Breaking News

ರಾಷ್ಟ್ರೀಯ

ಕನ್ನಡ ಭಾಷೆಯನ್ನು ಉಳಿಸಬೇಕಾದ ಜನಪ್ರತಿನಿಧಿಗಳೇ ಭಾಷೆ ಮರೆತರೆ ಹೇಗೆ?

ಬೆಳಗಾವಿ : ಕನ್ನಡ ಭಾಷೆಯನ್ನು ಉಳಿಸಬೇಕಾದ ಜನಪ್ರತಿನಿಧಿಗಳೇ ಭಾಷೆ ಮರೆತರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಜಾಹಿರಾತು ಫಲಕದಲ್ಲಿ ಕನ್ನಡವನ್ನು ಶೇಕಡಾ 70 ರಷ್ಟು ಬಳಸಬೇಕಾದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಮೂಡಿದೆ. ಹೌದು ಸ್ವಾತಂತ್ರ್ಯ ದಿನದ ಅಂಗವಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರ ಹೆಸರಿನಲ್ಲಿ ಅಳವಡಿಸಿರುವ ಬ್ಯಾನರ್ ನಲ್ಲಿ ಕನ್ನಡವೇ ಮಾಯವಾಗಿದೆ. ಕೇವಲ ಆಂಗ್ಲ ಭಾಷೆಯಲ್ಲೇ ಅವರು ಶುಭಾಶಯ ತಿಳಿಸಿದ್ದು …

Read More »

ರಾಜ್‌ಪಾಲ್ ಯಾದವ್ ರ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ

ಮುಂಬಯಿ: ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ತವರು ಪಟ್ಟಣವಾದ ಶಹಜಹಾನ್‌ಪುರದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಬ್ಯಾಂಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ಆಗಮಿಸಿ ಭಾನುವಾರ ಆಸ್ತಿಯ ಮೇಲೆ ಬ್ಯಾನರ್ ಹಾಕಿದ್ದಾರೆ. ಆಸ್ತಿಯು ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ್ದು, ಯಾವುದೇ ರೀತಿಯ ಖರೀದಿ ಅಥವಾ ಮಾರಾಟವನ್ನು ಮಾಡಲು ಸಾಧ್ಯವಿಲ್ಲ ಎಂದು …

Read More »

ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ : ಎಂ.ಬಿ.ಪಾಟೀಲ್

ವಿಜಯಪುರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಮ್ಮ ಬದ್ಧತೆ. ಸರ್ಕಾರ ಇರುವವರೆಗೂ ಈ ಯೋಜನೆಗಳು ಇರುತ್ತವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ತಿಳಿಸಿದರು. ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಆದಾಗ್ಯೂ, ಅಭಿವೃದ್ಧಿಗೆ ಹಣ ಏನು ಶೇಖರಣೆ ಮಾಡಬೇಕು, ಮಾಡುತ್ತೇವೆ’ ಎಂದರು. ನಮ್ಮ …

Read More »

ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು

ಪಾವಗಡ: ಆಂಧ್ರಪ್ರದೇಶದ ರೊದ್ದಂ ನಿಂದ ಕರ್ನಾಟಕದ ಕೊಡುಮಡುಗು ಗ್ರಾಮದ ಕಡೆಗೆ ಬರುತ್ತಿದ್ದ ಬೈಕ್ ಮತ್ತು ಕೊಡಮಡುಗು ಗ್ರಾಮದಿಂದ ಆಂಧ್ರ ಕಡೆ ಹೋಗುತ್ತಿದ್ದ ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಆ.14ರ ಬುಧವಾರ ನಡೆದಿದೆ. ಆಂಧ್ರಪ್ರದೇಶದ ಪೆದ್ದಗುವ್ವಲಪಲ್ಲಿ ಗ್ರಾಮದ ರಾಮಾಂಜನೇಯಲು (56) ಮೃತಪಟ್ಟ ವ್ಯಕ್ತಿ. ಆ.14ರ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸಂದರ್ಭದಲ್ಲಿ ಪಾವಗಡ ತಾಲೂಕಿನ ಕೊಡುಮಡುಗು ಗ್ರಾಮದ ಹೊರವಲಯದ ಬೈರಪುರದ ಗೇಟ್ ಬಳಿ ಆಂಧ್ರ ಮತ್ತು …

Read More »

ದರ್ಶನ್‌ & ಗ್ಯಾಂಗ್‌ ನ್ಯಾಯಾಂಗ ಬಂಧನದಅವಧಿ ಆ.28ರವರೆಗೆ ವಿಸ್ತರಣೆ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ(Renukaswamy Case) ಸಂಬಂಧ ಜೈಲಿನಲ್ಲಿರುವ ನಟ ದರ್ಶನ್‌(Darshan) ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಬುಧವಾರ(ಆ.14ರಂದು) ಮತ್ತೆ ವಿಸ್ತರಣೆ ಮಾಡಲಾಗಿದೆ. ‌ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ , ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು.   ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶ ವಿಶ್ವನಾಥ್‌ ಸಿ ಗೌಡರ್ ಅವರು ಆ.28ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು …

Read More »

ಸೊಸೆ ಮಾಡಿದ ಮೋಸಕ್ಕೆ ಬೀದಿಗೆ ಬಂದ ಬದುಕು

ಗದಗ: ಸೊಸೆ ಮಾಡಿದ ಮೋಸಕ್ಕೆ ಬದುಕು ಬೀದಿಗೆ ಬಂದಿದ್ದು, ನನಗಾಗಿರುವ ಅನ್ಯಾಯಕ್ಕೆ ಸಮಾಜದ ಯಾವುದೇ ವ್ಯಕ್ತಿ, ಅಧಿಕಾರಿಗಳಿಂದ ನ್ಯಾಯ ಸಿಕ್ಕಿಲ್ಲ. ಆದಕಾರಣ, ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಸ್ಥಳೀಯ ಆದಿತ್ಯ ನಗರದ ನಿವಾಸಿ ಅನುಸೂಯ ಬಸವಂತಪ್ಪ ಕರಕಿಕಟ್ಟಿ ಅವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟು ವರ್ಷಗಳ ಹಿಂದೆ ಮಗನಿಗೆ ಪಾರ್ವತೆವ್ವ ಹುನಗುಂದ ಎಂಬ ಹುಡುಗಿ ನೋಡಿ ವಿವಾಹ ಮಾಡಲಾಗಿತ್ತು. ಮದುವೆಯಾದ ಮೂರು …

Read More »

ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ.!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಮರ್ಡರ್ ನಡೆದಿದ್ದು, ಪತಿಯೋರ್ವ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಗೌರಿ (26) ಎಂಬ ಮಹಿಳೆ ಕೊಲೆಯಾಗಿದ್ದು, ಸ್ಮಶಾನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ನಿನ್ನೆ ಸಂಜೆ 7:30 ರ ವೇಳೆಗೆ ಹತ್ಯೆ ನಡೆದಿದ್ದು, ಸ್ಥಳೀಯರು ಮೃತದೇಹ ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಅಪಾಯದಲ್ಲಿವೆ 563 ಶಾಲಾ ಕೊಠಡಿಗಳು

ಚಿಂಚೋಳಿ: ತಾಲ್ಲೂಕಿನಲ್ಲಿ ವಿವಿಧೆಡೆ ಸರ್ಕಾರಿ ಶಾಲೆಗಳು ಸೋರುತ್ತಿದ್ದು ಅಪಾಯದ ಸ್ಥಿತಿಯಲ್ಲಿವೆ. ಕೆಲವು ಶಾಲೆಗಳ ಛತ್ತಿನ ಪ್ಲಾಸ್ಟರ್ ಕಿತ್ತು ಬೀಳುತ್ತಿದ್ದು ಮಕ್ಕಳು ಹೆದರಿಕೆಯಲ್ಲಿಯೇ ಪಾಠ ಪ್ರವಚನ ಆಲಿಸುವಂತಾಗಿದೆ. ತಾಲ್ಲೂಕಿನಲ್ಲಿ 298 ಸರ್ಕಾರಿ ಶಾಲೆಗಳಿವೆ. ಇಲ್ಲಿ 28,340 ಮಕ್ಕಳ ದಾಖಲಾತಿಯಿದೆ. ಇವರಿಗೆ ಪಾಠ ಪ್ರವಚನ ನಡೆಸಲು ಒಟ್ಟು 2,073 ಶಾಲಾ ಕೊಠಡಿಗಳಿದ್ದು, ಈ ಪೈಕಿ 1,200 ಕೊಠಡಿಗಳು ಸುಸ್ಥಿತಿಯಲ್ಲಿವೆ. 308 ಶಿಥಿಲ ಕೊಠಡಿಗಳು ಸೇರಿ 563 ಕೊಠಡಿಗಳು ಅಪಾಯದಲ್ಲಿವೆ. 255 ಕೊಠಡಿಗಳಿಗೆ ಭಾರಿ ದುರಸ್ತಿಯ …

Read More »

ಬದಲಾಗಲಿದೆ ಉತ್ತರ ಕರ್ನಾಟಕ‌ ಭಾಗದ ಪ್ರವಾಸೋದ್ಯಮ

ಬೆಳಗಾವಿ, ಆಗಸ್ಟ್ 14: ಉತ್ತರ ಕರ್ನಾಟಕ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ಆದರೆ ಅವುಗಳು ಪ್ರಚಾರದಲ್ಲಿ, ಅಭಿವೃದ್ಧಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಈಗ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇರುವ ಪೂರಕ ಅಂಶಗಳನ್ನು ಗುರುತಿಸಿ ಅವುಗಳ‌ ಮೇಲೆ ಹೆಚ್ಚಿನ ಗಮನ ಹರಿಸಿ, ಈ ಭಾಗದ ಪ್ರವಾಸೋದ್ಯಮದ ಚಿತ್ರಣ ಬದಲಿಸಲು ಯೋಜನೆ ರೂಪಿಸಲಾಗಿದೆ.   ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಬೆಳಗಾವಿಯ ಪ್ರಯಾಣ,‌ ಪ್ರವಾಸೋದ್ಯಮ‌ ಮತ್ತು ಆತಿಥ್ಯ ಮದ್ಯಸ್ಥಿಕೆಗಾರರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಬೆಳಗಾವಿ ವಿಮಾನ ನಿಲ್ದಾಣದ …

Read More »

ಸ್ವಾತಂತ್ರ್ಯೋತ್ಸವದಲ್ಲಿ ಅಂಗಾಂಗ ದಾನಿಗಳ 64 ಕುಟುಂಬಗಳವರಿಗೆ ಪ್ರಶಂಸಾ ಪತ್ರ

ಬೆಂಗಳೂರು,ಆ.13- ಮಾಣಿಕ್‌ ಷಾ ಪೆರೇಡ್‌ ಮೈದಾನದಲ್ಲಿ ಈ ಬಾರಿ ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಂಗಾಂಗ ದಾನ ಮಾಡಿರುವ 64 ಕುಟುಂಬಗಳ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಂಸಾ ಪತ್ರ ನೀಡಿ ಗೌರವಿಸಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಇಂದಿಲ್ಲಿ ತಿಳಿಸಿದರು.   ಸ್ವಾತಂತ್ರ್ಯ ದಿನಾಚರಣೆ ಕುರಿತಂತೆ ಹಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಬಾರಿ ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಸ್ಥಾಪಿತವಾದ ಸ್ಟೇಟ್‌ ಆರ್ಗನ್‌ …

Read More »