Breaking News

ರಾಷ್ಟ್ರೀಯ

ಭ್ರಷ್ಟಾಚಾರ’ವೇ ನಿಮ್ಮ ತಾಯಿ-ತಂದೆ, ನಿಮ್ಮ ಬಂಧು ಬಳಗ: ‘BJP-JDS ನಾಯಕ’ರಿಗೆ ‘DKಕುಟುಕು

ರಾಮನಗರ : “ಭ್ರಷ್ಟಾಚಾರವೇ ನಿಮ್ಮ, ತಾಯಿ ತಂದೆ, ಭ್ರಷ್ಟಾಚಾರವೇ ನಿಮ್ಮ ಬಂಧು ಬಳಗ, ಭ್ರಷ್ಟಾಚಾರ ಮಾಡಿರುವ ನಿಮ್ಮನ್ನು ಮೆಚ್ಚನಾ ಪರಮಾತ್ಮನು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹರಿತ ಮಾತುಗಳಿಂದ ಕುಟುಕಿದರು. ಬಿಜೆಪಿ-ಜೆಡಿಎಸ್ ಪಾದಯಾತ್ರೆ ವಿರುದ್ಧ ರಾಮನಗರದಲ್ಲಿ ಶನಿವಾರ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, “ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಬೆಂಗಳೂರು-ಮೈಸೂರು ರಸ್ತೆಯಲ್ಲಿ ಪಾದಯಾತ್ರೆ ಮಾಡುವ ಮೂಲಕ ಅವರ ಭ್ರಷ್ಟಾಚಾರ …

Read More »

ಚಿತ್ರದುರ್ಗಕ್ಕೆ ನಟ ಧ್ರುವ ಸರ್ಜಾ ಭೇಟಿ

ಚಿತ್ರದುರ್ಗ, ಆಗಸ್ಟ್‌ 03: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘಾ ಮಠಕ್ಕೆ ನಟ ಧ್ರುವ ಸರ್ಜಾ ಭೇಟಿ ನೀಡಿ, ಮುರುಘಾ ಶರಣರ ಗದ್ದುಗೆಯ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮುರುಘಾ ಮಠಕ್ಕೆ ಭೇಟಿ ಕೊಟ್ಟು, ಶ್ರೀಗಳ ಗದ್ದೆಗೆಯ ಆಶೀರ್ವಾದ ಪಡೆದಿದ್ದೇನೆ. ಮುಂಬೈನಲ್ಲಿ ಮಾರ್ಟಿನ್ ಸಿನಿಮಾದ ಟೈಲರ್ ಲಾಂಚ್ ಮಾಡಲಾಗುತ್ತಿದೆ. ಈ ಬಗ್ಗೆ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇವೆ. ಅಂತರಾಷ್ಟ್ರೀಯ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ’ ಎಂದರು. ‘ಇನ್ನು ಮುಂಬೈಗೆ ಹೋಗುವ ಮಾರ್ಗ …

Read More »

ಮನೆ ಕೊಚ್ಚಿ ಹೋದರೂ ಬದುಕುಳಿದ ಹಸುಗೂಸು, 6ರ ವಯಸ್ಸಿನ ಕಂದಮ್ಮ

ವಯನಾಡ್‌: ಪೊಟ್ಟಮಾಲ್‌ನಲ್ಲಿ ಒಂದೇ ಕುಟುಂಬದ 6 ಮಂದಿ ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಇಡೀ ಮನೆ ನೀರು ಪಾಲಾಗಿದೆ. ಆದರೆ, ಅದೇ ಮನೆಯ 40 ದಿನದ ಹಸುಗೂಸು ಅನರಾ ಮತ್ತು 6 ವರ್ಷದ ಕಂದಮ್ಮ ಮೊಹಮ್ಮದ್‌ ಹಯನ್‌ ಮಾತ್ರ ಮೃತ್ಯುಪಾಶದಿಂದ ಪಾರಾಗಿ ದ್ದಾರೆ. ಪ್ರವಾಹದ ನೀರು ಮನೆ ಆವರಿಸುತ್ತಿದ್ದಂತೆಯೇ ಮಕ್ಕಳ ತಾಯಿ ಇಬ್ಬರೂ ಮಕ್ಕಳನ್ನು ಕೈಯಲ್ಲಿ ಹಿಡಿದು ಪಕ್ಕದ ಮನೆಯ ಮಹಡಿ ತಲುಪುವಲ್ಲಿ ಸಫ‌ಲರಾಗಿದ್ದಾರೆ. ಅನರಾಳನ್ನು ಅಲ್ಲಿ ರಕ್ಷಿಸಲಾಗಿದೆ. ಇತ್ತ ಹಯನ್‌ ತಾಯಿಯ ಕೈ …

Read More »

ಚಂದ್ರಶೇಖರ​ ಗುರೂಜಿ ಕೊಲೆ ಕೇಸ್‌: ಆರೋಪಿಯ ಜಾಮೀನು ಅರ್ಜಿ ವಜಾ

ಬೆಂಗಳೂರು : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಮಹಾಂತೇಶ ಶಿರೂರು ಜಾಮೀನು ಅರ್ಜಿ ಸಲ್ಲಿಸಿದ್ದ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಗೊಳಿಸಿತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರು ಆರೋಪಿಯ ಅರ್ಜಿ ವಜಾಗೊಳಿಸಿ ಅದೇಶಿಸಿದ್ದಾರೆ.ಹಳೆಯ ದ್ವೇಷದಿಂದ ಅರ್ಜಿದಾರ ಆರೋಪಿ ಚಂದ್ರಶೇಖರ ಗುರೂಜಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿರುವ ರೀತಿ ನೋಡಿದರೆ, ಗುರೂಜಿ ಮೇಲೆ ಆರೋಪಿ …

Read More »

ಕಲಘಟಗಿ | ಬಿಡಾಡಿ ದನ, ನಾಯಿಗಳ ಹಾವಳಿ ಹೆಚ್ಚಳ

ಕಲಘಟಗಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊದರೆಯಾಗುತ್ತಿದೆ. ಪಟ್ಟಣದ ವ್ಯಾಪ್ತಿಯಲ್ಲಿ 17 ವಾರ್ಡ್‌ಗಳಿವೆ. ಗಾಂಧಿನಗರ, ಮಾರುಕಟ್ಟೆ, ಬಸ್ ನಿಲ್ದಾಣ, ಎಪಿಎಂಸಿ, ಆಂಜನೇಯ ವೃತ್ತ, ಜೋಳದ ಓಣಿ, ಯುವ ಶಕ್ತಿ ವೃತ್ತ ಸೇರಿದಂತೆ ಕೆಲವು ಸರ್ಕಾರಿ ಕಚೇರಿ ಆವರಣದಲ್ಲಿ ಬೀದಿ ನಾಯಿಗಳು ಹಾಗೂ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಸ್ತೆ ಮಧ್ಯೆ ದನಗಳು ಸದಾ ಮಲಗಿರುತ್ತವೆ. ಹೀಗಾಗಿ ವಾಹನ ಸಂಚಾರಕ್ಕೆ …

Read More »

ಹುಬ್ಬಳ್ಳಿ | ನೈರುತ್ಯ ರೈಲ್ವೆ: ಜುಲೈನಲ್ಲಿ ₹ 286.28 ಕೋಟಿ ಆದಾಯ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಕಳೆದ ಜುಲೈ ತಿಂಗಳಲ್ಲಿ ವಿವಿಧ ವಿಭಾಗಗಳಲ್ಲಿ ಗಣನೀಯ ಬೆಳವಣಿಗೆ ಸಾಧಿಸಿದೆ. ಪ್ರಯಾಣಿಕರಿಂದ ₹ 286.28 ಕೋಟಿ ಆದಾಯ ಗಳಿಸಿದೆ. ಇದು ಹಿಂದಿನ ವರ್ಷದ ₹ 266.27 ಕೋಟಿಗೆ ಹೋಲಿಸಿದರೆ ಶೇ 7.51 ರಷ್ಟು ಹೆಚ್ಚಳವಾಗಿದೆ. ಪಾರ್ಸಲ್‌ ಆದಾಯವು ₹ 14.19 ಕೋಟಿಗೆ ತಲುಪಿದ್ದು, ಹಿಂದಿನ ವರ್ಷ ₹ 12.83 ಕೋಟಿ ಗಳಿಸಿತ್ತು. ಶೇ 10.60ರಷ್ಟು ಏರಿಕೆಯಾಗಿದೆ. ಹೆಚ್ಚುವರಿಯಾಗಿ, ಇತರ ಕೋಚಿಂಗ್ ಆದಾಯವು ಕಳೆದ ವರ್ಷದ ₹ …

Read More »

ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ‘ಕರ್ನಾಟಕ ಭವನ’ ಲೋಕಾರ್ಪಣೆ

ಗುಡ್ಡಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ₹10.96 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ‘ಕರ್ನಾಟಕ ಭವನ’ವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು. ‘ಕರ್ನಾಟಕ ಭವನ’ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, 12ನೇ ಶತಮಾನದಲ್ಲೇ ಬಸವಣ್ಣ ಮಹಿಳೆಯರಿಗೆ ಆದ್ಯತೆ ನೀಡಿದ್ದರು. ‌ಅಕ್ಕಮಹಾದೇವಿ, ದಾನಮ್ಮ ದೇವಿ ಅವರಲ್ಲಿ ಮುಖ್ಯರಾಗಿದ್ದಾರೆ. ದಾನಮ್ಮ ದೇವಿ …

Read More »

ಕರ್ಮ, ಅಕರ್ಮ, ವಿಕರ್ಮದ ಅರಿವಿರಲಿ: ಮೋಹನ್‌ ಭಾಗವತ್‌

ಬೆಳಗಾವಿ: ‘ಕರ್ಮ, ಅಕರ್ಮ ಮತ್ತು ವಿಕರ್ಮದ ಬಗ್ಗೆ ನಾವು ಸದಾ ಜಾಗೃತರಾಗಬೇಕು. ಯಾವ ಕರ್ಮ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು. ಇಲ್ಲಿನ ಅಕಾಡೆಮಿ ಆಫ್‌ ಕಂಪೇರೆಟಿವ್‌ ಫಿಲಾಸಫಿ ಆಯಂಡ್‌ ರಿಲೀಜನ್‌ (ಎಸಿಪಿಆರ್‌)ನ ಶತಮಾನೋತ್ಸವಕ್ಕೆ ಚಾಲನೆ ಹಾಗೂ ಗುರುದೇವ ರಾನಡೆ ರಚಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಬದುಕಿನಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಭಕ್ತಿ ಅಗತ್ಯ. ರಾಮ ಮತ್ತು ರಾವಣ ಇಬ್ಬರಿಗೂ …

Read More »

ಬೆಳಗಾವಿ | ಬೋಟ್‌ ಪಲ್ಟಿ: ತಪ್ಪಿದ ಅನಾಹುತ

ಬೆಳಗಾವಿ: ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದ ಬಳಿ ಗುರುವಾರ, ಎನ್‌ಡಿಆರ್‌ಎಫ್‌ ತಂಡ ಬೋಟ್‌ ಕೃಷ್ಣಾ ನದಿ ಸೆಳವಿಗೆ ಸಿಕ್ಕು ಪಲ್ಟಿಯಾಯಿತು. ಎಲ್ಲ ಸಿಬ್ಬಂದಿ ಲೈಫ್‌ ಜಾಕೆಟ್‌ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು. ಇಲ್ಲಿರುವ ಜಾಕ್ವೆಲ್‌ ಕೃಷ್ಣಾ ನದಿ ನೀರಿನಲ್ಲಿ ಮುಳುಗಿದೆ. ಇದರಿಂದ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಜ್ವಾಕ್ವೆಲ್‌ ದುರಸ್ತಿಗೆ ವಾಟರ್ ಮ್ಯಾನ್, ಲೈನ್ ಮ್ಯಾನ್ ಹಾಗೂ ಎನ್‌ಡಿಆರ್‌ಎಫ್‌ ತಂಡದವರು ಬೋಟ್‌ ಮೂಲಕ ತೆರಳಿದ್ದರು. ನೀರಿನ ರಭಸಕ್ಕೆ ಬೋಟ್‌ ನಿಯಂತ್ರಣ …

Read More »

ಉಕ್ಕಿ ಹರಿಯುತ್ತಿರುವ ತುಂಗಭದ್ರಾ: ವಿಠಲಾಪುರದಲ್ಲಿ 16 ಮನೆಗಳು ಜಲಾವೃತ, ಕಾಳಜಿ ಕೇಂದ್ರ ಆರಂಭ

ಗದಗ: ತುಂಗಭದ್ರಾ ನದಿಯ ಪ್ರವಾಹದಿಂದ ಮುಂಡರಗಿ ತಾಲೂಕಿನ ವಿಠಲಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು, ತಗ್ಗು ಪ್ರದೇಶದಲ್ಲಿರುವ 16 ಮನೆಗಳು ಜಲಾವೃತಗೊಂಡಿವೆ. ವಿಠಲಾಪುರ ಗ್ರಾಮದ 40 ಜನರನ್ನು ಸ್ಥಳೀಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಳಾಂತರಿಸಿ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.

Read More »