Breaking News

ರಾಷ್ಟ್ರೀಯ

ಪ್ರಧಾನಿ ಮೋದಿಯವರು ಇಂದಿನ ವಿಶ್ವ ಮಾನವ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಬಣ್ಣನೆ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಹೇಳಿದ ವಿಶ್ವಮಾನ ತತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಉದಾಹರಣೆ. ಪ್ರಧಾನಿ ಮೋದಿ ಅವರು ಇಂದಿನ ವಿಶ್ವಮಾನವ. ವಸುದೈವ ಕುಟುಂಬಿಕಂ ಆಶಯವನ್ನು ಈಡೇರಿಸುತ್ತಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಸಿದರು.   ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾ ನಿಲ್ದಾಣ ಉದ್ಘಾಟನೆ ಮಾಡಬೇಕು. ಅಂದು ನಾನು ಬಂದೇ ಬರುತ್ತೇನೆ ಎಂದು …

Read More »

ಬೆಳಗಾವಿಗೆ ಮದುವಣಗಿತ್ತಿಯ ಕಳೆ

ಬೆಳಗಾವಿ: ಕುಂದಾನಗರಿ ಬೆಳಗಾವಿಗೆ ಸೋಮವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದು ಅವರ ಅಭೂತಪೂರ್ವ ಸ್ವಾಗತಕ್ಕೆ ಇಡೀ ಜಿಲ್ಲೆಯ ಜನರು ಕಾತುರದಿಂದ ಕಾಯುತ್ತಿದ್ದಾರೆ. ಕಮಲ ಪಾಳೆಯ ಹಬ್ಬೋಪಾದಿಯಲ್ಲಿ ಎಲ್ಲ ಸಿದ್ಧತೆ ಕೈಗೊಂಡಿದೆ. ನರೇಂದ್ರ ಮೋದಿ ಅವರ ಆಗಮನ ಹಿನ್ನೆಲೆಯಲ್ಲಿ ಬೆಳಗಾವಿ ನಗರಕ್ಕೆ ಮದುವಣಗಿತ್ತಿಯ ಕಳೆಬಂದಿದೆ. ಮಧ್ಯಾಹ್ನ 2 ಗಂಟೆಗೆ ನಗರಕ್ಕೆ ಆಗಮಿಸುವ ಪ್ರಧಾನಿ ಅವರು ಇದೇ ಪ್ರಥಮ ಬಾರಿಗೆ ನಗರದಲ್ಲಿ ಆಯೋಜಿಸಲಾಗಿರುವ 10.45 ಕಿ.ಮೀ. ರೋಡ್ ಶೋ ದಲ್ಲಿ ಭಾಗವಹಿಸಿ ಜನರ …

Read More »

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್‌ ಸಂಗ್ರಹ ಸೋಮವಾರದಿಂದ ಆರಂಭ

ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್‌ ಸಂಗ್ರಹ ಸೋಮವಾರದಿಂದ ಆರಂಭವಾಗಲಿದೆ. ಬೆಂಗಳೂರು- ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್‌ ಕಾರ್ಯಾಚರಣೆ ಆರಂಭಿಸಲಾಗಿದೆ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ. ರಸ್ತೆಗೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಲಘು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಹಾಗೂ ಅದೇ ದಿನ ಮರು ಸಂಚಾರಕ್ಕೆ 205 ರೂ., ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್‌ಗಳ ಏಕಮುಖ …

Read More »

ಸಿದ್ದರಾಮಯ್ಯ – ಖರ್ಗೆ ರಹಸ್ಯ ಚರ್ಚೆ | ಹೆಚ್ಚಿದ ಆಕಾಂಕ್ಷಿಗಳ ಕುತೂಹಲ

ಬೆಂಗಳೂರು: ಛತ್ತೀಸಗಢದ ರಾಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾಧಿವೇಶನದ ವೇಳೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಮಾರು 45 ನಿಮಿಷ ರಹಸ್ಯ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಲಿದ್ದು, ಈ ಮಧ್ಯೆ ಇಬ್ಬರ ನಡುವಿನ ಚರ್ಚೆ ಟಿಕೆಟ್‌ ಆಕಾಂಕ್ಷಿಗಳ ಕುತೂಹಲ ಹೆಚ್ಚಿಸಿದೆ. ‘ಸಿದ್ದರಾಮಯ್ಯ ವಾಸ್ತವ್ಯವಿದ್ದ ಹೋಟೆಲ್‌ ಕೊಠಡಿಯ ಎದುರಿನ ಕೊಠಡಿಯಲ್ಲಿ ಖರ್ಗೆ ಕೂಡಾ ಇದ್ದಾರೆ. ಶನಿವಾರ ರಾತ್ರಿ …

Read More »

ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್

ಕೇಂದ್ರ ಸರ್ಕಾರದ ನಿರ್ಧಾರದಿಂದ ಪಡಿತರ ಚೀಟಿದಾರರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ದೇಶಾದ್ಯಂತ ಹೊಸ ನಿಯಮ ಜಾರಿಯಾಗ್ತಿದೆ. ಈ ಮೂಲಕ ಪಡಿತರ ಚೀಟಿಯಿಂದ ಆಹಾರ ಧಾನ್ಯ ಪಡೆಯುವವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗಿದ್ದು, ಇದರ ನಂತರ ಎಲ್ಲಾ ಅಂಗಡಿಗಳಲ್ಲಿ ಆನ್‌ಲೈನ್ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್(ಪಿಒಎಸ್) ಸಾಧನಗಳನ್ನು ಕಡ್ಡಾಯಗೊಳಿಸಲಾಗಿದೆ.   ರಾಷ್ಟ್ರೀಯ ಆಹಾರ ಭದ್ರತಾ …

Read More »

ಬೆಂಗಳೂರಿನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ

ಬೆಂಗಳೂರು: ಮೈಸೂರು – ಚೆನ್ನೈ ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರಿಂದಾಗಿ ಕೋಚ್‌ನ ಎರಡು ಕಿಟಕಿ ಗಾಜುಗಳಿಗೆ ಹಾನಿಯಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.   ಬೆಂಗಳೂರಿನ ಕೆ.ಆರ್‌ಪುರಂ ಬಳಿ ಶನಿವಾರ ಈ ಘಟನೆ ಸಂಭವಿಸಿದೆ. ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲು ಚೆನ್ನೈನಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಬೆಂಗಳೂರಿನಲ್ಲಿ ಇಲ್ಲಿವರೆಗೆ …

Read More »

ಮಕ್ಕಳೆ ರಾಜಕಾರಣಿ ಮಾತ್ರ ಆಗಬೇಡಿ: ಶಾಸಕ ಎಂ.ವೈ.ಪಾಟೀಲ್ ಕರೆ

ಕಲಬುರಗಿ: ಮಕ್ಕಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡು ಗುರಿಯೊಂದಿಗೆ ಸಾಧನೆ ಮಾಡಬೇಕು ಎಂದು ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಮಕ್ಕಳಿಗೆ ಸಲಹೆ ನೀಡಿದರು. ಕಲ್ಯಾಣ ಕರ್ನಾಟಕ ಉತ್ಸವದ ಹಿನ್ನೆಲೆಯಲ್ಲಿ ಕಲಬುರಗಿ ವಿವಿಯ ಬಯಲು ರಂಗಮಂದಿರ ಶನಿವಾರ ಆಯೋಜಿಸಿದ ಮಕ್ಕಳ ಉತ್ಸವ ಉದ್ಘಾಟಿಸಿ ಮಾತನಾಡಿ, ಇದು ಕೇವಲ ಉತ್ಸವ ಅಲ್ಲ, ನಮ್ಮ ಭಾಗದ ದೊಡ್ಡ ಹಬ್ಬವಾಗಿದೆ. ಭಾರತ ಸ್ವಾತಂತ್ರ್ಯ ಮತ್ತು ನಿಜಾಮ ಶಾಹಿಯಿಂದ ಮುಕ್ತಿ ಪಡೆದ ಬಳಿಕ ಸ್ವಾತಂತ್ರೋತ್ಸವವನ್ನು ಮಾರ್ಪಾಟಾಗಿ ಕಲ್ಯಾಣ ಕರ್ನಾಟಕ ಉತ್ಸವವಾಗಿ ಆಚರಿಸಲಾಗುತ್ತಿದೆ. …

Read More »

ಸನ್ಯಾಸಿಗಳೂ ಬಿಜೆಪಿ ಸೇರಬಹುದು: ಸಚಿವ ಡಾ|ಅಶ್ವತ್ಥನಾರಾಯಣ

ದಾವಣಗೆರೆ: ಭಾರತೀಯ ಜನತಾ ಪಾರ್ಟಿಗೆ ಸನ್ಯಾಸಿಗಳೂ ಸೇರಿದಂತೆ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಎಲ್ಲರೂ ಭಾಗವಹಿಸಬೇಕಾಗುತ್ತೆ. ಅಂತಹ ಆಲೋಚನೆ-ವಿಚಾರ ಇರೋರು ಬಿಜೆಪಿ ಸೇರಬಹುದು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸನ್ಯಾಸಿ ಆಗಿದ್ದವರು. ಸನ್ಯಾಸಿಗಳಾಗಿದ್ದವರು ಶಾಸಕ-ಮಂತ್ರಿಯಾಗಿದ್ದಾರೆ. ಲೋಕಸಭೆಗೂ ಆಯ್ಕೆಯಾಗಿದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಇದ್ದಾರೆ. ಹೀಗಾಗಿ ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದರು. ಅರ್ಕಾವತಿ ಬಡಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ …

Read More »

ಸ್ವಾಮೀಜಿಗಳು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ: ಹೊರಟ್ಟಿ

ಧಾರವಾಡ: ಸ್ವಾಮೀಜಿಗಳು ಸಮಾಜಕ್ಕೆ ಮಾದರಿ. ಅವರು ಮಠ ಬಿಟ್ಟು ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಾನು ನೋಡಿದಂತೆ ಬಹುತೇಕ ಸ್ವಾಮೀಜಿಗಳು ವಿಧಾನಸೌಧದಲ್ಲಿಯೇ ಇರುತ್ತಾರೆ. ಇದು ಸರಿಯಾದ ಬೆಳವಣಿಗೆಯಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸ್ವಾಮೀಜಿಗಳು ರಾಜಕಾರಣಕ್ಕೆ ಬರಲಿ ಎಂದು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಚುನಾವಣೆಯಲ್ಲಿ ಮತ ಚಲಾವಣೆ ಮಾಡುವವರು ಬುದ್ಧಿವಂತರಾಗುವವರೆಗೂ ಒಳ್ಳೆಯ ಸರಕಾರ …

Read More »

ದೊಡ್ಡಗೌಡರ ಮಧ್ಯಪ್ರವೇಶ; ಇಂದಿನ ಸಭೆ ರದ್ದು

ಬೆಂಗಳೂರು:ಹಾಸನ ವಿಧಾನಸಭೆ ಕ್ಷೇತ್ರದ ಟಿಕೆಟ್‌ ವಿಚಾರ ಕಗ್ಗಂಟಾಗಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಬೇಕಾಗಿದ್ದ ಜೆಡಿಎಸ್‌ ಸಭೆಯೇ ರದ್ದಾಗಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.   ಎಚ್‌.ಡಿ.ರೇವಣ್ಣ ಅವರು ದೇವೇಗೌಡರ ಮೇಲೆ ಒತ್ತಡ ಹಾಕಿ ಸಭೆಯನ್ನು ಮುಂದೂಡುವಂತೆ ಮಾಡಿದ್ದು, ಈ ತಿಕ್ಕಾಟದಲ್ಲಿ ಎಚ್‌.ಡಿ ರೇವಣ್ಣ ಅವರೇ ಮೇಲುಗೈ ಸಾಧಿಸಿದ್ದಾರೆ ಎಂದು ಹೇಳಲಾಗಿದೆ. ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಹಾಸನ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿ ಶನಿವಾರ ಶೃಂಗೇರಿಯಲ್ಲಿ …

Read More »