Breaking News

ರಾಷ್ಟ್ರೀಯ

ಶಾಸಕರ ಆಪ್ತನ ಮಾತೋಶ್ರೀ ನಿಧನ ಇಂದು 10ಗಂಟೆಗೆ ಗೋಕಾಕ ನ ಭಗತ ಸಿಂಗ್ ಸರ್ಕಲ ನಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ

ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ನಿಧನಗುರುವಾರದಂದು ಮುಂ. ೧೦ ಗಂಟೆಗೆ ಅಂತ್ಯಕ್ರಿಯೆ. ಗೋಕಾಕ್- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ಗಂಗವ್ವ ಲಕ್ಷ್ಮಣ ಶೇಖರಗೋಳ (೮೨) ಅವರು ಬುಧವಾರ ದಿ. ೧.೩.೨೦೨೩ ರಂದು ಸಂಜೆ ೭.೪೫ ಗಂಟೆಗೆ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ. ಮೃತರ ಅಂತ್ಯಕ್ರಿಯೆಯು ನಾಳೆ …

Read More »

ಅಪ್ಪ ಜೈಲಿಗೆ ಹೋಗಿದ್ದ ಕರಾಳ ದಿನಗಳ ಪುಸ್ತಕ ಬಿಡುಗಡೆ: ಬಿಎಸ್‌ವೈ ಪುತ್ರಿ

ಶಿವಮೊಗ್ಗ : ‘ನಮ್ಮ ತಂದೆ (ಬಿ.ಎಸ್‌.ಯಡಿಯೂರಪ್ಪ) ಜೈಲಿಗೆ ಹೋಗಿದ್ದು ಕರಾಳ ದಿನಗಳು. ಅವರ ಕುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು ಮಾಡಿದ್ದರು ಎಂಬುದನ್ನು ಅವರು ಜೈಲಿನಲ್ಲಿದ್ದಾಗ ಡೈರಿ ಬರೆದಿಟ್ಟಿದ್ದಾರೆ. ಸಂದರ್ಭ ಬಂದಾಗ ಬಹಿರಂಗಪಡಿಸಲಾಗುವುದು’ ಎಂದು ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರಿ ಬಿ.ವೈ.ಅರುಣಾದೇವಿ ಹೇಳಿದರು. ಯಡಿಯೂರಪ್ಪ ಅವರ 80ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆ ಸಂದರ್ಭದಲ್ಲಿ ಅದೊಂದು ರಾಜಕೀಯ ಅಸಹ್ಯ ಅನ್ನಿಸಿತ್ತು. ಡೈರಿಯಲ್ಲಿ ಪ್ರತಿಯೊಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ತಮ್ಮ ವಿರುದ್ಧ …

Read More »

ಮೋದಿಗೆ ಮರಳಿ ನಮಸ್ಕರಿಸುವ ಸಂಸ್ಕೃತಿ ಗೊತ್ತಿಲ್ಲ: ಎಚ್‌.ಕೆ.ಪಾಟೀಲ ಕಿಡಿ

ರೋಣ (ಗದಗ ಜಿಲ್ಲೆ): ‘ಮರಳಿ ನಮಿಸುವ ಸಂಸ್ಕೃತಿ ಗೊತ್ತಿಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಕಾಂಗ್ರೆಸ್‌ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ತಿರುಗೇಟು ನೀಡಿದರು. ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಅವರಿಗೆ ಸ್ವಪಕ್ಷದಲ್ಲೇ ಗೌರವ ಸಿಗುತ್ತಿಲ್ಲ ಎಂದು ಹೇಳಿರುವ ಪ್ರಧಾನಿ ಮೋದಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾನಿ ಅವರು ಕೈ ಜೋಡಿಸಿ ನಿಂತಾಗ ಮೋದಿ ಅವರು ಮರಳಿ ನಮಸ್ಕಾರ ಮಾಡಲಿಲ್ಲ. ಈಗ ಅವರು …

Read More »

ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಉಪಾಧ್ಯಕ್ಷ ರಾಗಿದ್ದ ಭಾಸ್ಕರ್ ರಾವ್ ಬುಧವಾರ ಬಿಜೆಪಿ ಸೇರಿದರು.

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಉಪಾಧ್ಯಕ್ಷ ರಾಗಿದ್ದ ಭಾಸ್ಕರ್ ರಾವ್ ಬುಧವಾರ ಬಿಜೆಪಿ ಸೇರಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿ ಯಲ್ಲಿ, ಬಿಜೆಪಿ ಸೇರಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು, ಬಿಜೆಪಿ ಯುವ ಜನತೆಯ ಆಶಾ ಕಿರಣವಾಗಿದೆ ಎಂದರು.   ಈ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದಾಗ ಬಿಜೆಪಿಯ ಆರೋಪ ಮಾಡಿದ …

Read More »

ರಾಜ್ಯ ಸರ್ಕಾರಿ ನೌಕರರ ವೇತನ ಶೇ 17ರಷ್ಟು ಹೆಚ್ಚಳಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರವಾಗಿ ಶೇಕಡ 17ರಷ್ಟು ವೇತನ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ತಕ್ಷಣದಲ್ಲೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಳನೇ ವೇತನ ಆಯೋಗವನ್ನು ಈಗಾಗಲೇ ನೇಮಿಸಲಾಗಿದೆ. ಅವರಿಂದ ವರದಿ ಪಡೆದು ಶೀಘ್ರದಲ್ಲಿ ವೇತನ ಪರಿಷ್ಕರಣೆಗೆ ಪ್ರಯತ್ನ …

Read More »

ರಾಜ್ಯ ಸರ್ಕಾರಿ ನೌಕರರ ಮುಷ್ಕರ ವಾಪಸ್; ಸಿ.ಎಸ್.ಷಡಕ್ಷರಿ

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ನೌಕರರ ಮುಷ್ಕರ ವಾಪಸ್ ಪಡೆಯಲಾಗುವುದು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಎಸ್.ಷಡಕ್ಷರಿ, ರಾಜ್ಯ ಸರ್ಕಾರ ಎರಡು ಆದೇಶವನ್ನು ಹೊರಡಿಸಿದೆ. ಶೇ.17 ರಷ್ಟು ವೇತನ ಹೆಚ್ಚಳ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ -ಎನ್ ಪಿಎಸ್ ಬಗ್ಗೆ ಪರಿಶೀಲನೆ ಆದೇಶ ಮಾಡಿದೆ. ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಮಧ್ಯಂತರ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದ ಆದೇಶವನ್ನು ಸರ್ಕಾರಿ …

Read More »

ಮಾರ್ಚ್ 2ರಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಅರುಣ ಶಹಾಪುರ‌

ಬೆಳಗಾವಿ: ‘ಮಾರ್ಚ್‌ 2ರಿಂದ 20ರವರೆಗೆ ಕಿತ್ತೂರು ಕರ್ನಾಟಕ ಭಾಗದ 58 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆಯೋಜಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಾರ್ಚ್‌ 2ರಂದು ಮಧ್ಯಾಹ್ನ 12ಕ್ಕೆ ನಂದಗಡದಲ್ಲಿ ಇದಕ್ಕೆ ಚಾಲನೆ ನೀಡುವರು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ‌ ಅರುಣ ಶಹಾಪುರ‌ ಹೇಳಿದರು.   ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, …

Read More »

ಬಸವಕಲ್ಯಾಣದಲ್ಲಿ ಮಾರ್ಚ್‌ 4ರಿಂದ ಲಿಂಗಾಯತ ಮಹಾ ಅಧಿವೇಶನ: ಬಸವರಾಜ ರೊಟ್ಟಿ

ಬೆಳಗಾವಿ: ‘ಮಾರ್ಚ್‌ 4 ಮತ್ತು 5ರಂದು ಬಸವಕಲ್ಯಾಣದಲ್ಲಿ ಪ್ರಥಮ ರಾಷ್ಟ್ರೀಯ ಲಿಂಗಾಯತ ಮಹಾದಿವೇಶನ ನಡೆಸಲಾಗುತ್ತಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಳ್ಳಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.   ’12ನೇ ಶತಮಾನದಲ್ಲಿ ಬಸವಣ್ಣನವರಿಂದ ಅವೈದಿಕ ಲಿಂಗಾಯತ ಧರ್ಮ ಸ್ಥಾಪಿತವಾಗಿದ್ದು ಬಸವ ಕಲ್ಯಾಣದಲ್ಲಿ. ಅನುಭವ ಮಂಟಪ ಸ್ಥಾಪನೆಯಾದದ್ದು ಕೂಡ ಅಲ್ಲಿಯೇ. ಹೀಗಾಗಿ ಬಸವಕಲ್ಯಾಣವು ಲಿಂಗಾಯತರಿಗೆ ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಆ ಕಾರಣಕ್ಕಾಗಿ ಪ್ರಪ್ರಥಮ ರಾಷ್ಟ್ರೀಯ …

Read More »

ಕಾಂಗ್ರೆಸ್ ಮುಖಂಡನಿಗೆ ಚಾಕು ಇರಿತ, ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರು

ಕಾಗವಾಡ: ಕಾಂಗ್ರೆಸ್‌ನ ಕಾಗವಾಡ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪ್ರಶಾಂತ ಅಪರಾಜ ಅವರಿಗೆ ಐನಾಪುರ ಪಟ್ಟಣದಲ್ಲಿ ಸೋಮವಾರ ಸಂಜೆ ಅಪರಿಚಿತರು ಚಾಕು ಇರಿದು ಪರಾರಿಯಾಗಿದ್ದಾರೆ. ಅದೃಷ್ಟವಶಾತ್‌ ಪ್ರಶಾಂತ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಐನಾಪುರ ಹೊರವಲಯದ ಬೈಕ್‌ ಮೇಲೆ ಹೊರಟಾಗ ಅಡ್ಡಗಟ್ಟಿದ ಇಬ್ಬರು ಅಪರಿಚಿತ ಯುವಕರು, ಪ್ರಶಾಂತ ಅವರ ಕೈ- ಹೊಟ್ಟೆಗೆ ಚಾಕು ಇರಿದು ಪರಾರಿಯಾದರು. ಘಟನೆ ಕಾರಣ ಗೊತ್ತಾಗಿಲ್ಲ. ಅಲ್ಲದೇ ಪ್ರಶಾಂತ ಅವರು ಚಾಕು ಇರಿದವರನ್ನು ಗುರುತಿಸಿಲ್ಲ ಎಂದು ಪೊಲೀಸರು …

Read More »

ಪದ್ಮಶ್ರೀ ಸೀತವ್ವ ಜೋಡಟ್ಟಿ ಅವರಿಗೆ ‘ರಾಣಿ ಮಲ್ಲಮ್ಮ ಪ್ರಶಸ್ತಿ’ ಪ್ರದಾನ

(ಬೈಲಹೊಂಗಲ ): ‘ರಾಣಿ ಮಲ್ಲಮ್ಮನ ವೀರೋಚಿತ ಹೋರಾಟ, ಕೆಚ್ಚೆದೆಯ ಗುಣ ಆಧುನಿಕ ಮಹಿಳೆಯರಿಗೆ ದಾರಿದೀಪವಾಗಲಿ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೀತವ್ವ ಜೋಡಟ್ಟಿ ಆಶಿಸಿದರು. ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಮಂಗಳವಾರ ರಾತ್ರಿ ಆಯೋಜಿಸಿದ್ದ ‘ಬೆಳವಡಿ ಮಲ್ಲಮ್ಮನ ಉತ್ಸವ’ ಉದ್ಘಾಟನೆ ಸಮಾರಂಭದಲ್ಲಿ ‘ರಾಣಿ ಮಲ್ಲಮ್ಮ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.   ‘ವೀರ ವನಿತೆ ಬೆಳವಡಿ ಮಲ್ಲಮ್ಮನ ಸಾಹಸಮಯ ಇತಿಹಾಸ ಹಾಗೂ ಭಾಷಾ ಪ್ರೇಮ …

Read More »