Breaking News

ರಾಷ್ಟ್ರೀಯ

ತಾಳಿ ಕಟ್ಟುವ ಶುಭ ವೇಳೆ ಬಂದ ಪ್ರಿಯಕರ; ಮಾಂಗಲ್ಯವೇ ಕಿತ್ಕೊಂಡ

ಹಾಸನ: ತಾಳಿ ಕಟ್ಟುವ ಶುಭ ವೇಳೆ ವಧುವಿನ (Bride) ಪ್ರಿಯಕರ ಆಗಮಿಸಿ ಗಲಾಟೆ ಮಾಡಿದ್ದರಿಂದ ಮದುವೆಯೊಂದು (Marriage) ಮುರಿದು ಬಿದ್ದಿದೆ. ಹಾಸನ ಜಿಲ್ಲೆಯ ಬೇಲೂರು (Beluru, Hassan) ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ರೇವತಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಮದುವೆ ಶಿವಮೊಗ್ಗ ಮೂಲದ ಪ್ರಮೋದ್‌ಕುಮಾರ್ ಎಂಬವರ ಜೊತೆ ನಿಗದಿಯಾಗಿತ್ತು. ಇನ್ನೇನು ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಮದುವೆಗೆ ಅಡ್ಡಿಪಡಿಸಿದ್ದಾನೆ. ನವೀನ್ …

Read More »

ED ಕ್ರಮ; ಕೇಜ್ರಿವಾಲ್ ಗೆ ಮಧ್ಯಂತರ ರಿಲೀಫ್

ಹೊಸದಿಲ್ಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಇ.ಡಿ. ತನ್ನ ವಿರುದ್ಧ ಯಾವುದೇ ಬಲವಂತದ ಕ್ರಮ ಕೊಳ್ಳುವುದರ ವಿರುದ್ಧ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಆಲಿಸಿದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ, “ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿ, ಈ ಹಂತದಲ್ಲಿ ಮಧ್ಯಂತರ ಪರಿಹಾರವನ್ನು ನೀಡಲು ನಾವು ಒಲವು ಹೊಂದಿಲ್ಲ ಎಂದು ಹೇಳಿದೆ. ನ್ಯಾಯಾಲಯವು ಈ ಹೊಸ ಮಧ್ಯಂತರ ಮನವಿಯ ಕುರಿತು ಇಡಿಯಿಂದ ಪ್ರತಿಕ್ರಿಯೆಯನ್ನು ಕೋರಿದ್ದು, ಏಪ್ರಿಲ್ 22 ಕ್ಕೆ ವಿಷಯವನ್ನು …

Read More »

ಎಸ್‌ ಬಿಐನಿಂದ ಚುನಾವಣಾ ಆಯೋಗಕ್ಕೆ ಎಲ್ಲಾ ಮಾಹಿತಿ ಸಲ್ಲಿಕೆ

ನವದೆಹಲಿ: ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದ ಅಂಕಿ-ಅಂಶಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಗುರುವಾರ (ಮಾರ್ಚ್‌ 21) ಸುಪ್ರೀಂಕೋರ್ಟ್‌ ಆದೇಶದಂತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ತಿಳಿಸಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ತನ್ನಲ್ಲಿರುವ ಎಲ್ಲಾ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವುದಾಗಿ ಸ್ಟೇಟ್‌ ಬ್ಯಾಂಕ್‌ ಅಧ್ಯಕ್ಷ ದಿನೇಶ್‌ ಕುಮಾರ್‌ ಖಾರಾ ಸುಪ್ರೀಂಗೆ ಸಲ್ಲಿಸಿರುವ ಅಫಿಡವಿತ್‌ ನಲ್ಲಿ ಮಾಹಿತಿ ನೀಡಿದೆ. ಈ ಮೊದಲು …

Read More »

ಕ್ಷೇತ್ರ – ಸಂಭವನೀಯ ಅಭ್ಯರ್ಥಿ

ಕ್ಷೇತ್ರ – ಸಂಭವನೀಯ ಅಭ್ಯರ್ಥಿ ಚಿತ್ರದುರ್ಗ – ಚಂದ್ರಪ್ಪ ರಾಯಚೂರು – ಕುಮಾರ್ ನಾಯಕ್ ಬೆಳಗಾವಿ – ಮೃಣಾಲ್ ಹೆಬ್ಬಾಳ್ಕರ್ ಚಿಕ್ಕೋಡಿ – ಪ್ರಿಯಾಂಕ ಜಾರಕಿಹೊಳಿ ಬಾಗಲಕೋಟೆ – ಸಂಯುಕ್ತ ಪಾಟೀಲ್ ಧಾರವಾಡ – ವಿನೋದ್ ಅಸೋಟಿ ಕೊಪ್ಪಳ – ರಾಜಶೇಖರ್ ಹಿಟ್ನಾಳ್ ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ ಬೀದರ್ – ಸಾಗರ್ ಖಂಡ್ರೆ ಮೈಸೂರು – ಎಂ.ಲಕ್ಷ್ಮಣ್ ದಕ್ಷಿಣ ಕನ್ನಡ – ಪದ್ಮರಾಜ್ ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್ …

Read More »

ಅಬಕಾರಿ ಅಕ್ರಮ ತಡೆಗಟ್ಟಲು ತಂಡಗಳ ರಚನೆ

ದಾವಣಗೆರೆ : ಲೋಕಸಭಾ ಚುನಾವಣೆ ನಡೆಯುತ್ತಿದ್ದು ಶಾಂತಯುತ, ಪಾರದರ್ಶಕ, ನಿಷ್ಪಕ್ಷಪಾತ ಚುನಾವಣೆ ನಡೆಸಲು ಅಕ್ರಮ ಕಳ್ಳಭಟ್ಟಿ ತಯಾರಿಕೆ, ನಕಲಿ ಮದ್ಯ, ಸರಾಯಿ, ಅಕ್ರಮ ಮದ್ಯ ಹಂಚಿಕೆ, ಮದ್ಯ, ಮಾದಕ ವಸ್ತುಗಳ ಸರಬರಾಜು ತಡೆಗಟ್ಟಲು ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಎಚ್ಚರ ವಹಿಸಲು ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ರಚಿಸಲಾಗಿದೆ. ನಕಲಿ ಮದ್ಯ, ಅಕ್ರಮ ಮದ್ಯ ಹಂಚಿಕೆ, ಮಾದಕ ವಸ್ತುಗಳ ಸರಬರಾಜು ಸೇರಿದಂತೆ ಇತರೆ ಅಕ್ರಮಗಳು ಕಂಡುಬಂದಲ್ಲಿ ಟೋಲ್ ಫ್ರೀ ಸಂಖ್ಯೆ 18004250379 ಗೆ …

Read More »

ಬೆಳಗಾವಿ ಲೋಕಸಭೆ ಚುನಾವಣೆ: ಭದ್ರಕೋಟೆಗೆ ಇನ್ನೂ ಸಿಗದ ಸೇನಾಪತಿ

ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿ ಐದು ದಿನಗಳಾದರೂ ಬೆಳಗಾವಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಇನ್ನೂ ಬಹಿರಂಗವಾಗಿ ಘೋಷಿಸಿಲ್ಲ. ಒಂದು ಹಳೆ ಮುಖ, ಇನ್ನೊಂದು ಹೊಸ ಮುಖದ ಹೆಸರು ಮಾತ್ರ ಕಾರ್ಯಕರ್ತರ ಬಾಯಿಯಲ್ಲಿ ಓಡಾಡುತ್ತಿವೆ.   ಬೆಳಗಾವಿ ಕ್ಷೇತ್ರ ಕಳೆದ ಐದು ಚುನಾವಣೆಗಳಿಂದ ಬಿಜೆಪಿ ಭದ್ರಕೋಟೆ ಎಂದು ನಿರೂಪಿಸಿದೆ. ದಿವಂಗತ ಸುರೇಶ ಅಂಗಡಿ ಅವರು 2004, 2009, 2014, 2019 ಹೀಗೆ ಸತತ …

Read More »

ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ,: ಟ್ವೀಟ್ ಮಾಡಿರುವ ಜೆಪಿ ನಡ್ಡಾ

ನವದೆಹಲಿ: ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರುವುದಕ್ಕೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ಜೆಪಿ ನಡ್ಡಾ, ಕಾಂಗ್ರೆಸ್ ನ್ನು ಜನ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ತಿರಸ್ಕರಿಸಲಿದ್ದಾರೆ ಹಾಗೂ ಐತಿಹಾಸಿಕ ಸೋಲನ್ನು ಎದುರಿಸುವ ಭಯದಿಂದ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸ್ಥೆಗಳ ಬಗ್ಗೆ ಮನಸೋ ಇಚ್ಛೆ ಮಾತನಾಡಿದ್ದಾರೆ, ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯನ್ನು ಆರ್ಥಿಕ …

Read More »

ಪರಿಷತ್ ಸ್ಥಾನಕ್ಕೆ ಮರಿತಿಬ್ಬೇಗೌಡ ರಾಜೀನಾಮೆ; ನಾಯಕರ ವಿರುದ್ಧ ವಾಗ್ದಾಳಿ

ಹುಬ್ಬಳ್ಳಿ: ವಿಧಾನ ಪರಿಷತ್ತು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮರಿತಿಬ್ಬೇಗೌಡ, ನಾನು ಸ್ವಇಚ್ಛೆಯಿಂದ ಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ನಲ್ಲಿ ಜಾತ್ಯತೀತ ತತ್ವಗಳು ಉಳಿದಿಲ್ಲ. ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದರು. ನಾಲ್ಕು ಬಾರಿ ದಕ್ಷಿಣ …

Read More »

ಕಿಟಕಿ ತೆರೆದು ದಂಪತಿ ಸರಸ ಸಲ್ಲಾಪ, ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆಯೂ ಮನವಿ,ವಿಚಿತ್ರ ದೂರೊಂದು ದಾಖಲ…

ಬೆಂಗಳೂರು, ಮಾರ್ಚ್​ 20: ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರು ಮೈಮರೆತು ಸರಸ ಸಲ್ಲಾಪದಲ್ಲಿ ತೊಡಗುವುದು ಹೆಚ್ಚಾಗುತ್ತಿವೆ ಎನ್ನುವ ಸುದ್ದಿಗಳು ಆಗುತ್ತಲೇ ಇರುತ್ತವೆ. ಆದರೆ ಬೆಂಗಳೂರಿನ ಈ ನಗರದಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಹಾಗಾದರೆ ಆ ಪ್ರಕರಣ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಚಿತ್ರ ದೂರೊಂದು ದಾಖಲಾಗಿದೆ. ಪಕ್ಕದ ಮನೆ ದಂಪತಿಯು ಕಿಟಕಿ ತೆರೆದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದಾರೆ. ಇದರಿಂದ ನಮಗೆ ತುಂಬಾ ಸಮಸ್ಯೆ ಆಗುತ್ತಿದೆ …

Read More »

CSK’ ನಾಯಕತ್ವಕ್ಕೆ ‘ಧೋನಿ’ ಗುಡ್ ಬೈ,

ನವದೆಹಲಿ : ಐಪಿಎಲ್ 2024ರ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕನನ್ನ ಘೋಷಿಸಿದ್ದು, ಇದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ . ಎಂಎಸ್ ಧೋನಿ ಇದ್ದಕ್ಕಿದ್ದಂತೆ ನಾಯಕತ್ವವನ್ನ ತೊರೆದಿದ್ದು, ಈಗ ಋತುರಾಜ್ ಗಾಯಕ್ವಾಡ್ ಅವರನ್ನ ಚೆನ್ನೈ ತಂಡದ ಹೊಸ ನಾಯಕನನ್ನಾಗಿ ಮಾಡಲಾಗಿದೆ.   ಧೋನಿ ಕಳೆದ ಋತುವಿನಲ್ಲಿ ಚೆನ್ನೈ ಪರ ಐದನೇ ಬಾರಿಗೆ ಐಪಿಎಲ್ ಗೆದ್ದಿದ್ದರು ಮತ್ತು ಈಗ ಅವರು ತಂಡದ ಕಮಾಂಡ್’ನ್ನ ಗಾಯಕ್ವಾಡ್’ಗೆ ಹಸ್ತಾಂತರಿಸಿದ್ದಾರೆ.

Read More »