Breaking News

ರಾಷ್ಟ್ರೀಯ

 G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ.

ನವದೆಹಲಿ: G20 ಶೃಂಗಸಭೆ ಶೇ 100ಕ್ಕೆ 100ರಷ್ಟು ಒಮ್ಮತದ ಮೂಲಕ ತೆರೆಕಂಡಿದೆ. ಹಿಂದೆಂದೂ ಕಾಣದಷ್ಟು ಘೋಷಣೆಗಳಿಗೆ ಸಭೆಯ ಎಲ್ಲ ಸದಸ್ಯರಿಂದ ಅನುಮೋದನೆ ಪಡೆಯಲಾಗಿದೆ. ರಷ್ಯಾ- ಉಕ್ರೇನ್​​​ ವಿಚಾರದ ಬಗ್ಗೆ ಅತ್ಯಂತ ಸಮಚಿತ್ತದ ನಿರ್ಣಯ ಕೈಗೊಳ್ಳುವಲ್ಲಿ ಜಿ-20 ಅಧ್ಯಕ್ಷತೆ ವಹಿಸಿದ್ದ ಭಾರತ ಯಶಸ್ವಿಯಾಗಿದೆ. ಒಟ್ಟಾರೆ ಶೃಂಗದ ಯಶಸ್ವಿಯಾದ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಭಾರತವನ್ನು ಹೊಗಳಿವೆ. ಜಾಗತಿಕ ದಕ್ಷಿಣದ ಧ್ವನಿ(ಗ್ಲೋಬಲ್​ ಸೌತ್​)ನ ಗುಣಗಾನ ನಡೆದಿದೆ. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಕಾಳಜಿ ವಹಿಸುವಲ್ಲಿ ಭಾರತದ …

Read More »

ಗಣೇಶೋತ್ಸವ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ಮಹಾನಗರ ಪಾಲಿಕೆ

ಗಣೇಶೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವು ನಗರದ ಗಣೇಶೋತ್ಸವ ವಿಸರ್ಜನಾ ಹೊಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ನಗರದ ಇಂದ್ರಪ್ರಸ್ಥನಗರದಲ್ಲಿರುವ ಜಕ್ಕಿನಹೊಂಡ ಕೆರೆಯನ್ನು ಸ್ವಚ್ಛಗೊಳಿಸಲಾಯಿತು. ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆಯನ್ನು ಕಪಿಲೇಶ್ವರ ಕೆರೆ, ಜಕ್ಕಿನಹೊಂಡ ಕೆರೆ, ಅಂಗೋಲ್ ಕೆರೆ ಮುಂತಾದೆಡೆ ಮಾಡಲಾಗುತ್ತದೆ. ಈ ಎಲ್ಲ ಕೆರೆಗಳ ಸ್ವಚ್ಛತೆ, ಸಣ್ಣಪುಟ್ಟ ದುರಸ್ತಿ, ಬಣ್ಣ ಬಳಿಯುವುದು ಇತ್ಯಾದಿ ಕಾರ್ಯ …

Read More »

ಸೋಮವಾರ ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೌಲಭ್ಯ

ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾರಿಯಾಗಿರುವ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್​ ಪ್ರಯಾಣದಶಕ್ತಿ ಯೋಜನೆಯನ್ನು ಖಾಸಗಿ ಬಸ್​ಗಳಿಗೂ ವಿಸ್ತರಣೆ ಮಾಡಬೇಕು ಹಾಗೂ ರಸ್ತೆ ತೆರಿಗೆ ರದ್ದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆಗಳ ಒಕ್ಕೂಟ ಸೋಮವಾರ ಬೆಂಗಳೂರು ಬಂದ್ ಕರೆ ನೀಡಿದೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವ ಬಿಎಂಟಿಸಿ ಹೆಚ್ಚುವರಿ ಬಸ್​​ಗಳ ಜೊತೆಗೆ ಟ್ರಿಪ್​ ಸಂಖ್ಯೆಯಲ್ಲೂ ಏರಿಕೆ ಮಾಡಲು ಸಿದ್ಧತೆ ನಡೆಸಿದೆ. ನಾಳೆ ನಡೆಯುತ್ತಿರುವ ಬೆಂಗಳೂರು ಬಂದ್​​ಗೆ …

Read More »

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಆರನೇ ಹಂತದ ಹೋರಾಟದ ಸಮಾವೇಶದಲ್ಲಿ ಶಾಸಕ ವಿನಯ್ ಕುಲಕರ್ಣಿ ಭಾಗಿ

ಚಿಕ್ಕೋಡಿ (ಬೆಳಗಾವಿ): ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಹಾಗೂ ಕೆಲವು ಕಾನೂನು ತೊಡಕನ್ನು ಸರಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಮಸಾಲಿ ಸಮಾಜದಿಂದ ಮನವಿ ಮಾಡಲಾಗಿತ್ತು. ಅಧಿವೇಶನ ಮುಗಿದ ಬಳಿಕ ಕಾನೂನು ತಜ್ಞರ ಜೊತೆ ಸಭೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದರು. ಆದರೆ ಇಂದು ಆ ಭರವಸೆ ಹುಸಿಯಾಗಿದೆ. ಇದರಿಂದಾಗಿ ಶ್ರೀಗಳು ನಿಪ್ಪಾಣಿಯಿಂದ ಹೋರಾಟ ಪ್ರಾರಂಭ ಮಾಡಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ …

Read More »

ಶಕ್ತಿ ಯೋಜನೆ’ಯಿಂದ ನಷ್ಟ, ಬಂದ್‌ ಕರೆ: ನಾಳೆ ಆಟೋ, ಕ್ಯಾಬ್‌, ಖಾಸಗಿ ಬಸ್‌ ಸೇವೆ ಇರಲ್ಲ

ಬೆಂಗಳೂರು : ರಾಜ್ಯ ಸರ್ಕಾರದ ‘ಶಕ್ತಿ ಯೋಜನೆ’ಯಿಂದಾಗಿ ನಷ್ಟಕ್ಕೊಳಗಾಗಿದ್ದೇವೆ ಎನ್ನುತ್ತಿರುವ ಖಾಸಗಿ ಸಾರಿಗೆ ಚಾಲಕರು ಮತ್ತು ಮಾಲೀಕರು, ನಮಗೆ ಪರಿಹಾರ ಒದಗಿಸಬೇಕು ಮತ್ತು ನಮ್ಮ ಪರ್ಯಾಯ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಾಳೆ ನಗರದಲ್ಲಿ ಬಂದ್‌ಗೆ ಕರೆ ಕೊಟ್ಟಿದ್ದಾರೆ.   ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದಿವೆ. ಚಾಲಕರಿಗೆ ಸಹಾಯಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಖಾಸಗಿ ವಾಹನಗಳ …

Read More »

ಶೇ.50ರಷ್ಟು ರಿಯಾಯಿತಿ ಪಾವತಿಗೆ ಗಡುವು ಮುಕ್ತಾಯ: ವಾಹನ ಸವಾರರಿಂದ ₹9 ಕೋಟಿಗೂ ಹೆಚ್ಚು ದಂಡ​ ಸಂಗ್ರಹ​!

ಬೆಂಗಳೂರು: ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ದಂಡ ಪಾವತಿ ನಿನ್ನೆಗೆ (ಶನಿವಾರ) ಕೊನೆಯಾಗಿದ್ದು, ಒಂದೇ ದಿನದಲ್ಲಿ ಸವಾರರು ಒಂದು ಕೋಟಿ ರೂ.ಗೂ ಹೆಚ್ಚು ದಂಡ ಕಟ್ಟಿದ್ದಾರೆ. ರಿಯಾಯಿತಿ ದಂಡ ಜಾರಿಯಾದಾಗಿನಿಂದ ಹಿಡಿದು ನಿನ್ನೆಯವರೆಗೆ 9 ಕೋಟಿ ರೂಪಾಯಿಗೂ ಹೆಚ್ಚು ದಂಡ ಸಂಗ್ರಹವಾಗಿದೆ. ಶುಕ್ರವಾರದವರೆಗೆ 8 ಕೋಟಿ ರೂ.ವರೆಗೆ ದಂಡ ಸಂಗ್ರಹ ಆಗಿತ್ತು‌. ರಿಯಾಯಿತಿ ದಂಡ ಪಾವತಿಸಲು ನಿನ್ನೆಯೇ ಕೊನೆ ದಿನ. ಫೆಬ್ರವರಿ 11ಕ್ಕೂ …

Read More »

ಜಿ20 ಔತಣಕೂಟದಲ್ಲಿ ನಿತೀಶ್, ಸ್ಟಾಲಿನ್, ಮಮತಾ ಭಾಗಿ; ಗೆಹ್ಲೋಟ್​, ಕೇಜ್ರಿವಾಲ್ ಗೈರು

ನವದೆಹಲಿ: ಶನಿವಾರ ಜಿ20 ಶೃಂಗಸಭೆಯ ಅಂಗವಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಇನ್ನೂ ಹಲವಾರು ಮುಖ್ಯಮಂತ್ರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.   ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ಈ ಕಾರ್ಯಕ್ರಮದಲ್ಲಿ ವೃತ್ತಾಕಾರವಾಗಿ ಜೋಡಿಸಿದ ಊಟದ …

Read More »

ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆ .. ಟಾಸ್​ ಗೆದ್ದ ಪಾಕ್ ಬೌಲಿಂಗ್​ ಆಯ್ಕೆ​

ಕೊಲಂಬೊ (ಶ್ರೀಲಂಕಾ): ಕಳೆದ ವಾರ ಮಳೆಯಿಂದ ಭಾರತ – ಪಾಕಿಸ್ತಾನ ಪಂದ್ಯ ರದ್ದಾಗಿತ್ತು. ಈಗ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದಲ್ಲಿ ಎರಡು ತಂಡಗಳು ಮತ್ತೆ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಪಾಕಿಸ್ತಾನ ನಾಯಕ ಬಾಬರ್​ ಭಾರತಕ್ಕೆ ಮೊದಲ ಬ್ಯಾಟಿಂಗ್​ ಆಹ್ವಾನ ನೀಡಿದ್ದಾರೆ. ಈಗ ಏಷ್ಯಾಕಪ್​ನ ಸೂಪರ್​ ಫೋರ್​ ಹಂತದಲ್ಲಿ ಎರಡು ತಂಡಗಳು ಮತ್ತೆ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಪಾಕಿಸ್ತಾನ ನಾಯಕ ಬಾಬರ್​ ಅಜಮ್​ ಭಾರತಕ್ಕೆ ಮೊದಲ ಬ್ಯಾಟಿಂಗ್​ ಆಹ್ವಾನ ನೀಡಿದ್ದಾರೆ. …

Read More »

ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ.. ಕಾಮಾಕ್ಷಿಪಾಳ್ಯ ಪೊಲೀಸರಿಂದ ಔಟರ್ ರಿಂಗ್ ರೋಡ್ ರಾಬರ್ಸ್ ಬಂಧನ

ಬೆಂಗಳೂರು: ಲಿಫ್ಟ್ ಕೊಡುವ ನೆಪದಲ್ಲಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತ ಆರೋಪಿಗಳು. ಗೊರಗುಂಟೆಪಾಳ್ಯ – ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯಲ್ಲಿ ಕೃತ್ಯ ಎಸಗುತ್ತಿದ್ದ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಚಾಲಕ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು ರಾತ್ರಿ ವೇಳೆ ಬಸ್ಸಿಗಾಗಿ ಕಾಯುವವರನ್ನು ಗುರಿಯಾಗಿಸಿಕೊಂಡು ‘ಲಿಫ್ಟ್ ಕೊಡುವುದಾಗಿ’ ಕಾರು ಹತ್ತಿಸಿಕೊಳ್ಳುತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆ ಹಿಂಬದಿ ಸೀಟಿನಲ್ಲಿದ್ದ ಇನ್ನಿಬ್ಬರು ಆರೋಪಿಗಳು ಕತ್ತಿನ ಬಳಿ …

Read More »

ಕೌನ್ ಬನೇಗಾ ಕರೋಡ್​​​ಪತಿಯಲ್ಲಿ ಕೆಬಿಸಿಯ ಮೊದಲ ಕೋಟ್ಯಧಿಪತಿ ಇವರೇ ನೋಡಿ!

ಅಮೃತಸರ (ಪಂಜಾಬ್​): ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಈಗಾಗಲೇ ಎಲ್ಲರಿಗೂ ತಿಳಿದಿರುವ ಕಾರ್ಯಕ್ರಮ. ಇದರಲ್ಲಿ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೆ 7 ಕೋಟಿ ಗೆಲ್ಲುವ ಅವಕಾಶ ಇದೆ. ಆದರೆ ಇಲ್ಲಿಯ ವರೆಗೆ ತಲುಪಲು 14 ಪ್ರಶ್ನೆಗಳನ್ನು ದಾಟಬೇಕಿದೆ. 15ನೇ ಸರಣಿಯ ಕೌನ್ ಬನೇಗಾ ಕರೋಡ್ಪತಿಯಲ್ಲಿ ಪಂಜಾಬ್‌ನ ಖಲ್ರಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಜಸ್ಕರನ್ ಸಿಂಗ್ ಕೋಟಿ ಗೆದ್ದಿದ್ದಾರೆ. ಈ ಆವೃತ್ತಿಯ ಮೊದಲ ಕೋಟಿ ಬಹುಮಾನ ಇದಾಗಿದೆ.     …

Read More »