ಕಲಬುರಗಿ: ರಾಜ್ಯಾದ್ಯಂತ ಈ ಬಾರಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಹಾಲಿ ನಾಲ್ಕೈದು ಶಾಸಕರ ಟಿಕೆಟ್ ಸಿಗದಿರುವ ಸಾಧ್ಯತೆಯಿದೆ ಎಂದು ಇಂಗಿತ ವ್ಯಕ್ತಪಡಿಸಿದರು. ಇಲ್ಲಿನ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಕಾಂಗ್ರೆಸ್ ಪಕ್ಷದ ಪ್ರಜಾದನಿ …
Read More »ವಿಜಯ ಸಂಕಲ್ಪ ಯಾತ್ರೆ ನಾಳೆ ನಿಪ್ಪಾಣಿಯಲ್ಲಿ
ನಿಪ್ಪಾಣಿ: “”ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ವಿಜಯ ಸಂಕಲ್ಪ ಯಾತ್ರೆ ಬುಧವಾರ (ಮಾ.8) ಮಧ್ಯಾಹ್ನ 3 ಗಂಟೆಗೆ ನಗರಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಭವ್ಯವಾದ ರೋಡ್‍ಶೋ ಆಯೋಜಿಸಲಾಗಿದೆ” ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ನಗರದ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಸಹಸಂಘಟನೆ ಕಾರ್ಯದರ್ಶಿ ಸಿ.ಟಿ. ರವಿ, …
Read More »ಸೀರೆಗಳನ್ನು ಹಂಚಲು ಮುಂದಾದ ಮಾಜಿ I,A,S, ಅಧಿಕಾರಿ 20 ಸಾವಿರಕ್ಕೂ ಹೆಚ್ಚು ಮುಗಿಬಿದ್ದ ಮಹಿಳೆಯರು
ರಾಯಬಾಗ: ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಎಲ್ಲೆಡೆ ಗಿಫ್ಟ್ ಪಾಲಿಟಿಕ್ಸ್ ತಾರಕಕ್ಕೇರುತ್ತಿದೆ. ಒಂದೆಡೆ ಪ್ರಾಮಾಣಿಕತೆಯ ಮಂತ್ರ, ಇನ್ನೊಂದೆಡೆ ಆಮಿಷದ ತಂತ್ರ ಮುಂದುವರಿದಿದೆ. ಹೊಸಹೊಸ ಆಕಾಂಕ್ಷಿಗಳು ತಮ್ಮ ಜಾಗ ಭದ್ರಪಡಿಸಿಕೊಳ್ಳಲು ಹೈ ಕಮಾಂಡ್ ಪಾದಪೂಜೆಯ ಜೊತೆಜೊತೆಗೇ ಜನರ ನಿಯತ್ತನ್ನೇ ಹಾಳುಗೆಡವುತ್ತಿದ್ದಾರೆ. ಇದೀಗ ರಾಯಬಾಗ ಕ್ಷೇತ್ರದಲ್ಲಿ ನಡೆದ ವಿದ್ಯಮಾನವೊಂದು ಯಾರು ಪ್ರಾಮಾಣಿಕರು? ಅಧಿಕಾರ ಮುಖ್ಯವೋ, ಪ್ರಾಮಾಣಿಕತೆ ಮುಖ್ಯವೋ ಎಂಬೆಲ್ಲ ವಿಷಯಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ರಾಯಬಾಗ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ತಮಿಳುನಾಡು ಸರಕಾರದ ಮಾಜಿ …
Read More »ರೈತರಿಗೆ ಪ್ರತಿ ವರ್ಷ 15 ಸಾವಿರ ರೂ. ಕೊಡುತ್ತೇನೆ: ಜನಾರ್ದನ ರೆಡ್ಡಿ
ಹಾವೇರಿ: ಬಡತನರೇಖೆಗಿಂತ ಕಡಿಮೆ ಇರುವ ರೈತರಿಗೆ ಪ್ರತಿ ವರ್ಷ 15 ಸಾವಿರ ಕೊಡುತ್ತೇನೆ. ಬಿತ್ತನೆ ಬೀಜ, ಗೊಬ್ಬರವನ್ನ ರೈತರ ಮನೆ ಬಾಗಿಲಿಗೆ ತಲುಪಿಸುತ್ತೇನೆ. ನಿಮ್ಮ ಆಶೀರ್ವಾದ ನನ್ನ ಮೇಲೆ ಇದ್ದರೆ ಜನಾರ್ದನ ರೆಡ್ಡಿ ಇತಿಹಾಸ ಮಾಡುತ್ತಾನೆಂದು ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಹಾನಗಲ್ ಪಟ್ಟಣದಲ್ಲಿ ನಡೆದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಮೇಲೆ ನಿಮ್ಮ ಆಶೀರ್ವಾದ ಇರಲಿ. ಚಿಕ್ಕ ವಯಸ್ಸಿನಲ್ಲಿ ರಾಜಕೀಯ …
Read More »ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಜನ ಪೇ ಸಿಎಂ ಎನ್ನುತ್ತಾರೆ: ರಣದೀಪ್ ಸುರ್ಜೆವಾಲಾ
ದಾವಣಗೆರೆ: ಕರ್ನಾಟಕದಲ್ಲಿ ಯಾವ ಸರ್ಕಾರ ಇದೆಯೆಂದು ದೇಶದಲ್ಲಿ ಕೇಳಿದರೆ 40 ಪರ್ಸೆಂಟ್ ಸರ್ಕಾರ ಎನ್ನುತ್ತಾರೆ. ಬಸವರಾಜ ಬೊಮ್ಮಾಯಿ ಯಾರು ಎಂದು ಕೇಳಿದ್ರೆ ಪೇ ಸಿಎಂ ಎನ್ನುತ್ತಾರೆಂದು ದಾವಣಗೆರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ವೇಳೆ ಮಾತನಾಡಿದ ಅವರು, ಪ್ರಧಾನಿ ಮೋದಿ 8 ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಆದರೆ ಎಲ್ಲಿಯೂ 40 ಪರ್ಸೆಂಟ್ ಅರೋಪದ ಬಗ್ಗೆ ಉತ್ತರಿಸಿಲ್ಲ. ಬಿಜೆಪಿ ಕಾರ್ಯಕರ್ತರೇ …
Read More »ಶೇ 39ರಷ್ಟು ದೇಶಗಳಲ್ಲಿ ಮಾತ್ರ ಲೈಂಗಿಕ ಶಿಕ್ಷಣ ಕುರಿತು ರಾಷ್ಟ್ರೀಯ ನೀತಿ- UNESCO
ನವದೆಹಲಿ: ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಶೇ 20ರಷ್ಟು ದೇಶಗಳು ಮಾತ್ರ ಕಾನೂನುಗಳನ್ನು ಹೊಂದಿದ್ದು, ಶೇ 39ರಷ್ಟು ರಾಷ್ಟ್ರಗಳು ಮಾತ್ರ ರಾಷ್ಟ್ರೀಯ ನೀತಿಯನ್ನು ಹೊಂದಿವೆ ಎಂದು ಯುನೆಸ್ಕೊದ ‘ಗ್ಲೋಬಲ್ ಎಜುಕೇಷನ್ ಮಾನಿಟರಿಂಗ್’ನ ವರದಿ ತಿಳಿಸಿದೆ. ಲೈಂಗಿಕ ಶಿಕ್ಷಣವು ಶೇ 68 ದೇಶಗಳಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಹಾಗೂ ಶೇ 76ರಷ್ಟು ದೇಶಗಳಲ್ಲಿ ಪ್ರೌಢಶಿಕ್ಷಣದಲ್ಲಿ ಕಡ್ಡಾಯವಾಗಿದೆ ಎಂದೂ ವರದಿ ಹೇಳಿದೆ. ಪ್ರತಿ 10 ದೇಶಗಳ ಪೈಕಿ ಆರಕ್ಕೂ ಹೆಚ್ಚು ದೇಶಗಳಲ್ಲಿ ಹೆಣ್ಣು-ಗಂಡಿನ …
Read More »ತಂದೆಯಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದ: ನಟಿ ಖುಷ್ಬೂ
ಚೆನ್ನೈ: ನಟಿ ಹಾಗೂ ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗ ಮಾಡಿದ್ದಾರೆ. ‘ನಾನು ಎಂಟು ವರ್ಷದವಳಿದ್ದಾಗ ನನ್ನ ತಂದೆ ನನ್ನ ಮೇಲೆ ಲೈಂಗಿಕ ಶೋಷಣೆ ಮಾಡುತ್ತಿದ್ದರು’ ಎಂದು ಹೇಳಿದ್ದಾರೆ. ಪತ್ರಕರ್ತೆ ಬರ್ಕಾ ದತ್ ಅವರ ದಿ ಮೋಜೊ ಸ್ಟೋರಿಯ ‘ವಿ ದಿ ವುಮನ್’ ಸಂದರ್ಶನದಲ್ಲಿ ಖುಷ್ಬೂ ಈ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಖುಷ್ಬೂ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ …
Read More »ಮಾಡಾಳ್ ವಿರುದ್ಧ ಕ್ರಮಕ್ಕೆ ವರದಿ ಸಲ್ಲಿಕೆ: B,S.Y
ಕಲಬುರಗಿ: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ(ಕೆಎಸ್‌ಡಿಎಲ್) ಅಧ್ಯಕ್ಷರೂ ಆಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಕ್ರಮಕ್ಕೆ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು. ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಕ್ಷಮಿಸಲಾರದಂತಹ ಅಕ್ರಮ ಎಸಗಿ ತಪ್ಪು ಮಾಡಿದ್ದಾರೆ. ಹೀಗಾಗಿ ಅವರ …
Read More »26ರಂದು ದೇವೇಗೌಡ ರೋಡ್ ಶೋ: H,D,K,
ಬೆಂಗಳೂರು: ಜೆಡಿಎಸ್ ಹಮ್ಮಿಕೊಂಡಿರುವ ಪಂಚರತ್ನ ರಥಯಾತ್ರೆಯ ಸಮಾರೋಪ ಮಾರ್ಚ್ 26ರಂದು ನಡೆಯಲಿದ್ದು, ಆ ದಿನ ಕುಂಬಳಗೋಡಿನಿಂದ ಆರಂಭವಾಗುವ ರೋಡ್‌ಶೋದಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭಾಗವಹಿಸಲಿದ್ದಾರೆ. ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಅವರು ನಗರದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಕ್ಷೇತ್ರದ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಈ ವಿಷಯ ತಿಳಿಸಿದರು. ‘ಮಂಡ್ಯ ಮತ್ತು ಮೈಸೂರು ನಡುವಿನ ಸ್ಥಳವೊಂದರಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ. ಸಮಾರೋಪದ …
Read More »ಚುನಾವಣಾ ಆಯೋಗವು ಅಧಿಕಾರದಲ್ಲಿರುವ ‘ಗುಲಾಮ’; ಉದ್ಧವ್ ಠಾಕ್ರೆ ಟೀಕೆ
ಮುಂಬೈ: ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕಳೆದುಕೊಂಡು ಕೆರಳಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣಾ ಆಯೋಗವನ್ನು ಅಧಿಕಾರದಲ್ಲಿರುವವರ ‘ಗುಲಾಮ’ ಎಂದು ಕರೆದಿದ್ದಾರೆ. “ನೀವು (ಚುನಾವಣಾ ಆಯೋಗ) ನಮ್ಮಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಿತ್ತುಕೊಂಡಿದ್ದೀರಿ, ಆದರೆ ನೀವು ನನ್ನಿಂದ ಶಿವಸೇನೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ರತ್ನಗಿರಿ ಜಿಲ್ಲೆಯ ಖೇಡ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಉದ್ಧವ್ ಹೇಳಿದರು. ಭಾರತೀಯ ಜನತಾ ಪಕ್ಷವು …
Read More »
Laxmi News 24×7