Breaking News

ರಾಷ್ಟ್ರೀಯ

ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಗದಗ: ಡೀಸೆಲ್‌, ಪೆಟ್ರೋಲ್ ದರ ಏರಿಕೆ ಖಂಡಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮಹಿಳೆಯರು ತೆಂಗಿನಕಾಯಿ ಚಿಪ್ಪು ಪ್ರದರ್ಶಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ವಾಹನ ಸವಾರರ ಮೇಲೆ ಬರೆ ಎಳೆದ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ, ಜನಸಾಮಾನ್ಯರಿಗೆ ಹೊರೆಯಾದ ಕಾಂಗ್ರೆಸ್ …

Read More »

ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

ನವದೆಹಲಿ: 2017ರಲ್ಲಿ ಮಾರುಕಟ್ಟೆಗೆ ಬಂದ ಟಾಟಾ ನೆಕ್ಸಾನ್‌(Tata Nexon), 2021ರಿಂದ 2023ರವರೆಗೆ ಸತತ ಮೂರು ವರ್ಷಗಳ ಕಾಲ ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಎಸ್‌ ಯುವಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.   ಟಾಟಾ ನೆಕ್ಸಾನ್‌ ಮಾರುಕಟ್ಟೆಗೆ ಬಿಡುಗಡೆಗೊಂಡ ಏಳು ವರ್ಷಗಳಲ್ಲಿ ಟಾಟಾ ನೆಕ್ಸಾನ್‌ ಏಳು ಲಕ್ಷ ಮಾರಾಟ ಕಂಡಿರುವುದು ಟಾಟಾ ಮೋಟಾರ್ಸ್‌ ಸಂಭ್ರಮಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ 2018ರಲ್ಲಿ ಗ್ಲೋಬಲ್‌ NCAPನಿಂದ 5 ಸ್ಟಾರ್‌ ರೇಟಿಂಗ್‌ ಪಡೆದ ಭಾರತದ ಮೊದಲ ಕಾರು …

Read More »

ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು

ಮುದ್ದೇಬಿಹಾಳ: ತಾಲ್ಲೂಕಿನ ಮೂರು ಹೋಬಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧ ಮಾಡಿಕೊಂಡ ಕೃಷಿಪರಿಕರಗಳೊಂದಿಗೆ ಹೊಲಗಳತ್ತ ಮುಖ ಮಾಡಿದ್ದು, ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ತೊಗರಿ, ಹೆಸರು, ಸಜ್ಜೆ,ಹ ತ್ತಿ ಬೆಳೆಗಳ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೃಷಿ ಇಲಾಖೆಯಿಂದ ಈಗಾಗಲೇ ಮುದ್ದೇಬಿಹಾಳ, ಢವಳಗಿ, ನಾಲತವಾಡ ಹೋಬಳಿ ವ್ಯಾಪ್ತಿಯ ರೈತರಿಗೆ ತೊಗರಿ, ಹೆಸರು ಬೀಜಗಳನ್ನು ವಿತರಣೆ ಮಾಡಿದೆ. ಅದರಲ್ಲಿ ಮುಸುಕಿನ ಜೋಳ, ಬಿಜಿಎಸ್-9 ಹೆಸರು, ಟಿಎಸ್‌ಆರ್3ಆರ್ ತೊಗರಿ …

Read More »

ರೇಣುಕಾಸ್ವಾಮಿ ಹತ್ಯೆ ಬಳಿಕ ಆತನ ಚಿನ್ನದ ಸರ-ಉಂಗುರವನ್ನು ದೋಚಿದ್ದ ‘ಡಿ’ ಗ್ಯಾಂಗ್

ಬೆಂಗಳೂರು: ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಅಂಶಗಳು ಹೊರಬರುತ್ತಿವೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆಗೈದು ಶವ ಎಸೆದಿದ್ದ ಡಿ ಗ್ಯಾಂಗ್, ಆತಮನ ಮೈಮೇಲೆ ಇದ್ದ ಚಿನ್ನಾಭರಣ, ವಾಚ್ ಗಳನ್ನು ದೋಚಿದ್ದರು. ರೇಣುಕಾಸ್ವಾಮಿಯ ಶವದ ಮೇಲಿದ್ದ ಚಿನ್ನದ ಚೈನ್, ಉಂಗುರ, ಬೆಳ್ಳಿ ಕಡಗ, ವಾಚ್ ಗಳನ್ನು ಬಿಡದ ಆರೋಪಿ ರಾಘವೇಂದ್ರ, ಚಿನ್ನಾಭರಣಗಳನ್ನು ಕಿತ್ತುಕೊಂಡು ತನ್ನ ಪತ್ನಿಗೆ ಕೊಟ್ಟಿದ್ದ. ಇದೀಗ ಆರೋಪಿ ರಾಘವೇಂದ್ರ ಪತ್ನಿ ಬಳಿ ಇದ್ದ …

Read More »

ವಿದ್ಯುತ್ ತಂತಿ ತಗುಲಿ ರೈತ, ಎತ್ತು ಸಾವು

ಕೊಪ್ಪಳ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ರೈತ ಹಾಗೂ ಎತ್ತು ಮೃತಪಟ್ಟ ಘಟನೆ ತಾವರಗೇರಾ ಸಮೀಪದ ಚಿಕ್ಕತೆಮ್ಮಿನಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ(38) ಮೃತಪಟ್ಟ ರೈತ ಎಂದು ಹೇಳಲಾಗಿದೆ. ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿದ್ದು, ವಿದ್ಯುತ್ ಪ್ರವಹಿಸಿ ಎತ್ತು ಹಾಗೂ ರೈತ ಬಸವರಾಜ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ದೊಡ್ಡನಗೌಡ ಪಾಟೀಲ ಕೂಡ ಭೇಟಿ ನೀಡಿ …

Read More »

ರೇಣುಕಾಸ್ವಾಮಿ ಕುಟುಂಬಸ್ಥರಿಗೆ ನ್ಯಾಯ ಸಿಗಲಿ; ನಟ ಕಿಚ್ಚ ಸುದೀಪ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್​ ಆಗಿದ್ದಾರೆ.ಈಗಾಗಲೇ ನಟ ದರ್ಶನ್ ಸೇರಿ ಒಟ್ಟು 13 ಮಂದಿಯನ್ನು ಪೊಲೀಸ್​ ಅಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಿಚ್ಚ ಸುದೀಪ್​​ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.   ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಕೊಲೆಯಾಗಿದ್ದಾರೆ. ಈ ಪ್ರಕರಣವನ್ನು ನಾನು ಒಬ್ಬ ಕಾಮನ್​ ಮ್ಯಾನ್​​ ರೀತಿ ನೋಡುತ್ತಿದ್ದೇನೆ. ಅವರ ಪರ ಇವರ ಪರ ಮಾತನಾಡುವುದು ತಪ್ಪಾಗುತ್ತದೆ. ರೇಣುಕಾಸ್ವಾಮಿ ಕುಟುಂಬಕ್ಕೆ ಹಾಗೂ ಹುಟ್ಟಬೇಕಾಗಿರುವ ಅವರ ಮಗುವಿಗೆ …

Read More »

ಚುನಾವಣೆಗೂ ತೈಲ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ; ಸಿಎಂ

ವಿಜಯಪುರ: ಎಂಪಿ ಚುನಾವಣೆ ಸೋಲಿನ ಸೇಡಿಗೆ ತೈಲ ದರ ಏರಿಕೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆಗೂ ತೈಲ ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಇದ್ದಾಗ ಶೇ.35ರಷ್ಟಿತ್ತು. ಈಗ ರಾಜ್ಯದಲ್ಲಿ ತೈಲ ದರ 102.86 ಪೈಸೆ ಆಗಿದೆ. ತಮಿಳುನಾಡು ಸಮ ಆಗಿದೆ. ಆಂಧ್ರಪ್ರದೇಶದಲ್ಲಿ 109 ರೂ ಇದೆ. ಹೈದರಾಬಾದ್ ನಲ್ಲಿಯೂ ಹೆಚ್ಚಳವಾಗಿದೆ. ಮಹಾರಾಷ್ಟ್ರದಲ್ಲಿ 104 …

Read More »

ಪ್ರಾಣಿಗಳ ಬಾಯಾರಿಕೆ ತಣಿಸುವ ರೈತ

ಬೈಲಹೊಂಗಲ: ಬಿಸಿಲಿನ ಬೇಗೆಯಿಂದ ಬಳಲಿದ ಪಶು, ಪಕ್ಷಿ, ದನ-ಕರು, ಕುರಿಗಳಿಗೆ ನಿತ್ಯವೂ ಕುಡಿಯಲು ಉಚಿತವಾಗಿ ನೀರು ಪೂರೈಸುತ್ತಿರುವ ರೈತ ಬಾಬು ನಾಯ್ಕರ ಅವರ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಪಟ್ಟಣದ ಹೊಸೂರ ರಸ್ತೆಯ ತಮ್ಮ ಬರಡು ಕೃಷಿ ಭೂಮಿಯಲ್ಲಿರುವ ಹೊಂಡದಲ್ಲಿ ಬೋರ್‌ವೆಲ್ ಮೂಲಕ ಎರಡು ಹೊತ್ತು ನೀರು ಸಂಗ್ರಹಿಸಿ, ನಿತ್ಯ ನೂರಾರು ಕುರಿಗಳ ದಾಹ ತಣಿಸುತ್ತಿದ್ದಾರೆ. ಬಿಸಿಲಿನ ದಗೆಗೆ ಬಾಯಾರಿದ ಕುರಿಗಳು ದಾರಿ ಮಧ್ಯೆ ಈ ರೈತನ ಜಮೀನಿಗೆ ಬಂದು …

Read More »

ನಕಲಿ ವೈದ್ಯ ಲೀಸ್‌ಗೆ ಪಡೆದಿದ್ದ ತೋಟದಲ್ಲಿ 3 ಭ್ರೂಣ ಪತ್ತೆ

ಕಿತ್ತೂರು: ಹೆಣ್ಣು ಶಿಶು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿರುವ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡ್ ಖಾನ್ ಲೀಸ್ ಮೇಲೆ ಮಾಡಿದ ತೋಟಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಭಾನುವಾರ ಭೇಟಿ ನೀಡಿ ತಪಾಸಣೆ ನಡೆಸಿದ್ದು, ನೆಲದಡಿ ಮುಚ್ಚಲಾಗಿದ್ದ ಮೂರು ಭ್ರೂಣ ಪತ್ತೆಯಾಗಿವೆ. ತಿಗಡೊಳ್ಳಿ ಮಾರ್ಗದ ಬಸರಕೋಡ ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಭ್ರೂಣಗಳು ಪತ್ತೆಯಾಗಿದ್ದು, ತಪಾಸಣೆ ಮುಂದುವರಿದಿದೆ. ‘ಹೆಣ್ಣು ಶಿಶು ಮಾರಾಟ ಪ್ರಕರಣದಲ್ಲಿ ಬಂಧಿತನಾಗಿರುವ …

Read More »

ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಿವಾಳಿ ಎದ್ದಿದೆ. ಹೀಗಾಗಿ ಜನರ ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯ ಬರೆ ಹಾಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕುಟುಕಿದರು. ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಬೆಲೆ ಏರಿಕೆ ಇಟ್ಟುಕೊಂಡು ರಾಜಕಾರಣ ಮಾಡಿದರು. ಇವತ್ತು ಪೆಟ್ರೋಲ್, ಡಿಸೇಲ್ ದರ 3 ರೂ. ಹೆಚ್ಚಾಗಿದ್ದು ನೋಡಿದರೆ ಕರ್ನಾಟಕದಲ್ಲಿ ಅತೀ ಹೆಚ್ಚು ಬೆಲೆ ಆಗುತ್ತದೆ. ಸಾರಿಗೆ …

Read More »