ಬೆಂಗಳೂರು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಬೆಳಗಾವಿ ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಗ್ಗೆ ಬೆಂಗಳೂರಿನಿಂದ ಕಲಬುರ್ಗಿಗೆ ತೆರಳುವು ಬೊಮ್ಮಾಯಿ ಅಲ್ಲಿ ಪಿಎಂ ಮಿತ್ರ ಪಾರ್ಕ್ ಗೆ ಚಾಲನೆ ನೀಡುವರು. ನಂತರ ಮಧ್ಯಾಹ್ನ 1.30ಕ್ಕೆ ಬೆಳಗಾವಿಗೆ ಆಗಮಿಸಲಿರುವ ಅವರು, ಸುವರ್ಣ ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಜಗಜ್ಯೋತಿ ಬಸವೇಶ್ವರ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಪ್ರತಿಮೆಗಳನ್ನು ಅನಾವರಣಗೊಳಿಸಲಿದ್ದಾರೆ. ನಂತರ ಗೋಕಾಕಕ್ಕೆ ತೆರಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ …
Read More »ಲಂಚದ ಹಣಕ್ಕಾಗಿ ಜೋಡೆತ್ತು ತಂದ ರೈತ!
ಬಸವಕಲ್ಯಾಣ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿ ಬಿಲ್ ಪಾವತಿಗೆ 5 ಸಾವಿರ ರೂ. ಲಂಚ ಕೇಳಿದ್ದರಿಂದ ನೊಂದ ರೈತನೊಬ್ಬ ತನ್ನ ಜೋಡೆತ್ತುಗಳನ್ನು ತೆಗೆದುಕೊಂಡು ಬಿಲ್ ಮಂಜೂರು ಮಾಡುವಂತೆ ಮನವಿ ಮಾಡಿದ ಘಟನೆ ತಾ.ಪಂ.ನಲ್ಲಿ ನಡೆದಿದೆ. ಬಗದೂರಿ ಗ್ರಾಮದ ಪ್ರಶಾಂತ ಬಿರಾದಾರ್ ತನ್ನ ಜೋಡೆತ್ತುಗಳ ಸಹಿತ ತಾ.ಪಂ.ಗೆ ಆಗಮಿಸಿ, “ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ವರ್ಷ ನನ್ನ ಜಮೀನಿನಲ್ಲಿರುವ ಹಳ್ಳಕ್ಕೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ 1 ಲಕ್ಷ …
Read More »ಜನಾರ್ದನ ರೆಡ್ಡಿ ಪಕ್ಷದ ಚಿಹ್ನೆ ಪುಟ್ಬಾಲ್; ಪ್ರಣಾಳಿಕೆಯಲ್ಲಿ ಹತ್ತಾರು ಭರವಸೆ
ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಸೋಮವಾರ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಆಯೋಗ ನೀಡಿರುವ ಪುಟ್ಬಾಲ್ ಚಿಹ್ನೆಯನ್ನು ಅನಾವರಣ ಮಾಡಿದ ಅವರು, “ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು’ ಘೋಷಣೆಯಡಿ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು ರೈತರು, ಬಡವರ, ಮಧ್ಯಮವರ್ಗದವರಿಗೆ ಹಲವು ಭರವಸೆಗಳನ್ನು ನೀಡಲಾಗಿದೆ. ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿದ ರೈತರಿಗೆ ವಾರ್ಷಿಕ 15 ಸಾವಿರ ರೂ.. …
Read More »ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಗಡುವನ್ನು ವಿಸ್ತರಿಸಿಲ್ಲ
ನವದೆಹಲಿ: ಪ್ಯಾನ್ ಕಾರ್ಡ್-ಆಧಾರ್ ಕಾರ್ಡನ್ನು ಲಿಂಕ್ ಮಾಡುವ ಪ್ರಕ್ರಿಯೆಯ ಅಂತಿಮ ಗಡುವನ್ನು ಇನ್ನೂ ಒಂದು ವರ್ಷ ವಿಸ್ತರಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಆದಾಯ ತೆರಿಗೆ ಇಲಾಖೆ ವೆಬ್‌ಸೈಟ್‌ನಲ್ಲಿ ಮಾ.31ರೊಳಕ್ಕೆ ಈ ಪ್ರಕ್ರಿಯೆಯನ್ನು ಪೂರೈಸಲೇಬೇಕು ಎಂಬ ಸಂದೇಶವೇ ಇದೆ. ಹಾಗಾಗಿ ವದಂತಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಖಚಿತವಾಗಿದೆ. ಪ್ರಸ್ತುತ ಇದನ್ನು ಲಿಂಕ್ ಮಾಡಲು 1000 ರೂ.ಗಳನ್ನು ಪಾವತಿಸಬೇಕು. ಈ ಪ್ರಕ್ರಿಯೆಯಿಂದ 80 ವರ್ಷ ದಾಟಿದವರು, ಅನಿವಾಸಿ ಭಾರತೀಯರು ಸೇರಿ ಇನ್ನೂ …
Read More »ಜಾನಪದ ವಿದ್ವಾಂಸನಿಗೆ ಗ್ರಂಥ ಅರ್ಪಣೆ
ಮೂಡಲಗಿ: ‘ಘಟಪ್ರಭೆ ಧಬಧಬೆಗೆ ಜೀವಜಲ ದಡಗುಟ್ಟಿ ಹರಿದಿರುವಂತೆ, ಭರವಸೆಯ ತೂಗು ಸೇತುವೆ ದಾಟಿ’ ಕವಿ ಚನ್ನವೀರ ಕಣವಿ ಅವರು ಗೋಕಾಕದ ಜಾನಪದ ವಿದ್ವಾಂಸ ಸಿ.ಕೆ. ನಾವಲಗಿ ಅವರ ಕುರಿತು ಬರೆದಿರುವ ಸುನೀತದ ಸಾಲು ಇದು. ಈ ಸಾಲುಗಳಿಗೆ ಅರ್ಥ ಬರುವಂತೆ ಬಾಳಿದವರು ಈ ಸಾಹಿತಿ. ಸಿ.ಕೆ. ನಾವಲಗಿ ಅವರು ಮೂರೂವರೆ ದಶಕಗಳ ಅಧ್ಯಯನ, ಪರಿಶ್ರಮದ ಮುಪ್ಪರಿಗೊಂಡ ಪರಿಪಕ್ವತೆಯ ವ್ಯಕ್ತಿತ್ವ. ಓದು, ಬರವಣಿಗೆ, ಅಧ್ಯಾಪನಗಳೊಂದಿಗೆ ಜಾನಪದ ಸಾಹಿತ್ಯದಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದಾರೆ. …
Read More »ಹೆತ್ತ ತಂದೆ- ತಾಯಿಗಳನ್ನು ಗೌರವಿಸಬೇಕು. ತಂದೆ ತಾಯಿಗಳು ಮೊದಲ ಗುರು
ಹಂದಿಗುಂದ: ‘ಪ್ರತಿಯೊಬ್ಬರೂ ಹೆತ್ತ ತಂದೆ- ತಾಯಿಗಳನ್ನು ಗೌರವಿಸಬೇಕು. ತಂದೆ ತಾಯಿಗಳು ಮೊದಲ ಗುರುಗಳಾದರೆ ವಿದ್ಯೆ ಕಲಿಸುವ ಗುರುಗಳು ಪೂಜ್ಯನೀಯರು’ ಎಂದು ಮುಗಳಖೋಡ ಈಶ್ವರಲಿಂಗೇಶ್ವರ ದೇವಸ್ಥಾನ ಹಿರೇಮಠದ ಪ್ರಧಾನ ಅರ್ಚಕ ಸಚಿನ ಶಾಸ್ತ್ರಿ ಹೇಳಿದರು. ಇಲ್ಲಿನ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮಕ್ಕಳು ಪರೀಕ್ಷೆಗಳನ್ನು ಧೈರ್ಯದಿಂದ ಬರೆಯಬೇಕು. ಮೊಬೈಲ್ ದೂರವಿಟ್ಟು ಅಕ್ಷರಭ್ಯಾಸದ ಜೊತೆಗೆ ಸಂಸ್ಕಾರವಂತ ಜೀವನ …
Read More »ಬೊಮ್ಮಾಯಿ ಅವರ ಬಲಗೈ ಬಂಟ ಕಾಂಗ್ರೆಸ್ ಪಕ್ಷಕ್ಕೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಬಂಟನಂತೆ ಇದ್ದ ಶಿಗ್ಗಾಂವ್ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಚಿಂತಾಮಣಿ, ಕೆ ಆರ್ ಪೇಟೆ, ಶಿಗ್ಗಾವ್ ಹಾಗೂ ಶಿವಮೊಗ್ಗ ಕ್ಷೇತ್ರದ ಅನ್ಯ ಪಕ್ಷಗಳ ನಾಯಕರು ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ, ರೆಹಮಾನ್ ಖಾನ್ …
Read More »ಬಿಜೆಪಿ ಸಂಸದರಾಗಿದ್ದ ಪ್ರಬಲ ಪಂಚಮಸಾಲಿ ಮುಖಂಡ ಮರಳಿ ಕಾಂಗ್ರೆಸ್ಗೆ!
ಹಾವೇರಿ: ಮಾಜಿ ಸಂಸದ ಮಂಜುನಾಥ್ ಕುನ್ನೂರು ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಿದ್ದು ಕೆಪಿಸಿಸಿ ಅದ್ಯಕ್ಷ ಡಿಕೆಶಿ ಹಾಗೂ ಸಿದ್ದರಾಮಯ್ಯ ಭೇಟಿಗೆ ತೆರಳಿದ್ದಾರೆ. ಇವರು 1989 – 1994, 1994-1999 ಅವಧಿಯಲ್ಲಿ ಶಿಗ್ಗಾವಿ ಕ್ಷೇತ್ರದ ಶಾಸಕರಾಗಿದ್ದರು. ನಂತರ 2004ರಲ್ಲಿ ಧಾರವಾಡ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದರು. ಮುಂದೆ 2009ರಲ್ಲಿ ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಸಿ ಪ್ರಹ್ಲಾದ್ ಜೋಶಿ ವಿರುದ್ಧ ಸೋತಿದ್ದರು. ನಂತರ 2018ರಲ್ಲಿ ಮತ್ತೆ ಬಿಜೆಪಿ ಸೇರಿದ್ದ ಇವರು ಇದೀಗ ವಾಪಸ್ ಕಾಂಗ್ರೆಸ್ಗೆ …
Read More »ರಾಹುಲ್ ಗಾಂಧಿ’ಗೆ ಮತ್ತೊಂದು ಶಾಕ್ ; ‘ಸರ್ಕಾರಿ ಬಂಗಲೆ’ ಖಾಲಿ ಮಾಡುವಂತೆ ನೋಟೀಸ್
ನವದೆಹಲಿ : ಸರ್ಕಾರಿ ಬಂಗಲೆ ತೊರೆಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದ್ದು, ಸಂಸತ್ತಿನ ಸದಸ್ಯತ್ವದ ನಂತರ ಲೋಕಸಭೆಯ ಸದನ ಸಮಿತಿ ಈ ಸೂಚನೆ ನೀಡಿದೆ. ರಾಹುಲ್ ಗಾಂಧಿ 12 ತುಘಲಕ್ ಲೇನ್‌ನಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಏಪ್ರಿಲ್ 22 ರೊಳಗೆ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನು ಖಾಲಿ ಮಾಡಬೇಕಾಗುತ್ತದೆ. ನೋಟಿಸ್ ಪ್ರಕಾರ, ಅನರ್ಹಗೊಂಡ ಒಂದು ತಿಂಗಳೊಳಗೆ ರಾಹುಲ್ ಗಾಂಧಿ ತಮ್ಮ ಅಧಿಕೃತ ನಿವಾಸವನ್ನ ಖಾಲಿ ಮಾಡಬೇಕು. …
Read More »ಕರ್ನಾಟಕ ವಿಧಾನಸಭೆ ಚುನಾವಣೆ: ಅಭ್ಯರ್ಥಿಗಳ 2ನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಕಸರತ್ತು!
224 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವ ಕರ್ನಾಟಕ ಕಾಂಗ್ರೆಸ್ ಘಟಕ, ಸೋಮವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಲು ಸಜ್ಜಾಗಿದೆ. ಬೆಂಗಳೂರು: 224 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವ ಕರ್ನಾಟಕ ಕಾಂಗ್ರೆಸ್ ಘಟಕ, ಸೋಮವಾರ ಇಲ್ಲಿನ ಕೇಂದ್ರ ಕಚೇರಿಯಲ್ಲಿ ನಡೆಯುವ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಅಂತಿಮಗೊಳಿಸಲು …
Read More »
Laxmi News 24×7