Breaking News

ರಾಷ್ಟ್ರೀಯ

Big breaking”ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ

“ಬೆಳಗಾವಿಯಲ್ಲಿ ನಾಳೆಯಿಂದ ಕರೋನಾ ವೈರಸ್ ತಪಾಸಣಾ ಪ್ರಯೋಗಾಲಯ ಪ್ರಾರಂಭ” ಮಹಾಮಾರಿ ಕೊರೋನಾ ವೈರಸ್‌ ಪರೀಕ್ಷೆ ಬೆಳಗಾವಿಯ ಪಾರಂಪರಿಕ ಚಿಕಿತ್ಸಾ ವಿದ್ಯಾಲಯದಲ್ಲಿ ನಾಳೆಯಿಂದ ನಡೆಯಲಿದ್ದು, 3- 4 ದಿನಗಳ ಕಾಲ ವರದಿಗಾಗಿ ಕಾಯುವ ಸಂದಿಗ್ಧತೆ ತಪ್ಪಲಿದೆ. ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ (ಐಸಿಎಂಆರ್‌) ಕೊರೋನಾ ಪರೀಕ್ಷೆಗೆ ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಈವರೆಗೆ ಬೆಂಗಳೂರು ಮತ್ತು ಶಿವಮೊಗ್ಗಕ್ಕೆ ರಕ್ತ, ಗಂಟಲು ದ್ರವವನ್ನು ಕಳಿಸಿ ಪರೀಕ್ಷೆ ವರದಿ ಪಡೆಯಲಾಗುತ್ತಿತ್ತು, ಜಿಲ್ಲಾಧಿಕಾರಿಗಳು ಹಾಗೂ …

Read More »

ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ :ಚೀನಾ

ಬೀಜಿಂಗ್: ಲ್ಯಾಬ್‍ನಲ್ಲಿ ಕೊರೊನಾ ವೈರಸ್ ಸೃಷ್ಟಿ ಮಾಡಿರುವುದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಎರಡು ಬಾರಿ ಹೇಳಿದೆ ಎಂದು ಚೀನಾ ತಿಳಿಸಿದೆ. ಇಂದು ಇಡೀ ವಿಶ್ವಕ್ಕೆ ದೊಡ್ಡ ತಲೆನೋವಾಗಿರುವ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಸೋಂಕು ಇಂದು ವಿಶ್ವವ್ಯಾಪಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೆ ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ. ಇದು …

Read More »

ವಿದೇಶಿ ನೆಲದಲ್ಲಿ ಐಪಿಎಲ್ ಆಯೋಜಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಆರ್‌ಸಿಬಿ ಕೋಚ್

ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್ ಅನ್ವಯ ಮಾರ್ಚ್ 29 ರಿಂದ ಐಪಿಎಲ್ ಆರಂಭವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಏ.15ಕ್ಕೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಆದರೆ ದೇಶಾದ್ಯಂತ ಲಾಕ್‍ಡೌನ್ ಮೇ 3ರ ವರೆಗೂ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮತ್ತೆ ಐಪಿಎಲ್ ಟೂರ್ನಿಯನ್ನು ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಆದರೂ ದೇಶ ಸಹಜ ಸ್ಥಿತಿಗೆ …

Read More »

ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ. ೫ ರೂಪಾಯಿ ನಾಣ್ಯ ನುಂಗಿದ ಬಾಲಕ.

  ದೇಶಾದ್ಯಂತ ಕೊರೋನಾ ಸೋಂಕು ಹರಡುತ್ತಿರುವ ಹಿನ್ನಲೆ ಲಾಕ್ ಡೌನ.ಲಾಕ್ ಡೌನ‌ನಿಂದ ಬಾಲಕನ‌ ಚಿಕಿತ್ಸೆಗಾಗಿ ವಾಹನ‌ ಸಿಗದೆ ಕುಟುಂಬಸ್ಥರ ಪರದಾಟ.೫ ರೂಪಾಯಿ ನಾಣ್ಯ ನುಂಗಿದ ಬಾಲಕ. ಬಾಗಲಕೋಟ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೈದಾಪೂರ ಸಮೀರವಾಡಿ ಗ್ರಾಮಸಲ್ಲಿ ಘಟನೆ.ನಾಣ್ಯ ನುಂಗಿದ ಕುತಬು ಎನ್ನುವ ಬಾಲಕ. ಅಂಬ್ಯುಲೆನ್ಸ್ ಸಿಗದೇ ಕಾರಣ ಕುಟುಂಬಸ್ಥರಲ್ಲಿ ಆತಂಕ.ಗ್ರಾಮದ ಪಂಚಾಯತ ಸದಸ್ಯ ಓಸ್ವಾಲ್ ಕಾರು ತೆಗೆದುಕೊಂಡು ಬಂದು ಬಾಲಕನನ್ನು ಆಸ್ಪತ್ರೆ ರವಾನೆ ಪೋನ ಕರೆಗೆ ತಕ್ಷಣ ನೇರವಿಗೆ ಬಂದ …

Read More »

ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು

ಬೆಂಗಳೂರು: ಕೊರೊನಾ ಲಾಕ್‍ಡೌನ್ ಹಿನ್ನೆಲೆ ಹಸಿದವರಿಗೆ ಹೊಟ್ಟೆ ತುಂಬಿಸುವ ಕೆಲಸಕ್ಕೆ ನೆಲಮಂಗಲ ಪೊಲೀಸರು ಮುಂದಾಗಿದ್ದಾರೆ. ಕರುಣೆಯ ಗೋಡೆ ಎಂಬ ನೂತನ ಯೋಜನೆಯನ್ನು ಉದ್ಘಾಟನೆ ಮಾಡಿ ಬಡ ಜೀವಗಳಿಗೆ ನೆರವಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಬಸ್ ನಿಲ್ದಾಣದ ಬಳಿ ಕರುಣೆಯ ಗೋಡೆ ಉದ್ಘಾಟಿಸಲಾಗಿದ್ದು, ತಹಶೀಲ್ದಾರ್ ಶ್ರೀನಿವಾಸಯ್ಯ, ಡಿವೈಎಸ್‍ಪಿ ಮೋಹನ್ ಕುಮಾರ್ ಮತ್ತು ಪಿಎಸ್‍ಐ ಮಂಜುನಾಥ್‍ರಿಂದ ಯೋಜನೆಗೆ ಚಾಲನೆ ದೊರಕಿದೆ. ಈ ಕರುಣೆಯ ಗೋಡೆಯಲ್ಲಿ ಬ್ರೆಡ್, ರಸ್ಕ್, ಬಿಸ್ಕತ್, ಹಣ್ಣುಗಳು, ನೀರಿನ …

Read More »

ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದ ಬೆನ್ನಲ್ಲೇ ಈಗ ಅವರ ಮಗ ಸೇರಿ ಮೂರು ಮಂದಿಗೆ ಕೊರೊನಾ ಸೋಂಕು

ಚಿಕ್ಕಬಳ್ಳಾಪುರ: ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾದ ಬೆನ್ನಲ್ಲೇ ಈಗ ಅವರ ಮಗ ಸೇರಿ ಮೂರು ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟಿದ್ದರು. ಈಗ ಅವರ ಸಂಪರ್ಕದಲ್ಲಿದ್ದ ಅವರ ಕೊನೆಯ ಮಗ(26) ಹಾಗೂ ಮೃತರ ಜೊತೆ ಆತ್ಮೀಯವಾಗಿ ಸಂಪರ್ಕದಲ್ಲಿದ್ದ ಎದುರುಗಡೆ ಮನೆಯ 20 ಮತ್ತು 19 ವರ್ಷದ ಯುವಕರಿಗೆ ಸೋಂಕು ತಗುಲಿದೆ. ವೃದ್ಧ ಮೃತಪಟ್ಟ …

Read More »

ಮೈಸೂರಿನಲ್ಲಿ ಒಬ್ಬನಿಂದ 11 ಮಂದಿಗೆ ಸೋಂಕು – ರಾಜ್ಯದಲ್ಲಿ ಒಂದೇ ದಿನ 38 ಮಂದಿಗೆ ಕೊರೊನಾ

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವತ್ತು ಒಂದೇ ದಿನ 38 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 353ಕ್ಕೆ ಏರಿಕೆ ಕಂಡಿದೆ. ಬೆಳಗ್ಗೆ ಒಟ್ಟು 38 ಜನರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಮೈಸೂರಿನಲ್ಲೇ ಇಂದು 12 ಮಂದಿಗೆ ಕೊರೊನಾ ದೃಢವಾಗಿದೆ. ಇನ್ನೂ ಬಳ್ಳಾರಿಯಲ್ಲಿ ಒಬ್ಬ ಸೋಂಕಿತನಿಂದ ಏಳು ಮಂದಿಗೆ ಕೊರೊನಾ ಬಂದಿದೆ. ಬೆಂಗಳೂರಿನಲ್ಲಿ 9 …

Read More »

ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರನಷ್ಟು ಕುಸಿತ: ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್

ನವದೆಹಲಿ: ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರನಷ್ಟು ಕುಸಿತ ಕಂಡಿದ್ದು, ಭಾರತದ ಆರ್ಥಿಕತೆ ಸಧ್ಯ ಶೇ.1.9ರಷ್ಟಿದೆ ಕಳೆದ 4 ತಿಂಗಳುಗಳಿಂದ ಉತ್ಪಾದನೆ ತೀವ್ರವಾಗಿ ಕಡಿಮೆಯಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಕ್ತಿಕಾಂತ್ ದಾಸ್, ಕೊರೊನಾ ವಿರುದ್ಧ ಹೋರಾಡಲು ಬ್ಯಾಂಕ್ ಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ ನೀಡಲಾಗುತ್ತಿದೆ. ರಾಜ್ಯಗಳ ಯಾವುದೇ ಬ್ಯಾಂಕ್ ಗಳಲ್ಲಿ ಹಣದ ಕೊರತೆ ಆಗಿಲ್ಲ. ಬ್ಯಾಂಕ್ ಗಳಿಗೆ ಹೆಚ್ಚುವರಿ ಹಣ …

Read More »

ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ.: ಅಶ್ವತ್ಥನಾರಾಯಣ್

ಬೆಂಗಳೂರು, ಏ.17- ಲಾಕ್‍ಡೌನ್ ಹಿನ್ನೆಲೆಯಲ್ಲಿ ಏ.20ರಿಂದ ಓಡಾಟಕ್ಕೆ ಪಾಸ್ ಅವಶ್ಯಕತೆ ಇರುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ. ಐಟಿ, ಬಿಟಿ ಉದ್ದಿಮೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಯಥಾ ಪ್ರಕಾರ ಇರುತ್ತದೆ. ಇದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಹೇಳಿದ್ದಾರೆ. ಐಟಿ ನೌಕರರ ಓಡಾಟಕ್ಕೆ ಪಾಸ್ ಅಗತ್ಯ ಉದ್ಭವ …

Read More »

ಬೆಂಗಳೂರಿಗರೇ ಹುಷಾರ್, ಹೊಸಬರಿಗೆ ಮನೆ ಬಾಡಿಗೆ ಕೊಡಬೇಡಿ..!

ಬೆಂಗಳೂರು,ಏ.17-ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನು ತಡೆಗಟ್ಟಲು ಮುಂದಾಗಿರುವ ಬಿಬಿಎಂಪಿ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೊರೊನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳು ಮನೆ ಖಾಲಿ ಮಾಡಿಕೊಂಡು ಬೇರೆ ವಾರ್ಡ್‍ಗಳಿಗೆ ತೆರಳುತ್ತಿರುವುದು ಸಾಬೀತಾದ ನಂತರ ಬಿಬಿಎಂಪಿ ಈ ಮಹತ್ವದ ತೀರ್ಮಾನ ಕೈಗೊಂಡಿದೆ. ಹೊಸಬರು ಮನೆ ಕೇಳಿಕೊಂಡು ಬಂದರೆ ಬಾಡಿಗೆ ನೀಡಬೇಡಿ. ಒಂದು ವೇಳೆ ನಿಮ್ಮ ಅಕ್ಕಪಕ್ಕದ ಮನೆಗಳಿಗೆ ಹೊಸಬರು ಬಂದರೆ …

Read More »