ಬೆಂಗಳೂರು: ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜೂನ್ 6 ರಂದು ಹೊರಡಿಸಿದ್ದ ನಿರ್ದೇಶನವನ್ನು ಇದೀಗ ಹಿಂಪಡೆದುಕೊಂಡಿದೆ. ಜೂನ್ 6ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಮಾಹಿತಿ ಹಕ್ಕಿನ ಅಡಿ ಹೆಚ್ಚು ಬಾರಿ ಅರ್ಜಿಸಲ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸುವಂತೆ ಸೂಚನೆ ನೀಡಿತ್ತು. ಆ ಮೂಲಕ ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರ ಅಧಿಕಾರವನ್ನು …
Read More »ದಸರಾ ‘ಯುವ ಸಂಭ್ರಮ’ಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ಚಾಲನೆ: ಸಮಾರಂಭಕ್ಕೆ ಸಿಂಹಪ್ರಿಯಾ ಸಾಕ್ಷಿ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಸಾಂಸ್ಕೃತಿಕ ನಗರಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಿಸುವ ‘ಯುವ ಸಂಭ್ರಮ’ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಅವರು ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಗಣ್ಯರು ಹಾಗೂ ಅತಿಥಿಗಳು ನಗಾರಿ, ಕಂಸಾಳೆ, ಡೊಳ್ಳು ಬಾರಿಸುವ ಮೂಲಕ ‘ಯುವ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು. ಸಮಾರಂಭದ …
Read More »ವಿಶ್ವಕಪ್ ಆಯೋಜನೆಯಿಂದ ದೇಶದ ಆರ್ಥಿಕತೆಗೆ 18 ರಿಂದ 22 ಸಾವಿರ ಕೋಟಿ ರೂಪಾಯಿ ಹರಿದು ಬರುವ ಸಾಧ್ಯತೆಯಿದೆ.
ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ ದೇಶದ ಜಿಡಿಪಿಗೆ ಹೆಚ್ಚುವರಿಯಾಗಿ ಸುಮಾರು 18,000-22,000 ಕೋಟಿ ರೂ.ಗಳ ಕೊಡುಗೆ ನೀಡಲಿದೆ ಮತ್ತು ಪಂದ್ಯಾವಳಿಯು ದೇಶದ ಜಿಡಿಪಿಗೆ ಸುಮಾರು 7,000-8,000 ಕೋಟಿ ರೂ. ಗಳಷ್ಟು ಮೌಲ್ಯವರ್ಧನೆ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಅರ್ಥಶಾಸ್ತ್ರಜ್ಞರ ವರದಿ ತಿಳಿಸಿದೆ. ವಿಶ್ವಕಪ್ನಿಂದ ಹಣದುಬ್ಬರದ ಮೇಲಾಗುವ ಪರಿಣಾಮ ತೀರಾ ಅತ್ಯಲ್ಪ ಎಂದು ವರದಿ ತಿಳಿಸಿದೆ. ಜಿಡಿಪಿಯ ಮೇಲಾಗುವ ಪರಿಣಾಮದ ದೃಷ್ಟಿಯಿಂದ ನೋಡಿದರೆ ವಿಶ್ವಕಪ್ನಿಂದ ಅಂದಾಜು 18,000-22,000 ಕೋಟಿ …
Read More »ಕನಸು ನನಸಾಯಿತು’: ವಿರಾಟ್ ಕೊಹ್ಲಿ ಭೇಟಿ ಮಾಡಿದ ವಿಶೇಷಚೇತನ ಅಭಿಮಾನಿಯ ಹರ್ಷೋದ್ಘಾರ
ಚೆನ್ನೈ: ಪ್ರಸ್ತುತ ಕ್ರಿಕೆಟ್ ಕಿಂಗ್ ಎಂದೇ ಖ್ಯಾತಿಯಾಗಿರುವ ವಿರಾಟ್ ಕೊಹ್ಲಿಗೆ ಅಪರಿಮಿತ ಅಭಿಮಾನಿ ಬಳಗವಿದೆ. ಚೇಸ್ ಮಾಸ್ಟರ್ ಅಂದ್ರೆ ಹಿರಿ- ಕಿರಿಯರೆಲ್ಲರಿಗೂ ಇಷ್ಟವೇ. ತಮಿಳುನಾಡಿನ ವಿಶೇಷಚೇತನ ಅಭಿಮಾನಿಯೊಬ್ಬ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿದ್ದು, ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು (ಅಕ್ಟೋಬರ್ 5) ಭೇಟಿಯಾಗಿ, ‘ಕನಸು ನನಸಾಯಿತು’ ಎಂದು ಉದ್ಗರಿಸಿದ್ದಾರೆ. ಚೆನ್ನೈನ ವೆಲಚೇರಿ ಮೂಲದ 19 ವರ್ಷದ ಶ್ರೀನಿವಾಸ್ ವಿಶೇಷಚೇತನರಾಗಿದ್ದಾರೆ. ಕಾಲಿನ ಊನತೆ ಹೊಂದಿರುವ ಶ್ರೀನಿವಾಸ್ಗೆ ಚಿತ್ರಕಲೆ ಒಲಿದಿದೆ. ಚೆಪಾಕ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ …
Read More »ಬೆಂಗಳೂರಿನಲ್ಲಿ ತಂಗುದಾಣವೇ ಕಳ್ಳತನ
ಬೆಂಗಳೂರು: ಪೊಲೀಸ್ ಕಮೀಷನರ್ ಕಚೇರಿಯ ಅನತಿ ದೂರದಲ್ಲಿರುವ ಬಸ್ ತಂಗುದಾಣವೇ ಕಳ್ಳತನವಾಗಿದೆ, ದಯವಿಟ್ಟು ಪತ್ತೆ ಮಾಡಿ ಎಂದು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರೂಪದಲ್ಲಿ ಅಪರೂಪವೆಂಬಂತೆ ಬಸ್ ಶೆಲ್ಟರ್ನ್ನೇ ಖದೀಮರು ಕಳ್ಳತನ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಂಗುದಾಣ ನಿರ್ಮಾಣ ಮಾಡಿದ್ದ ಖಾಸಗಿ ಸಂಸ್ಥೆಯ ಉಪಾಧ್ಯಕ್ಷ ಎನ್ ರವಿ ರೆಡ್ಡಿ ಎಂಬುವರು ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಿಬಿಎಂಪಿ ಅನುಮತಿ ಪಡೆದು ತಮ್ಮ ಕಂಪನಿಯ ಕನ್ನಿಂಗ್ಹ್ಯಾಮ್ …
Read More »ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶವಿಲ್ಲ,: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ. ಕೆಂಪು ಕಲ್ಲು ಹಾಗೂ ಮಣ್ಣಿನ ವಿಚಾರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಕೂಡದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಮರಳು, ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ರಾಜ್ಯ ಪರಿಸರ ಪ್ರಭಾವ ಮೌಲ್ಯ ಮಾಪನ ಪ್ರಾಧಿಕಾರ ಅನುಮತಿ ನೀಡಿದ ಬಳಿಕವೇ ಮರಳು ಬ್ಲಾಕ್ಗಳಿಗೆ ಅನುಮತಿ ಪತ್ರ ದೊರೆಯುತ್ತದೆ. ತಿಂಗಳಿಗೊಮ್ಮೆ ಪ್ರಾಧಿಕಾರದ ಸಭೆ ನಡೆಯುವುದರಿಂದ ವಿಳಂಬವಾಗುತ್ತಿದೆ. ಈ ಪ್ರಕ್ರಿಯೆಗೆ ವೇಗ ನೀಡಬೇಕೆಂದು ಪ್ರಾಧಿಕಾರದ ಆಯುಕ್ತರಿಗೆ …
Read More »ಖ್ಯಾತ ಟೈಲರ್ ಉದ್ಯಮಿಯನ್ನ ಬರ್ಬರವಾಗಿ ಹತ್ಯೆ ಮಾಡಿದ ಮಾಜಿ ಕೆಲಸಗಾರ
ಕಲಬುರಗಿ : ಬಿಸಿಲೂರು ಕಲಬುರಗಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಖ್ಯಾತ ಟೈಲರ್ ಉದ್ಯಮಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ ಮಕ್ತಂಪುರ ಬಡಾವಣೆಯಲ್ಲಿ ನಡೆದಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸುರೇಶ್ ಹಂಚಿ (44) ಮೃತ ವ್ಯಕ್ತಿ. ಸೂಪರ್ ಮಾರ್ಕೆಟ್ ಪ್ರದೇಶದ ಪುಠಾಣಿ ಗಲ್ಲಿಯಲ್ಲಿ ಬಿಎಸ್ ಟೈಲರ್ ಹೆಸರಿನ ಅಂಗಡಿ ಹೊಂದಿದ್ದಾರೆ. ಟೈಲರಿಂಗ್ ವೃತ್ತಿಯಲ್ಲಿ ಹೆಸರು ಮಾಡಿದ್ದ …
Read More »ಅಕ್ರಮವಾಗಿ ಭಾರತದ ಜಲ ಗಡಿ ಪ್ರವೇಶಿಸಿದ ಪಾಕಿಸ್ತಾನಿ ಮೀನುಗಾರನ ಬಂಧನ
ಕಛ್ (ಗುಜರಾತ್): ಕಚ್‌ನ ಸಮುದ್ರ ಗಡಿಯಲ್ಲಿ ಆಗಾಗ ಕಳ್ಳಸಾಗಾಣಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೊತೆಗೆ ಪಾಕಿಸ್ತಾನಿ ನುಸುಳುಕೋರರು ಮತ್ತು ಪಾಕಿಸ್ತಾನಿ ಮೀನುಗಾರರು ಕೂಡ ಆಗಾಗ ಭಾರತದ ಯೋಧರ ಬಳಿ ಸಿಕ್ಕಿ ಬೀಳುತ್ತಿದ್ದಾರೆ. ಪ್ರಸ್ತತ ಬಿಎಸ್‌ಎಫ್ ತಂಡವು ಭಾರತದ ಕಚ್-ಪಾಕಿಸ್ತಾನ ಜಲ ಗಡಿ ಬಳಿಯ ಸರ್ ಕ್ರೀಕ್ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಂಧಿತ ವ್ಯಕ್ತಿಯ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ, ಸರ್ ಕ್ರೀಕ್ ಬಳಿ ಇಂಜಿನ್ ಅಳವಡಿಸಿದ …
Read More »ಸಾಲುಮರದ ತಿಮ್ಮಕ್ಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದ ಪುತ್ರ ಉಮೇಶ್
ರಾಮನಗರ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ತಿಮ್ಮಕ್ಕ ಅವರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದು, ಇದು ಸುಳ್ಳು ಸುದ್ದಿ ಎಂದು ಪುತ್ರ ಉಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಉಮೇಶ್, ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಚಿಕಿತ್ಸೆಗೆ …
Read More »ಕಾಂಗ್ರೆಸ್ಗೆ ಲಿಂಗಾಯತರು ಮತ ಹಾಕಿಲ್ಲ ಎನ್ನುವವರು ಮೂರ್ಖರು: ವಿನಯ್ ಕುಲಕರ್ಣಿ
ಬೆಂಗಳೂರು: ಹಿರಿಯ ನಾಯಕ, ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರು, ಕಾಂಗ್ರೆಸ್ಗೆ ಲಿಂಗಾಯತರು ಓಟು ಹಾಕಿಲ್ಲ ಎನ್ನುವವರು ಮೂರ್ಖರು. ವೀರೇಂದ್ರ ಪಾಟೀಲ್ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಮನೂರು ಅವರ ವಿರುದ್ಧ ಯಾರು ಕೌಂಟರ್ ಕೊಡೋದು ಬೇಡ. ಅವರು ಹಿರಿಯರು, ನಮ್ಮ ಯಜಮಾನರು ಅವರು, ಅವರಿಗೆ 92 …
Read More »
Laxmi News 24×7