Breaking News

ರಾಷ್ಟ್ರೀಯ

ಇಂದು ಕಾಂಗ್ರೆಸ್​ ಸಾಧನಾ ಸಮಾವೇಶ: ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಶನಿವಾರ ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಭರ್ಜರಿ ತಯಾರಿಯೊಂದಿಗೆ ಸಿದ್ಧಗೊಂಡಿದೆ. ಮೈಸೂರಿನ ಮಹಾರಾಜ ಮೈದಾನದಲ್ಲಿ ನಾಳೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಧನ ಸಮಾವೇಶಕ್ಕೆ ಬೃಹತ್ ವೇದಿಕೆ ಸಜ್ಜಾಗಿದ್ದು, ಇಂದು ನಡೆಯಲಿರುವ ಸಾಧನಾ ಸಮಾವೇಶಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಮಹಾರಾಜ ಮೈದಾನದಲ್ಲಿ ಜರ್ಮನ್ …

Read More »

ಕೆಲಸ ಮಾಡ್ರಿ ಅಂದ್ರೆ ನೆಪ ಹೇಳ್ತೀರಲ್ರಿ, ನಿಮಗೆ ನಾಚಿಕೆ ಆಗಲ್ವಾ?: ಅಧಿಕಾರಿಗಳಿಗೆ ಬೆವರಿಳಿಸಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಭೂ ಸುರಕ್ಷಾ ಯೋಜನೆ ರಾಜ್ಯಾದ್ಯಂತ ಯಶಸ್ವಿಯಾಗಿದೆ. ಆದರೆ, ಬೆಂಗಳೂರು ನಗರ – ಗ್ರಾಮಾಂತರ ಜಿಲ್ಲೆಗಳಲ್ಲಿ ಉದ್ದೇಶಪೂರ್ವಕವಾಗಿ ಅಧಿಕಾರಿಗಳು ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಭೂ ಸುರಕ್ಷಾ ಯೋಜನೆಯ ಅಡಿ ಭೂ ದಾಖಲೆಗಳು ಡಿಜಿಟಲೀಕರಣಗೊಳ್ಳುವ ಪ್ರಕ್ರಿಯೆ ಇಡೀ ರಾಜ್ಯದಲ್ಲೇ ಬೆಂಗಳೂರು ನಗರ – ಗ್ರಾಮಾಂತರ ಜಿಲ್ಲೆಗಳು ಕೆಟ್ಟ ದಾಖಲೆ ಹೊಂದಿದ್ದು, ಈ ಸಂಬಂಧ ಇಂದು ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಎಸಿ, ತಹಶೀಲ್ದಾರ್, ಡೆಪ್ಯೂಟಿ …

Read More »

ಸೋರುತ್ತಿದ್ದ ಸರ್ಕಾರಿ ಕಚೇರಿಗೆ ಅಲ್ಲಿನ ಸಿಬ್ಬಂದಿಯೇ ಲಕ್ಷಾಂತರ ರೂ. ವ್ಯಯಿಸಿ ಟಿನ್ ಶೀಟ್, ಟಾರ್ಪಲ್ ಶೀಟ್ ಹಾಕಿಸಿ ದುರಸ್ತಿ ಮಾಡಿಸಿದ್ದಾರೆ.

ಕಲಬುರಗಿ: ಮಳೆಯಿಂದ ಸೋರುತ್ತಿದ್ದ ಸರ್ಕಾರಿ ಕಚೇರಿಯನ್ನು ಸ್ವತಃ ಇಲಾಖೆಯ ಸಿಬ್ಬಂದಿಯೇ ತಮ್ಮ ಜೇಬಿನಿಂದ ಹಣ ಹಾಕಿ ದುರಸ್ತಿ ಕೈಗೊಂಡಿದ್ದು, ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕಲಬುರಗಿ ಜಿಲ್ಲಾ ಪಂಚಾಯತ್​ ಕಚೇರಿ ಆವರಣದಲ್ಲಿರುವ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಿಬ್ಬಂದಿಯೇ ಹಣ ಸಂಗ್ರಹಿಸಿ ದುರಸ್ತಿ ಮಾಡಿ ಗಮನ ಸೆಳೆದಿದ್ದಾರೆ. 6 ಲಕ್ಷ ರೂ. ಹಣ ಸಂಗ್ರಹಿಸಿ ರಿಪೇರಿ: ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮಳೆ ಬಂದರೆ ನೀರು ಸೋರಿಕೆಯಾಗಿ ಸಿಬ್ಬಂದಿಯು ಪರದಾಡುವಂತಹ ಸ್ಥಿತಿ …

Read More »

ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯ ಉದ್ಘಾಟನೆ

ಬೆಳಗಾವಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಕಚೇರಿ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಯ ಉದ್ಘಾಟನೆಯನ್ನು ಇಂದು ನೆರವೇರಿಸಲಾಯಿತು. ಕರ್ನಾಟಕದ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ಸಾರಿಗೆ ಇಲಾಖೆ ಇನ್ನೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಜಿಲ್ಲೆಯಲ್ಲಿ ಇನ್ನಷ್ಟು ಬಸ್‌ಗಳನ್ನು ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚು ಸೌಲಭ್ಯಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಉದ್ಘಾಟನೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವರಿಗೆ ಮನವರಿಕೆ ಮಾಡಲಾಯಿತು. ಈ …

Read More »

ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಮಾಜಿ ಮೇಯರ ವಿಜಯ ಮೋರೆ ಮನವಿ

ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಮಾಜಿ ಮೇಯರ ವಿಜಯ ಮೋರೆ ಮನವಿ ಸಾರ್ವಜನಿಕರು ಪ್ರತಿನಿತ್ಯ ತಾವುಗಳು ಮನೆಗೆ ಕೊಂಡುಕೊಳ್ಳುವ ಪತ್ರಿಕೆಗಳನ್ನು ಹಾಳು ಮಾಡದೆ ಒಟ್ಟುಗೂಡಿಸಿ ಪ್ರತಿ ಎರಡು ತಿಂಗಳಿಗೊಮ್ಮೆ ರದ್ದಿಯನ್ನು ಶಾಂತಾಯಿ ವಿದ್ಯಾ ಆಧಾರದವರಿಗೆ ನೀಡಿದರೆ ಸೌಕರ್ಯ ವಂಚಿತ ಬಡ ವಿದ್ಯಾರ್ಥಿಗಳ ಅನುಕೂಲವಾಗುತ್ತದೆ ಎಂದು ಮಾಜಿ ಮೇಯರ ವಿಜಯ ಮೋರೆ ಹೇಳಿದರು ಸವಲತ್ತು ರಹಿತ ವಿದ್ಯಾರ್ಥಿಗಳ ಶಿಕ್ಷಣವನ್ನು ಬೆಂಬಲಿಸಲು ಶಾಂತಾಯಿ ವಿದ್ಯಾ ಆಧಾರ್ ತನ್ನ ಕಾರ್ಯವನ್ನು ಮುಂದುವರೆಸಿದೆ ಸಂಸ್ಥೆಯು …

Read More »

ಬಾಗಲಕೋಟೆಗೆ ಅಂಟಿದ ಕೊಲ್ಕತ್ತಾದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ. ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ

ಬಾಗಲಕೋಟೆಗೆ ಅಂಟಿದ ಕೊಲ್ಕತ್ತಾದಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣ. ಪ್ರಕರಣದ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ ಕೊಲ್ಕತ್ತಾದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಜೋಕಾ ಐಐಎಂ ಎಂ.ಬಿ.ಎ ಎರಡನೇ ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಎ1 ಆರೋಪಿ ಬಾಗಲಕೋಟೆ ಮೂಲದ ಪರಮಾನಂದ ಟೋಪಣ್ಣವರ ಎಂಬ ಯುವಕನಾಗಿದ್ದಾನೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣದ ನಿವಾಸಿಯಾದ ಪರಮಾನಂದ ಟೋಪಣ್ಣವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. …

Read More »

ಗಾಂಜಾ ಮಾರಾಟ: ಪ.ಬಂಗಾಳದ ಐವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್

ಶಿವಮೊಗ್ಗ: ತೀರ್ಥಹಳ್ಳಿ ಪೊಲೀಸ್​​​​ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಅಪರಾಧಿಗಳಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿದೆ. ಪಶ್ಚಿಮ ಬಂಗಾಳದ ಅಲೋಕ್ (34), ಶ್ರೀವಾಷ್ ಸರ್ಕಾರ್ (20), ಅಮ್ರಿತ್ ಮಂಡಲ್ (27) ಹಾಗೂ ಸಂಕರ್ ಬ್ಯಾಪಾರಿ (28) ಹಾಗೂ ಹರಧನ್ ಮಂಡಲ್ ಶಿಕ್ಷೆಗೊಳಗಾದ ಅಪರಾಧಿಗಳು. ಕಟ್ಟಡ ಸೆಂಟ್ರಿಂಗ್ ಕೆಲಸಕ್ಕೆಂದು …

Read More »

ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ‘

 ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಆಯೋಜಿಸಲಾದ ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ‘ಯುವ ಶಕ್ತಿ ಪ್ರತಿಜ್ಞೆ’ ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭಾಗವಹಿಸಿ, ಯುವ ಶಕ್ತಿ ಮತ್ತು ಸಂಘಟನೆಯ ಭವಿಷ್ಯದ ದೃಷ್ಟಿಕೋನವನ್ನು ಹಂಚಿಕೊಂಡರು ಪಕ್ಷದ ಭವಿಷ್ಯ ರೂಪಿಸುವಲ್ಲಿ ಯುವಕರ ಪಾತ್ರ ಅಮೂಲ್ಯ. ಹೊಸ ನೇತೃತ್ವಕ್ಕೆ ಹಾರೈಕೆಗಳು! ಈ ಕಾರ್ಯಕ್ರಮದಲ್ಲಿ ಕೊಪ್ಪಳ ಮಾನ್ಯ ಸಂಸದರು ಶ್ರೀ ರಾಜಶೇಖರ ಹಿಟ್ನಾಳ್ ಅವರು ಹಾಗೂ ಮಾಜಿ ಸಚಿವರಾದ …

Read More »

ಪಂಚಮಸಾಲಿ ಪೀಠಕ್ಕೆ ಜಡಿದಿದ್ದ ಬೀಗ ನಿನ್ನೆಯೇ ಓಪನ್​​: ಕಾಶಪ್ಪನವರ್, ಸ್ವಾಮೀಜಿ ಮಧ್ಯದ ಗುದ್ದಾಟಕ್ಕೆ ತಾತ್ಕಾಲಿಕ ಬ್ರೇಕ್

ಬಾಗಲಕೋಟೆ, ಜುಲೈ 16: ಜಿಲ್ಲೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ (Panchamasali Peetha) ಬೀಗ ಜಡಿದಿದ್ದು, ಹೊಸ ಚರ್ಚೆ ಹುಟ್ಟು ಹಾಕಿತ್ತು. ಇದು ಕಾಂಗ್ರೆಸ್‌ ನಾಯಕ ವಿಜಯಾನಂದ ಕಾಶಪ್ಪನವರ (Vijayanand Kashappanavar) ಮತ್ತು ಪಂಚಮಸಾಲಿ ಶ್ರೀಗಳ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಇಂದು ಕೂಡ ಪೀಠದ ಎದುರು ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿದ್ದು, ಪೀಠಕ್ಕೆ ಜಡಿದಿದ್ದ ಬೀಗವನ್ನು ನಿನ್ನೆಯೇ ತೆರೆಯಲಾಗಿದೆ. ಆ ಮೂಲಕ ಇಬ್ಬರ ಮಧ್ಯೆದ ಗುದ್ದಾಟ ತಾತ್ಕಾಲಿಕ ಸುಖಾಂತ್ಯ ಕಂಡಿದೆ. ಕಳೆದ ನಾಲ್ಕು ದಿನದ ಹಿಂದೆಯೇ …

Read More »

2003ರರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ತಾಯಿ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ.

ಮಂಗಳೂರು: ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್, ವಿಚಾರವಾಗಿ ಎರಡು ದಶಕಗಳ ನಂತರ ಆಕೆಯ ತಾಯಿ ಸುಜಾತಾ ಭಟ್ ಎಂಬುವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ತಮ್ಮ ವಕೀಲರೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿ ಡಾ . ಅರುಣ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೂರುದಾರರ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ದಾಖಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕಾನೂನು …

Read More »