Breaking News

ರಾಷ್ಟ್ರೀಯ

ಚೀನಿ ರಾಖಿಗಳಿಗೆ ಕೊಕ್- ಮಹಿಳಾ ಸ್ವ ಸಹಾಯ ಸಂಘಗಳಿಂದ ತಯಾರಾಗುತ್ತಿವೆ ರಾಖಿಗಳು

ಲಕ್ನೊ: ಗಾಲ್ವಾನಾ ವ್ಯಾಲಿಯಲ್ಲಿ ಚೀನಾ ಪುಂಡಾಟಿಕೆ ಮೆರೆದ ನಂತರ ಜನ ಚೀನಾ ವಸ್ತುಗಳನ್ನು ಬಹಿಷ್ಕರಿಸಲಾರಂಭಿಸಲಾಗುತ್ತಿದೆ. ನಂತರ ಭದ್ರತೆ ಉದ್ದೇಶದಿಂದ ಕೇಂದ್ರ ಸರ್ಕಾರ ಚೀನಿ ಮೂಲದ 59 ಆ್ಯಪ್‍ಗಳನ್ನು ಸಹ ಬ್ಯಾನ್ ಮಾಡಿ ಆದೇಶಿಸಿತು. ಇದೀಗ ಚೀನಾದಿಂದ ಬರುತ್ತಿದ್ದ ವಿವಿಧ ಶೈಲಿಗಳ ರಾಖಿಗಳ ರೀತಿಯಲ್ಲೇ ಭಾರತದ ಮಹಿಳೆ ತಮ್ಮದೇ ಮಹಿಳೆಯರ ಸಂಘ ಕಟ್ಟಿಕೊಂಡು ವಿವಿಧ ರೀತಿಯ ಬಣ್ಣ ಬಣ್ಣದ ಆಕರ್ಷಕ ರಾಖಿಗಳನ್ನು ತಯಾರಿಸುತ್ತಿದ್ದಾರೆ. ಇನ್ನೇನು ರಕ್ಷಾ ಬಂಧನ ಸಮೀಪಿಸುತ್ತಿದ್ದು, ಆಗಲೇ ಬಣ್ಣ …

Read More »

ರಾಯಚೂರು, ಸಿಂಧನೂರು ಒಂದು ವಾರ ಸಂಪೂರ್ಣ ಲಾಕ್‍ಡೌನ್……….

ರಾಯಚೂರು: ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ 250 ಪಾಸಿಟಿವ್ ಪ್ರಕರಣ ದಾಖಲಾದ ಹಿನ್ನೆಲೆ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ರಾಯಚೂರು ಹಾಗೂ ಸಿಂಧನೂರು ನಗರಗಳನ್ನ ಮಾತ್ರ ಜುಲೈ 15 ರಿಂದ 22 ರವರೆಗೆ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ ಅಂತ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ. ಇನ್ನುಳಿದ ತಾಲೂಕು ಪ್ರದೇಶಗಳಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಬಳಿಕ …

Read More »

ಬಿಗ್ ಬ್ರೇಕಿಂಗ್: ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ದಿಗ್ಗಜ ಇನ್ನಿಲ್ಲ.! ಶೋಕದಲ್ಲಿ ಮುಳುಗಿದ ಬಾಲಿವುಡ್

ಕಳೆದ ನಾಲ್ಕು ತಿಂಗಳಿನಿಂದಲೂ ಕೊರೊನಾ ವೈರಸ್‌ ಕಾಟ ಕೊಡುತ್ತಲೇ ಇದೆ. ಬಡವ ಶ್ರೀಮಂತ, ಸೆಲೆಬ್ರಿಟಿ ಅಥವಾ ಜನಸಾಮಾನ್ಯ ಎಂಬ ಯಾವ ಭೇದವೂ ಇಲ್ಲದೆ ಈ ಮ’ಹಾಮಾರಿ ತನ್ನ ಅ’ಟ್ಟಹಾಸ ಮುಂದುವರಿಸುತ್ತಿದೆ. ಅದರಲ್ಲೂ ಬಾಲಿವುಡ್‌ ಕಲಾವಿದರು ಇತ್ತೀಚೆಗೆ ಹೆಚ್ಚು ಆತಂಕಕ್ಕೆ ಒಳಗಾಗಿದ್ದರು. ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅನುಪಮ್ ಖೇರ್ ಮುಂತಾದವರಿಗೆ ಕೊರೊನಾ ರೋ’ಗ ಲ’ಕ್ಷಣಗಳು ಕಾಣಿಸಿಕೊಂಡಿತ್ತು. ಈ ವರ್ಷ 2020 ಬಾಲಿವುಡ್‌ಗೆ ಸಂಕಟ ಎಂದೇ ಹೇಳಬಹದು ಹೌದು ಈ ವರ್ಷ …

Read More »

ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಸಿಪಿಎಂ ಶಾಸಕ ಅನುಮಾನಾಸ್ಪದ ಸಾವು..!

ಕೋಲ್ಕತ್ತಾ, ಜು.13- ಸಿಪಿಎಂನಿಂದ ಶಾಸಕನಾಗಿ ಆರಿಸಿ ಬಂದು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಶಾಸಕರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ದೀನಜ್‍ಪುರ್‍ನಲ್ಲಿ ನಡೆದಿದೆ. ಹೆಮ್ತಾಬಾದ್‍ನಲ್ಲಿರುವ ತಮ್ಮ ನಿವಾಸದಲ್ಲಿ ಬಿಜೆಪಿ ಮುಖಂಡ ದೇಬೇಂದ್ರನಾಥ್ ರೇ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ರಾಜಕೀಯ ದುರುದ್ದೇಶಕ್ಕಾಗಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬವರ್ಗದವರು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಹೆಮ್ತಾಬಾದ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ(ಎಂ) ಪಕ್ಷದಿಂದ ಸ್ಪರ್ಧಿಸಿ ವಿಜೇತರಾಗಿದ್ದ …

Read More »

ಬಿಗ್ ಬಿ ಪತ್ನಿ ಜಯಾ ಬಚ್ಚನ್ ವರದಿ ನೆಗೆಟಿವ್, ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯಗೂ ಕೊರೊನಾ ಸೋಂಕು ತಗುಲಿದೆ. ಶನಿವಾರ ರಾತ್ರಿ ಬಿಗ್ ಬಿ ಅಮಿತಾಬ್ ಬಚ್ಚನ್ ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು. ತಂದೆ ಅಮಿತಾಬ್ ಬಚ್ಚನ್ ಬಳಿಕ ಟ್ವೀಟ್ ಮಾಡಿದ್ದ ಅಭಿಷೇಕ್ ತಮ್ಮ ವರದಿಯೂ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದರು. ಇದೀಗ ಐಶ್ವರ್ಯಾ ಮತ್ತು ಆರಾಧ್ಯಗೂ ಸೋಂಕು ತಗುಲಿರುವುದು ಖಚಿತವಾಗಿದೆ.ಅಭಿಷೇಕ್ ಮತ್ತು ಅಮಿತಾಬ್ ಬಚ್ಚನ್ ಮುಂಬೈನ …

Read More »

ವಿಕಾಸ್ ದುಬೆ ಎನ್‌‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಪೊಲೀಸ್‍ಗೆ ಕೊರೊನಾ……….

ಲಕ್ನೋ: ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ನಲ್ಲಿ ಭಾಗಿಯಾಗಿದ್ದ ಓರ್ವ ಪೊಲೀಸ್ ಸಿಬ್ಬಂದಿಗೆ ಕೊರೊನಾ ತಗುಲಿದೆ. ಕೊರೊನಾ ಸೋಂಕಿತ ಪೊಲೀಸ್ ಜೊತೆ ಇತರೆ ಸಿಬ್ಬಂದಿ ಪ್ರಯಾಣಿಸಿದ್ದರು. ಪೊಲೀಸ್ ಪೇದೆಯನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರು ಪೊಲೀಸರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ. ಶಂಕಿತ ಸೋಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಎನ್‍ಕೌಂಟರ್ ನಲ್ಲಿ ಭಾಗಿಯಾಗಿದ್ದ ಎಲ್ಲ ಪೊಲೀಸ್ ಸಿಬ್ಬಂದಿ ಸಹ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ. …

Read More »

ಮೂವರು ಯುವಕರಿಗೆ ವಿಡಿಯೋ ಸಂದೇಶ ಕಳುಹಿಸಿ ಮಾತನಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ್ದಕ್ಕೆ ಯುವತಿಯೊಬ್ಬಳು ನೇಣಿಗೆ

ಹೈದರಾಬಾದ್: ಮೂವರು ಯುವಕರಿಗೆ ವಿಡಿಯೋ ಸಂದೇಶ ಕಳುಹಿಸಿ ಮಾತನಾಡುವಂತೆ ಕೇಳಿಕೊಂಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದ್ದಕ್ಕೆ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನ ಭಕ್ತವತ್ಸಲ ನಗರದಲ್ಲಿ ನಡೆದಿದೆ. ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ 21 ವರ್ಷದ ಯುವತಿ, ಈ ವಿಡಿಯೋದಲ್ಲಿ ಕುತ್ತಿಗೆಗೆ ದುಪ್ಪಟ್ಟವನ್ನು ಸುತ್ತಿಕೊಂಡು ‘ಶಿವ ನನ್ನ ಜೊತೆ ಮಾತನಾಡು’ ಎಂದು ಮನವಿ ಮಾಡಿಕೊಂಡಿದ್ದಾಳೆ. ನಂತರ ತನ್ನ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವತಿಯ ಮನವಿಯ ವಿಡಿಯೋ ಸಾಮಾಜಿಕ …

Read More »

ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು

ಮುಂಬೈ, ಜುಲೈ.12- ಬಾಲಿವುಡ್ ಹಿರಿಯ ನಟಿ ರೇಖಾ ಅವರ ಸೆಕ್ಯುರಿಟಿ ಗಾರ್ಡ್ ಗೂ ಕೋವಿಡ್ ಸೋಂಕು ತಗುಲಿದೆ. ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ರೇಖಾ ನಿವಾಸದ ಹೊರಗೆ ಹಾಕಿರುವ ನೊಟೀಸ್ ಹಾಕಿ ಸ್ಥಳೀಯರ ಗಮನಕ್ಕೆ ತರಲಾಗಿದೆ. ರೇಖಾ ಅವರ ನಿವಾಸ ಸೇರಿದಂತೆ ಇಡೀ ಪ್ರದೇಶವನ್ನು ಸ್ಯಾನಿತೈಸ್ ಮಾಡಲಾಗಿದೆ. ಸೆಕ್ಯುರಿಟಿ ಗಾರ್ಡ್ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆ ಹಾಕಿ. ಅವರನ್ನು ಪರೀಕ್ಷೆ ಒಳಪಡಿಸಲು ಸೂಚಿಸಲಾಗಿದೆ ಎಂದು ಬಿಎಂಸಿ ತಿಳಿಸಿದೆ. ರೇಖಾ ಅವರ …

Read More »

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಕರೆದೊಯ್ಯಲಾಯಿತ್ತು

ತೆಲಂಗಾಣ: ಕಿಲ್ಲರ್ ಕೊರೊನಾ ವಿಶ್ವದೆಲ್ಲೆಡೆ ಹಬ್ಬಿ ಮರಣ ಮೃದಂಗ ಬಾರಿಸುತ್ತಿದೆ. ಇದರ ಜೊತೆಗೆ ನೆರೆ ರಾಜ್ಯ ಆಂಧ್ರ ಪ್ರದೇಶದಲ್ಲಿ ಮನಮಿಡಿಯುವ ದೃಶ್ಯ ಕಂಡು ಬಂದಿದೆ. ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನು ನಿಜಾಮಾಬಾದ್ ಆಸ್ಪತ್ರೆಯಿಂದ ಸ್ಮಶಾನಕ್ಕೆ ಆಟೋ ಮೂಲಕ ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಕರೆದೊಯ್ಯದ ಘಟನೆ ನಡೆದಿದೆ. ನಿಜಾಮಾಬಾದ್ ಆಸ್ಪತ್ರೆ ಕೊರೊನಾದಿಂದ ಬಲಿಯಾದ 50 ವರ್ಷದ ವ್ಯಕ್ತಿಯ ಶವವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಹಾಗೂ ಯಾವುದೇ ಆಂಬುಲೆನ್ಸ್ ವ್ಯವಸ್ಥೆಯಾಗಲಿ ಅಥವಾ …

Read More »

ಬೆಳಗಾವಿ ಜಿಲ್ಲೆಯ ಕಡೆಯಿಂದಲೂ ಕಾಮಗಾರಿ ಆರಂಭಿಸಬೇಕು ಎಂದು ತಿಳಿಸಿದರು.

ಬೆಳಗಾವಿ: ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ ಡಿಪಿಆರ್ ಮತ್ತು …

Read More »