ನವದೆಹಲಿ; ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇನ್ನೇನು ಸಿಎಂ ಆಯ್ಕೆ ಫೈನಲ್ ಎನ್ನುವಷ್ಟರಲ್ಲಿ ಕೊನೇ ಕ್ಷಣದಲ್ಲಿ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ಒಂದೆಡೆ ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತಮಗೆ ಸಿಎಂ ಸ್ಥಾನ ಬೇಕು ಎಂದು ಹಠ ಸಾಧಿಸಿದ್ದಾರೆ. ಅಧಿಕಾರ ಹಂಚಿಕೆ ನಿಟ್ಟಿನಲ್ಲಿ ಹೈಮಾಂಡ್ ಹೆಣೆದ ಸೂತ್ರಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, …
Read More »ಮುಖ್ಯಮಂತ್ರಿ ಆಯ್ಕೆ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ:ಸುರ್ಜೇವಾಲ
ನವದೆಹಲಿ: ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ, ಸುಳ್ಳು ಸಿದ್ದಿಗಳಿಗೆ ಕಿವಿಗೊಡಬೆಡಿ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ. ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ರಣದೀಪ್ ಸುರ್ಜೆವಾಲಾ, ಇಂದು ಸಂಜೆ ಅಥವಾ ನಾಳೆ ಸಿಎಂ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಘೋಷಣೆ ಮಾಡಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. …
Read More »ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆ : ಹುಟ್ಟೂರಿನಲ್ಲಿ ಸಂಭ್ರಮ
ಮೈಸೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ ವಿಚಾರ ಬಹುತೇಕ ಕೊನೆಗೊಂಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಖಚಿತಗೊಳ್ಳುತ್ತಿದ್ದಂತೆ ಹುಟ್ಟೂರು ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಅಧಿಕೃತ ಘೋಷಣೆಗೂ ಮುನ್ನ ಸಿದ್ದರಾಮಯ್ಯನವರ ಫ್ಲೆಕ್ಸ್ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಇತ್ತ ಮೈಸೂರಿನ ಟಿ ಕೆ.ಲೇಔಟ್ನಲ್ಲಿರುವ ಸಿದ್ದರಾಮಯ್ಯನವರ ಮನೆಗೆ ಅಭಿಮಾನಿಗಳ ದಂಡೇ ಆಗಮಿಸಿದ್ದು, ಮನೆಯ ಸುತ್ತ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಸಂಭ್ರಮಾಚರಣೆ ಮಾಡಿದರು. ಕಾಂಗ್ರೆಸ್ …
Read More »ನವಲಗುಂದ: ಗುಡಿಯೊಳಗಿನ ಕತ್ತಲ ಸಾಗರಕೆ ಬೇಕು ದೀವಿಗೆ
ನವಲಗುಂದ: ಕ್ಷೇತ್ರದಲ್ಲಿ ಚುನಾವಣೆ ಕಾವು ಮುಗಿದಿದ್ದು, ಹಸಿರಾಗುವ ಸಮಸ್ಯೆಗಳತ್ತ ಮುಖ ಮಾಡಬೇಕಿದೆ. ದಶಕಗಳಿಂದ ಜನರು ಅನುಭವಿಸುತ್ತಿರುವ ತೊಂದರೆಗಳಿಗೆ ಇತಿಶ್ರೀ ಹಾಡುವ ಜರೂರತ್ತು ಹೆಚ್ಚಿದೆ. ತಾಲೂಕಿನ ಗುಡಿಸಾಗರ ಗ್ರಾಮ ನೆರೆಹಾವಳಿಗೆ ಒಳಗಾಗಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಲ್ಲಿನವರನ್ನೆಲ್ಲ ಬೇರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರು. ಸ್ಥಳಾಂತರಗೊಂಡ ನಿರಾಶ್ರಿತರ ಮನೆಗಳಿಗೆ ವಿದ್ಯುತ್ ದೊರೆತರೂ, ಪಕ್ಕಕ್ಕೆ ಹೊಂದಿಕೊಂಡು ಮನೆ ನಿರ್ಮಿಸಿಕೊಂಡ 10-15 ರೈತರ ಕುಟುಂಬಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ದೊರೆತಿಲ್ಲ. ಸರಕಾರದ ನಿಯಮಾವಳಿಗಳಂತೆ ಪರವಾನಗಿ ಪಡೆದು …
Read More »ನೂತನ ಶಾಸಕರೆದುರು ಸಾಲು ಸಾಲು ಸವಾಲು
ಅಳ್ನಾವರ: ತೀರಾ ಹಿಂದುಳಿದ ಕ್ಷೇತ್ರ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳನ್ನೊಳಗೊಂಡ ಮತಕ್ಷೇತ್ರದ ಸಾಲು ಸಾಲು ಸವಾಲುಗಳು ನೂತನ ಶಾಸಕ ಸಂತೋಷ್ ಲಾಡ್ ಎದುರಿದೆ. ಕೆಲಸ ಮಾಡುವ ಹುಮ್ಮಸ್ಸಿನಿಂದ ಭಾರೀ ಬಹುಮತದಿಂದ ಆರಿಸಿ ಬಂದ ಲಾಡ್ ಅವರ ಮೇಲೆ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಳಿ ನದಿ ನೀರು ತರುವ ಯೋಜನೆ ಸಾಕಾರಗೊಳಿಸಿದ ಲಾಡ್ ಅವರು ಈ ಭಾಗದ ಜನರ ಬದುಕು ಹಸನಗೊಳಿಸಲು ದಿಟ್ಟ ಹೆಜ್ಜೆ ಹಾಕಬೇಕಿದೆ. ಹೊಸ …
Read More »3 ತಿಂಗಳೊಳಗೆ ಫಿಟ್ ಆಗಿ ಇಲ್ಲಾ ರಾಜೀನಾಮೆ ನೀಡಿ: ಪೊಲೀಸರಿಗೆ DG ಖಡಕ್ ವಾರ್ನಿಂಗ್
ಮೊದಲೆಲ್ಲಾ ಪೊಲೀಸರಿಗೂ ಡೊಳ್ಳು ಹೊಟ್ಟೆಗೂ ಅದೇನೋ ಸಂಬಂಧವಿದ್ದಂತಿತ್ತು. ಆದರೆ ಈಗ ಕಾಲ ಬದಲಾಗಿದೆ. ಈಗೀಗ ಪೊಲೀಸ್ ಅಧಿಕಾರಿಗಳೂ ಫಿಟ್ ಆಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಸಹೋದ್ಯೋಗಿಗಳಿಗೂ ಅದೇ ರೀತಿ ಇರುವಂತೆ ಪ್ರೇರಣೆಯನ್ನೂ ಮಾಡುತ್ತಿದ್ದಾರೆ. ಇದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಸ್ಸಾಂನ ಪೋಲಿಸ್ ಅಧಿಕಾರಿಯೊಬ್ಬರು ತಮ್ಮ ಸಹೋದ್ಯೋಗಿಗಳಿಗೆ ʻ3 ತಿಂಗಳೊಳಗೆ ಫಿಟ್ ಆಗಿ ಇಲ್ಲಾ ರಾಜೀನಾಮೆ ನೀಡಿʼ ಎಂದು ಖಡಕ್ ಸೂಚನೆ ನೀಡಿದ್ದಾರೆ. ʻನಾವು ಅಸ್ಸಾಂನ ಐಪಿಎಸ್ …
Read More »ಪಾಕ್ ಪರ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್: ತಾಳಿಕೋಟೆ ಯುವಕನ ಬಂಧನ
ವಿಜಯಪುರ: ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಯುಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿ ಪೊಲೀಸ್ ಅತಿಥಿಯಾಗಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ. ಜಿಲ್ಲೆಯ ತಾಳಿಕೋಟೆ ತಾಲೂಕಿನ ಹಿರೂರು ಗ್ರಾಮದ ಯುವಕ ಇಬ್ರಾಹಿಂ ಮುರ್ತುಜಸಾಬ ಮುಲ್ಲಾ ಎಂಬಾತ ಇನ್ಸ್ಟಾಗ್ರಾಂನಲ್ಲಿ ಪಾಕಿಸ್ತಾನ್ ಜಿಂದಾಬಾದ್, ಓನ್ಲಿ ಮುಸ್ಲೀಮ್ ರಾಷ್ಟ್ರ ಎಂದು ಸ್ಟೋರಿ ಹಾಕಿದ್ದ. ಇಬ್ರಾಹಿಂ ಮುಲ್ಲಾನ ಇನ್ಸ್ಟಾಗ್ರಾಂ ವೀಕ್ಷಿಸಿದ ಸ್ಥಳೀಯರು ತಾಳಿಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ತಾಳಿಕೋಟೆ ಪೊಲೀಸರು …
Read More »ನೂತನ ಶಾಸಕರಾಗಿರುವ ಆಸೀಫ್ (ರಾಜು) ಸೇಠ್ ಹಾಗೂ ಮಾಜಿ ಶಾಸಕ ಫೀರೋಜ್ ಸೇಠ್ ಅವರು ಸ್ಥಗಿತಗೊಂಡಿದ್ದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಚಾಲನೆ ನೀಡಿದರು.
ಬೆಳಗಾವಿಯಲ್ಲಿ ಸ್ಥಗಿತಗೊಂಡಿದ್ದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಆಸೀಫ್ ಸೇಠ್ ಚಾಲನೆಬೆಳಗಾವಿ: ಇಲ್ಲಿನ ಕೋಟೆ ಆವರಣದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ದೇಶದ ಅತೀ ಉದ್ದದ ರಾಷ್ಟ್ರಧ್ವಜದ ನಿರಂತರ ಹಾರಾಟಕ್ಕೆ ಬೆಳಗಾವಿ ಉತ್ತರ ಕ್ಷೇತ್ರದ ನೂತನ ಶಾಸಕ ಆಸೀಫ್ (ರಾಜು) ಸೇಠ್ ಇಂದು ಚಾಲನೆ ನೀಡಿದರು. ಫಿರೋಜ್ ಸೇಠ್ ಶಾಸಕರಾಗಿದ್ದ ವೇಳೆ ಕಿಲ್ಲಾ ಕೆರೆ ಆವರಣದಲ್ಲಿ ಅತೀ ಎತ್ತರದ 110 ಮೀಟರ್ ಧ್ವಜಸ್ತಂಭ ನಿರ್ಮಿಸಿ ರಾಷ್ಟ್ರಧ್ವಜ ಹಾರಾಟಕ್ಕೆ ಚಾಲನೆ …
Read More »ಗೋಸಾಗಣೆ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣ : ಪುನೀತ್ ಕೆರೆಹಳ್ಳಿ ಸೇರಿ ನಾಲ್ವರಿಗೆ ಜಾಮೀನು
ಬೆಂಗಳೂರು : ಗೋಸಾಗಣೆ ಆರೋಪದಲ್ಲಿ ಇದ್ರೀಶ್ ಪಾಷಾ ಎಂಬುವರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ರಜಾಕಾಲದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಆರೋಪಿಗಳಾದ ಪುನೀತ್ ಕೆರೆಹಳ್ಳಿ, …
Read More »ಪಿವಿಆರ್ ಐನಾಕ್ಸ್ ದೇಶದೆಲ್ಲಡೆ 50 ಸ್ಕ್ರೀನ್ ಮುಚ್ಚುವ ನಿರ್ಧಾರ
ಪಿವಿಆರ್ ಐನಾಕ್ಸ್ ದೇಶದೆಲ್ಲಡೆ 50 ಸ್ಕ್ರೀನ್ ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಒಂದು ಕಡೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ ಅನ್ನುವ ಮಾತಿದೆ. ಆದರೆ ಚಿತ್ರರಂಗದವರು ಈ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಟಿಟಿಯಿಂದ ಎದುರಾಗ್ತಿರುವ ಸಮಸ್ಯೆಯ ಬಗ್ಗೆಯೂ ಆಲೋಚನೆ ಮಾಡ್ತಿಲ್ಲ. ಚಿತ್ರಮಂದಿರಗಳ ಸ್ಥಿತಿ ಗತಿಯ ಕುರಿತು ಚರ್ಚೆ ಮಾಡ್ತಿಲ್ಲ. ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನ ಮರಳಿ ಕರೆತರುವ ಕುರಿತು ಚಿಂತನ ಮಂಥನ ನಡೆಯುತ್ತಿಲ್ಲ ಮಾಡ್ತಿಲ್ಲ ಎಂಬ ಮಾತುಗಳಿವೆ. ಇತ್ತ ಮಲ್ಟಿಪ್ಲೆಕ್ಸ್ಗಳು ಭಾರಿ ನಷ್ಟ …
Read More »