Breaking News

ರಾಷ್ಟ್ರೀಯ

ಜಲಾಶಯಕ್ಕೆ ಸಿಎಂ ಭೇಟಿ : ಬಿಗಿ ಭದ್ರತೆ, ಶೃಂಗಾರಗೊಂಡ ಆಲಮಟ್ಟಿ ಜಲಾಶಯ

ವಿಜಯಪುರ: ಇಂದು ಸಿ ಎಮ್ ಯಡಿಯೂರಪ್ಪನವರು ಆಲಮಟ್ಟಿ ಜಲಾಶಯಕ್ಕೆ ಇಂದು ಮದ್ಯಾಹ್ನ ಆಗಮಿಸುವ ಹಿನ್ನಲೆಯಲ್ಲಿ ಆಲಮಟ್ಟಿ ತಳಿರು ತೋರಣಗಳು, ಪುಷ್ಪಗಳಿಂದ ಶೃಂಗಾರಗೊಂಡಿದೆ. ಈಗಾಗಲೇ ಜಿಲ್ಲಾಡಳಿತ ಮತ್ತು ಕೆ.ಬಿ.ಜಿ ಎನ್.ಎಲ್ ಅಧಿಕಾರಿಗಳು ಪೂರ್ವ ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪತ್ರಕರ್ತರಿಗೂ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ ಒಳ ಬಿಡಲಾಗುತ್ತಿದೆ. ಸಿಎಂ ಸ್ವಾಗತ ಕೋರಿ ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ವೃತ್ತ ಸೇರಿದಂತೆ ಪಟ್ಟಣದಲ್ಲಿ ಹೂವಿನ ಅಲಂಕಾರ …

Read More »

ಹೆಲಿಕಾಪ್ಟರ್‍ನಲ್ಲಿ ಸಿಎಂ ಬಿಎಸ್‍ವೈ ವೈಮಾನಿಕ ಸಮೀಕ್ಷೆ ಮಂಗಳವಾರ ಹೆಲಿಕಾಪ್ಟರ್‍ನಲ್ಲಿ ಪ್ರವಾಹ ಪ್ರದೇಶಗಳನ್ನು ಸಿಎಂ ಯಡಿಯೂರಪ್ಪ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಹೆಲಿಕಾಪ್ಟರ್‍ನಲ್ಲಿ ಸಿಎಂ ಬಿಎಸ್‍ವೈ ವೈಮಾನಿಕ ಸಮೀಕ್ಷೆ ಮಂಗಳವಾರ ಹೆಲಿಕಾಪ್ಟರ್‍ನಲ್ಲಿ ಪ್ರವಾಹ ಪ್ರದೇಶಗಳನ್ನು ಸಿಎಂ ಯಡಿಯೂರಪ್ಪ ಸಮೀಕ್ಷೆ ನಡೆಸಿ ನೆರೆ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಸಿಎಂ ಬಿಎಸ್‍ವೈಗೆ ಕಂದಾಯ ಸಚಿವರಾದ ಆರ್.ಅಶೋಕ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Read More »

ಹೇಮಾವತಿಯಲ್ಲಿ ಮುಳುಗಿ, ಶಿವನ ಮುಡಿ ಸೇರಿದ ಗೌರಿ!

ಚಿಕ್ಕಮಗಳೂರು: ಮೊನ್ನೆ ಶುಕ್ರವಾರ ಸಂಭ್ರಮದಿಂದ ಬರಮಾಡಿಕೊಂಡಿದ್ದ ಗೌರಿಯನ್ನು ನಿನ್ನೆ ಹೆಂಗಳೆಯರು ಬೇಸರದಿಂದ ಕಳಿಸಿಕೊಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ಗೌರಿಗೆ ಹೇಮಾವತಿ ನದಿ ತೀರದಲ್ಲಿ ಪೂಜೆ ಮಾಡಲಾಯಿತು. ಹೇಮಾವತಿ ತೀರದಲ್ಲಿ ಹತ್ತಾರು ಮಹಿಳೆಯರು ಮಂಗಳ ಹಾಡಿ ಗೌರಮ್ಮನನ್ನ ಭಾರವಾದ ಮನಸ್ಸಿನಿಂದಲೇ ಕಳುಹಿಸಿಕೊಟ್ಟರು. ಇದೇ ಸಂದರ್ಭದಲ್ಲಿ ತವರು ಮನೆಗೆ ಆಗಮಿಸಿದ ಮಹಿಳೆಯರು ಗೌರಿ ಪೂಜೆಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಕಳೆದ ಕೆಲವು ದಿನಗಳ ಹಿಂದೆ ಉಕ್ಕಿ ಹರಿದಿದ್ದ ಹೇಮಾವತಿ, ಸದ್ಯ ಶಾಂತಳಾಗಿದ್ದು, ನೀರಿನ …

Read More »

ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ

ಗಂಗಾವತಿ : ನಗರದ ಬಿಜೆಪಿ ಮುಖಂಡ ಹಾಗೂ ನಗರಸಭೆ ಮಾಜಿ ಸದಸ್ಯ ದೇವಪ್ಪ ಕಾಮದೊಡ್ಡಿ (45) ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಒಂದು ವಾರದ ಹಿಂದೆ ತೀವ್ರ ಉಸಿರಾಟ ತೊಂದರೆಗೆ ಒಳಗಾಗಿ ಹುಬ್ಬಳ್ಳಿ ಕೆಎಲ್‌ಇ ಸುಚಿರಾಯು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಪುತ್ರಿ ಇದ್ದಾರೆ. ಈ ಹಿಂದೆ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರ ಆಪ್ತ ಬೆಂಬಲಿಗರಾಗಿದ್ದ ದೇವಪ್ಪ ಕಾಮದೊಡ್ಡಿ …

Read More »

ಬಾಲೆಯರು ಬಾಲ್ಯದಿಂದ ಬೆಂಕಿಗೆ ನಾಲ್ಕು ತಿಂಗಳಲ್ಲಿ 107 ಬಾಲ್ಯವಿವಾಹ

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಲಾಕ್‌ಡೌನ್‌ನ ನಿರ್ಬಂಧಗಳಿಂದ ಉಂಟಾದ ಸ್ತಬ್ಧತೆಯ ಲಾಭ ಪಡೆದು ಹಲವು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದೆ. ಲಾಕ್‌ಡೌನ್‌ಗಿಂತ ಹಿಂದಿನ ಅವಧಿಗೆ ಹೋಲಿಸಿದರೆ ಲಾಕ್‌ಡೌನ್‌ ದಿನಗಳಲ್ಲಿ ನಡೆದ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚು ಎಂದು ಅಂಕಿ ಅಂಶಗಳು ಹೇಳುತ್ತವೆ. ಬಾಲ್ಯ ವಿವಾಹ ಮಾಡಿಯೇ ತೀರಬೇಕು ಎಂದು ಹಟಕ್ಕೆ ಬಿದ್ದವರು ವಿವಿಧ ರೀತಿಯ ತಂತ್ರ, ಕುತಂತ್ರಗಳನ್ನು ಹೆಣೆದ ವರದಿಗಳು ರಾಜ್ಯದ ವಿವಿಧೆಡೆಯಿಂದ ಬಂದಿವೆ. ಮದುವೆ …

Read More »

ರಾಜ್ಯದಲ್ಲಿ ಕಡಿಮೆಯಾಯ್ತಾ ಸೋಂಕಿತರು, ಸಾವಿನ ಸಂಖ್ಯೆ..?

ಬೆಂಗಳೂರು : ರಾಜ್ಯದಲ್ಲಿ ಭಾನುವಾರ 5,938 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 68 ಮಂದಿ ಸಾವನ್ನಪ್ಪಿದ್ದಾರೆ. 4,996 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 2.77 ಲಕ್ಷಕ್ಕೆ ಏರಿಕೆಯಾದರೆ, ಸಾವನ್ನಪ್ಪಿದವರ ಸಂಖ್ಯೆ 4,683 ತಲುಪಿದೆ. ಇದೇ ವೇಳೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1.89 ಲಕ್ಷಕ್ಕೇರಿದೆ. ಉಳಿದ 83,551 ಮಂದಿ ಸಕ್ರಿಯ ಸೋಂಕಿತರಿಗೆ ನಾನಾ ಆಸ್ಪತ್ರೆಗಳು, ಕೋವಿಡ್‌ ನಿಗಾ ಕೇಂದ್ರ ಮತ್ತು ಗೃಹ ಆರೈಕೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ …

Read More »

ಬ್ಯಾರಲ್‌ನಲ್ಲಿ ಹೋಗುತ್ತಿದ್ದವರ ನೆರವಿಗೆ ಬಂದ ಸಿಎಂ : ಸಿಕ್ತು ಬೋಟ್

ಅಥಣಿ  : ಬೋಟ್‌ ಇಲ್ಲದೇ ಪ್ಲಾಸ್ಟಿಕ್‌ ಬ್ಯಾರೆಲ್‌ಗಳ ಮೇಲೆ ಕುಳಿತು ಪ್ರವಾಹದ ನೀರಿನಲ್ಲಿ ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿಯಲ್ಲಿ ನೆರೆ ಸಂತ್ರಸ್ತರಿಗೆ (ಮಾಂಗ ವಸ್ತಿ ಜನರು) ಬೋಟ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷ್ಣಾ ನದಿ ಪ್ರವಾಹದಿಂದಾಗಿ ಹುಲಗಬಾಳಿ ಜಲಾವೃತವಾಗಿತ್ತು. ಇಲ್ಲಿಯ ಮಾಂಗ ವಸ್ತಿ ಜನರು ಬೋಟ್‌ ಇಲ್ಲದೇ ಪ್ಲಾಸ್ಟಿಕ್‌ ಬ್ಯಾರೆಲ್‌ಗಳ ಮೂಲಕ ಪ್ರವಾಹದ ನೀರಿನಲ್ಲಿ ಸಾಗುತ್ತಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್‌ ವರದಿ ಮಾಡಿತ್ತು. ಈ ವರದಿಯನ್ನು ಗಮನಿಸಿದ …

Read More »

ನಾನು ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಲ್ಲ: ರಂಜನ್ ಗೊಗೊಯ್

ನವದೆಹಲಿ: ನಾನು ಅಸ್ಸಾಂನ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿಯಲ್ಲ ಎಂದು ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ. ಮುಂದಿನ ವರ್ಷ ಬರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗುವ ಅವಕಾಶವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ತರುಣ್ ಗೊಗೊಯಿ ಶನಿವಾರ ಬೆಳಗ್ಗೆ ಹೇಳಿದ್ದರು. ಈ ವಿಚಾರವಾಗಿ ಇಂದು ಮಾತನಾಡಿರುವ …

Read More »

ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ

ಚೆನ್ನೈ: ಖ್ಯಾತ ಗಾಯಕ ಎಸ್‍ಪಿ ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಗೀತಾ ಸಾಹಿತಿ ಕೆ ಕಲ್ಯಾಣ್ ತಿಳಿಸಿದ್ದಾರೆ. ಈ ಸಂಬಂಧ  ಮಾತನಾಡಿದ ಅವರು, ಎಸ್‍ಪಿಬಿ ಬಾಲ್ಯದ ಸ್ನೇಹಿತ ಒಬಯ್ಯ ಅವರ ಜೊತೆ ನಾನು ಮಾತನಾಡಿದೆ. ಎರಡು ಬಾರಿ ಕರೆ ಮಾಡಿ ಮಾಹಿತಿಯನ್ನು ಖಚಿತ ಪಡಿಸಿದೆ. ವರದಿ ನೆಗೆಟಿವ್ ಬಂದಿದೆ ಎಂಬದುನ್ನು ತಿಳಿಸಿದರು ಎಂದು ಮಾಹಿತಿ ನೀಡಿದರು. ಎಸ್‍ಪಿಬಿ ಅವರು ಕೊರೊನಾ ಗೆದ್ದು ಬರಲಿ ಎಂದು ವಿಶ್ವದೆಲ್ಲೆಡೆ …

Read More »

ಗಣೇಶ  ಹಬ್ಬ ಮುಗಿದ ಬಳಿಕ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಬಗೆಹರಿಸಲಾಗುವುದು

ಬೆಳಗಾವಿ: ಗಣೇಶ  ಹಬ್ಬ ಮುಗಿದ ಬಳಿಕ ಪೀರಣವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಬಗೆಹರಿಸಲಾಗುವುದು  ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ  ಅವರು ಭರವಸೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ವಿಚಾರವಾಗಿ   ಎಂಎಲ್ ಸಿ ವಿವೇಕರಾವ್ ಪಾಟೀಲ್,  ಹಾಗೂ ಹಾಲುಮತದ ಹಲವು ನಾಯಕರು ಇಂದು ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಪ್ರಕರಣ ಇತ್ಯರ್ಥ ಪಡೆಸಿ ಜಿಲ್ಲಾಡಳಿತ ವತಿಯಿಂದಲೇ ಮೂರ್ತಿ ಸ್ಥಾಪನೆ ಮಾಡುವಂತೆ  ಒತ್ತಡ …

Read More »