ಕಾರವಾರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಬಡಿದು ಹೆಲಿಕಾಪ್ಟರ್ ಗಾಜು ಪುಡಿ ಪುಡಿಯಾಗಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ಡಿ.ಕೆ.ಶಿವಕುಮಾರ್ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದ ಹೆಲಿಪಾಡ್ ನ ಪಕ್ಕದಲ್ಲಿಯೇ ಬೆಂಕಿ ಅವಘಡ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿಯ ರಾಮತೀರ್ಥ ಬಳಿ ನಡೆದಿದೆ. ಡಿ.ಕೆ.ಶಿವಕುಮಾರ್ ಅವರು ಹೊನ್ನಾವರ ಬಳಿಯ ರಾಮತೀರ್ಥ ಹೆಲಿಪ್ಯಾಡ್ ಗೆ ಆಗಮಿಸಿದ್ದು, ಹೆಲಿಕಾಪ್ಟರ್ ನಿಲ್ಲಿಸಿದ್ದ ಜಾಗದ ಪಕ್ಕದಲ್ಲಿಯೇ ಬೆಂಕಿ …
Read More »ತಂದೆಯ ಜಮೀನು ಅಡವಿಟ್ಟು ವಿವಾಹ ಮಾಡಿದ್ರೂ ಮಗಳಿಗೆ ಆಸ್ತಿಯಲ್ಲಿ ಸಮಾನ ಹಕ್ಕಿದೆ: ಹೈಕೋರ್ಟ್
ಬೆಂಗಳೂರು : ತಂಗಿಯ ವಿವಾಹಕ್ಕಾಗಿ ಜಮೀನು ಅಡಮಾನ ಇಟ್ಟು ಪಡೆದ ಸಾಲ ಈವರೆಗೂ ತೀರಿಲ್ಲ. ಹೀಗಾಗಿ ತಂದೆಯ ಆಸ್ತಿಯಲ್ಲಿ ಸಹೋದರಿಗೆ ಆಸ್ತಿಯಲ್ಲಿ ಭಾಗ ಕೇಳುವ ಹಕ್ಕಿಲ್ಲ ಎಂಬುದಾಗಿ ಸಹೋದರನ ವಾದ ತಿರಸ್ಕರಿಸಿರುವ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕಿದೆ ಎಂದು ತಿಳಿಸಿದೆ. ತುಮಕೂರು ಜಿಲ್ಲೆಯ ಯಲ್ಲಾಪುರ ಗ್ರಾಮದ ನಿವಾಸಿಗಳಾದ ವೆಂಕಟೇಶ ಮತ್ತು ಅವರ ತಾಯಿ ವೆಂಕಟಲಕ್ಷ್ಮಮ್ಮ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ …
Read More »10 ಸಾವಿರ ರೂಪಾಯಿಗಾಗಿ ಜಗಳ.. ಹೈಕೋರ್ಟ್ ಬಳಿ ಬರ್ಬರ ಕೊಲೆ
ಹೈದರಾಬಾದ್: ತೆಲಂಗಾಣ ಹೈಕೋರ್ಟ್ ಬಳಿ ಭೀಕರ ಹತ್ಯೆಯೊಂದು ನಡೆದಿದೆ. ಹೈಕೋರ್ಟ್‌ನ ಗೇಟ್ ಸಂಖ್ಯೆ 6 ರಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಇರಿದು ಕೊಂದಿದ್ದಾರೆ. ಜನರು ನೋಡುತ್ತಿರುವಾಗಲೇ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ. 10 ಸಾವಿರ ರೂಪಾಯಿಗೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆಯಂತೆ. ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ …
Read More »ಕಾಂಗ್ರೆಸ್ ಪ್ರಣಾಳಿಕೆ ಸುಟ್ಟು ಪ್ರತಿಭಟನೆ ನಡೆಸಿದ ಬಜರಂಗದಳ ಪದಾಧಿಕಾರಿಗಳು
ದೊಡ್ಡಬಳ್ಳಾಪುರ: ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಬುಧವಾರ ಬಜರಂಗದಳ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸುಡುವ ಮೂಲಕ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳದ ಕೋಲಾರ ವಿಭಾಗದ ಸಂಯೋಜಕ ನರೇಶ್ ರಡ್ಡಿ, ಹಿಂದೂಗಳ ಹಾಗೂ ಹಿಂದೂ ಧರ್ಮದ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಬಜರಂಗದಳವನ್ನು ನಿಷೇಧ ಮಾಡುವ ಕೆಲಸಕ್ಕೆ ಮುಂದಾದರೆ ಕಾಂಗ್ರೆಸ್ ನಿಷೇದಿಸುವ ಕೆಲಸಕ್ಕೆ ನಾವು ಮುಂದಾಗುತ್ತೇವೆ. ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ …
Read More »ಮಹಿಳಾ ಮತದಾರರ ಮತದಾನ ಪ್ರಮಾಣ ಹೆಚ್ಚಳಕ್ಕೆ ‘ಸಖಿ ಪಿಂಕ್ ಬೂತ್’
ವಿಜಯಪುರ(ದೇವನಹಳ್ಳಿ): ಮಹಿಳೆಯರಲ್ಲಿ ಮತದಾನ ಜಾಗೃತಿ ಮತ್ತು ಮಹಿಳಾ ಮತದಾನ ಪ್ರಮಾಣ ಹೆಚ್ಚಿಸಲು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ‘ಸಖಿ ಪಿಂಕ್ ಬೂತ್’ (ಗುಲಾಬಿ ಬಣ್ಣದ ಮತಗಟ್ಟೆ) ತೆರೆಯಲು ಭಾರತೀಯ ಚುನಾವಣೆ ಆಯೋಗ ನಿರ್ಧರಿಸಿರುವ ಹಿನ್ನೆಲೆ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ‘ಪಿಂಕ್ ಬೂತ್’ ತೆರೆಯಲಾಗಿದೆ. ಇದರ ಜೊತೆಯಲ್ಲಿ ಯತನಿಕ್ ಮತಗಟ್ಟೆ, ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಪಿಂಕ್ ಬೂತ್ ಹೊರಗೆ ಮಹಿಳೆಯರ ಮನಸ್ಸಿಗೆ ಮುದ ನೀಡುವಂತಹ, ಅವರನ್ನು ಮತಗಟ್ಟೆಗೆ ಆಹ್ವಾನಿಸುವಂತಹ ಚಿತ್ತಾಕರ್ಷಕವಾದ ಚಿತ್ರಗಳನ್ನು …
Read More »ಎಂಇಎಸ್ ವಿರುದ್ಧ ಪ್ರಚಾರ: ಸಂಜಯ್ ರಾವುತ್ ಆಕ್ಷೇಪ
ಬೆಳಗಾವಿ: ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯಿಂದ ಕಣಕ್ಕಿಳಿದ ಅಭ್ಯರ್ಥಿಗಳ ವಿರುದ್ಧ ಮಹಾರಾಷ್ಟ್ರದ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪ್ರಚಾರ ಮಾಡುತ್ತಿರುವುದಕ್ಕೆ ಶಿವಸೇನಾ(ಉದ್ಧವ್ ಠಾಕ್ರೆ ಬಣ) ಮುಖ್ಯಸ್ಥ ಸಂಜಯ್ ರಾವುತ್ ಆಕ್ಷೇಪ ವ್ಯಕ್ತಪಡಿಸಿದರು. ಬೆಳಗಾವಿ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ವಡಗಾವಿಯಲ್ಲಿ ಬುಧವಾರ ನಡೆದ ಎಂಇಎಸ್ ಅಭ್ಯರ್ಥಿ ರಮಾಕಾಂತ್ ಕೊಂಡೂಸ್ಕರ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಗಡಿಭಾಗದ ಮರಾಠಿ ಭಾಷಿಕರು ತಮ್ಮನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಕಳೆದ 60 …
Read More »ಸಂದರ್ಶನ | ವೃದ್ಧಿಯೇ ನನ್ನ ಗೆಲುವಿಗೆ ಸಾಧನ : ಬಾಲಚಂದ್ರ ಜಾರಕಿಹೊಳಿ
ಯಾಾವ ಅಂಶ ಇಟ್ಟುಕೊಂಡು ಮತ ಕೇಳುತ್ತಿದ್ದೀರಿ? ಸತತ ಐದು ಚುನಾವಣೆಗಳಲ್ಲಿ ನಾನು ಗೆದ್ದಿದ್ದೇನೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವುಗಳನ್ನೇ ಮುಂದಿಟ್ಟುಕೊಂಡು ನಾನು ಹಾಗೂ ಪಕ್ಷದ ಬೆಂಬಲಿಗರು ಮತಯಾಚಿಸುತ್ತಿದ್ದೇವೆ. lಈ ಬಾರಿಯೂ ಗೆಲ್ಲುತ್ತೇನೆ ಎಂಬ ವಿಶ್ವಾಸ ಮೂಡಿದೆಯೇ? ವಿಶ್ವಾಸ ಮೂಡಲು ಕಾರಣವೇನು? ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು, ಕ್ಷೇತ್ರದಲ್ಲಿ ವಿವಿಧ ಕಾಮಗಾರಿ ಕೈಗೊಂಡಿದ್ದೇನೆ. ಪ್ರತಿ ಸಮುದಾಯದ ಶೇ 80ರಷ್ಟು ಮತದಾರರು ನನ್ನೊಂದಿಗೆ ಇದ್ದಾರೆ. ನಾನು ಅವರ …
Read More »ಬಿಜೆಪಿ ಹಾಗೂ ಕಾಂಗ್ರೆಸ್ ನವರು ಜನರ ಹಣ ತಿಂದು ಅದೇ ಹಣದಲ್ಲಿ ಚುನಾವಣೆಯಲ್ಲಿ ಹಂಚಲು ಮುಂದಾಗಿದ್ದಾರೆ
ರಾಯಬಾಗ: “ಬಿಜೆಪಿ ಹಾಗೂ ಕಾಂಗ್ರೆಸ್ ನವರು ಜನರ ಹಣ ತಿಂದು ಅದೇ ಹಣದಲ್ಲಿ ಚುನಾವಣೆಯಲ್ಲಿ ಹಂಚಲು ಮುಂದಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮೀ ಅಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಬಾಗ ಪಟ್ಟಣದಲ್ಲಿ ರಾಯಬಾಗ, ಕುಡಚಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿ, “ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಬಡತನ ಹೋಗಲಾಡಿಸಲು ಆಗಿಲ್ಲ. ಹಣ ನೀಡಿ ಚುನಾವಣೆ ಮಾತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಲು ನಾನು ಬಂದಿದ್ದೇನೆ. ಜನರು ನಿರಾಳವಾಗಿ …
Read More »ಚುನಾವಣೆ ಹೊಸ್ತಿಲಲ್ಲೇ ಬೆಂಗಳೂರಿನಲ್ಲಿ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರು ಪೊಲೀಸ್ ವಶಕ್ಕೆ
ವಿಧಾನಸಭೆ ಚುನಾವಣೆ(Karnataka Assembly Elections 2023)ಗೆ ಇನ್ನೇನು ಆರು ದಿನಗಳು ಬಾಕಿಯಿರುವಾಗಲೇ ಇದೀಗ ವೋಟರ್ ಐಡಿ ಸಂಗ್ರಹಿಸುತ್ತಿದ್ದ ನಾಲ್ವರನ್ನ ಫ್ಲೈಯಿಂಗ್ ಸ್ಕ್ವಾಡ್, ಭಾರತಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೌದು ಶಿವಾಜಿನಗರ ಕ್ಷೇತ್ರದಲ್ಲಿ ಮತದಾರರ ಬಳಿ ಹೋಗಿ ನಿಮ್ಮ ಒಂದು ವೋಟರ್ ಐಡಿಗೆ 2 ಸಾವಿರ ರೂ. ಹಣ ಕೊಡುತ್ತೆವೆ ಎಂದು ಹೇಳಿ ವೋಟರ್ ಐಡಿ ಸಂಗ್ರಹಿಸುತ್ತಿದ್ದರು. ಈ ಸಂಬಂಧ ಶಿವಾಜಿನಗರ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದು, ದೂರಿನ ಮೇರೆಗೆ ನಾಲ್ವರನ್ನ ವಶಕ್ಕೆ …
Read More »ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೊಪ್ಪಳ ಜಿಲ್ಲಾಧಿಕಾರಿ ಷೋಕಾಸ್ ನೋಟಿಸ್ ನೀಡಿದ್ದಾರೆ.
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅವಹೇಳನಕಾರಿ ಮತ್ತು ನಿಂದನಾತ್ಮಕವಾಗಿ ಹೇಳಿಕೆ ನೀಡಿದ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಸಹ ಆದ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದ್ದು, ಇಬ್ಬರಿಗೂ ಷೋಕಾಸ್ ನೋಟಿಸ್ ಜಾರಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕಿಸಿದ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ …
Read More »