Breaking News

ರಾಷ್ಟ್ರೀಯ

ನಟಿ ರಾಗಿಣಿಗೆ ಮತ್ತೆ ಸಿಸಿಬಿ ನೋಟಿಸ್; ಇಂದು ಹಾಜರಾಗದಿದ್ದರೆ ಬಂಧನ..?

ಬೆಂಗಳೂರು : ಕನ್ನಡ ಚಲನಚಿತ್ರ ರಂಗಕ್ಕೆ ಮಾದಕ ವಸ್ತು ಮಾರಾಟ ಜಾಲದ ನಂಟಿನ ಪ್ರಕರಣದಲ್ಲಿ ತಮ್ಮ ಆಪ್ತ ಗೆಳೆಯನ ಬಂಧನ ಬೆನ್ನೆಲ್ಲೇ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರಿಗೂ ಬಂಧನ ಭೀತಿ ಶುರುವಾಗಿದೆ. ಈ ಪ್ರಕರಣ ಸಂಬಂಧ ನೋಟಿಸ್‌ ನೀಡಿದ್ದರೂ ಗುರುವಾರ ರಾಗಿಣಿ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ. ವೈಯಕ್ತಿಕ ಕಾರಣ ನೀಡಿದ ಗೈರಾಗಿರುವ ನಟಿ, ಸೋಮವಾರ ವಿಚಾರಣೆಗೆ ಬರಲು ಬದ್ಧರಾಗಿರುವುದಾಗಿ ಟ್ವೀಟ್‌ ಮಾಡಿದ್ದಾರೆ. ಆದರೆ ಇದಕ್ಕೆ ಒಪ್ಪದ ಸಿಸಿಬಿ, 2ನೇ …

Read More »

4 ಐಪಿಎಸ್‌, 2 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು  : ನಾಲ್ವರು ಐಪಿಎಸ್‌ ಹಾಗೂ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಆಯಂಬಿಡೆಂಟ್‌ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿದ್ದ ಎಸ್‌.ಗಿರೀಶ್‌ ಅವರನ್ನು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಉಳಿದಂತೆ ಸಿ.ಕೆ.ಬಾಬಾ ಬೆಂಗಳೂರು ಈಶಾನ್ಯ ಡಿಸಿಪಿ, ಡಾ.ಭೀಮಾಶಂಕರ್‌ ಎಸ್‌.ಗುಳೇದ್‌ ಬೆಂಗಳೂರು ಸಿಐಡಿ ಬೆಂಗಳೂರು ಎಸ್‌ಪಿ ಹಾಗೂ ಡಾ.ಅನೂಪ್‌ ಶೆಟ್ಟಿಅವರನ್ನು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಆಗಿ ವರ್ಗಾವಣೆ ಮಾಡಲಾಗಿದೆ. …

Read More »

ಸಾಲ ಮರುಹೊಂದಾಣಿಕೆ: ಸೆ. 15ರೊಳಗೆ ಜಾರಿಗೆ ಸೂಚನೆ

ನವದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಪರಿಣಾಮವಾಗಿ, ಸಾಲ ಮರುಪಾವತಿಯಲ್ಲಿ ತೊಂದರೆ ಎದುರಿಸುತ್ತಿರುವವರಿಗೆ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ಸೆಪ್ಟೆಂಬರ್‌ 15ಕ್ಕೆ ಮೊದಲು ನೀಡುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಸೂಚಿಸಿದ್ದಾರೆ. ನಿರ್ಮಲಾ ಅವರು ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿ ಪ್ರತಿನಿಧಿಗಳ ಜೊತೆ ಗುರುವಾರ ಸಭೆ ನಡೆಸಿದರು. ಆಡಳಿತ ಮಂಡಳಿಯಿಂದ ಅನುಮೋದನೆ ಪಡೆದಿರುವ ಸಾಲ ಮರುಹೊಂದಾಣಿಕೆಯ ಸೌಲಭ್ಯವನ್ನು ತಕ್ಷಣ ಕಲ್ಪಿಸಬೇಕು ಎಂದು ಸೂಚಿಸಿದರು. ಸಾಲದ …

Read More »

ಭಾರತ-ರಷ್ಯಾ ನಡುವೆ ಎಕೆ-47 203 ರೈಫಲ್‌ ಒಪ್ಪಂದ ಅಂತಿಮ

ಮಾಸ್ಕೊ: ಭಾರತದಲ್ಲೇ ಎ.ಕೆ.-47 ರೈಫಲ್‌ನ ಅತ್ಯಾಧುನಿಕ ಮಾದರಿ ಆಗಿರುವ ಎ.ಕೆ.-47 203 ಉತ್ಪಾದನೆಯ ಪ್ರಮುಖ ಒಪ್ಪಂದವನ್ನು ರಕ್ಷಣಾ ಸಚಿವ ರಾಜ‌ನಾಥ್‌ ಸಿಂಗ್‌ ಭೇಟಿ ವೇಳೆ ಭಾರತ ಹಾಗೂ ರಷ್ಯಾ ಗುರುವಾರ ಅಂತಿಮಗೊಳಿಸಿದೆ. 1996 ರಿಂದ ಭಾರತೀಯ ಸೇನೆಯ ಬಳಿ ಇರುವಂಥ ಇನ್ಸಾಸ್ ರೈಫಲ್‌ಗಳ ಬದಲಾಗಿ ಎ.ಕೆ.-47 203 ರೈಫಲ್‌ಗಳನ್ನು ಬಳಸಲು ಭಾರತ ನಿರ್ಧರಿಸಿದೆ. ಭಾರತಕ್ಕೆ 7,70,000 ಎಕೆ-47 203 ರೈಫಲ್‌ಗಳ ಅಗತ್ಯ ಇದ್ದು, ಈ ಪೈಕಿ 1 ಲಕ್ಷ ರೈಫಲ್‌ಗಳನ್ನು ಆಮದು …

Read More »

ಗ್ಲೋಬಲ್ ಇನ್ನೋವೇಷನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿರುವ ವಿಶ್ವದ 50 ಅಗ್ರಮಾನ್ಯ ದೇಶಗಳಲ್ಲಿ ಭಾರತ ಇದೇ ಮೊದಲ ಬಾರಿ ಸೇರ್ಪಡೆ

ಮುಂಬೈ, ಸೆ.3- ಭಾರತದ ಅನ್ವೇಷಣೆ ಮತ್ತು ವಿಜ್ಞಾನ-ತಂತ್ರಜ್ಞನ ಕೀರ್ತಿಯ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಯಾಗಿದೆ. ಜಾಗತಿಕ ಅನ್ವೇಷಣೆ ಪಟ್ಟಿ-2020ರಲ್ಲಿ ಭಾರತಕ್ಕೆ 48ನೆ ಸ್ಥಾನ ಲಭಿಸಿದೆ. ಗ್ಲೋಬಲ್ ಇನ್ನೋವೇಷನ್ ಲಿಸ್ಟ್‍ನಲ್ಲಿ ಸ್ಥಾನ ಪಡೆದಿರುವ ವಿಶ್ವದ 50 ಅಗ್ರಮಾನ್ಯ ದೇಶಗಳಲ್ಲಿ ಭಾರತ ಇದೇ ಮೊದಲ ಬಾರಿ ಸೇರ್ಪಡೆಯಾಗಿರುವುದು ಮತ್ತೊಂದು ಹೆಗ್ಗಳಿಕೆ. ಅಲ್ಲದೆ, ಉದ್ಯಾನನಗರಿ ಬೆಂಗಳೂರು, ದೇಶದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞನ ತಾಣದಲ್ಲಿ …

Read More »

ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ಗರಂ ಆಗಿದ್ದಾರೆ ಇಂದ್ರಜಿತ್ ಲಂಕೇಶ್ ಅವರು ಸ್ಯಾಂಡಲ್‍ವುಡ್ ಕೆಲ ಯುವ ನಟಿ-ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಇಂದ್ರಜಿತ್‍ಗೆ ನೋಟಿಸ್ ನೀಡಿದ್ದರು. ಆದರೆ ಇಂದ್ರಜಿತ್ ಅವರು ಮಾಹಿತಿ ಮಾತ್ರ ನೀಡಿ ಸೂಕ್ತ ದಾಖಲೆಗಳನ್ನು ನೀಡರಲಿಲ್ಲ. ಈಗ ವಿಚಾರಣೆಗೆ ಮತ್ತೆ ಹಾಜರಾಗಿರುವ ಇಂದ್ರಜಿತ್ ಇಂದು ಕೂಡ ಕೇವಲ ಮಾಹಿತಿ ನೀಡಿ ದಾಖಲೆ ನೀಡಿಲ್ಲ. …

Read More »

ನಿರುದ್ಯೋಗ ದಿಂದಾಗಿ ಆತ್ಮ ಹತ್ಯೆ ಮಾಡಿಕೊಂಡ ಜನ ನಮ್ಮ ಕರ್ನಾಟಕದವರೇ ಹೆಚ್ಚು……!

ಹೊಸದಿಲ್ಲಿ:  ದೇಶದಲ್ಲಿ ನಿರುದ್ಯೋಗದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಸಂಖ್ಯೆಯೂ  ಹೆಚ್ಚುಚಾಗುತ್ತಿದ್ದು, ಕಳೆದ ವರ್ಷದ ನಿರುದ್ಯೋಗದಿಂದ 2,851 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. 2019ರಲ್ಲಿ ದೇಶದಾದ್ಯಂತ 1,39,123 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 3.4ರಷ್ಟು ಅಧಿಕ. 2018ರಲ್ಲಿ ಒಟ್ಟು 1,34,516 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2017ರಲ್ಲಿ ನಿರುದ್ಯೋಗ ಕಾರಣದಿಂದ 2,741 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಒಟ್ಟು ಆತ್ಮಹತ್ಯೆಯ ಶೇಕಡ 2ರಷ್ಟಾಗಿದೆ. ಇನ್ನೂ ದೇಶದಲ್ಲಿಯೇ ಮಹಾರಾಷ್ಟ್ರ ಅಗ್ರಸ್ಥಾನಿಯಾಗಿದೆ. ನಿರುದ್ಯೋಗ …

Read More »

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ವಿರುದ್ಧ ದೂರು

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೋಲಿಸ್ ವಿರುದ್ಧ ಬೆಂಗಳೂರಿನ ಯುವತಿ ದೂರು ನೀಡಿದ್ದಾರೆ. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ನಿವಾಸಿಯಾಗಿರುವ ಪೊಲೀಸ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಮೇ 20ರಂದು ಮದುವೆ ಮಾತುಕತೆಗಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ ಅಲ್ಲೇ ಉಳಿದುಕೊಂಡು ಅತ್ಯಾಚಾರ ಎಸಗಿದ್ದಾನೆ. ಜೂನ್ 12 ರಂದು ಮಂಗಳೂರಿನ ವಸತಿಗೃಹಕ್ಕೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದು ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿದ್ದಾರೆ. …

Read More »

‘ಸೌರಶಕ್ತಿ’ ಬಳಸಿ 3 ಕೋಟಿ ಉಳಿಸಿದ ಭಾರತೀಯ ರೈಲ್ವೆ

ನವದೆಹಲಿ : ವೆಸ್ಟರ್ನ್ ರೈಲ್ವೆ (Western Railway) ತನ್ನ ನೆಟ್‌ವರ್ಕ್‌ನ 75 ನಿಲ್ದಾಣಗಳಲ್ಲಿ ಸೌರ ವಿದ್ಯುತ್ ಅಳವಡಿಸುವ ಮೂಲಕ ಸುಮಾರು 3 ಕೋಟಿ ರೂ.ಗಳ ವಿದ್ಯುತ್ ಬಿಲ್ ಉಳಿತಾಯ ಮಾಡಿದೆ ಎಂದು ಹೇಳಿದೆ. ರೈಲ್ವೆ ಈಗ ಹೆಚ್ಚಿನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸುವ ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಪಶ್ಚಿಮ ರೈಲ್ವೆ ಮುಖ್ಯ ವಕ್ತಾರ ಸುಮಿತ್ ಠಾಕೂರ್ ಮಾತನಾಡಿ, ಮೇಲ್ಛಾವಣಿಯ ಸೌರ ಸ್ಥಾವರಗಳು 8.67 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ, ಇದರಿಂದಾಗಿ ಈ ವರ್ಷ ಗಮನಾರ್ಹ …

Read More »

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​: ಬೆಂಗಳೂರು ಬಿಟ್ಟು ಹೊರ ಹೋದ 10-15 ನಟ ನಟಿಯರು!

ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಆರೋಪ ಜೋರಾಗಿರುವ ಬೆನ್ನಲ್ಲೇ 10-15 ನಟ ನಟಿಯರು ಬೆಂಗಳೂರು ಬಿಟ್ಟು ಹೊರ ಹೋಗಿದ್ದಾರೆ! ಅದರಲ್ಲೂ ರಾಗಿಣಿ ದ್ವಿವೇದಿಗೆ ನಿನ್ನೆ ಸಿಸಿಬಿ ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ನಟ ನಟಿಯರು ಆತಂಕಕ್ಕೀಡಾಗಿದ್ದಾರೆ. ರಾಗಿಣಿಗೆ ಸಿಸಿಬಿ ನೋಟಿಸ್ ವಿಚಾರ ಹಲವು ನಟ ನಟಿಯರಿಗೆ ನಡುಕ ರಾಗಿಣಿ ಬಳಿಕ ತಮ್ಮ ಹೆಸರೂ ಹೊರಬರುವ ಆತಂಕ ಇವರನ್ನು ಕಾಡತೊಡಗಿದೆ. ತಮಗೂ ನೋಟಿಸ್ ಬರಬಹುದೆಂಬ ಆತಂಕದಲ್ಲಿರುವ 10ಕ್ಕೂ ಹೆಚ್ಚು ಕಲಾವಿದರು ಈಗಾಗಲೇ …

Read More »