Breaking News

ರಾಷ್ಟ್ರೀಯ

ನ್ಯಾಯ ಕೊಡಿ ಇಲ್ಲವೆ ದಯಾಮರಣಕ್ಕೆ ಅನುಮತಿ ಕೊಡಿ: ತಮ್ಮಣ್ಣ ಕಾಂಬಳೆ ಕುಟುಂಬದ ಧರಣಿ

ಬೆಳಗಾವಿ: ‘ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸಂಬಂಧಿಕರು ನಮಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅವಕಾಶ ನೀಡುತ್ತಿಲ್ಲ. ದೈಹಿಕವಾಗಿ ಹಲ್ಲೆಯನ್ನೂ ಮಾಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿಸಿ. ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ಕೊಡಿ’ ಎಂದು ಆಗ್ರಹಿಸಿ ರಾಯಬಾಗ ತಾಲ್ಲೂಕಿನ ನಿಲಜಿಯ ತಮ್ಮಣ್ಣ ಕಾಂಬಳೆ ಕುಟುಂಬಸ್ಥರು ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ(ಎಸ್‌ಪಿ) ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ‘ನಮ್ಮ ಮೇಲೆ ಆಗಿರುವ ಅನ್ಯಾಯದ ಕುರಿತು ಕುಡಚಿ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ, ಯಾವುದೇ ಕ್ರಮ ವಹಿಸಿಲ್ಲ. …

Read More »

ಕೆಸೆಟ್: ಅರ್ಜಿ ಸಲ್ಲಿಸಲು ಆ. 28ರವರೆಗೆ ಅವಕಾಶ

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್- 2024) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆಗಸ್ಟ್ 28ರವರೆಗೆ ವಿಸ್ತರಿಸಿದೆ. ‘ಅರ್ಜಿ ಸಲ್ಲಿಸಲು ಆಗಸ್ಟ್‌ 22 ಕೊನೆ ದಿನವಾಗಿತ್ತು. ಅಭ್ಯರ್ಥಿಗಳ ಕೋರಿಕೆ ಮೇರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಲು ಆ. 30ರವರೆಗೆ ಅವಕಾಶ ನೀಡಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

Read More »

ನಿಮಗೆ ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಆದರೆ ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಕೋಲ್ಕತಾ: ಇಲ್ಲಿನ ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾರೆ. ಲೈಂಗಿಕ ಕಾರ್ಯಕರ್ತ ಮಹಿಳೆ ಕೆಲವು ನಿಮಿಷಗಳ ಕಾಮಕ್ಕಾಗಿ ಮಹಿಳೆಯರನ್ನು ಅತ್ಯಾಚಾರ ಮತ್ತು ಕೊಲ್ಲುವ ಬದಲು ಕೆಂಪು ದೀಪದ ಪ್ರದೇಶಗಳಿಗೆ ಭೇಟಿ ನೀಡುವಂತೆ ಪುರುಷರಿಗೆ ಸಲಹೆ ನೀಡಿದರು.   ನಿನಗೆ ಹೆಂಗಸಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬಾ. ದಯವಿಟ್ಟು ಮಹಿಳೆಯರ …

Read More »

ಆನಂದಪುರದಲ್ಲಿ ಭಾರಿ ಮಳೆ ಅಂಗಡಿಗಳಿಗೆ ನುಗ್ಗಿದ ನೀರು

ಆನಂದಪುರ: ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಮುಂಬಾಳ ಹಾಗು ಸೂಳಗೊಡು ಗ್ರಾಮದಲ್ಲಿ ನಾಟಿ ಮಾಡಿದ ಗದ್ದೆಗಳಿಗೆ ಭಾರಿ ಹಾನಿ ಉಂಟಾಗಿದೆ. ಮತ್ತೆ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದ ಆನಂದಪುರ ಹಳೆ ಸಂತೆ ಮಾರುಕಟ್ಟೆ ಹಾಗು ಹೆದ್ದಾರಿ ಪಕ್ಕದ ಹೋಟೆಲ್, ದಿನಸಿ ಅಂಗಡಿಗಳಿಗೆ ನೀರು ನುಗ್ಗಿದ್ದು. ಅರ್ಧ ತಾಸಿಗೂ ಅಧಿಕ ಕಾಲ ಸುರಿದ ಭಾರಿ ಮಳೆಯಿಂದ ಹೆದ್ದಾರಿಯಲ್ಲಿಯೂ ಬಾರಿ ಪ್ರಮಾಣದ ನೀರು ಹರಿದು ಜನರಲ್ಲಿ ಆತಂಕ ಉಂಟಾಗಿತ್ತು.

Read More »

ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ;C.M.,ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯರು ಬರಬೇಕು;H.D.K

ಬೆಂಗಳೂರು, ಆಗಸ್ಟ್ 21: ಅಗತ್ಯವಿದ್ದರೆ ಕುಮಾರಸ್ವಾಮಿಯನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಕೊಪ್ಪಳದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, ನನಗೆ ಭಯ ಶುರುವಾಗಿದೆಯಾ? ನನ್ನ ನೋಡಿದರೆ ನಿಮಗೆ ಹಾಗೆ ಅನಿಸುತ್ತಾ? ಸಿಎಂ ಕಳೆದ ವಾರದಿಂದ ಹೇಗೆ ನಡೆದುಕೊಡಿದ್ದಾರೆ ನೋಡಿದ್ದೀರಲ್ಲಾ? ನನ್ನನ್ನು ಬಂಧಿಸಲು ನೂರು ಜನ ಸಿದ್ದರಾಮಯ್ಯಗಳು ಬರಬೇಕುಎಂದು ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಮೈಸೂರಿನ ಮೂಡಾ ದಾಖಲೆ ಇದೆಯಲ್ಲ. ಮುಡಾ ಆಸ್ತಿಯನ್ನು …

Read More »

ಸಿದ್ದರಾಮಯ್ಯ ವಿರುದ್ಧದ ಪ್ರಕರಣ: ಸೆಪ್ಟೆಂಬರ್ 2ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು ಆಗಸ್ಟ್ 21: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸಿಎಂ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆಯನ್ನು ಹೈಕೋರ್ಟ್ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ. ಹೀಗಾಗಿ ಸದ್ಯಕ್ಕೆ ಬೀಸೆ ದೊಣ್ಣೆಯಿಂದ ಸಿಎಂ ಸಿದ್ದರಾಮಯ್ಯ ಅವರು ಪಾರಾದಂತಾಗಿದೆ.   ದೂರಿನ ಬಗ್ಗೆ ವಿಚಾರಣೆ ಮಾಡಿದ ನ್ಯಾಯಧೀಶ ಗಜಾನನ ಭಟ್ ಅವರಿದ್ದ ಪೀಠ, ಸಾಕಷ್ಟು ವಾದ ಪ್ರತಿವಾದಗಳ ಬಳಿಕ ಆಗಸ್ಟ್ 20ಕ್ಕೆ ಆದೇಶ …

Read More »

ಗಣೇಶ ಹಬ್ಬ ಆಚರಣೆ ಸಂಬಂಧ ಶೀಘ್ರದಲ್ಲಿ ‘ಗೈಡ್ ಲೈನ್ಸ್’ ಪ್ರಕಟ

ಬೆಂಗಳೂರು : ಮುಂಬರುವ ಗಣೇಶ ಹಬ್ಬ ಆಚರಣೆ ಸಂಬಂಧ ಶೀಘ್ರದಲ್ಲಿ ಗೈಡ್ಲೈನ್ಸ್ ಪ್ರಕಟಿಸುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು. ಇಂದು ಗಣೇಶ ಚತುರ್ಥಿ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬಿಬಿಎಂಪಿ ಮತ್ತು ಬೆಂಗಳೂರು ನಗರ ಪೊಲೀಸ್ ಜಂಟಿ ಸಹಯೋಗದಲ್ಲಿ ಟೌನ್ ಹಾಲ್ ನಲ್ಲಿ ನಡೆದ ಶಾಂತಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್, ಪೆಂಡಾಲ್ ಮೆರವಣಿಗೆಯ ಬಗ್ಗೆ ಗೈಡ್ಲೈನ್ಸ್ ಪ್ರಕಟಿಸುತ್ತೇವೆ …

Read More »

ಸಿಎಂ ಸಿದ್ಧರಾಮಯ್ಯ ಬಳಿಯೇ ‘ಮುಡಾ’ ಮೂಲ ದಾಖಲೆಗಳಿವೆ: ‘RTI ಕಾರ್ಯಕರ್ತ’ ಗಂಭೀರ ಆರೋಪ

ಬೆಂಗಳೂರು: ನಾನು ಆರ್ ಟಿ ಐ ಅಡಿಯಲ್ಲಿ ಮುಡಾಕ್ಕೆ ಮೂಲ ದಾಖಲೆಗಳನ್ನು ನೀಡುವಂತೆ ಅರ್ಜಿ ಸಲ್ಲಿಸಿದ್ದೆ. ಆದರೇ ನನಗೆ ನೀಡಿಲ್ಲ. ಇಂತಹ ದಾಖಲೆಗಳನ್ನು ಸಿಎಂ ಸಿದ್ಧರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಸಿದ್ಧರಾಮಯ್ಯ ಅವರ ಬಳಿಯಲ್ಲೇ ಮುಡಾ ಕೇಸ್ ಗೆ ಸಂಬಂಧಿಸಿದಂತ ಮೂಲ ದಾಖಲೆಗಳು ಇರುವುದಾಗಿ ಆರ್ ಟಿಐ ಕಾರ್ಯಕರ್ತ ಗಂಗರಾಜು ಎಂಬುವರು ಗಂಭೀರ ಆರೋಪ ಮಾಡಿದ್ದಾರೆ.   ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿಎಂ ಸಿದ್ಧರಾಮಯ್ಯ …

Read More »

ವೇಶ್ಯಾವಾಟಿಕೆ ಆರೋಪ; ಸ್ಪಾ ಮೇಲೆ ದಾಳಿ

ಶಿವಮೊಗ್ಗ: ಇಲ್ಲಿನ ವೀರಣ್ಣ ಲೇಔಟ್ 3ನೇ ಕ್ರಾಸ್‌ನಲ್ಲಿರುವ ಲೈರಾ ಮೇಕ್ ಓವರ್ ಸ್ಟುಡಿಯೊ ಸಲೂನ್ ಮತ್ತು ಸ್ಪಾನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪದ ಮೇಲೆ ಸೋಮವಾರ ಸಂಜೆ ವಿನೋಬ ನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಚಂದ್ರಕಲಾ ಮತ್ತು ಮಹಿಳಾ ಠಾಣೆ ಇನ್‌ಸ್ಪೆಕ್ಟರ್‌ ಭರತ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಇಬ್ಬರು ಸಂತ್ರಸ್ತ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.   ವೇಶ್ಯಾವಾಟಿಕೆ ನಡೆಸುತ್ತಿದ್ದ …

Read More »

ಕಾರುಗಳ ಡಿಕ್ಕಿ: ಒಬ್ಬ ಸಾವು

ಖಾನಾಪುರ: ತಾಲ್ಲೂಕಿನ ನಾಗರಗಾಳಿ ಗ್ರಾಮದ ಹೊರವಲಯದ ರಾಮನಗರ-ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಒಬ್ಬ ಚಾಲಕ ಮೃತಪಟ್ಟು ಮತ್ತೊಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಮಾರ್ಗವಾಗಿ ತೆಲಂಗಾಣ ರಾಜ್ಯದತ್ತ ಹೊರಟಿದ್ದ ಪ್ರಯಾಣಿಕರ ಕಾರು ಅಳ್ನಾವರದಿಂದ ರಾಮನಗರ ಕಡೆಗೆ ಹೊರಟಿದ್ದ ಕಾರಿಗೆ ಎದುರಿನಿಂದ ಬಂದು ವೇಗವಾಗಿ ಅಪ್ಪಳಿಸಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.   ಮೃತರನ್ನು ವಾಸ್ಕೋ ನಿವಾಸಿ ಅಮೀರಖಾನ …

Read More »