ಬೆಳಗಾವಿ: ಜಿಲ್ಲಾ ವೆಚ್ಚ ವೀಕ್ಷಣಾ ನೋಡಲ್ ಅಧಿಕಾರಿ ಪರಶುರಾಮ ದುಡಗುಂಟಿ ಇಂದು ಬೆಳಗಾವಿ ಉತ್ತರ ಕ್ಷೇತ್ರ ಹಾಗೂ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ, ಅರಳಿಕಟ್ಟಿ, ಹತ್ತರಗಿ ಹಾಗೂ ಬಾಚಿ ಅಂತರರಾಜ್ಯ ಚೆಕ್ ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತದಾನಕ್ಕೆ ಇನ್ನೇನು ನಾಲ್ಕು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ವಾಹನಗಳ ತಪಾಸಣೆ ತೀವ್ರಗೊಳಿಸುವಂತೆ ಚೆಕ್ ಪೋಸ್ಟ ಸಿಬ್ಬಂದಿಗಳಿಗೆ ನಿರ್ದೇಶಿಸಿದರು. ತಪಾಸಣೆ ಪರಿಣಾಮಕಾರಿ ಆಗಲು ಹೆಚ್ಚುವರಿ ತಪಾಸಣಾ ಅಧಿಕಾರಿಗಳು ಮತ್ತು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸಲು ಜಿಲ್ಲಾಧಿಕಾರಿಗಳಿಗೆ …
Read More »ಹಾಡಹಗಲೇ ಕಾರ್ಪೊರೇಟರ್ ಪತಿಯನ್ನು ಗುಂಡಿಟ್ಟು ಹತ್ಯೆ
ವಿಜಯಪುರ: ವಿಧಾನಸಭಾ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯಿರುವಾಗಲೇ ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆದಿದ್ದು, ಮಹಿಳಾ ಕಾರ್ಪೊರೇಟರ್ ಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ನಡೆದಿದೆ. ಹೈದರ್ ಅಲಿ ನದಾಫ್ ಗುಂಡಿನ ದಾಳಿಗೆ ಬಲಿಯಾದವರು. ಹೈದರ್ ವಾರ್ಡ್ ನಂಬರ್ 19ರ ಪಕ್ಷೇತರ ಪಾಲಿಕೆ ಸದಸ್ಯೆ ನತಾಶ್ ಅವರ ಪತಿ ಎಂದು ತಿಳಿದುಬಂದಿದೆ. ಹೈದರ್ ಅಲಿ ನದಾಫ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಲ್ಲಿ ಬಿದ್ದಿದ್ದ …
Read More »ಎಂಇಎಸ್ ಕಿಡಿಗೇಡಿಗಳ ಸಂಘಟನೆಎಂದ ಮುಖ್ಯಮಂತ್ರಿ ಬೊಮ್ಮಾಯಿ
ಹುಬ್ಬಳ್ಳಿ: ಎಂಇಎಸ್ ಕಿಡಿಗೇಡಿಗಳ ಸಂಘಟನೆ. ನಾವು ಅವರನ್ನು ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಚುನಾವಣೆ ವೇಳೆ ಎಮ್‌ಇಎಸ್‌ನವರು ಜನರ ಮನಸ್ಸನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ. ಬೆಳಗಾವಿ ಜನರಿಗೆ ಇದೆಲ್ಲಾ ಗೊತ್ತಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆ ಎಂದರು. ಜನ ತೀರ್ಮಾನ ತೆಗೆದುಕೊಂಡು ಎಮ್‌ಇಎಸ್‌ಅನ್ನು ಐದು ವರ್ಷ ಮನೆಗೆ ಕಳುಹಿಸುತ್ತಾರೆ ಎಂದರು. ನಮ್ಮ ಪ್ರಧಾನಿ ಕಾಂಗ್ರೆಸ್‌ನ ಪ್ರಧಾನಿಗಳಂತೆ ಇರಬೇಕಿಲ್ಲ ನಮ್ಮ ಪ್ರಧಾನಿ ಕಾಂಗ್ರೆಸ್‌ನ …
Read More »ಶಿವಸೇನಾ ಜತೆಗಿನ ಮೈತ್ರಿ ಮಹಾರಾಷ್ಟ್ರಕ್ಕೆ ಸೀಮಿತ: ಅಶೋಕ ಚವ್ಹಾಣ
ಬೆಳಗಾವಿ: ‘ಶಿವಸೇನಾ(ಉದ್ಧವ್ ಠಾಕ್ರೆ ಬಣ) ಜತೆಗಿನ ಮೈತ್ರಿ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತ. ರಾಜ್ಯದ ಹೊರಗೆ ನಾವು ಯಾವುದೇ ಮೈತ್ರಿ ಮಾಡಿಕೊಂಡಿಲ್ಲ’ ಎಂದು ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರೂ ಆಗಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ ಹೇಳಿದರು. ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದೇವೆ. ಮತಗಳ ವಿಭಜನೆಯಾಗಿ ಬಿಜೆಪಿಗೆ ಲಾಭವಾಗದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಸೇರಿದಂತೆ ಜಾತ್ಯತೀತ ಶಕ್ತಿಗಳು ನೋಡಿಕೊಳ್ಳಬೇಕು’ ಎಂದು ಹೇಳಿದರು. …
Read More »ಬುದ್ಧ ಪೂರ್ಣಿಮೆ: ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣ ಜೀವನ ನಡೆಸಿ- ದಲೈ ಲಾಮಾ
ಬೌದ್ಧ ಧರ್ಮದ ಶ್ರೇಷ್ಠ ಧರ್ಮಗುರು ದಲೈ ಲಾಮಾ ಅವರು ಜಗತ್ತಿನಾದ್ಯಂತ ಇರುವ ಬೌದ್ಧ ಅನುಯಾಯಿಗಳಿಗೆ ಬುದ್ಧ ಪೂರ್ಣಿಮೆಯ ಶುಭಾಶಯ ತಿಳಿಸಿದ್ದಾರೆ. ಭಗವಾನ್ ಗೌತಮ ಬುದ್ಧ ಹುಟ್ಟಿದ, ಜ್ಞಾನೋದಯವಾದ ಹಾಗೂ ನಿರ್ವಾಣ ಹೊಂದಿದ ದಿನವನ್ನು ಭಾರತಾದ್ಯಂತ ಬುದ್ಧ ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಬೌದ್ಧ ಧರ್ಮದ ಧರ್ಮಗುರು ದಲೈ ಲಾಮಾ ಅವರು ವಿಶ್ವಾದ್ಯಂತ ಇರುವ ತಮ್ಮ ಅನುಯಾಯಿಗಳಿಗೆ “ಇತರರ ಕಲ್ಯಾಣಕ್ಕಾಗಿ ಅರ್ಥಪೂರ್ಣವಾದ ಜೀವನವನ್ನು ನಡೆಸುವಂತೆ” ಸಂದೇಶ ನೀಡಿದ್ದಾರೆ. “ಭಗವಾನ್ …
Read More »ಮೈಸೂರಿನಲ್ಲಿ ಐಟಿ ದಾಳಿ: ಅಲಂಕಾರಿಕ ಗಿಡದಲ್ಲಿ ಸಿಕ್ತು 1 ಕೋಟಿ ಹಣ!
ಮೈಸೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರ ಸೋದರ ಎನ್ನಲಾಗಿರುವ ಕೆ.ಸುಬ್ರಮಣ್ಯ ರೈ ಎಂಬುವವರ ಮೈಸೂರಿನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಈ ವೇಳೆ ಮನೆ ಮುಂಭಾಗದ ಅಲಂಕಾರಿಕ ಗಿಡದೊಳಗೆ ಹಣ್ಣಿನ ಬಾಕ್ಸ್ಗಳಲ್ಲಿ ಇಟ್ಟಿದ್ದ ಹಣವನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿರುವುದನ್ನು ಮೂಲಗಳು ಖಚಿತಪಡಿಸಿವೆ. ಕೆ.ಸುಬ್ರಹ್ಮಣ್ಯ ರೈ ಎಂಬುವವರು ಮೈಸೂರು ನಗರದ ನಿವಾಸಿಯಾಗಿದ್ದು, ಇವರ ಮನೆಯ ಮೇಲೆ ಸೋಮವಾರ ಸಂಜೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ …
Read More »P.M. ಮೋದಿ ವಿರುದ್ಧ ದೂರು
ಬೆಂಗಳೂರು: ಬಜರಂಗದಳ ನಿಷೇಧ ಪ್ರಸ್ತಾವ ಮುಂದಿಟ್ಟು “ಜೈ ಬಜರಂಗಬಲಿ ಎಂದು ಘೋಷಣೆ ಕೂಗಿ ಓಟಿನ ಬಟನ್ ಒತ್ತಿ” ಎಂದು ಕರೆ ನೀಡುವ ಮೂಲಕ ಧಾರ್ಮಿಕ ಭಾವನೆ ಕೆರಳಿಸುವ ಮತ್ತು ಶಾಂತಿಗೆ ಭಂಗ ಉಂಟು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಕಾಂಗ್ರೆಸ್ ಪಕ್ಷ ಚುನಾವಣ ಆಯೋಗಕ್ಕೆ ದೂರು ನೀಡಿದೆ. ಜಾತಿ-ಧರ್ಮದ ಆಧಾರದಲ್ಲಿ ಮತ ಕೇಳು ವಂತಿಲ್ಲ. ಆದರೆ ಮೋದಿ ಚುನಾವಣ ರ್ಯಾಲಿ ಯಲ್ಲಿ ಹಿಂದೂ …
Read More »ರಾಜ್ಯದ ಭವಿಷ್ಯದ ನಗರವಾಗಲಿದೆ ಹುಬ್ಬಳ್ಳಿ: ಶೆಟ್ಟರ್
ಹುಬ್ಬಳ್ಳಿ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದ್ದು, ರಾಜ್ಯದ ಭವಿಷ್ಯದ ನಗರವಾಗಿ ರೂಪುಗೊಳ್ಳಲಿದೆ ಎಂದು ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಹೇಳಿದರು. ವಾರ್ಡ್ 39, 41 ಮತ್ತು 47 ಸೇರಿದಂತೆ ವಿವಿಧ ಕಡೆ ಮತಯಾಚನೆ ಮಾಡಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ, ಜನರ ಹಿತದೃಷ್ಟಿಯಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತ ಬಂದಿದ್ದೇನೆ. ಕ್ಷೇತ್ರದಲ್ಲಿ ಹಲವು ಮೂಲಸೌಲಭ್ಯಗಳ ನೀಡಿಕೆ ನಿಟ್ಟಿನಲ್ಲಿ ಪ್ರಾಮಾಣಿಕ ಯತ್ನ …
Read More »ಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆರಳಿದ್ದಾರೆ. ಅಮಿತ್ ಶಾ
ಇಂಫಾಲ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.25ರಿಂದ ಕರ್ನಾಟಕ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರವನ್ನು ಅರ್ಧಕ್ಕೇ ಮೊಟಕುಗೊಳಿಸಿ ತೆರಳಿದ್ದಾರೆ. ಮಣಿಪುರದಲ್ಲಿ ಪರಿಶಿಷ್ಟ ಪಂಗಡದ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಗುಂಪುಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರದ ಸ್ವರೂಪ ಪಡೆದಿದ್ದು ಕಾನೂನು ತೀವ್ರ ಸುವ್ಯವಸ್ಥೆ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಚುನಾವಣೆ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದಾರೆ. ಚುನಾವಣೆ ಪ್ರಚಾರ ಇನ್ನು ನಾಲ್ಕು ದಿನಗಳು ಮಾತ್ರ ನಡೆಯುವ ಹಿನ್ನೆಲೆಯಲ್ಲಿ …
Read More »SSLC ಫಲಿತಾಂಶ ಮೇ 8ರಂದು ಪ್ರಕಟ
ಬೆಂಗಳೂರು: ಕಳೆದ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆದ ಕರ್ನಾಟಕ ಎಸ್.ಎಸ್.ಎಲ್.ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿದಿದ್ದು ಪರೀಕ್ಷಾ ಫಲಿತಾಂಶ ಮೇ 8ರಂದು ಪ್ರಕಟಗೊಳ್ಳುವ ಸಾಧ್ಯತೆಗಳಿವೆ. KSEAB ಅಧಿಕಾರಿಗಳು karresults.nic.in ಮತ್ತು kseab.karnataka.gov.in. ನಲ್ಲಿ SSLC ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಎಸ್‌ಇಎಬಿ ಅಧಿಕಾರಿಗಳು ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ 8 ರಂದು ಘೋಷಿಸಲು ಶೇ. 90ರಷ್ಟು ನಿರ್ಧಾರ ಕೈಗೊಂಡಿದ್ದರೂ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಭೆ …
Read More »