Breaking News

ರಾಷ್ಟ್ರೀಯ

ಚೇಂಬರ್ ಆಫ್ ಕಾಮರ್ಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ ಸಿ ಹೊಂಡದಕಟ್ಟಿ

ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ನೂತನ ಕಾರ್ಯನಿರ್ವಾಹಕರ ಪದಗ್ರಹಣ ಸಮಾರಂಭ ಬುಧವಾರ ಸಂಜೆ ಫೌಂಡ್ರಿ ಕ್ಲಸ್ಟರ್ ನಲ್ಲಿ ನಡೆಯಿತು 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಿ ಸಿ ಹೊಂಡದಕಟ್ಟಿ, ಹಿರಿಯ ಉಪಾಧ್ಯಕ್ಷ ಸಂಜೀವ್ ಕಟ್ಟಿಶೆಟ್ಟಿ, ಉಪಾಧ್ಯಕ್ಷ ಸತೀಶ ಕುಲಕರ್ಣಿ, ಕೀತ್ ಮಚಾಡೋ, ಕಾರ್ಯದರ್ಶಿ ರಾಜೇಂದ್ರ ಮುತಗೇಕರ, ಕೋಶಾಧಿಕಾರಿ ರೋಹಿತ್ ಕಪಾಡಿಯಾ ಅವರನ್ನು ನೇಮಿಸಲಾಯಿತು ಹೇಮಚಂದ್ರ ಪೋರವಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ …

Read More »

ಬೆಳಗಾವಿಯಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ವರನಟ ಡಾ.ರಾಜ್‌ಕುಮಾರ್​ ಅವರ ಮೊಮ್ಮಗಳಾದ ಸರಸ್ವತಿ ಭಾಗಿಯಾಗಿ ಗಮನ ಸೆಳೆದರು.

ಬೆಳಗಾವಿ : ಇಲ್ಲಿನ ವೈಭವ ನಗರದ ರೂಪಾಲಿ ಹೊಸಕೋಟಿ ಎಂಬವರ ಮನೆಯಲ್ಲಿ ಗುರುವಾರ ಶ್ರೀಕೃಷ್ಣಜನ್ಮಾಷ್ಠಮಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ಈ ಕಾರ್ಯಕ್ರಮಕ್ಕೆ ಬೆಳಗಾವಿಯ ಶಿವಬಸವ ನಗರದಲ್ಲಿ ನೆಲೆಸಿರುವ ಡಾ.ರಾಜ್‌ಕುಮಾರ್ ಮಗಳು‌ ಲಕ್ಷ್ಮಿ ಮತ್ತು ಗೋವಿಂದರಾಜ ದಂಪತಿಯ ಪುತ್ರಿ ಸರಸ್ವತಿ ಆಗಮಿಸಿದ್ದು ವಿಶೇಷವಾಗಿತ್ತು. ಸರಸ್ವತಿ ಹಾಡು ಹಾಡಿ, ಶ್ರೀಕೃಷ್ಣನ ನೆನೆದು, ಎಲ್ಲರೊಂದಿಗೂ ಬೆರೆತು ಖುಷಿಪಟ್ಟರು. ಮತ್ತೊಂದೆಡೆ ಪೂಜೆಗೆ ಆಗಮಿಸಿದ್ದ ಮಹಿಳೆಯರು ಸರಸ್ವತಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು‌. ಡಾ. ರಾಜ್‌ಕುಮಾರ …

Read More »

ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ,

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದಲ್ಲಿ ಆಡಳಿತ ವ್ಯವಸ್ಥೆ ಯಾವ ರೀತಿ, ಜನರ ಪರಿಸ್ಥಿತಿ ಹೇಗಿದೆ ಎಂಬುವುದಕ್ಕೆ ತಾಜಾ ಉದಾಹರಣೆ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ. ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ತಜ್ಞ ವೈದ್ಯರು ಹಿಂದೇಟು ಹಾಕುತ್ತಿದ್ದು ನಗರಪ್ರದೇಶಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ಎದುರಾಗಿದ್ದು ಬಡರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ… …

Read More »

ಅಭಿಮಾನಿಗಳ ಮೇಲೆ ಪ್ರೀತಿಯ ಧಾರೆಯೆರೆದ ಶಾರುಖ್​ ಖಾನ್​​…ಜವಾನ್​ ನಟನ ಫ್ಯಾನ್ಸ್ ಫುಲ್​ ಖುಷ್​

ಸಕಾರಾತ್ಮಕ ಸ್ಪಂದನೆಗೆ ಶಾರುಖ್​ ಖಾನ್​ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಚಿತ್ರರಂಗದ ಯಶಸ್ವಿ ನಿರ್ದೇಶಕ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದ ಜವಾನ್​ ಸಿನಿಮಾವನ್ನು ಅಭಿಮಾನಿಗಳು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಬಿಗ್​ ಸ್ಟಾರ್ ಕಾಸ್ಟ್, ಬಿಗ್​ ಬಜೆಟ್​ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ಯಶ ಕಂಡಿದೆ. ಸೋಷಿಯಲ್​ ಮೀಡಿಯಾದಲ್ಲಿ ಜವಾನ್​ ಟ್ರೆಂಡಿಂಗ್​ನಲ್ಲಿದೆ. ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಪಾಸಿಟಿವ್​ ವಿಮರ್ಶೆ ಕೊಡುತ್ತಿದ್ದಾರೆ. ಮತ್ತೊಂದೆಡೆ ಚಿತ್ರಮಂದಿರಗಳ ಬಳಿ …

Read More »

ಬೆಳಗಾಗುವುದರೊಳಗೆ ರೈತ ಕೋಟ್ಯಧಿಪತಿ

ಚಾರ್ಖಿ ದಾದ್ರಿ(ಹರಿಯಾಣ): ಇಲ್ಲಿನ ಚರ್ಖಿ ದಾದ್ರಿ ಜಿಲ್ಲೆಯ ರೈತನೊಬ್ಬ ತನ್ನ ಬ್ಯಾಂಕ್ ಖಾತೆಗೆ 200 ಕೋಟಿ ರೂಪಾಯಿ ಜಮೆ ಆಗಿದೆ ಎಂದು ಹೇಳಿಕೊಂಡಿದ್ದಾನೆ. ಈ ಪ್ರಕರಣವೀಗ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಿಗೂಢ ಪ್ರಕರಣದ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಹರಿಯಾಣ ಪೊಲೀಸರು ಗುರುವಾರ ಸ್ಪಷ್ಟಪಡಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಲು ಶುಕ್ರವಾರ ಬ್ಯಾಂಕ್‌ಗೆ ಭೇಟಿ ನೀಡವುದಾಗಿ …

Read More »

ಕುಂದಾನಗರಿ‌ ಜನರಿಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ

ಬೆಳಗಾವಿ : ಕುಂದಾನಗರಿ‌ ಜನರಿಗೆ ಕೇಂದ್ರ ರೈಲ್ವೆ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ – ಮೈಸೂರು ಏಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ( Iranna Kadadi ) ಮಾಹಿತಿ‌ ನೀಡಿದ್ದಾರೆ. ಈ‌ ಕುರಿತು ಮಾಹಿತಿ ನೀಡಿರುವ ಸಂಸದ ಈರಣ್ಣ ಕಡಾಡಿ. ರೈಲು ಸಂಖ್ಯೆ 17302 – ಬೆಳಗಾವಿಯಿಂದ …

Read More »

ಧಾರವಾಡ: ಅಧಿಕಾರ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಅಧಿಕಾರಿ ಸಾವು..

ಧಾರವಾಡ: ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಿನ್ನೆ(ಸೋಮವಾರ) ನಡೆದಿದೆ. ಬಡ್ತಿ ಪಡೆದುಕೊಂಡು ಅಧಿಕಾರ ಸ್ವೀಕಾರ ಮಾಡಿದ್ದ ಅಧಿಕಾರಿ ಜಯಪ್ರಕಾಶ ಕಲಕೋಟಿ ಮೃತಪಟ್ಟವರು. ಇವರು ಧಾರವಾಡ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಹುದ್ದೆ ಅಲಂಕರಿಸಿದ್ದರು. ನಿನ್ನೆ ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದರು. ಸಂಜೆ‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಮೊದಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲೂಕು ಖಜಾನೆ ಕಚೇರಿಯಲ್ಲಿ ಜಯಪ್ರಕಾಶ ಕೆಲಸ ಮಾಡುತ್ತಿದ್ದರು. 15 ದಿನಗಳ …

Read More »

ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ: ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ”ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ. ನಾವೆಲ್ಲಾ ಹಿಂದೂಗಳು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.   ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ”ಅದನ್ನು ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತು ಮಾಡಿಲ್ಲ. ನಾವೆಲ್ಲ ಹಿಂದೂಗಳು. ಬೆಳಗ್ಗೆ ಎದ್ದರೆ ಗಣಪತಿಯನ್ನು ನೆನಪು ಮಾಡಿಕೊಳ್ತೀವಿ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ …

Read More »

G20: ಆರ್ಥಿಕ ಅಪರಾಧಿಗಳ ಹಸ್ತಾಂತರಕ್ಕೆ ಜಾಗತಿಕ ವೇದಿಕೆ ರಚಿಸಲು ಭಾರತದ ಒತ್ತಾಯ

ನವದೆಹಲಿ: ವಿದೇಶಗಳಲ್ಲಿ ಆಶ್ರಯ ಪಡೆದಿರುವ ದೇಶಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು, ಅವರನ್ನು ಹಸ್ತಾಂತರಿಸಲು ಮತ್ತು ಆರ್ಥಿಕ ಅಪರಾಧಿಗಳ ಆಸ್ತಿಗಳನ್ನು ಪತ್ತೆಹಚ್ಚಲು ಸಾಮಾನ್ಯ ವೇದಿಕೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜಿ 20 ನಾಯಕರನ್ನು ಒತ್ತಾಯಿಸಲು ಕೇಂದ್ರ ಸರ್ಕಾರ ಕಾರ್ಯತಂತ್ರವೊಂದನ್ನು ರೂಪಿಸಿದೆ. ಈ ಕಾರ್ಯತಂತ್ರವು ಎಲ್ಲ ಜಿ 20 ನಾಯಕರ ಬೆಂಬಲ ಪಡೆದದ್ದೇ ಆದಲ್ಲಿ ವಿಜಯ್ ಮಲ್ಯ, ನೀರವ್ ಮೋದಿ, ಜುನೈದ್ ಇಕ್ಬಾಲ್ ಮೆಮನ್ ಮತ್ತು ಅಭಿಜಿತ್ ಅಸೋಮ್ ಅವರಂತಹ ಹಲವಾರು ದೇಶಭ್ರಷ್ಟ ಮತ್ತು ಆರ್ಥಿಕ …

Read More »

ಸೆ.3 ರಂದು ‘ಸನಾತನ ಧರ್ಮ ದಿನ’ ಆಚರಣೆ; ಭಾರತದಲ್ಲಿ ಅಲ್ಲ, ಇದು ಅಮೆರಿಕದಲ್ಲಿ!

ವಾಷಿಂಗ್ಟನ್ (ಅಮೆರಿಕ) : ಸೆಪ್ಟೆಂಬರ್​ 3 ರಂದು ‘ಸನಾತನ ಧರ್ಮ ದಿನ’ ಆಚರಣೆಗೆ ಅಧಿಕೃತವಾಗಿ ಘೋಷಿಸಲಾಗಿದೆ. ಆದರೆ ಇದು ಭಾರತದಲ್ಲಿ ಅಲ್ಲ, ಬದಲಾಗಿ ಅಮೆರಿಕದಲ್ಲಿ. ಅಮೆರಿಕದ ಕೆಂಟುಕಿ ರಾಜ್ಯದ ನಗರವೊಂದರಲ್ಲಿ ಸೆಪ್ಟೆಂಬರ್ 3ನ್ನು ‘ಸನಾತನ ಧರ್ಮ ದಿನ’ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಭಾರತದಲ್ಲಿನ ರಾಜ್ಯವೊಂದರ ಸಚಿವರೊಬ್ಬರು ಸನಾತನ ಧರ್ಮವನ್ನು ಹೀಯಾಳಿಸಿ ಮಾತನಾಡಿದ ಮಧ್ಯೆ ದೂರದ ಅಮೆರಿಕದಲ್ಲಿ ಅದೇ ಹಿಂದೂ ಸನಾತನ ಧರ್ಮದ ಬಗ್ಗೆ ಒಲವು ಬೆಳೆಯುತ್ತಿರುವುದು ಗಮನಾರ್ಹ. ಲೂಯಿಸ್​ವಿಲ್ಲೆ ಮೇಯರ್ ಕ್ರೇಗ್ …

Read More »