ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡ ಬದಲಾವಣೆ ಮಾಡಲು ಇದೀಗ ದೆಹಲಿಯಿಂದ ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಪ್ಲಾನ್ ಮಾಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ’ ಸೈಟುಗಳ ಹಂಚಿಕೆಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಈ ಆರೋಪದ ಬೆನ್ನಲ್ಲೇ ಕಾಂಗ್ರೆಸ್ ಕೇಂದ್ರ ನಾಯಕರು ಎಂತಹ ನಿರ್ಧಾರ ಕೈಗೊಂಡಿದ್ದಾರೆ ಗೊತ್ತೆ? ಹಾಗಾದರೆ ಸಿಎಂ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಈಗ ಕಂಟಕ ಎದುರಾಗಿದೆಯಾ? ಬನ್ನಿ ತಿಳಿಯೋಣ
Read More »ಭಾರತೀಯರಿಗೆ ಗುಡ್ ನ್ಯೂಸ್ : ವೀಸಾ ಮುಕ್ತ ಪ್ರವೇಶ ಘೋಷಿಸಿದ ಈ 6 ದೇಶಗಳು!
ನವದೆಹಲಿ : ಭಾರತೀಯ ಪ್ರವಾಸಿಗರಿಗೆ ಸಿಹಿಸುದ್ದಿ,ಆರು ದೇಶಗಳು ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿವೆ. ಅದರಂತೆ, ಈ ಆರು ದೇಶಗಳು ವೀಸಾ ಇಲ್ಲದೆ ಹೋಗಬಹುದು. ಆದಾಗ್ಯೂ, ಆ ದೇಶಕ್ಕೆ ಆಗಮಿಸಿದ ನಂತರ ವೀಸಾ-ಆನ್-ಅರೈವಲ್ ತೆಗೆದುಕೊಳ್ಳಬೇಕು. ವೀಸಾ-ಆನ್-ಅರೈವಲ್ ಎಂದರೆ ಆಯಾ ದೇಶಗಳಿಗೆ ಹೋಗುವಾಗ ಮುಂಚಿತವಾಗಿ ವೀಸಾ ಅಗತ್ಯವಿಲ್ಲ. ಆ ದೇಶದಲ್ಲಿ ಇಳಿದ ನಂತರ, ನಿಮ್ಮ ದಾಖಲೆಗಳನ್ನು ವಿಮಾನ ನಿಲ್ದಾಣದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ವೀಸಾ ನೀಡಲಾಗುತ್ತದೆ. ಜೋರ್ಡಾನ್ ನ ಆರು ದೇಶಗಳಲ್ಲಿ …
Read More »ಸಾಲಗಾರರಿಗೆ ಶಾಕ್: ಬಡ್ಡಿದರ ಏರಿಕೆಯಿಂದ ಎಸ್.ಬಿ.ಐ. ಸಾಲ ಮತ್ತಷ್ಟು ದುಬಾರಿ
ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಸಾಲ ಮತ್ತಷ್ಟು ದುಬಾರಿಯಾಗಿದೆ. ಎಸ್‌ಬಿಐ ತನ್ನ ಬಹುತೇಕ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 0.10 ರಷ್ಟು ಏರಿಕೆ ಮಾಡಿದೆ. ಇದರೊಂದಿಗೆ ಎಂಸಿಎಲ್‌ಆರ್ ಆಧರಿತ ಎಲ್ಲಾ ಸಾಲಗಳು ದುಬಾರಿಯಾಗಲಿವೆ. ಇಎಂಐ ಹೆಚ್ಚಳ ಅಥವಾ ಸಾಲದ ಕಂತು ವಿಸ್ತರಣೆ ಮೂಲಕ ಸಾಲಗಾರರಿಗೆ ಹೊರೆ ಹೆಚ್ಚಾಗಲಿದೆ. ಆಗಸ್ಟ್ 15 ರಿಂದಲೇ ಅನ್ವಯವಾಗುವಂತೆ ಎಸ್.ಬಿ.ಐ. ಹೊಸ ಬಡ್ಡಿದರ ಪರಿಷ್ಕರಣೆ ಮಾಡಿದ್ದು, ಮನೆ, ವಾಹನ, ಗೃಹ ಇತರೆ ಸಾಲಗಳ ಬಡ್ಡಿದರ …
Read More »ಹುಲಿ ಬಂದಿದೆ ಎಂದು ನಕಲಿ ವಿಡಿಯೊ ಹರಿಬಿಟ್ಟ ಇಬ್ಬರು ಪೊಲೀಸ್ ವಶಕ್ಕೆ
ಹಿರೇಬಾಗೇವಾಡಿ: ಸಮೀಪದ ಕೊಂಡಸಕೊಪ್ಪ ಮತ್ತು ಯರಮಾಳ ಬಳಿ ಹುಲಿ ಬಂದಿದೆ ಎಂಬ ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು. ಕೊಂಡಸಕೊಪ್ಪದ ಶೀತಲ್ ಪಾಟೀಲ, ಮಲ್ಲೇಶ ದೇಸಾಯಿ ವಶಕ್ಕೆ ಪಡೆಯಲಾಗಿದೆ. ‘ಈ ಭಾಗದಲ್ಲಿ ಕಾಡುಬೆಕ್ಕು ಓಡಾಡುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಈ ಮಧ್ಯೆ, ಹುಲಿ ಓಡಾಡುತ್ತಿರುವ ವಿಡಿಯೊ ಶೀತಲ್ ಮತ್ತು ಮಲ್ಲೇಶ ವಾಟ್ಸ್‌ಆಯಪ್ …
Read More »ಹೆಲ್ಮೆಟ್ ಧರಿಸಿ ಜಾಗೃತಿ ಮೂಡಿಸಿದ ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ಪೊಲೀಸ್ ಇಲಾಖೆಯಿಂದ ಆಯೋಜಿಸಿದ ಹೆಲ್ಮೆಟ್ ಜಾಗೃತಿ ಕಾರ್ಯಕ್ರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುವ ಮೂಲಕ ಗಮನ ಸೆಳೆದರು. ಜಾಗೃತಿ ರ್‍ಯಾಲಿ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡು ಕೃಷ್ಣದೇವರಾಯ ವೃತ್ತ, ರಾಣಿ ಚನ್ನಮ್ಮ ವೃತ್ತ, ಕೋರ್ಟ್ ರಸ್ತೆ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪಿ ಕೊನೆಗೊಂಡಿತು. ಸಚಿವರ ಜತೆಗೆ ಶಾಸಕ ಆಸೀಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ …
Read More »ಗೃಹಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳ ಬಗ್ಗೆ ಸ್ಪಷ್ಟನೆ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆಯೇ? ಎಂಬ ಚರ್ಚೆ ಆರಂಭವಾಗಿದ್ದು, ಈ ಬಗ್ಗೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದೆ. ಈ ಯೋಜನೆಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ತಿಳಿಸಿದರು. ಉಡುಪಿ ಜಿಲ್ಲೆಯ ಅಜ್ಜರನಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದ ಬಳಿಕ …
Read More »ವಿತ್ರಾಗೌಡ ಚಪ್ಪಲಿ ಮೇಲೂ ರಕ್ತದ ಕಲೆ; ದರ್ಶನ್ & ಗ್ಯಾಂಗ್‌ಗೆ ಮತ್ತಷ್ಟು ಸಂಕಷ್ಟ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪವಿತ್ರಾಗೌಡ, ದರ್ಶನ್ ತೂಗುದೀಪ ಮತ್ತು ಗ್ಯಾಂಗ್ ಜೈಲಿನಲ್ಲೇ ಸ್ವಾತಂತ್ರ್ಯ ದಿನಾಚರಣೆ ಮಾಡಿದೆ!, ಪೊಲೀಸರು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಜಾಮೀನು ಪಡೆಯಬಹುದು ಎಂದು ಕನಸು ಕಾಣುತ್ತಿದ್ದ ದರ್ಶನ್ ಮತ್ತು ಗ್ಯಾಂಗ್‌ಗೆ ಪೊಲೀಸರು ಒಂದರ ಹಿಂದೊಂದು ಶಾಕ್ ಕೊಡುತ್ತಲೇ ಇದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಧರಿಸಿದ್ದ ಪ್ಯಾಂಟ್ ಮತ್ತು ಟೀ ಶರ್ಟ್ ಮೇಲೆ ರಕ್ತದ ಕಲೆ ಪತ್ತೆಯಾಗಿದ್ದು ಪೊಲೀಸರ ತನಿಖೆಗೆ …
Read More »ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯಿಂದ ಧ್ವಜಾರೋಹಣ
78ನೇ ಸ್ವಾತಂತ್ರ್ಯ ದಿನಾಚರಣೆ; ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯಿಂದ ಧ್ವಜಾರೋಹಣ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿದ ಸಚಿವರು, ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಧ್ವಜಾರೋಹಣದ ಬಳಿಕ ಆಕರ್ಷಕ ಪರೇಡ್ ಪರಿವೀಕ್ಷಣೆ ಮಾಡಿದರು. ಧ್ವಜಾರೋಹಣದಲ್ಲಿ ಸಂಸದ ಜಗದೀಶ್ ಶೆಟ್ಟರ್, ಶಾಸಕ ಆಶೀಫ್ ಸೇಠ್, ಮೇಯರ್ ಸವಿತಾ ಕಾಂಬಳೆ, ಡಿಸಿ ಮೊಹಮ್ಮದ್ ರೋಷನ್, ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಎಸ್ಪಿ ಡಾ.ಭೀಮಾಶಂಕರ ಗುಳೇದ್, ಜಿಪಂ ಸಿಇಒ ರಾಹುಲ್ …
Read More »ಬಲ್ಬ್‌ನಲ್ಲಿ ಅರಳಿದ ರಾಷ್ಟ್ರಧ್ವಜ
ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಸಾಲಾಪೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಗನಗೌಡ ನ್ಯಾಮಗೌಡ ಬಲ್ಬ್ ನಲ್ಲಿ ರಾಷ್ಟ್ರ ಧ್ವಜ, ಪ್ರಾಣಿ, ಮಹಾತ್ಮ ಗಾಂಧಿ ಅವರ ಚಿತ್ರಗಳನ್ನು ಅಳವಡಿಸಿ ಬಲ್ಬ್ ಉರಿಯುವಂತೆ ಮಾಡಿ ಜನರ ಗಮನ ಸೆಳೆದಿದ್ದಾನೆ. ಸಂಗನಗೌಡ, ತಮ್ಮ ಮುತ್ತಾತ ಮುರುಗೆಪ್ಪ ನಾಯಕ ಅವರ ಮಾರ್ಗದರ್ಶನದಲ್ಲಿ ನಿರಂತರ ಎರಡು ವಾರ ಕೆಲಸ ಮಾಡಿ ವಿಸ್ಮಯ ನಿರ್ಮಿಸಿದ್ದಾನೆ. ಸಂಗನಗೌಡ ನ್ಯಾಮಗೌಡ
Read More »ಬೆದರಿಕೆಗೆ ಬಾಗದ ಅಂದಿನ ಕಿತ್ತೂರು ಕಲಿಗಳು…
ಕಿತ್ತೂರು: ‘ನಾಡಿನ ಸ್ವಾತಂತ್ರ್ಯಕ್ಕಾಗಿ ದೈತ್ಯ ಬ್ರಿಟಿಷ್ ಸೈನ್ಯದ ವಿರುದ್ಧ ಪ್ರಥಮ ಹೋರಾಟದ ಕಿಡಿ ಹೊತ್ತಿಸಿದ್ದು ರಾಣಿ ಚನ್ನಮ್ಮ. ಇದು ಚನ್ನಮ್ಮನ ನಿಧನದ ನಂತರವೂ ನಿರಂತರವಾಗಿತ್ತು. ರಾಣಿಯ ನಂತರದ ಹೋರಾಟದ ವಾರಸುದಾರಿಕೆ ಪಡೆದುಕೊಂಡಿದ್ದವರ ಸ್ಮರಣೆಯೇ ರೋಮಾಂಚನ ಉಂಟು ಮಾಡುವಂಥದ್ದು’ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ಮನೆತನದ ಪ್ರಭು ಮಾರಿಹಾಳ. ‘ಕ್ರಾಂತಿಯ ನೆಲ ಕಿತ್ತೂರು ಮಣ್ಣಿನ ತೇಜಸ್ಸು ಅಂಥದ್ದು. ರಾಣಿ ಚನ್ನಮ್ಮನ ನಂತರ ಹೋರಾಟದ ನೊಗ ಹೊತ್ತು ಸಾಗಿದವರು ಸಂಗೊಳ್ಳಿ ರಾಯಣ್ಣ ಮತ್ತು …
Read More »
Laxmi News 24×7