Breaking News

ರಾಷ್ಟ್ರೀಯ

ಮನೆಯ ಅಲ್ಮೇರಾದಲ್ಲಿ ಬಚ್ಚಿಟ್ಟಿದ್ದ ನಾಲ್ಕು ಹ್ಯಾಂಡ್ ಗ್ರೆನೇಡ್ ವಶಕ್ಕೆ: ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಮಾಹಿತಿ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಡಿ ಐವರು ಶಂಕಿತ ಭಯೋತ್ಪಾದಕರನ್ನ ಬಂಧಿಸಿರುವ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಪ್ರಕರಣದ‌ ಐದನೇ ಆರೋಪಿ ಜಾಯಿದ್ ತಬರೇಜ್ ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿದ್ದ ನಾಲ್ಕು ಜೀವಂತ ಗ್ರೆನೇಡ್ ಜಪ್ತಿ ಮಾಡಿದ್ದಾರೆ. ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಆರೋಪದಡಿ ಸುಹೇಲ್, ಜಾಹಿದ್, ಮುದಾಸಿರ್, ಫೈಜರ್ ಹಾಗೂ ಉಮರ್ ಎಂಬುವರನ್ನು ನಿನ್ನೆ ಸಿಸಿಬಿ ಪೊಲೀಸರು ಬಂಧಿಸಿ 7 ಕಂಟ್ರಿ ಮೇಡ್ ಪಿಸ್ತೂಲ್, 42 …

Read More »

ಒಂದು ದಿನ ಕೂಲಿ ಕೆಲಸ.. ಇನ್ನೊಂದು ದಿನ ಕಾಲೇಜು.. ಕೆಮಿಸ್ಟ್ರಿಯಲ್ಲಿ ಪಿಎಚ್​ಡಿ.. ಬಡತನದಲ್ಲಿ ಅರಳಿದ ಭಾರತಿ ಈಗ ​ಡಾಕ್ಟರ್!

ಅನಂತಪುರ (ಆಂಧ್ರಪ್ರದೇಶ): ವಿವಾಹಿತ ಮಹಿಳೆಯೊಬ್ಬರು ದಿನಗೂಲಿ ಕೆಲಸ ಮಾಡುತ್ತಲೇ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಬಡತನ, ಮದುವೆ, ಮಕ್ಕಳು, ಕೌಟುಂಬಿಕ ಜವಾಬ್ದಾರಿಗಳು ಓದಲು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಸಾಧಕಿ ನಿರೂಪಿಸಿದ್ದಾರೆ. ಪಿಎಚ್​ಡಿ ಪದವಿ ಮುಗಿಸಿರುವ ಈಕೆ ಪ್ರೊಫೆಸರ್ ಆಗಬೇಕೆಂಬ ಮಹಾದಾಸೆಯನ್ನೂ ಹೊಂದಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಾಕೆ ಭಾರತಿ ಎಂಬುವವರೇ ಈ ವಿಶಿಷ್ಟ ಸಾಧಕಿ. ಇವರದ್ದು ತೀರಾ ಬಡ ಕುಟುಂಬ. ದಿನವೂ ದುಡಿಯಲು ಹೋಗದಿದ್ದರೆ ಜೀವನ ನಿರ್ವಹಣೆಯೇ ಕಷ್ಟ ಸಾಧ್ಯ. ದಿನಗೂಲಿ …

Read More »

ಮಧ್ಯರಾತ್ರಿ 2 ಗಂಟೆಗೆ ನಿದ್ರೆ ಮಂಪರಿನಲ್ಲಿ ಎದ್ದು ರಸ್ತೆ ಬದಿಯಲ್ಲಿ ನಿಂತಿದ್ದ 6 ವರ್ಷದ ಹೆಣ್ಣು ಮಗುವನ್ನು ರಕ್ಷಿಸಿದ ಕುಂದಾಪುರ ಅರ್ಚನಾ ಬಾರ್ ನ ಸಿಬ್ಬಂದಿ

ಮಧ್ಯರಾತ್ರಿ 2 ಗಂಟೆಗೆ ನಿದ್ರೆ ಮಂಪರಿನಲ್ಲಿ ಎದ್ದು ರಸ್ತೆ ಬದಿಯಲ್ಲಿ ನಿಂತಿದ್ದ 6 ವರ್ಷದ ಹೆಣ್ಣು ಮಗುವನ್ನು ರಕ್ಷಿಸಿದ ಕುಂದಾಪುರ ಅರ್ಚನಾ ಬಾರ್ ನ ಸಿಬ್ಬಂದಿಗಳು ನಿನ್ನೆ ದಿನ ಚಾರ್ ಕೊಟ್ಟಿಗೆ ಬಾರಿನ ವಿಶ್ವನಾಥ ಪೂಜಾರಿ ರಾತ್ರಿ ಸರಿ ಸುಮಾರು 2 ಗಂಟೆ ಹೊತ್ತಿಗೆ ಬಾರಿನ ತನ್ನೆಲ್ಲ ಲೆಕ್ಕಾಚಾರವನ್ನು ಪೂರೈಸಿಕೊಂಡು ಸಿಬ್ಬಂದಿಗಳೊಂದಿಗೆ ಮನೆಗೆ ತೆರಳುತ್ತಿರುವಾಗ ದಬ್ಬೆಕಟ್ಟೆ ತೆಕ್ಕಟ್ಟೆ ರೋಡಿನಲ್ಲಿ ಆರು ವರ್ಷದ ಹೆಣ್ಣು ಮಗು ಒಂದು ಬಟ್ಟೆ ಇಲ್ಲದೆ ಸ್ವಾಮಿ …

Read More »

B.J.P.&J.D.S. ಸದಸ್ಯರ ಗೈರಿನ ನಡುವೆಯೇ ವಿಧಾನ ಪರಿಷತ್​ನಲ್ಲಿ 5 ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು : ಕಾಂಗ್ರೆಸ್​ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಹೊರ ರಾಜ್ಯದ ರಾಜಕಾರಣಿಗಳ ಸ್ವಾಗತಕ್ಕೆ ರಾಜ್ಯದ ಐಎಎಸ್ ಅಧಿಕಾರಿಗಳ ನಿಯುಕ್ತಿ ಮಾಡಿದ್ದು ಹಾಗು ಬಿಜೆಪಿಯ 10 ಶಾಸಕರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಿದ ಸ್ಪೀಕರ್ ಕ್ರಮ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್​ ಸದಸ್ಯರ ಗೈರಿನ ನಡುವೆ ವಿಧಾನ ಪರಿಷತ್ ಕಲಾಪವನ್ನು ನಡೆಸಲಾಯಿತು. ಈ ವೇಳೆ 5 ಪ್ರಮುಖ ವಿಧೇಯಕಗಳನ್ನು ಪ್ರತಿಪಕ್ಷ ಸದಸ್ಯರ ಗೈರಿನಲ್ಲಿ ಅಂಗೀಕರಿಸಲಾಯಿತು. ಕಲಾಪ ಆರಂಭವಾಗುತ್ತಿದ್ದಂತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, …

Read More »

ಬೆಳಗಾವಿ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಳ

ಚಿಕ್ಕೋಡಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿದ ಧಾರಾಕಾರ ಮಳೆಗೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹಲವು ಕೆಳ ಹಂತದ ಸೇತುವೆಗಳು ಜಲಾವೃತವಾಗಿವೆ. ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್​ನಿಂದ ಕೃಷ್ಣಾನದಿಗೆ 49,500 ಕ್ಯೂಸೆಕ್ ನೀರು ಹರಿದು ಬರುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ, ಮೈದುಂಬಿ ಹರಿಯುತ್ತಿದೆ. ಮತ್ತೊಂದು ಕಡೆ ವೇದಗಂಗಾ ನದಿಯಲ್ಲಿ ಒಳಹರಿವು ನೀರಿನ ಮಟ್ಟ ಹೆಚ್ಚಳವಾದ ಪರಿಣಾಮವಾಗಿ ನಿಪ್ಪಾಣಿ ತಾಲೂಕಿನ ಜತ್ರಾಟ- ಭೀವಶಿ ಸೇತುವೆ ಮುಳುಗಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ನಿಪ್ಪಾಣಿ ಪೊಲೀಸರು …

Read More »

10 ಶಾಸಕರ ಅಮಾನತು ಖಂಡಿಸಿ ಬಿಜೆಪಿ ಸದಸ್ಯರ ಪ್ರತಿಭಟನೆ

ಬೆಂಗಳೂರು: 10 ಜಿಜೆಪಿ ಶಾಸಕರನ್ನು ಸದನ ಮುಗಿಯುವವರೆಗೆ ಸ್ಪೀಕರ್​ ಅಮನಾತು ಮಾಡಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಮಾನತಾದ ಬಿಜೆಪಿ ಶಾಸಕರು ಸೇರಿ ಇತರೆ ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಮುನಿರತ್ನ, ಸುರೇಶ್ ಕುಮಾರ್, ಬೈರತಿ ಬಸವರಾಜ್, ಸುನೀಲ್ ಕುಮಾರ್, ಗೋಪಾಲಯ್ಯ ಸೇರಿ ಹಲವು ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾದ್ದಾರೆ. ಬಿಜೆಪಿ ಶಾಸಕರು …

Read More »

ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದಾರೆ.

ಬೆಂಗಳೂರು: ನಿನ್ನೆ 10 ಮಂದಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದಾರೆ. ವಿರೋಧ ಪಕ್ಷಗಳ ಗೈರುಹಾಜರಿ ನಡುವೆಯೇ ವಿಧಾನಮಂಡಲದ ಕಲಾಪ ಇಂದು ಆರಂಭಗೊಳ್ಳುವ ಮೂಲಕ ಮತ್ತೊಂದು ಅನಪೇಕ್ಷಣೀಯ ವಿದ್ಯಮಾನ ನಡೆದಿದೆ. ವಿಧಾನಮಂಡಲದ 30 ವರ್ಷಗಳ ಇತಿಹಾಸದಲ್ಲಿ ಪ್ರತಿಪಕ್ಷಗಳು ಸಂಪೂರ್ಣ ಬಹಿಷ್ಕಾರ ಹಾಕಿ ಅದರ ಬಳಿಕವೂ ಕಲಾಪ ನಡೆದ ಉದಾಹರಣೆ ಇಲ್ಲ. ಪ್ರಜಾಸತ್ತಾತ್ಮಕ ವಿಷಯಗಳಿಗಾಗಿ ಹಲವಾರು ಬಾರಿ ಪ್ರತಿಭಟನೆಗಳಾಗಿವೆ. ಆ ವೇಳೆ ಸಭಾತ್ಯಾಗ ಮಾಡಿರುವ ಉದಾಹರಣೆಗಳು …

Read More »

ಕೇಂದ್ರದ ನಾಯಕ ಓಲೈಕೆಗಾಗಿ ರಾಜ್ಯದ ಬಿಜೆಪಿ ನಾಯಕರು ಈ ರೀತಿಯ ಸಾಹಸಗಳನ್ನು ಮಾಡುತ್ತಿದ್ದಾರೆ ಎಂದು ಡಿಕೆಶಿ

ಬೆಂಗಳೂರು: ದೆಹಲಿ ನಾಯಕರು ನೋಡಲಿ ಅಂತ ಬಿಜೆಪಿ ನಾಯಕರು ರೇಸ್​ನಲ್ಲಿ ಇದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆಶಿ ಟಾಂಗ್ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹತಾಶೆಯಿಂದ ಗೂಂಡಾ ವರ್ತನೆ ತೋರುತ್ತಿದ್ದಾರೆ. ಯಾರು ಹೆಚ್ಚಿಗೆ ಮಾತನಾಡುತ್ತಾರೆ, ಯಾರು ಹೆಚ್ಚು ಫೋಟೋಗೆ ಬರುತ್ತಾರೆ ಎಂದು ದೆಹಲಿ ನಾಯಕರು ನೋಡುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಮಹಾಭಾರತದಲ್ಲಿ ನಡೆಯುವಂತೆ ನಾಟಕ‌ ತೋರಿಸುತ್ತಿದ್ದಾರೆ. ಅವರಿಗೆ ಹಕ್ಕಿದೆ, ಏನು ಬೇಕಾದರು ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ. ದಲಿತ ಸಭಾದ್ಯಕ್ಷರ …

Read More »

ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆಯಡಿ ನಾಲ್ಕನೇ ರೈಲು ಜುಲೈ 29ರಂದು

ಬೆಂಗಳೂರು: ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಯೋಜನೆಯಡಿ ನಾಲ್ಕನೇ ರೈಲು ಜುಲೈ 29ರಂದು ಬೆಂಗಳೂರಿನಿಂದ ಹೊರಡಲಿದೆ. ಕಾಶಿ ದರ್ಶನ ಮಾಡಲಿಚ್ಛಿಸಿರುವ ಯಾತ್ರಾತ್ರಿಗಳು ಆನ್ ಲೈನ್ ಮೂಲಕ ತಮ್ಮ ಟಿಕೆಟ್​ಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. 2022-23ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯದಿಂದ ಪುಣ್ಯಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್‌ರಾಜ್ ಕ್ಷೇತ್ರಗಳಿಗೆ ಕಡಿಮೆ ವೆಚ್ಚದಲ್ಲಿ ತೆರಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ಪ್ಯಾಕೇಜ್‌ ರೂಪಿಸಿ “ಕರ್ನಾಟಕ …

Read More »

ಇಬ್ಬರು ಮಹಿಳೆಯರ ಅಂಗಾಂಗ ದಾನ ಮಾಡಿದ್ದರಿಂದ ಹತ್ತು ಮಂದಿ ಜೀವನಕ್ಕೆ ಆಸರೆ

ಮೈಸೂರು: ಅಪಘಾತಕ್ಕೆ ಒಳಗಾಗಿದ್ದ ಇಬ್ಬರು ಮಹಿಳೆಯರ ಮೆದುಳು ನಿಷ್ಕ್ರಿಯವಾಗಿತ್ತು. ಅವರ ಕುಟುಂಬಸ್ಥರು ಒಪ್ಪಿಗೆ ಮೇರೆಗೆ ಈ ಮಹಿಳೆಯರ ಅಂಗಾಂಗಳನ್ನು ದಾನ ಮಾಡಲಾಯಿತು. ಇಬ್ಬರು ಮಹಿಳೆಯರ ಅಂಗಾಂಗ ದಾನ ಮಾಡಿದ್ದರಿಂದ ಹತ್ತು ಮಂದಿ ಜೀವನಕ್ಕೆ ಆಸರೆಯಾಗಿದೆ. ನಗರದ ಬೆಲ್ಲವತ್ತ ಬಳಿ ಸಂಭವಿಸಿದ ರಸ್ತೆ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಧಾ (48) ಎಂಬುವವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ ಬಳಿಕ, ಅಂಗಾಂಗ ದಾನಕ್ಕೆ …

Read More »