Breaking News

ರಾಷ್ಟ್ರೀಯ

ಹಣಕಾಸಿನ ವ್ಯವಹಾರಕ್ಕಾಗಿ ಕೊಲೆ: 6 ಆರೋಪಿಗಳ ಬಂಧನ

ಹಾರೂಗೇರಿ (ಬೆಳಗಾವಿ ಜಿಲ್ಲೆ): ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರು ಆರೋಪಿಗಳನ್ನು ಹಾರೂಗೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಅಸ್ಥಿ‍‍ಪಂಜರಗಳನ್ನೂ ಪತ್ತೆ ಮಾಡಿದ್ದಾರೆ.   ಖಣದಾಳ ಗ್ರಾಮದ ಬಾಳಪ್ಪ ಆಜೂರೆ ಕೊಲೆಯಾದವರು. ಇದೇ ಊರಿನ ವಾಸುದೇವ ನಾಯಕ ಹಾಗೂ ಬಾಳಪ್ಪ ಅವರ ಸಹೋದರ ಭೀಮಪ್ಪ ಆಜೂರೆ ಇದರಲ್ಲಿ ಪ್ರಮುಖ ಆರೋಪಿಗಳು. 2022ರ ಆಗಸ್ಟ್‌ 18ರಂದು ಬಾಳಪ್ಪ ಅವರನ್ನು ಅಪಹರಿಸಿದ ಆರೋಪಿಗಳು ಕೋಳಿ ಫಾರ್ಮ್‌ವೊಂದರಲ್ಲಿ ಕೊಲೆ ಮಾಡಿ, ಮಹಾರಾಷ್ಟ್ರದ …

Read More »

ಮುರುಘಾ ಮಠದಲ್ಲಿ ಸರಣಿ ಅಪರಾಧಗಳು: ಅಡ್ವೊಕೇಟ್‌ ಜನರಲ್‌

ಬೆಂಗಳೂರು: ಮಠದಲ್ಲಿ ಸರಣಿ ಅಪರಾಧಗಳು ನಡೆದ ಸರಮಾಲೆಯೇ ಇದೆ ಎಂಬುದು ತನಿಖಾಧಿಕಾರಿಗಳಿಗೆ ಮೇಲ್ನೋಟಕ್ಕೆ ಕಂಡುಬಂದ ಕಾರಣಕ್ಕಾಗಿ ದೋಷಾರೋಪ ಪಟ್ಟಿಯಲ್ಲಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆಯನ್ನೂ ಅಡಕಗೊಳಿಸಲಾಗಿದೆ. ಹೀಗಾಗಿಯೇ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿದೆ…   ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿದ …

Read More »

40 ಲಕ್ಷ ಲಂಚ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಬಂಧನ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ(ಕೆಎಸ್ ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ₹ 40 ಲಕ್ಷ‌ ಲಂಚ ಪಡೆದ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.   ಪ್ರಶಾಂತ್ ಮಾಡಾಳ್ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ. ತಂದೆಯ ಪರವಾಗಿ ಲಂಚದ ಹಣ ಪಡೆಯುತ್ತಿದ್ದಾಗ ದಾಳಿಮಾಡಿದ ಲೋಕಾಯುಕ್ತದ …

Read More »

ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ : ಈಗ ಹೇಗಿದೆ ಹೆಲ್ತ್‌?

ಮುಂಬೈ: ಮಾಜಿ ವಿಶ್ವಸುಂದರಿ, ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತವಾಗಿರುವ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮಗೆ ಎರಡು ದಿನಗಳ ಹಿಂದೆ ಹೃದಯಾಘಾತವಾಗಿದ್ದು ವೈದ್ಯರು ಆಂಜಿಯೋಪ್ಲಾಸ್ಟ್‌ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.   ಸದಾ ಫಿಟ್‌ ಆಗಿರುವ ಸುಶ್ಮಿತಾ ಸೇನ್‌ ಅವರ ಹೃದಯಾಘಾತ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸದ್ಯಕ್ಕೆ ತಾವು ಆರಾಮವಾಗಿರುವುದಾಗಿ ಸುಶ್ಮಿತಾ ಸೇನ್‌ ಹೇಳಿದ್ದಾರೆ. ತಮ್ಮ ದೈಹಿಕ ಆರೋಗ್ಯಕ್ಕೇ ಹೆಚ್ಚು ಒತ್ತು ನೀಡುವ ಸುಶ್ಮಿತಾ ಸೇನ್‌ …

Read More »

‘ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ’

ಯಾದಗಿರಿ : ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ. ಬಿಜೆಪಿಯವರ ಬಗ್ಗೆ ಮಾತನಾಡುವಾಗಿನ ವಿಡಿಯೋ ಅದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಡಿಯೋ ವೈರಲ್ ಗೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿದ್ದಾರೆ.   ಈ ಬಗ್ಗೆ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಮುಗಂದಪೂರ ಗ್ರಾಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದಸತೀಶ್ ಜಾರಕಿಹೊಳಿ, ಮಾರ್ಚ್ 5ರಂದು ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ. ನಂತರ ಹಂತ ಹಂತವಾಗಿ ಜೆಡಿಎಸ್ ಕೆಲವು ಶಾಸಕರು …

Read More »

ಕಂದಾಯ ಇಲಾಖೆ ಎಲ್ಲಾ ನೋಂದಣಿಗಳನ್ನು ಆನ್‌ಲೈನ್‌ ಮಾಡಲಾಗುವುದು: ಆರ್‌.ಅಶೋಕ್‌

ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಶ 2.0 ಜಾರಿಗೆ ತಂದಿದ್ದು, ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿನೋಂದಣಿ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾವೇರಿ 2.0ತಂತ್ರಾಂಶದ ಕುರಿತು ಮಾತನಾಡಿದ ಸಚಿವರು, ಈ ತಂತ್ರಾಂಶವಿನೂತನ, ನಾಗರೀಕ ಸ್ನೇಹಿಯಾಗಿದೆ. ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ವರ್ಷದೊಳಗೆ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಎಲ್ಲಾ ಕಡೆ ಪ್ರಾರಂಭವಾಗಲಿದೆ. ಆಸ್ತಿ, ವಿವಾಹ ಸೇರಿದಂತೆ …

Read More »

ಬೆಳಗಾವಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ​ ಚಾಲನೆ ನೀಡಲಿರುವ ರಾಜನಾಥ್ ಸಿಂಗ್

ರಾಜನಾಥ್ ಸಿಂಗ್ ಇಂದು ಬೆಳಗಾವಿ ಜಿಲ್ಲೆ ಎರಡು ಮತಕ್ಷೇತ್ರದಲ್ಲಿ ಪ್ರಚಾರ ಮಾಡಿ ದೆಹಲಿಗೆ ವಾಪಸ್ ಆಗಲಿದ್ದಾರೆ. ನಂತರ ರಾಜ್ಯ ನಾಯಕರಿಂದ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಎರಡು ಮತಕ್ಷೇತ್ರದಲ್ಲಿ ರೋಡ್ ಶೋ, ಸಂಜೆ ಮೂರನೇ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ. ಹೀಗೆ ಕಿತ್ತೂರು ಕರ್ನಾಟಕದ 58 ವಿಧಾನಸಭಾ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ. ಸಂಚರಿಸಲಿದೆ. ಬಸವೇಶ್ವರರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ನಾಳೆ(ಮಾ.03) ಕೇಂದ್ರ ಗೃಹ ಸಚಿವ ಅಮೀತ್ ಶಾ …

Read More »

ಮಹಾರಾಷ್ಟ್ರ: ಕಸ್ಬಾ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ; ಬಿಜೆಪಿಗೆ ಮುಖಭಂಗ

ಮುಂಬೈ: ಮಹಾರಾಷ್ಟ್ರ ರಾಜ್ಯದಲ್ಲಿ ಆಡಳಿತಾರೂಢ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಿಜೆಪಿ-ಶಿವಸೇನೆ ಸರಕಾರಕ್ಕೆ ಭಾರಿ ಹಿನ್ನಡೆಯಾಗಿದ್ದು, ತನ್ನ ಭದ್ರಕೋಟೆಯಾದ ಕಸ್ಬಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಪ್ರತಿಷ್ಠೆಯ ಹೋರಾಟದಲ್ಲಿ ಬಿಜೆಪಿ ಸೋಲನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರವೀಂದ್ರ ಧಾಂಗೇಕರ್ ಅವರು ಬಿಜೆಪಿ ಅಭ್ಯರ್ಥಿ ಹೇಮಂತ್ ರಸಾನೆ ಅವರನ್ನು 10,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.   ಕಸ್ಬಾ ಕ್ಷೇತ್ರದಲ್ಲಿ 20ನೇ ಸುತ್ತಿನ ಅಂತ್ಯಕ್ಕೆ ಧಾಂಗೇಕರ್ 72,599 ಮತಗಳನ್ನು ಪಡೆದರೆ, ರಸಾನೆ 61,771 ಮತಗಳನ್ನು …

Read More »

ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ‘ಸಿಎಂ ಅಭ್ಯರ್ಥಿ’ : ಡಿ.ಕೆ ಸುರೇಶ್ ಘೋಷಣೆ

ಹಾಸನ : ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ‘ಸಿಎಂ ಅಭ್ಯರ್ಥಿ’ ಎಂದು ಡಿ.ಕೆ ಸುರೇಶ್ ( D.K Suresh ) ಘೋಷಣೆ ಮಾಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆ ಸುರೇಶ್ ತಾಕತ್ ಇದ್ದರೆ ಕಾಂಗ್ರೆಸ್ ನವರು ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿ ಎಂದು ಬಿಜೆಪಿ ನಾಯಕರು ಸವಾಲ್ ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿದಂತಹ ಡಿ.ಕೆ ಸುರೇಶ್ ಅವರು ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ …

Read More »

ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನುಅನಾವರಣ ಮಾಡಿದ ಸಿಎಂ ಬೊಮ್ಮಾಯಿ

ಬೆಳಗಾವಿಯ ರಾಜಹಂಸಗಡ ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಅನಾವರಣ ಮಾಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ರಾಜಹಂಸಗಡ ಕೋಟೆಗೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಶಿವಾಜಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಪ್ರತಿಮೆ ಅನಾವರಣ ಮಾಡಿದರು. 43 ಅಡಿ ಎತ್ತರದ ಬೃಹತ್ ಶಿವಾಜಿ ಪ್ರತಿಮೆ ಇದಾಗಿದ್ದು, ಇದೇ ವೇಳೆ ರಾಜಹಂಸಗಡದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಸಿಎಂ ಚಾಲನೆ ನೀಡಿದರು. ಸಚಿವ ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಸಂಸದೆ …

Read More »