Breaking News

ರಾಷ್ಟ್ರೀಯ

ಬದುಕಿನ ಯಾನ ಮುಗಿಸಿದ ಹಿರಿಯ ನಟ

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಟಿ.ಎಸ್‌. ಲೋಹಿತಾಶ್ವ(80) ಅವರು ಮಂಗಳವಾರ ಮಧ್ಯಾಹ್ನ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಸಕ್ಕರೆ ಕಾಯಿಲೆ ಹಾಗು ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದ ಲೋಹಿತಾಶ್ವ ಅವರಿಗೆ ನಾಲ್ಕೈದು ತಿಂಗಳ ಹಿಂದೆ ಎರಡು ಬಾರಿ ಮೂತ್ರನಾಳದ ಸೋಂಕು ಕಾಣಿಸಿಕೊಂಡಿತ್ತು. ಈ ನಡುವೆ ಅನಾರೋಗ್ಯಕ್ಕೀಡಾದ ಅವರನ್ನು ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಸಾಗರ್‌ ಆಸ್ಪತ್ರೆಗೆ ಕಳೆದ ಅ.4ರಂದು ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲೇ ಅವರಿಗೆ ಹೃದಯಾಘಾತವೂ ಆಗಿತ್ತು. ಇದರಿಂದಾಗಿ ಮಿದುಳಿಗೂ ಹಾನಿಯಾಗಿತ್ತು. ನಂತರದಲ್ಲಿ ಅವರನ್ನು ಐಸಿಯುಗೆ …

Read More »

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

ಬೆಂಗಳೂರು: ರಾಜ್ಯದ ಸರ ಕಾರಿ ಆಸ್ಪತ್ರೆಗಳಲ್ಲಿ ಬರೊಬ್ಬರಿ 44 ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿದೆ. ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್‌.ಎಂ.ಎಸ್‌.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.   ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ …

Read More »

ಬ್ಯಾಂಕಾಕ್ ದೇಶದಲ್ಲಿ ಬೆಳಗಾವಿಯ ಕೀರ್ತಿಯನ್ನು ಈ ನೃತ್ಯಗಾರರು ಹೆಚ್ಚಿಸಿದ್ದಾರೆ.

ಬ್ಯಾಂಕಾಕ್ ದೇಶದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯ ಚಾಂಪಿಯನ್‍ಶಿಪ್ IIGF  2022ರಲ್ಲಿ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಒಳ್ಳೆಯ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 265 ಸ್ಪರ್ಧಿಗಳಲ್ಲಿ ಅಗ್ರ 20ನೇ ಸ್ಥಾನಕ್ಕೆ ಬೆಳಗಾವಿಯ ಎಮ್ ಸ್ಟೈಲ್ ಡ್ಯಾನ್ಸ ಮತ್ತು ಜುಂಬಾ ಫಿಟ್‍ನೆಸ್ ಅಕಾಡೆಮಿ ನೃತ್ಯಗಾರರು ಅರ್ಹತೆ ಪಡೆದಿದ್ದಾರೆ. ಅಗ್ರ 20ರ 2ನೇ ಸುತ್ತಿನಲ್ಲಿ ಬ್ಯಾಂಕಾಕ್‍ನ ಪಟ್ಟಾಯದಲ್ಲಿ ಬೆಳ್ಳಿ ಮತ್ತು …

Read More »

ನ.11ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನ; ಕಾರ್ಯಕ್ರಮ ಎಲ್ಲೆಲ್ಲಿ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನ. 11ರಂದು ಬೆಂಗಳೂರು ನಗರಕ್ಕೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಇಂತಿದೆ‌. 1. ಶಾಸಕರ ಭವನದ ಆವರಣದಲ್ಲಿರುವ ಶ್ರೀ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ. 2. ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ. (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ) 3. ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಟರ್ಮಿನಲ್-2 ಲೋಕಾರ್ಪಣೆ. 4. ನಾಡಪ್ರಭು …

Read More »

ಸಿದ್ದರಾಮಯ್ಯ ಯಾರನ್ನೂ ಬೆಳೆಯಲು ಬಿಟ್ಟಿಲ್ಲ:C.M

ಕನ್ನಡ ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿರುವ ಜನ ಸಂಕಲ್ಪ ಯಾತ್ರೆಯನ್ನು ಸಿಎಂ ಬೊಮ್ಮಾಯಿಯವರು ಉದ್ಘಾಟಿಸಿಮಾತನಾಡಿದರು. ಕರಾವಳಿ ಪ್ರದೇಶದ ಅಭಿವೃದ್ಧಿಗೆ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ. ಕರಾವಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಸಿ.ಆರ್.ಝೆಡ್ ನಿಯಮಗಳಿಗೆ ತಿದ್ದುಪಡಿ ತಂದಿದೆ. …

Read More »

ಹೈಕೋರ್ಟ್‌ ಸಿಬ್ಬಂದಿಗೆ ಹನಿಟ್ರ್ಯಾಪ್‌: ಮಹಿಳೆಯರು ಸೇರಿ 10 ಮಂದಿ ಬಂಧನ

ಬೆಂಗಳೂರು: ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಗೆ ಹನಿಟ್ರ್ಯಾಪ್‌ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಮಹಿಳೆಯರು ಸೇರಿ 10 ಮಂದಿ ಕಾಮಾಕ್ಷಿಪಾಳ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದೊಡ್ಡಬಿದರಕಲ್ಲು ಶಿವಗಂಗಾ ಲೇಔಟ್‌ ನಿವಾಸಿ ಸಿದ್ದೇಶ್‌ ಅಲಿಯಾಸ್‌ ಸಿದ್ದು (26), ಗೊಲ್ಲರ ಹಟ್ಟಿಯ ಪೈಪ್‌ಲೈನ್‌ ರಸ್ತೆ ನಿವಾಸಿ ಅನು ಅಲಿಯಾಸ್‌ ಅನುರಾಧಾ (25), ಕಾಮಾಕ್ಷಿ ಪಾಳ್ಯದ ಗುಣ (23), ಇಂದಿರಾನಗರದ ಚೇತನ್‌ ಅಲಿಯಾಸ್‌ ಚೇತು (19), ಗಂಗೋನಹಳ್ಳಿಯ ರವಿಕುಮಾರ್‌ ಅಲಿ ಯಾಸ್‌ ಬಾಂಡ್‌ (25), ಶ್ರೀರಾಮಪುರದ ಪ್ರಶಾಂತ್‌ …

Read More »

ಡಬಲ್ ಎಂಜಿನ್ ನ ವಂಚನೆಯಿಂದ ಗುಜರಾತ್ ಅನ್ನು ರಕ್ಷಿಸುತ್ತೇವೆ : ರಾಹುಲ್ ಗಾಂಧಿ

ನವದೆಹಲಿ : ಕಾಂಗ್ರೆಸ್ ಪಕ್ಷವು ಗುಜರಾತ್ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಮತ್ತು ಬಿಜೆಪಿಯ ಡಬಲ್ ಎಂಜಿನ್ ನ ವಂಚನೆಯಿಂದ ಅವರನ್ನು ರಕ್ಷಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಭಾನುವಾರ ಹೇಳಿದ್ದಾರೆ. 500 ರೂ.ಗಳಲ್ಲಿ ಎಲ್‌ಪಿಜಿ ಸಿಲಿಂಡರ್, ಯುವಕರಿಗೆ 10 ಲಕ್ಷ ಉದ್ಯೋಗ, 3 ಲಕ್ಷದವರೆಗಿನ ರೈತರ ಸಾಲ ಮನ್ನಾ, ನಾವು ಗುಜರಾತ್‌ನ ಜನರಿಗೆ ನೀಡಿದ 8 ವಚನ’ವನ್ನು ಈಡೇರಿಸುತ್ತೇವೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.   …

Read More »

ಸವದತ್ತಿ ಯಲ್ಲಮ್ಮ ದೇವಸ್ಥಾನ:100ಕ್ಕೂ ಅಧಿಕ ಅನಧಿಕೃತ ಅಂಗಡಿ ತೆರವು

ಸವದತ್ತಿ : ತಾಲೂಕಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿರುವ 100 ಮೀ ಸುತ್ತಲಿನ ಅನಧಿಕೃತ ಬೀದಿ ಬದಿಯ ಸುಮಾರು ನೂರಕ್ಕೂ ಅಧಿಕ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ. ತೆರವು ಕಾರ್ಯಾಚರಣೆಯಿಂದ ವ್ಯಾಪಾರಿಗಳು ಮುಂದುವರೆಸದಂತೆ ಬುಧವಾರ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿ ಪ್ರಯೋಜನವಾಗದಿದ್ದಾಗ ಕೆಲ ಮುಖಂಡರುಗಳ ಮೊರೆ ಹೋದರೂ ಫಲಕಾರಿಯಾಗಲಿಲ್ಲ. ಗುರುವಾರ ಮುಂಜಾನೆಯಿಂದಲೇ ಕಾರ್ಯಚರಣೆ ಮುಂದುವರೆಸಲೆತ್ನಿಸಿದರು. ಅಧಿಕಾರಿಗಳ ಜೊತೆ ವ್ಯಾಪಾಸ್ಥರು ಕೆಲ ಸುತ್ತಿನ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ. ಕಾರ್ಯಾಚರಣೆ ನಿಲ್ಲಿಸಲು ವ್ಯಾಪಾರಿಗಳು ಎಲ್ಲಿಲ್ಲದ ಪ್ರಯತ್ನದೊಂದಿಗೆ …

Read More »

ಗಡಿ ಜನರಿಗಾಗಿ ಜೈ ಜೋಡಿಸಿ ನಡೆಯೋಣ: ಸಮನ್ವಯ ಸಭೆ ಫಲಪ್ರದ

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಗಳಲ್ಲಿ ಸುಧಾರಣಾ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದ್ದು, ಇವುಗಳ ಅನುಷ್ಠಾನಕ್ಕೆ ಎರಡೂ ರಾಜ್ಯ ಸರ್ಕಾರಗಳಿಗೆ ರಾಜಭವನದ ಮೂಲಕ ಸೂಚನೆ ನೀಡಲು ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.   ಕರ್ನಾಟಕ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರ ನೇತೃತ್ವದಲ್ಲಿ ಕೊಲ್ಹಾಪುರದಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಹಲವು ಸಂಗತಿಗಳ ವಿನಿಮಯ ನಡೆಯಿತು. ಗಡಿ ಜನರ ಜೀವನ ಸುಧಾರಣೆ ಹಾಗೂ …

Read More »

ಇಂದು ರಾಜ್ಯಕ್ಕೆ ‘AICC’ ಅಧ್ಯಕ್ಷ ‘ಮಲ್ಲಿಕಾರ್ಜುನ ಖರ್ಗೆ’ ಆಗಮನ : ಅದ್ದೂರಿ ಸ್ವಾಗತಕ್ಕೆ ‘ಕೈ’ ನಾಯಕರು ಸಜ್ಜು

ಬೆಂಗಳೂರು ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ಇಂದು ಮೊದಲು ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲು ರಾಜ್ಯ ಕಾಂಗ್ರೆಸ್ ಸಜ್ಜಾಗಿದೆ. ಜೊತೆಗೆ ಸರ್ವೋದಯ ಸಮಾವೇಶ ಹೆಸರಿನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ.   ಕೆಪಿಸಿಸಿ ವತಿಯಿಂದ ನವೆಂಬರ್ 6 ರಂದು ಬೃಹತ್ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕೆ ‘ಸರ್ವೋದಯ ಸಮಾವೇಶ’ ಎಂದು ನಾಮಕರಣ ಮಾಡಲಾಗಿದೆ.   ಖರ್ಗೆ …

Read More »