Breaking News

ರಾಷ್ಟ್ರೀಯ

HSRP ನಂಬರ್‌ ಪ್ಲೇಟ್‌ ಅಳವಡಿಕೆ ಗಡುವು ಮುಕ್ತಾಯ, ಸೆ.18ರವರೆಗೂ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ

ಬೆಂಗಳೂರು,ಸೆ.16- ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್‌ ಪ್ಲೇಟ್‌ (ಎಚ್‌ಎಸ್‌‍ಆರ್‌ಪಿ) ಅಳವಡಿಸುವ ಅಂತಿಮ ಗಡುವು ನಿನ್ನೆಗೆ ಮುಕ್ತಾಯವಾಗಿದ್ದು, ಈ ನಡುವೆ ಸೆ.18ರವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ಸಾರಿಗೆ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಇಂದು ಕೂಡ ನೋಂದಣಿಗೆ ಅವಕಾಶವಿದ್ದು, ನೋಂದಣಿ ಮಾಡಿಸಿಕೊಳ್ಳದವರಿಗೆ ನೋಂದಣಿ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ. ಸೆಪ್ಟೆಂಬರ್‌ 18ರಂದು ಎಚ್‌ಎಸ್‌‍ಆರ್‌ಪಿ ಅಳವಡಿಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಹೈಕೋರ್ಟ್‌ ನಲ್ಲಿ ಬರಲಿದೆ. ಹೀಗಾಗಿ, ಅಲ್ಲಿಯವರೆಗೆ ವಾಹನ …

Read More »

ಇನ್ಮುಂದೆ ಯಾರಿಗೆಲ್ಲ ಗೃಹಲಕ್ಷ್ಮಿ ಹಣ ಸಿಗಲ್ಲ?

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಂತಹ ಪ್ರಮುಖ 5 ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ ಖಾತೆಗೆ 2,000 ರೂಪಾಯಿ ಜಮೆ ಮಾಡುತ್ತಾ ಬಂದಿದೆ. ಆದರೆ, ಇದೀಗ 1.78 ಲಕ್ಷ ಮಹಿಳೆಯರಿಗೆ ಹಣ ಪಾವತಿಗೆ ತಡೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ಕಾರಣ ಏನೆಂದು ಇಲ್ಲಿ ತಿಳಿಯಿರಿ. ಆದಾಯ ತೆರಿಗೆ ಪಾವತಿದಾರರಾಗಿರುವ ಕಾರಣಕ್ಕೆ 1.78 ಲಕ್ಷ ಗೃಹಿಣಿಯರಿಗೆ ಯೋಜನೆಯ ಹಣ ಪಾವತಿಗೆ ತಡೆ ಹಾಕಲಾಗಿದೆ. …

Read More »

ಬೆಳಗಾವಿಯವರೆಗೆ ಸೇವೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ಶೆಟ್ಟರ್ ಪತ್ರ

ಬೆಳಗಾವಿ: ‘ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಿ’ ಎಂದು ಸಂಸದ ಜಗದೀಶ ಶೆಟ್ಟರ್‌ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ. ‘ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕೆಂಬ ಜನರ ಬೇಡಿಕೆ ಬಹಳ ದಿನಗಳಿಂದ ಇದೆ. ಈ ಹಿಂದೆ ಬೆಳಗಾವಿಯವರೆಗೆ ಕೈಗೊಂಡಿದ್ದ ರೈಲಿನ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿತ್ತು. ಆದರೆ, ತಾಂತ್ರಿಕ ಕಾರಣ ನೀಡಿದ ರೈಲ್ವೆ ಅಧಿಕಾರಿಗಳು …

Read More »

ಶೀಘ್ರವೇ ಮೋದಿ 3.0 ಸರ್ಕಾರದಿಂದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿ; ಇದು ಬಿಜೆಪಿ ಗ್ಯಾರೆಂಟಿ!

ನವದೆಹಲಿ: 3ನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಜಾರಿಗೆ ತರಲಿದೆ. ಇದರೊಂದಿಗೆ ಮೋದಿ ಸರ್ಕಾರ ಪ್ರತಿಪಕ್ಷಗಳಿಗೆ ಭಾರಿ ಹೊಡೆತ ನೀಡುವ ನಿರೀಕ್ಷೆಯಿದೆ. ಜನಗಣತಿ ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದರೊಂದಿಗೆ, ಚುನಾವಣೆಯ ನಂತರ ಕಡಿಮೆ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುತ್ತದೆ. ಸರ್ಕಾರಿ ಮೂಲಗಳು ನ್ಯೂಸ್ …

Read More »

ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಆರಂಭಕಾರ ಶುಭಮನ್‌ ಗಿಲ್‌ ಸೇರಿದಂತೆ ಕೆಲವರಿಗೆ ವಿಶ್ರಾಂತಿ

ಹೊಸದಿಲ್ಲಿ: ಬಿಸಿಸಿಐನ “ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಪಾಲಿಸಿ’ ಯಂತೆ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯಿಂದ ಆರಂಭಕಾರ ಶುಭಮನ್‌ ಗಿಲ್‌ ಸೇರಿದಂತೆ ಕೆಲವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. 3 ಪಂದ್ಯಗಳ ಟಿ20 ಸರಣಿ ಅ. 7ರಂದು ಆರಂಭವಾಗಲಿದ್ದು, ಇದು ಮುಗಿದ ಮೂರೇ ದಿನದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧದ ಟೆಸ್ಟ್‌ ಸರಣಿ ಮೊದಲ್ಗೊಳ್ಳಲಿದೆ. ಹೀಗಾಗಿ ಗಿಲ್‌ ಅವರಿಗೆ ಹೆಚ್ಚಿನ ವಿಶ್ರಾಂತಿ ಲಭಿಸುತ್ತದೆ ಎಂಬುದು ಬಿಸಿಸಿಐ ಲೆಕ್ಕಾಚಾರ. ಇದನ್ನು ಬಿಸಿಸಿಐ ಮೂಲವೂ ದೃಢಪಡಿಸಿದೆ. ಉಳಿದಂತೆ ಜಸ್‌ಪ್ರೀತ್‌ ಬುಮ್ರಾ …

Read More »

ಗ್ಯಾರಂಟಿಗೆ ದಲಿತರ ಹಣ: ಒಪ್ಪಿಕೊಂಡ ಸಿಎಂ ಸಿದ್ದು!

ಬೆಂಗಳೂರು: “ತಪ್ಪಾಗಿದೆ, ಸರಿಪಡಿಸಿ ಕೊಳ್ಳೋಣ…’ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಅನುದಾನ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯಿಸುವ ಮೂಲಕ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ.   ವಿಧಾನಸೌಧದ ಮುಂಭಾಗ ರವಿವಾರ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಹಣ ನೀಡಲು ದೇಶದಲ್ಲೇ ಮೊದಲ ಬಾರಿಗೆ ಕಾನೂನು ತಂದವರು ನಾವು. …

Read More »

ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಅಣ್ಣಾ ಹಜಾರೆ ಮಹತ್ವದ ಹೇಳಿಕೆ!

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಂತರ ದೆಹಲಿ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿರೋದು (Anna Hazare) ಅಚ್ಚರಿ ಮೂಡಿಸಿದೆ. ಈತನ್ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ ನಂತರ ಇದೀಗ ಕೇಜ್ರಿವಾಲ್ ಅವರ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು …

Read More »

ಸ್ಯಾಂಡಲ್ ವುಡ್ ನಲ್ಲಿ ಲೈಂಗಿಕ ಶೋಷಣೆ: ಸಮಿತಿ ರಚನೆ ಸಂಬಂಧ ಇಂದು ಮಹತ್ವದ ಸಭೆ

ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಮಿತಿ ರಚಿಸುವ ಕುರಿತಾಗಿ ಇಂದು ಮಹತ್ವದ ಸಭೆ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೆಪ್ಟೆಂಬರ್ 16ರಂದು ಬೆಳಿಗ್ಗೆ ಸಭೆ ನಡೆಸಲಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಸಭೆ ಕರೆದಿದ್ದು, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿದೆ ಎನ್ನಲಾದ ಲೈಂಗಿಕ ಶೋಷಣೆಯ ಕುರಿತಾಗಿ ಚರ್ಚೆ ನಡೆಸಲಾಗುವುದು. ಇದುವರೆಗೆ ಮಂಡಳಿಗೆ ಲೈಂಗಿಕ …

Read More »

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ;ಶಿಕ್ಷಕನನ್ನು ವಶಕ್ಕೆ ಪಡೆದ ಪೊಲೀಸರು

ಚಿಕ್ಕೋಡಿ: ಶಾಲಾ ವಿದ್ಯಾರ್ಥಿನಿಯರಿಗೆ ಅಶ್ಲೀಲ ಚಿತ್ರ ತೋರಿಸುವುದು ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನೋರ್ವನನ್ನು ಚಿಕ್ಕೋಡಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿಕ್ಕೋಡಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಕ ಲೈಂಗಿಕ ಕಿರುಕುಳ ನೀಡುವ ಕುರಿತು ವಿದ್ಯಾರ್ಥಿನಿಯರು ಅಳುತ್ತಾ ಮನೆಗೆ ಹೋದಾಗ ಬಾಲಕಿಗೆ ಪೋಷಕರು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯ ತಂದೆ ಇತರ ಪೋಷಕರಿಗೆ ಮಾಹಿತಿ ನೀಡಿ ವಿಚಾರಿಸಿದಾಗ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ …

Read More »

ಬಾಯಿಗೆ ಬಂದ ಹಾಗೆ ಮಾತನಾಡಲು ಮುನಿರತ್ನಗೆ ನಾವು ಹೇಳಿದ್ವಾ?: ಸತೀಶ್‌ ಜಾರಕಿಹೊಳಿ

ಬಾಯಿಗೆ ಬಂದ ಹಾಗೆ ಮಾತನಾಡಲು ಮುನಿರತ್ನಗೆ ನಾವು ಹೇಳಿದ್ವಾ?: ಸತೀಶ್‌ ಜಾರಕಿಹೊಳಿ ಬೆಳಗಾವಿ: ಮುನಿರತ್ನನವರಿಗೆ ನಾವು ಬೈಯ್ಯುವಂತೆ ಹೇಳಿದ್ದೇವಾ? ಸಿಕ್ಕ ಸಿಕ್ಕ ಹಾಗೆ ಬಾಯಿಗೆ ಬಂದ ಹಾಗೇ ಬೈಯ್ಯವಂತೆ ಹೇಳಿದ್ವಾ? ಬೈಯ್ಯುವಂತೆ ಕಾಂಗ್ರೆಸ್ ನವರು, ಬಿಜೆಪಿಯವರು, ಜೆಡಿಎಸ್ ನವರು ಹೇಳಿದ್ರಾ? ತರಾತುರಿಯಲ್ಲಿ ನಾವು ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ‌ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರೆಸ್ಟ್ ಮಾಡಿದರೆ ಮಾಡಿದ್ದೀರಿ ಅಂತಾರೆ, ಮಾಡಿಲ್ಲ ಅಂದರೆ ಮಾಡಿಲ್ಲ ಎಂದು ಹೇಳುತ್ತಾರೆ …

Read More »