ಬೆಂಗಳೂರು : ವಸತಿ ಪ್ರದೇಶದ ಜಾಗವನ್ನು ಪಾರ್ಥನಾ ಸಭಾಂಗಣವಾಗಿ ಬಳಕೆ ಮಾಡುವುದನ್ನು ಪ್ರಶ್ನಿಸಿ ಬೆಂಗಳೂರು ನಗರದ ಎಚ್‌ಬಿಆರ್ ಬಡಾವಣೆಯ ನೂರಾರು ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸ್ಯಾಮ್ ಪಿ ಫಿಲಿಪ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜೆಎಸ್ ಕಮಲ್ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿಯನ್ನು ಕೆಲವು ಊಹೆ ಹಾಗೂ ತಪ್ಪು ಕಲ್ಪನೆಗಳಿಂದಾಗಿ …
Read More »‘ಜೈ ಜವಾನ್, ಜೈ ವಿಜ್ಞಾನ,’ ಇಸ್ರೋ ವಿಜ್ಞಾನಿಗಳನ್ನು ಮನಸಾರೆ ಶ್ಲಾಘಿಸಿದ ಪ್ರಧಾನಿ ಮೋದಿ
ಬೆಂಗಳೂರು: ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ ನಗರಕ್ಕೆ ಆಗಮಿಸಿದ್ದಾರೆ. ಇನ್ನು ಇಸ್ರೋ ವಿಜ್ಞಾನಿಗಳ ಭೇಟಿಗೂ ಮುನ್ನ ಪ್ರಧಾನಿ ಮೋದಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿ ಮಾತನಾಡಿದರು. ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಹೆಚ್.ಎ.ಎಲ್ ವಿಮಾನ ನಿಲ್ದಾಣದ ಮುಂದೆ ಸೇರಿದ್ದ ಜನತೆ ಉದ್ದೇಶಿಸಿ ಚುಟುಕು ಭಾಷಣ ಮಾಡಿದರು. ಇದು …
Read More »ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಮಹಿಳೆಯರಿಗೆ ಅರಿಶಿಣ, ಕುಂಕುಮ ವಿತರಣೆ
ಬೆಳಗಾವಿ: ಇಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಮಹಿಳಾ ಭಕ್ತರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಿಸಲಾಯಿತು. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಸರ್ಕಾರದ ಆದೇಶದಂತೆ ದೇವಸ್ಥಾನದಲ್ಲಿ ಶಾಸಕ ವಿಶ್ವಾಸ ವೈದ್ಯ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಿಸಿದರು. ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಾರ್ಯನಿರ್ವಾಹಕ ಅಧಿಕಾರಿ ಎಸ್ಪಿಬಿ ಮಹೇಶ ಸೇರಿ ಮತ್ತಿತರರು ಉಪಸ್ಥಿತರಿದ್ದರು. ವಿಶೇಷ ಉಡುಗೊರೆ ಪಡೆದುಕೊಂಡ ಭಕ್ತೆಯರು ಸರ್ಕಾರಕ್ಕೆ ಕೃತಜ್ಞತೆ …
Read More »ಕಾವೇರಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವು
ಚಾಮರಾಜನಗರ : ಕಾವೇರಿ ನೀರು ಬಿಡುಗಡೆ ಸಂಬಂಧ ಕಾನೂನು ಸುವ್ಯವಸ್ಥೆಗಾಗಿ ಕೊಳ್ಳೇಗಾಲಕ್ಕೆ ಬಂದಿದ್ದ ಕೆಎಸ್‌ಆರ್‌ಪಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು (ಶುಕ್ರವಾರ) ನಡೆದಿದೆ. ಮೋಹನ್ (44) ಮೃತರು. ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮೋಹನ್ ಸಂಬಂಧಿಕರುಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ನಡೆಯದಂತೆ ಎಚ್ಚರ ವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ಮೈಸೂರು ಬೆಟಾಲಿಯನ್ 23 ಸಿಬ್ಬಂದಿ ಕೊಳ್ಳೇಗಾಲದಲ್ಲಿ ಕರ್ತವ್ಯಕ್ಕೆಂದು ಎರಡು ದಿನಗಳ ಹಿಂದೆ ಆಗಮಿಸಿ …
Read More »ಪಿಡಿಒ ವರ್ಗಾವಣೆ ಕರಡು ಪಟ್ಟಿಗಳು ಮುಖ್ಯಮಂತ್ರಿ ಅವರ ಅನುಮೋದನೆಗೂ ಮುನ್ನವೇ ಸೋರಿಕೆಯಾಗಿವೆ.
ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಲ್ಲಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವರ್ಗಾವಣೆ ಕರಡು ಪಟ್ಟಿಗಳು ಮುಖ್ಯಮಂತ್ರಿ ಅವರ ಅನುಮೋದನೆಗೂ ಮುನ್ನವೇ ಸೋರಿಕೆಯಾಗಿವೆ. ಇಲಾಖೆಯ ಹಿರಿಯ ಅಧಿಕಾರಿಗಳ ಸಾಮಾಜಿಕ ಜಾಲತಾಣಗಳಲ್ಲಿ ಪಿಡಿಒ ವರ್ಗಾವಣೆಯ ಕರಡು ಪಟ್ಟಿಗಳನ್ನು ಹಂಚಿಕೊಳ್ಳಲಾಗಿದೆ. 223 ಪಿಡಿಒಗಳ ವರ್ಗಾವಣೆ ಪ್ರಸ್ತಾವಕ್ಕೆ ಅನುಮೋದನೆ ಕೋರಿ ಸಚಿವರು ಸಲ್ಲಿಸಿದ್ದ ಪಟ್ಟಿ ಆಗಸ್ಟ್ 21 ರಂದು ಸೋರಿಕೆಯಾಗಿತ್ತು. …
Read More »ಕುಡಿತದ ಚಟಕ್ಕೆ ಬಿದ್ದ ಮಗನಿಗೆ ತಂದೆಯೇ ಮಾರ್ಗದರ್ಶನ ಮಾಡಿ ಕೊಲೆ
ಸರಾಯಿ ಕುಡಿಯುವುದನ್ನು ಬಿಡುವಂತೆ ಮನೆಯವರು ಬುದ್ಧಿವಾದ ಹೇಳಿದರೂ ಕುಡಿತದ ಚಟಕ್ಕೆ ಬಿದ್ದ ಮಗನಿಗೆ ತಂದೆಯೇ ಮಾರ್ಗದರ್ಶನ ಮಾಡಿ ಕೊಲೆ ಮಾಡಿಸಿದ ಘಟನೆ ಗೋಕಾಕ ತಾಲೂಕಿನ ಕುಟರನಟ್ಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸಂಗಮೇಶ ಮಾರುತಿ ತಿಗಡಿ (39) ಕೊಲೆಯಾದ ದುರ್ದೈವಿ. ಮಹೇಶ ಜೊತೆಗೆ ಉಳ್ಳಾಗಡ್ಡಿ ವ್ಯಾಪಾರ ಮಾಡುತ್ತಿದ್ದ ಯರಗಟ್ಟಿ ತಾಲೂಕಿನ ಮಂಜುನಾಥ ಶೇಖಪ್ಪ ಹೊಂಗಲ (43), ಕೊಲೆ ಮಾಡಲು ಸಹಾಯ ಮಾಡಿದ ಯರಗಟ್ಟಿ ತಾಲೂಕಿನ …
Read More »ಲ್ಯಾಂಡರ್ ಸೆರೆಹಿಡಿದ ಚಂದ್ರನ ಚಿತ್ರಗಳ ವಿಡಿಯೋ ಬಿಡುಗಡೆಗೊಳಿಸಿದ ಇಸ್ರೋ-ನೋಡಿ
ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿರುವ ಚಂದ್ರಯಾನ-3ರ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೊಸ ಮಾಹಿತಿ ನೀಡಿದೆ. ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆಹಿಡಿದ ಅಂತಿಮ ಕ್ಷಣಗಳ ಚಿತ್ರಗಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ. ”ಚಂದ್ರಯಾನ -3 ಮಿಷನ್‌ನ ಎಲ್ಲ ಚಟುವಟಿಕೆಗಳು ಸರಿಯಾಗಿ ಸಾಗುತ್ತಿವೆ” ಎಂದು ಇಸ್ರೋ ಟ್ವೀಟ್ ಮಾಡಿದೆ. ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್ಐಎಸ್ಎ (ILSA), ರಂಭಾ (RAMBHA) ಮತ್ತು ಚೇಸ್ಟ್ …
Read More »ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆ ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿ ವಿಲೇವಾರಿ
ಬೆಂಗಳೂರು: ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಭಿಪ್ರಾಯದಂತೆ ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗದ ಕುರಿತು ಪರಿಷ್ಕೃತ ಯೋಜನೆಯನ್ನು ಸಲ್ಲಿಸುವುದಾಗಿ ನೈಋತ್ಯ ರೈಲ್ವೆ ವಲಯ ಸಲ್ಲಿಸಿದ ಪ್ರಮಾಣ ಪರಿಗಣಿಸಿರುವ ಹೈಕೋರ್ಟ್, ಹುಬ್ಬಳ್ಳಿ – ಅಂಕೋಲಾ ನಡುವಿನ ಬ್ರಾಡ್ ಗೇಜ್ ರೈಲು ಮಾರ್ಗ ಯೋಜನೆಗೆ ಮುಂದಾಗಿದ್ದ ಕ್ರಮವನ್ನು ಪ್ರಶ್ನಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ. ಹುಬ್ಬಳ್ಳಿ- ಅಂಕೋಲಾ ನಡುವೆ 164.44 ಕಿ.ಮೀ ಉದ್ದದ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಇದಾಗಿದೆ. ಈ …
Read More »ಬ್ರಿಕ್ಸ್ ಶೃಂಗ ಮುಗಿಸಿ ಅಥೆನ್ಸ್‌ಗೆ ಪ್ರಧಾನಿ… ಭರ್ಜರಿ ಸ್ವಾಗತ ಕೋರಲು ಗ್ರೀಸ್ ಸನ್ನದ್ಧ
ಅಥೆನ್ಸ್( ಗ್ರೀಸ್): ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಥೆನ್ಸ್‌ಗೆ ಭೇಟಿ ನೀಡಲಿದ್ದಾರೆ. 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಗ್ರೀಸ್‌ಗೆ ಮೊದಲ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ಅಥೆನ್ಸ್ನಲ್ಲಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಯುರೋಪಿನ ಐತಿಹಾಸಿಕ ಭೂಮಿಗೆ ಇದು ನನ್ನ ಮೊದಲ ಭೇಟಿಯಾಗಿದೆ. 40 ವರ್ಷಗಳ ನಂತರ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಗೌರವ ನನಗೆ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ …
Read More »ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ
ಚಿತ್ರದುರ್ಗ, ಆಗಸ್ಟ್ 24: ಸುಗಮ ಸಂಚಾರಕ್ಕಾಗಿ ನಗರ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ಸ್(traffic signals)ಅಳವಡಿಸಲಾಗುತ್ತದೆ. ಅಂತೆಯೇ ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ಸ್ ಸಹಕಾರಿ ಆಗಿರುತ್ತದೆ. ಆದರೆ ಅದೊಂದು ನಗರದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಾರದ ಹಿಂದಷ್ಟೇ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಗಾಂಧಿವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಅರ್ಧ ಕಿ.ಮೀಟರ್ …
Read More »
Laxmi News 24×7