Breaking News

ರಾಷ್ಟ್ರೀಯ

ಪರಿಷತ್ ನಲ್ಲಿ ಬಹುಮತ ಕುಸಿತದ ಚಿಂತೆಯಲ್ಲಿ ಬಿಜೆಪಿ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ ಗೊಂದಲದಲ್ಲಿ ಅತೃಪ್ತಿಯ ಭುಗಿಲೆಬ್ಬಿಸಿಕೊಂಡಿರುವ ಬಿಜೆಪಿ ಇದೀಗ ವಿಧಾನ ಪರಿಷತ್ ನಲ್ಲಿ ಬಹುಮತ ಕಳೆದುಕೊಳ್ಳುವ ಆತಂಕದಲ್ಲಿ ಮುಳುಗಿದೆ. 75 ಸದ್ಯಬಲ ಹೊಂದಿರುವ ವಿಧಾನ ಪರಿಷತ್ ನಲ್ಲಿ ಬಹುಮತಕ್ಕೆ 38 ಸ್ಥಾನಗಳನ್ನು ಹೊಂದುವುದು ಅಗತ್ಯ. ಪ್ರಸ್ತುತ ಕಾಂಗ್ರೆಸ್ 26, ಜೆಡಿಎಸ್ 8 ಸದಸ್ಯರನ್ನು ಹೊಂದಿದ್ದು ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಒಬ್ಬರು ಸಭಾಪತಿ ಇದ್ದು, ಮೂರು ಸ್ಥಾನಗಳು ಖಾಲಿ ಇವೆ. ಹಲವು ವರ್ಷಗಳ ನಂತರ 39 ಸದಸ್ಯಬಲದೊಂದಿಗೆ ಬಹುಮತ …

Read More »

16, 17ರಂದು ಬೆಳಗಾವಿಯಲ್ಲಿ 13 ನೇ ಅಖಿಲ ಕರ್ನಾಟಕ ಗಮಕ ಕಲಾ ಸಮ್ಮೇಳನ

ಲೇಖನ: ಕಲಾನಿಧಿ ” ಗಮಕ” ಕರ್ನಾಟಕದ ಅತ್ಯಂತ ಪ್ರಾಚೀನ ಹೆಮ್ಮೆಯ ಕಲೆ. ಸಾಹಿತ್ಯ ಮತ್ತು ಸಂಗೀತ ಎರಡೂ ಸಮ್ಮಿಳಿಸಿದ ಸುಂದರ ಕಲೆ. ಕನ್ನಡದ ಶ್ರೇಷ್ಠ ಕಾವ್ಯಗಳನ್ನು ಕನ್ನಡಿಗರ ಮನೆಮನಕ್ಕೆ ತಲುಪಿಸುವ ಏಕೈಕ ಕಲೆ. ಪಂಪರನ್ನರಿಂದ ಕುಮಾರವ್ಯಾಸ, ಲಕ್ಷ್ಮೀಶರತನಕದ ಕವಿಕಾವ್ಯ ನಮ್ಮ ಕನ್ನಡ ನೆಲದ ಭವ್ಯ ಸಾಹಿತ್ಯ ಪರಂಪರೆಯ ಪ್ರತೀಕ. ಗಮಕದಲ್ಲಿ ಕಾವ್ಯಕ್ಕೆ ಹೆಚ್ಚಿನ ಮಹತ್ವ. ಸಂಗೀತದ ರಾಗಗಳನ್ನು ಬಳಸಿ ಕಾವ್ಯದ ಸೊಗಸನ್ನು , ಭಾಷೆಯ ಸೊಬಗನ್ನು, ಅರ್ಥದ ಸೊಗಡನ್ನು ಕೇಳುಗರಿಗೆ …

Read More »

ನಾಳೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತ

ಬೆಳಗಾವಿ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಿಂದ ಕಣಬರ್ಗಿ 110 ಕೆವಿ ಉಪಕೇಂದ್ರದಲ್ಲಿ ಮೊದಲ ತ್ರೈಮಾಸಿಕ ಹಾಗೂ ಇತರ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಏ.16ರಂದು ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಾದ ಮುಚ್ಚಂಡಿ, ಅಷ್ಟೆ, ಕ್ಯಾಂಪ್‌ಬೆಲ್, ಮಾರಿಹಾಳ, ಕರಡಿಗುದ್ದಿ, ಪಂತಬಾಳೇಕುಂದ್ರಿ, ಬಾಳೇಕುಂದ್ರಿ, ಹೊನ್ನಿಹಾಳ, ಮಾವಿನಕಟ್ಟಿ, ತಾರಿಹಾಳ, ಚಂದನ ಹೊಸೂರ, ಎಂ.ಇ.ಎಸ್, ಸಾಂಬ್ರಾ, ಮುತಗಾ, ಸುಳೇಭಾವಿ, ಪಂತ ನಗರ, ಮೋದಗಾ, ಯದ್ದಲಭಾವಿಹಟ್ಟಿ, ಖನಗಾಂವ, ಚಂದೂರ, ಚಂದಗಡ, …

Read More »

ಬಿಜೆಪಿ, ಜೆಡಿಎಸ್ ಪಕ್ಷದಿಂದ ಇನ್ನೂ 25 ನಾಯಕರು ಕಾಂಗ್ರೆಸ್ ಸೇರಲಿದ್ದಾರೆ – ಡಿ.ಕೆ ಶಿ.

ಬೆಂಗಳೂರು ಗ್ರಾಮಾಂತರ: ಲಕ್ಷ್ಮಣ್ ಸವದಿ ಸೇರಿದಂತೆ ಬಿಜೆಪಿ, ಜೆಡಿಎಸ್ ಪಕ್ಷದಿಂದ ಇನ್ನೂ 25 ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಹಲವು ನಾಯಕರು ಸೇರ್ಪಡೆಗೊಳ್ಳುವ ಒಲವು ತೋರಿಸಿದ್ದಾರೆ. ಶೀಘ್ರವೇ ಅವರೆಲ್ಲಾ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು. ಮಾಜಿ ಉಪಮುಖ್ಯಮಂತ್ರಿ, ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ ಸವದಿ …

Read More »

ಕಲಬುರಗಿಯಲ್ಲಿ ತಡರಾತ್ರಿ ಕಾರು ಅಪಘಾತ : ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಗೆ ಗಂಭೀರ ಗಾಯ

ಕಲಬುರಗಿ : ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿದ್ದ ಕಾರು ಅಪಘಾತವಾಗಿದ್ದು, ಅಪಘಾತದಲ್ಲಿ ಬಾಬುರಾವ್ ಚಿಂಚನಸೂರು ಗಾಯಗೊಂಡಿರುವ ಘಟನೆ ನಡೆದಿದೆ. ತಡರಾತ್ರಿ 12.30 ರ ಸುಮಾರಿಗೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಬಾಬುರಾವ್ ಚಿಂಚನಸೂರು ಕಾಳು, ಮುಖಕ್ಕೆ ಗಾಯವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಯನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾದಗಿರಿಯಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತವಾಗಿದೆ. ನಿದ್ದೆ ಮಂಪರಿನಲ್ಲಿದ್ದ ಕಾರು …

Read More »

ಹೃದಯಾಘಾತದಿಂದ ತಡರಾತ್ರಿ ಕಾಂಗ್ರೆಸ್ ನ ಮಾಜಿ ಶಾಸಕ `ವೆಂಕಟಸ್ವಾಮಿ’ ನಿಧನ|

ಬೆಂಗಳೂರು : ದೇವನಹಳ್ಳಿ ಕ್ಷೇತ್ರದ ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟಸ್ವಾಮಿ (53) ಅವರು ತೀವ್ರ ಹೃದಯಾಘಾತದಿಂದ ತಡರಾತ್ರಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಾಂಗ್ರೆಸ್ ನ ಮಾಜಿ ಶಾಸಕ ವೆಂಕಟಸ್ವಾಮಿ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧರನಾಗಿದ್ದಾರೆ. ವೆಂಕಟಸ್ವಾಮಿಗೆ ಕಳೆದ 1 ತಿಂಗಳಲ್ಲಿ ಮೂರು ಬಾರಿ ಎದೆನೋವು ಕಾಣಿಸಿಕೊಂಡಿತ್ತು. ಎರಡು ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಕಾಂಗ್ರೆಸ್ …

Read More »

ಕರ್ನಾಟಕ ವಿಧಾನಸಭೆ ಚುನಾವಣೆ : 50 ಸಾವಿರ ರೂ. ಮೀರಿದ ಹಣ ಜೊತೆ ತೆಗೆದುಕೊಂಡು ಹೋಗುವಂತಿಲ್ಲ!

ಕಲಬುರಗಿ : ವಿಧಾನಸಭೆ‌ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾವುದೆ ದಾಖಲೆ, ವಿವರಣೆ ಇಲ್ಲದೆ ಯಾವುದೇ ವ್ಯಕ್ತಿ 50,000 ರೂ. ಕ್ಕಿಂತ ಹೆಚ್ಚಿನ ಹಣವನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ‌ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.   ಇನ್ನು ದಾಖಲೆ‌ ಇಲ್ಲದ 10,000 ರೂ. ಮೀರಿದ ಯಾವುದೇ ಸರಕುಗಳನ್ನು ಸಂಗ್ರಹಣೆ ಮತ್ತು ಬೃಹತ್ ಪ್ರಮಾಣದಲ್ಲಿ ಸಹ ಸಾಗಿಸುವಂತಿಲ್ಲ. ಈ ಆದೇಶ‌ ಚುನಾವಣೆ‌ ಮುಕ್ತಾಯದ …

Read More »

ಅತಿಥಿ ಉಪನ್ಯಾಸಕರೊಬ್ಬರ ಬರ್ಬರವಾಗಿ ಹತ್ಯೆ,35 ಬಾರಿ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಕಲಬುರಗಿ : ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಅತಿಥಿ ಉಪನ್ಯಾಸಕ ರವಿ ಪಟ್ಟೇದಾರ ಎಂಬುವವರನ್ನು ನಗರದ ಹೊರವಲಯದ ಕುಸನೂರು ಬಳಿ ದುಷ್ಕರ್ಮಿಗಳು 35 ಬಾರಿ ಚಾಕುವಿನಿಂದ ಇರಿದು ಕೊಂದಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದ ರವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ರವಿ ಅಣ್ಣನ ಹೆಂಡತಿ ಕಡೆಯವರು ಡಿಕ್ಕಿ ಹೊಡೆಸಿ ಕೆಳಕ್ಕೆ ಕೆಡವಿ ಚಾಕುವಿನಿಂದ …

Read More »

ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನ: ಪಕ್ಷ ಬಿಡಲು ಮುಂದಾದ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ

ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನಗೊಳ್ಳಲಿದೆ. ಬಿಜೆಪಿಗೆ ಗುಡ್‌ಬೈ ಹೇಳಲು ರಾಮದುರ್ಗ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ ಮುಂದಾಗಿದ್ದಾರೆ ಒಂಡಾಯದ ಕಾವು ಹೆಚ್ಚಾಗಿದೆ(Karnataka Assembly Elections 2023) . ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯ ಸಾರಿದ್ದರು. ಆದ್ರೆ ಈಗ ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನಗೊಳ್ಳಲಿದೆ ಎಂಬ ಸುದ್ದಿ …

Read More »

ಕರ್ನಾಟಕದಲ್ಲಿ ಕೊರೊನಾ ಹೆಚ್ಚಳ : ಒಂದೇ ದಿನ 498 ಕೇಸ್ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕಿನ ( Coronavirus ) ಸಂಖ್ಯೆ ಏರಿಕೆ ಕಂಡಿದೆ. ನಿನ್ನೆ ಒಂದೇ ದಿನ ಹೊಸದಾಗಿ 498 ಮಂದಿಗೆ ಕೋವಿಡ್ ಪಾಸಿಟಿವ್ ( Covid19 Positive ) ಎಂಬುದಾಗಿ ವರದಿಯಿಂದ ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ನಿನ್ನೆ 15,036 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 498 ಜನರಿಗೆ ಪಾಸಿಟಿವ್ ಎಂಬುದಾಗಿ ವರದಿಯಲ್ಲಿ …

Read More »