ಬೆಂಗಳೂರು: ರಾಜ್ಯದಲ್ಲಿ ಅಂಗಾಂಗ ಕಸಿಗೆ ಸಾವಿರಾರು ಜನ ರೋಗಿಗಳು ಹಲವಾರು ವರ್ಷಗಳಿಂದ ಕಾಯತೊಡಗಿದ್ದು, ಸಾರ್ವಜನಿಕರಲ್ಲಿ ಅಂಗಾಂಗ ದಾನ ವನ್ನು ಪ್ರೇರೇಪಿಸಲು ”ಆರ್ಗನ್ ಡೋನರ್ಸ್ ನೀತಿ” ಅನುಷ್ಠಾನಕ್ಕೆ ತರಲು ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು ಅದಕ್ಕಾಗಿ ರೂಪುರೇಷೆ ಅಂತಿಮಗೊಳಿಸುತ್ತಿದೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಿಡ್ನಿ, ಲಿವರ್, ಹೃದಯ, ಶ್ವಾಸಕೋಶ, ಸಣ್ಣ ಕರಳು, ಕಾರ್ನಿಯಾ ಸೇರಿದಂತೆ ಜೀವ ರಕ್ಷಕ ಅಂಗಾಂಗಳ ಕಸಿಗಾಗಿ ರಾಜ್ಯದಲ್ಲಿ ಸುಮಾರು 8000 ರೋಗಿಗಳು …
Read More »ಬರಪೀಡಿತ ಪಟ್ಟಿಗೆ ಮತ್ತೆ 7 ತಾಲೂಕುಗಳು ಸೇರ್ಪಡೆ: ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯದಲ್ಲಿ ಬರದ ತೀವ್ರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೆ ಏಳು ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಎಂದು ಶನಿವಾರ ಸರ್ಕಾರ ಘೋಷಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಂತಾಗಿದೆ. ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆಯ (Ground Truthing) ವರದಿಯನುಸಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ …
Read More »ಡಿ.ಕೆ.ಶಿವಕುಮಾರ್ ಹೆಸರಲ್ಲಿ ಬಿಬಿಎಂಪಿ ಮುಖ್ಯ ಇಂಜಿನಿಯರ್ ದುಡ್ಡು ವಸೂಲಿ: ಕೆಂಪಣ್ಣ ಆರೋಪ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಇಂಜಿನಿಯರ್ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಲಂಚದ ಆರೋಪ ಮಾಡಿದ್ದಾರೆ. ಸದಾಶಿವನಗರದಲ್ಲಿ ಶನಿವಾರ ಖಾಸಗಿ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಬಳಿಕ ಮಾತನಾಡಿದ ಅವರು, “ನಾನು ಸಿನಿಯಾರಿಟಿ ಪ್ರಕಾರ ಹಣ ಕೊಡಿ ಅಂತ ಕೇಳಿದ್ದೇನೆ. ಸ್ವಲ್ಪ ಹಣ ರಿಲೀಸ್ ಮಾಡಿದ್ದಾರೆ. ನಮಗೆ ತೃಪ್ತಿ ಇದೆ ಅಂತ ಹೇಳಲ್ಲ, ಗುತ್ತಿಗೆದಾರರ ಹಣವನ್ನು ಪೂರ್ತಿಯಾಗಿ ಕ್ಲಿಯರ್ ಮಾಡೋಕೆ ಹೇಳಿದ್ದೇನೆ. ಡಿಸೆಂಬರ್ ಒಳಗಡೆ …
Read More »40 ವರ್ಷಗಳ ಅನುಭವ ಹೊಂದಿದ ಭಾರತ ವಾಹನ ತರಬೇತಿ ಶಾಲೆ ಆರಂಭ
೪೦ ವರ್ಷಗಳ ಅನುಭವ ಹೊಂದಿದ್ದ ಭಾರತ ವಾಹನ ತರಬೇತಿ ಶಾಲೆ ಸಮಾಜಮುಖಿ ಕೆಲಸ ಮಾಡುತ್ತಿದೆ ಮುಂಚೆ ದೇಶಸೇವೆ ಮಾಡಿದ್ದೇನೆ ಈ ವೃತ್ತಿಯಲ್ಲಿ ಅನೇಕ ಏರಳಿತಗಳನ್ನು ನೋಡಿದ್ದೇನೆ ಅಪಘಾತ ರಹಿತ ತರಬೇತಿ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದೇನೆ ಎಂದು ಭಾರತ ವಾಹನ ತರಬೇತಿ ಮಾಲೀಕ ಬಸವರಾಜ ಕಡ್ಲಿ ಹೇಳಿದರು . ಬೆಳಗಾವಿ ನೆಹರು ನಗರದ ೨ ನೇ ಕ್ರಾಸನಲ್ಲಿ ಭಾರತ ವಾಹನ ತರಬೇತಿ ಶಾಲೆಯ ಭವ್ಯ ಉದ್ಘಾಟನೆಯನ್ನು ಬೆಳಗಾವಿ ನಾಗನೂರ ಮಠದ …
Read More »ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಅರಭಾವಿ ದುರದುಂಡೀಶ್ವರ ಮಠದ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ ನ. 20 ಕ್ಕೆ ನಿಗದಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಡಾ. ಸಿದ್ಧರಾಮ ಮಹಾಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಭಾಗಿ. ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಪಾಲಿಗೆ ಕಾಮಧೇನುವಾಗಿದ್ದರು- ಡಾ. ಸಿದ್ಧರಾಮ ಮಹಾಸ್ವಾಮಿಗಳ ಬಣ್ಣನೆ ಘಟಪ್ರಭಾ : ಅರಭಾವಿ ದುರದುಂಡೀಶ್ವರ ಮಠದ ಪೀಠಾಧಿಪತಿಯಾಗಿದ್ದ ಲಿಂಗೈಕ್ಯ ಸಿದ್ಧಲಿಂಗ ಮಹಾಸ್ವಾಮಿಗಳ ನಿಧನದಿಂದ ಅರಭಾವಿ ಮಠದ ನೂತನ ಪೀಠಾಧಿಪತಿಗಳ …
Read More »50 ಶಾಸಕರು BJP ಹೈಕಮಾಂಡ್ ಸಂಪರ್ಕದಲ್ಲಿದ್ದಾರೆ – ಕಾಂಗ್ರೆಸ್ ಸರ್ಕಾರದ ಪತನ ಗ್ಯಾರಂಟಿ: ನಿರಾಣಿ ಬಾಂಬ್
ವಿಜಯಪುರ: ಕಾಂಗ್ರೆಸ್ (Congress) ಹೇಳುವುದು ಒಂದು ಮಾಡುವುದು ಇನ್ನೊಂದು, ಈ ಸರ್ಕಾರ 5 ವರ್ಷ ಉಳಿಯಲ್ಲ. ಈಗಾಗಲೇ 50 ಕಾಂಗ್ರೆಸ್ ಶಾಸಕರು ಬಿಜೆಪಿ ಹೈಕಮಾಂಡ್ (BJP HighCommand) ಸಂಪರ್ಕದಲ್ಲಿದ್ದು, ಪತನ ಆಗೋದು ಗ್ಯಾರಂಟಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದ ಜುಮನಾಳ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಎರಡು ಬಣವಿದ್ದರೂ, ಒಳಗೆ ನಾಲ್ಕು …
Read More »ಜಾಲತಾಣದಲ್ಲಿ ಜಾತಿ ನಿಂದನೆ ಪ್ರಕರಣ : ಪುನೀತ್ ಕೆರೆಹಳ್ಳಿ ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು : ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಸಂಬಂಧ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕನ್ನಡಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ನೀಡಿರುವ ದೂರಿನನ್ವಯ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಶುಕ್ರವಾರ ಸಂಜೆ ಸಂಪಿಗೆಹಳ್ಳಿ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಹಿಂದೂಪರ ಕಾರ್ಯಕರ್ತನಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚಿಗೆ ರೌಡಿಪಟ್ಟಿ ತೆರೆದು ಬಂಧಿಸಲಾಗಿತ್ತು. ಆ …
Read More »ರಾಯಚೂರು: ಜಲ ಜೀವನ್ ಮಿಷನ್ ಕಾಮಗಾರಿಗೆ ತಂದಿದ್ದ ಪೈಪ್ ಬಂಡಲ್‌ಗಳಿಗೆ ಬೆಂಕಿ
ರಾಯಚೂರು: ಜಲ ಜೀವನ್ ಮೀಷನ್ (ಜೆಎಂಎಂ) ಕಾಮಗಾರಿಗಾಗಿ ತಂದು ಹಾಕಿದ್ದ ಪೈಪ್ಗಳಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ರಾಯಚೂರಿನ ದೇವಸೂಗೂರು ಗ್ರಾಮದಲ್ಲಿ ಬುಧವಾರ ಜರುಗಿದೆ. ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಪರಿಸ್ಥಿತಿ ಹತೋಟಿಗೆ ತಂದರು. ಜಿಲ್ಲೆಯ ಮನೆ ಮನೆಗೆ ನೀರು ಪೂರೈಕೆ ಮಾಡಲು ಜೆಎಂಎಂ ಕಾಮಗಾರಿ ನಡೆಯುತ್ತಿದೆ. ದೇವಸೂಗೂರು ಗ್ರಾಮ ಪಂಚಾಯತಿ ಕಚೇರಿಯ ಹತ್ತಿರದ ಹಿಂಬದಿಯ ಖಾಲಿ ಜಾಗದಲ್ಲಿ …
Read More »ಹಟಕಿನಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎತ್ತು ಬಲಿ
ಹುಬ್ಬಳ್ಳಿ: ಕಲಘಟಗಿ ತಾಲೂಕಿನಲ್ಲಿ ದಿನದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆಗಳ ಗುಂಪು ದಾಳಿ ಮಾಡಿ ಎತ್ತನ್ನು ತಿಂದು ಹಾಕಿರುವ ಘಟನೆ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬವರು ಎತ್ತು ಕಳೆದುಕೊಂಡಿದ್ದಾರೆ. ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನು ಕಟ್ಟಿ ಹಾಕಿದ್ದರು. ಈ ಪೈಕಿ ಒಂದು ಕಾಣೆಯಾಗಿತ್ತು. ಬೆಳಿಗ್ಗೆ ತಾನಾಗಿಯೇ ಒಂದು ಎತ್ತು ಮನೆಯತ್ತ ಮರಳಿದೆ. ಆದ್ರೆ ಇನ್ನೊಂದು ಕಾಣದೇ ಇದ್ದಾಗ ರೈತ ಕಬ್ಬಿನ ಗದ್ದೆಯಲ್ಲಿ …
Read More »ಹುಬ್ಬಳ್ಳಿಯಲ್ಲಿ ರೈತ ಆತ್ಮಹತ್ಯೆ: ಸಾಲ ಮರುಪಾವತಿಗೆ ಕಿರುಕುಳ ಆರೋಪ
ಹುಬ್ಬಳ್ಳಿ: ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ನಡೆದಿದೆ. ರಾಜ್ಯದಲ್ಲಿ ಬರ ತಾಂಡವಾಡುತ್ತಿದ್ದು, ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆ ಸಾಲ ವಸೂಲಿ ಮಾಡಲು ಬ್ಯಾಂಕ್ವೊಂದರ ಮ್ಯಾನೇಜರ್ ರೈತನಿಗೆ ನಿರಂತರ ಕಿರುಕುಳ ನೀಡಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಮಹಾದೇವಪ್ಪ ಫಕೀರಪ್ಪ ಜಾವೂರ್ (75) ಎಂಬಾತ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ ನಿನ್ನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ …
Read More »
Laxmi News 24×7