ ನಾವು ಪ್ರಾಥಮಿಕ ತನಿಖೆ ನಡೆಸಿದಾಗ ಬೆಂಗಳೂರು ವಿಭಾಗದಲ್ಲಿ …

Read More »

ಫಾರೆಸ್ಟ್ ರೇಂಜರ್ ಆಫೀಸರ್’ ಗೆ ಹಿಗ್ಗಾಮುಗ್ಗಾ ಹೊಡೆದ ಜನ ಯಾಕೆ ಗೊತ್ತಾ..?

ಬಳ್ಳಾರಿ : ನಕಲಿ ಪೊಲೀಸ್ ಎಂದು ಡೆಪ್ಯೂಟಿ ಫಾರೆಸ್ಟ್ ರೇಂಜರ್ ಆಫೀಸರ್ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ ಘಟನೆ ನಗರದ ವಿಮ್ಸ್ ಆಸ್ಪತ್ರೆ ಸಮೀಪದ ರೇಣುಕಾ ಹೋಟೆಲ್ ಬಳಿ ನಡೆದಿದೆ. ಡೆಪ್ಯೂಟಿ ಫಾರೆಸ್ಟ್ ರೇಂಜರ್ ಕೆಂಚಪ್ಪ ಅವರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದು, ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.   ಹೋಟೆಲ್ ಹಾಗೂ ಅಂಗಡಿಗಳಲ್ಲಿ ಕೆಂಚಪ್ಪ ಹಣ ವಸೂಲಿ …

Read More »

ಶಬರಿಮಲೆಗೆ ಏರ್‌ಪೋರ್ಟ್‌: ಇಂದು ಮಣ್ಣು ಪರೀಕ್ಷೆ

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಆಗಮಿಸುವವರಿಗಾಗಿ ಅನುಕೂಲವಾಗಲು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಾಥಮಿಕ ಕೆಲಸಗಳು ಶುರುವಾಗಿವೆ. ಚೆರುವಲ್ಲಿ ಎಸ್ಟೇಟ್‌ನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಮಣ್ಣಿನ ಪರೀಕ್ಷೆ ಸೋಮವಾರ ಆರಂಭವಾಗಲಿದೆ. ಈ ಮೂಲಕ ತಜ್ಞರ ತಂಡ, ರನ್‌ವೇ ನಿಲ್ದಾಣಕ್ಕೆ ಅಲ್ಲಿನ ಮಣ್ಣಿನ ಸ್ಥಿತಿ ಯೋಗ್ಯವಾಗಿದೆಯೇ ಎಂಬುದನ್ನು ಪರೀಕ್ಷಿಸಲಿದೆ. ಕನ್ಸಲ್ಟಿಂಗ್‌ ಸಂಸ್ಥೆ ಲೂಯಿಸ್‌ ಬರ್ಗರ್‌ ಪರವಾಗಿ ಜಿಯೋ ಐಡಿ ಏಜೆನ್ಸಿಯ ಅಧಿಕಾರಿಗಳು ಮಣ್ಣಿನ ಪರೀಕ್ಷೆ ನಡೆಸಲು ನವದೆಹಲಿಯಿಂದ ಶಬರಿಮಲೆಗೆ ಆಗಮಿಸಿದ್ದಾರೆ.

Read More »

ಚಿರತೆ ಬಗ್ಗೆ ಸುಳ್ಳು ಮಾಹಿತಿ: ಮೋದಿ ಸುಳ್ಳುಗಾರ ಎಂದ ಜೈರಾಮ್ ರಮೇಶ್

ನವದೆಹಲಿ, ಸೆ.18: ದೊಡ್ಡ ಬೆಕ್ಕುಗಳು ಅಂದರೆ ಚಿರತೆಗಳು ದೇಶದಲ್ಲಿ ನಾಶವಾಗಿವೆ ಎಂದು ಘೋಷಿಸಿದ ನಂತರ ಚಿರತೆಗಳನ್ನು ಭಾರತಕ್ಕೆ ಮರು ಪರಿಚಯಿಸಲು ದಶಕಗಳಿಂದ ಯಾವುದೇ ರಚನಾತ್ಮಕ ಪ್ರಯತ್ನಗಳು ನಡೆದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ಭಾನುವಾರ ವಾಗ್ದಾಳಿ ನಡೆಸಿದೆ.   2009 ರಲ್ಲಿ ‘ಪ್ರಾಜೆಕ್ಟ್ ಚೀತಾ’ ಆರಂಭಿಸಿದ ಪತ್ರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಹಿಂದಿನ ಸರ್ಕಾರಗಳು ಚಿರತೆಗಳನ್ನು ಮರು ಪರಿಚಯಿಸಲು ಪ್ರಯತ್ನಗಳನ್ನು ಮಾಡಲಿಲ್ಲ …

Read More »

’40 ಪರ್ಸೆಂಟ್ ಕಮಿಷನ್ ಸಿಎಂಗೆ ಸುಸ್ವಾಗತ’: ಬ್ಯಾನರ್ ಹಾಕಿ ಕರ್ನಾಟಕ ಮುಖ್ಯಮಂತ್ರಿ ಗುರಿಯಾಗಿಸಿದ ಟಿಆರ್ ಎಸ್

ಹೈದರಾಬಾದ್: ಸಿಕಂದರಾಬಾದ್ ನ ಪರೇಡ್ ಮೈದಾನದ ಬಳಿ ‘40% ಕಮಿಷನ್ ಸಿಎಂಗೆ ಸುಸ್ವಾಗತ’ ಎಂಬ ಬ್ಯಾನರ್ ಹಾಕುವ ಮೂಲಕ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದು, ಇಂದು ಪರೇಡ್ ಮೈದಾನದಲ್ಲಿ ಹೈದರಾಬಾದ್ ಲಿಬರೇಶನ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ಸಮಯದಲ್ಲಿ ಈ ಬ್ಯಾನರ್ ಹಾಕಲಾಗಿದೆ ಎಂದು ತಿಳಿದು …

Read More »

ಶಾಲೆಗಳಿಗೆ ದಸರಾ ರಜೆ ಅವಧಿ ಬದಲಾವಣೆ : ಮಹತ್ವದ ಆದೇಶ

ಬೆಂಗಳೂರು : ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಶಾಲೆಗಳಿಗೆ ರಜೆ ಅವಧಿಯಲ್ಲಿ (Dussehra School Holiday change) ಮಾರ್ಪಾಡು ಮಾಡಲಾಗಿದೆ. ಸಪ್ಟೆಂಬರ್‌ 26ರಿಂದ ಅಕ್ಟೋಬರ್‌ 9 ವರೆಗೆ ದಸರಾ ರಜೆ ಘೋಷಣೆ ಮಾಡಿ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.   ರಾಜ್ಯದಲ್ಲಿ ಅಕ್ಟೋಬರ್‌ 3ರಿಂದ ದಸರಾ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆದೇಶವನ್ನು ಹೊರಡಿಸಿತ್ತು. ಆದ್ರೆ ಈ ಬಾರಿ ಸಪ್ಟೆಂಬರ್‌ 26 ರಿಂದ ನಾಡಹಬ್ಬ ದಸರಾ ಆರಂಭವಾಗಲಿದೆ. ಈ …

Read More »

ಕೆಎಂಎಫ್ ಕೇಂದ್ರ ಕಛೇರಿಗೆ ಭೇಟಿ ನೀಡಿದ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ

  *ಬೆಂಗಳೂರು*: ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರದಂದು ಇಲ್ಲಿಯ ಕೆಎಮ್‍ಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಕೆಎಮ್‍ಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು. ಆಂಧ್ರಪ್ರದೇಶ ಸರ್ಕಾರದ ಪ್ರತಿಷ್ಠಿತ ಯೋಜನೆಯಾದ ವಾಯ್‍ಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳನ್ನು ಒಳಗೊಂಡ 55,600 ಅಂಗನವಾಡಿ ಕೇಂದ್ರಗಳಿಂದ …

Read More »

58 R.T.O.ಸೇವೆಗಳು ಆನ್‌ಲೈನ್‌; ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಆದೇಶ

ನವದೆಹಲಿ: ಡ್ರೈವಿಂಗ್‌ ಲೈಸೆನ್ಸ್‌, ವಾಹನ ನೋಂದಣಿ ಸೇರಿದಂತೆ ಸಾರಿಗೆ ಇಲಾಖೆಯ 58 ಸೇವೆಗಳು ಇನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಲಿವೆ. ಇಂಥ ಸೇವೆಗಳನ್ನು ಪಡೆಯಲು ಆಧಾರ್‌ ಸಂಖ್ಯೆಯನ್ನು ನೀಡುವ ಮೂಲಕ ಪಡೆಯಬಹುದು. ಆದರೆ, ಆಧಾರ್‌ ಸಂಖ್ಯೆಯನ್ನು ನೀಡುವುದು ಕೇವಲ ಆಯ್ಕೆಯ ವಿಚಾರವಾಗಲಿದೆ.   ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಶನಿವಾರ ಘೋಷಣೆ ಮಾಡಿದೆ. ಇಂಥ ಕ್ರಮದಿಂದ ದೇಶದ ನಾಗರಿಕರಿಗೆ ಕ್ಷಿಪ್ರವಾಗಿ ವಾಹನ ನೋಂದಣಿ, ಮಾಲೀಕತ್ವ ವರ್ಗಾವಣೆ, ಡ್ರೈವಿಂಗ್‌ ಲೈಸೆನ್ಸ್‌, …

Read More »

ಬಿಎಸ್‌ವೈ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌

ಬೆಂಗಳೂರು: ಬಿಡಿಎ ವಸತಿ ಯೋಜನೆಯ ಗುತ್ತಿಗೆ ನೀಡುವ ಸಂಬಂಧ ಲಂಚ ಪಡೆದ ಆರೋಪದ ಮೇಲೆ ನ್ಯಾಯಾಲಯದ ಸೂಚನೆ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ 9 ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.   ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಬಿ.ಎಸ್‌.ವಿಜಯೇಂದ್ರ, ಶಶಿಧರ್‌ ಮರಡಿ, ಸಂಜಯ್‌, ಗುತ್ತಿಗೆದಾರ ಚಂದ್ರಕಾಂತ ರಾಮಲಿಂಗಮ್‌, ಶಾಸಕ ಎಸ್‌.ಟಿ. ಸೋಮಶೇಖರ್‌, ರೀಜಿನಲ್‌ ಕಮೀಷನರ್‌ ಡಾ.ಜಿ.ಸಿ.ಪ್ರಕಾಶ್‌, ಕೆ.ರವಿ. ವಿರೂಪಾಕ್ಷ ಯಮಕನಮರಡಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.   ತನಿಖೆ …

Read More »